Hendatiya Kaagada – ಕವಿ ಪರಿಚಯ – ಕೆ. ಎಸ್. ನರಸಿಂಹಸ್ವಾಮಿ
Hendatiya Kaagada – ಕೆ. ಎಸ್. ನರಸಿಂಹಸ್ವಾಮಿ ಅವರು 1915ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದು ಸರ್ಕಾರಿ ಕೆಲಸಕ್ಕೆ ಸೇರಿದರು. ಗುಮಾಸ್ತರಂಥ ಸಾಮಾನ್ಯ ಸಂಬಳದ ಹುದ್ದೆಯನ್ನು ಮೂರು ದಶಕಗಳ ಕಾಲ ನಿರ್ವಹಿಸಿದ ಕೆ. ಎಸ್.ನ ಬಡತನ ಸಂಕಷ್ಟಗಳ ನಡುವೆಯೇ ದಿವ್ಯ ಪ್ರೇಮಕ್ಕಾಗಿ ಹಂಬಲಿಸಿದ ಕವಿ. ಇವರ ‘ಮೈಸೂರು ಮಲ್ಲಿಗೆ’ ಎಂಬ ಪ್ರೇಮಗೀತೆಗಳ ಸಂಕಲನ ಹತ್ತಾರು ಮುದ್ರಣಗಳನ್ನು ಕಂಡಿದ್ದು ಅತ್ಯಂತ ಜನಪ್ರಿಯವಾಗಿದೆ. ಹಾಗೆಂದು ಕೆ.ಎಸ್.ನ. ಅವರು ಕೇವಲ ಪ್ರೇಮಗೀತೆಗಳಿಗಷ್ಟೇ ಸೀಮಿತವಾಗಲಿಲ್ಲ. ಅವರ ‘ಐರಾವತ’, ‘ದೀಪದ ಮಲ್ಲಿ’, ‘- ಉಂಗುರ’, ಶಿಲಾಲತೆ, ‘ಮನೆಯಿಂದ ಮನೆಗೆ’ ಮುಂತಾದ ಕವನ ಸಂಕಲನಗಳು ಶ್ರೀಸಾಮಾನ್ಯನ ಬದುಕಿನ ಏರಿಳಿತಗಳನ್ನು ಕಷ್ಟ ಸುಖಗಳನ್ನು ನವಿರಾಗಿ ಚಿತ್ರಿಸುತ್ತವೆ. 1976ರಲ್ಲಿ ಪ್ರಕಟವಾದ ಅವರ ‘ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕೆ.ಎಸ್.ನ. ಅವರ ಪ್ರಧಾನ ಆಸಕ್ತಿ ಕಾವ್ಯವಾದರೂ ಅನೇಕ ಅವರ ವಿದ್ವತ್ತಿಗೆ ಸಾಕ್ಷಿ. ಗದ್ಯ ಬರಹಗಳನ್ನು, ಅನುವಾದಗಳನ್ನು ಮಾಡಿರುವುದು
Summary – Hendatiya Kaagada
ಮಲ್ಲಿಗೆ ಕವಿ, ದಾಂಪತ್ಯ ಕವಿ ಎಂದು ಗುರುತಿಸಿಕೊಂಡಿರುವ ಕೆ ಎಸ್ ನರಸಿಂಹಸ್ವಾಮಿ ಅವರು ರಚಿಸಿರುವ ಹೆಂಡತಿಯ ಕಾಗದ ಪದ್ಯದಲ್ಲಿ ಗಂಡ ಹೆಂಡಿರ ಅನೂಹ್ಯ ಪ್ರೀತಿಯಲ್ಲಿ ಹೆಂಡತಿಯನ್ನು ತವರಿಗೆ ಕಳುಹಿಸಿದ ದುಃಖದಲ್ಲಿ ಪತಿಯಿದ್ದು, ಅದಕ್ಕೆ ಪ್ರತಿಯಾಗಿ ಹೆಂಡತಿ ಇಲ್ಲಿ ನಾನು ನಿಮ್ಮ ಹಂಬಲದಲ್ಲೇ ಇದ್ದೇನೆ ಎಂದು ಹೇಳುವ ನವಿರಾದ ಭಾವ ಅಥವಾ ಮಾತುಗಳಿಂದ ಅವರ ನಡುವಿನ ಮಧುರವಾದ ಪ್ರೀತಿಯನ್ನು ಇಲ್ಲಿ ನೋಡಬಹುದಾಗಿದೆ.
-ಕೆ. ಎಸ್. ನರಸಿಂಹಸ್ವಾಮಿ
ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಪೆ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು.
ಹೆಂಡತಿಯನ್ನು ತವರಿಗೆ ಕಳಿಸಿದ ಪತಿಯ ವೇದನೆಯನ್ನು ಇಲ್ಲಿ ತಿಳಿಯುವ ಮೂಲಕ ಹೆಂಡತಿ ಹೇಳುತ್ತಿದ್ದಾಳೆ. ನಾನು ತವರು ಮನೆಗೆ ಬಂದೆ ಎಂಬ ಸುಖದಲ್ಲಿ ನಿಮ್ಮನ್ನು ಮರೆತಿದ್ದೇನೆ ಎಂದುಕೊಳ್ಳಬೇಡಿ ನಿಮ್ಮ ಪ್ರೀತಿಯ ಊರಿಯಲ್ಲಿ ನೋಡಿ ಹೇಳಬೇಡಿ ಏಕೆಂದರೆ ಪ್ರತಿದಿನದ ಬೆಳಗ್ಗಿನಿಂದ ಸಂಜೆಯವರೆಗೆ ಸದಾ ನಿಮ್ಮ ನೆನಪಾಗುತ್ತಾ ನನ್ನ ಮನವನ್ನು ಹಿಂಡುವುದರ ಜೊತೆಗೆ ರಾತ್ರಿ ಮಲಗಿದಾಗ ಕಣ್ಣು ಮುಚ್ಚಿದರು ನಿಮ್ಮ ಕನಸುಗಳೇ ಬರುತ್ತವೆ ನನಗೆ ಎಂದು ಹೆಂಡತಿ ತನ್ನ ಪತಿಯ ಬಗೆಗಿನ ಪ್ರೀತಿಯನ್ನು ಹೇಳುತ್ತಿದ್ದಾಳೆ.
See the video about Merchant of Venice:https://youtu.be/O_lZ6mz0Bg8?si=eXklQZtSTnqTImRQ
ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವವು ಶ್ರೀತುಲಸಿ ಕೃಷ್ಣ ತುಲಸಿ;
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ.
ಪೂಜೆ ಮಾಡಿ ತುಳಸಿ ಕಟ್ಟೆಗೆ ಕುಂಕುಮ ಇಡುವಾಗಲೂ ನಿಮ್ಮದೇ ನೆನಪು ನೀಲಿ ಆಕಾಶದಲ್ಲಿ ಚಂದಿರ ಬಂದು ಹೇಗೆ ಭೂಮಿಯನ್ನು ಬೆಳಗುವನು ಹಾಗೆಯೇ ನೊಂದಿರುವ ಮನಸಿಗೆ ಬೆಳಕಾಗಿ ನೀವು ಬಂದು ಮನಸ್ಸಿಗೆ ಉತ್ತೇಜನ ನೀಡುವಂತಾಗುತ್ತದೆ ನಿಮ್ಮ ನೆನಪು ಎಂದು ಹೇಳುತ್ತಿದ್ದಾಳೆ.
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ;
ಇನ್ನು ತಂಗಿಯ ಮದುವೆ ತಿಂಗಳಿಹುದು.
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ
ಐದು ತಿಂಗಳ ಕಂದ ನಗುತಲಿಹುದು.
ನಾನು ಇಲ್ಲಿ ನಮ್ಮ ತಾಯಿ ತುಂಬಾ ಚೆನ್ನಾಗಿ ರುಚಿ ರುಚಿಯಾದ ಅಡುಗೆ ಮಾಡಿ ತಿನ್ನಲು ಕೊಡುತ್ತಾಳೆ ಎಂದು ನಾನು ಇನ್ನೂ ಇಲ್ಲಿ ಕುಳಿತಿಲ್ಲ ಬದಲಾಗಿ ನನ್ನ ತಂಗಿಯ ಮದುವೆ ಇನ್ನೊಂದು ತಿಂಗಳ ಒಳಗೆ ನಡೆಯುತ್ತದೆ ಅದರಿಂದ ತವರು ಮನೆಯ ಪಂಚರದೊಳಗೆ ಸಿಲುಕಿರುವ ಗಿಳಿಯಾಗಿ ನಾನು ಇಲ್ಲಿ ಇಲ್ಲ ಅದರೊಂದಿಗೆ ನಮ್ಮ ಐದು ತಿಂಗಳ ಮಗುವನ್ನು ಜೋಪಾನ ಮಾಡಿಕೊಂಡು ಇಲ್ಲಿನ ಕೆಲಸ, ಕಾರ್ಯಗಳಿಗಾಗಿ ನಾನಿಲ್ಲಿರುವುದು ಎಂದು ಹೇಳುತ್ತಾಳೆ.
Read the Naanondu Maravagiddare poem summary: https://rvwritting.com/1-naanondu-maravagiddare-poem-summary-%e0%b2%a8%e0%b2%be%e0%b2%a8%e0%b3%8a%e0%b2%82%e0%b2%a6%e0%b3%81-%e0%b2%ae%e0%b2%b0/
ಕಣ್ಣೆದುರಿಗಿರುವಾಗ ನಿಮ್ಮ ಮನವುಕ್ಕುವುದು
ಕ್ಷೀರಸಾಗರದಂತೆ ಶಾಂತಿಯೊಳಗೆ.
ಕಣ್ಣ ಮರೆಯಾದಾಗ ಹೂವಲ್ಲ ಹಾವೆಂದು
ಬಿರುನುಡಿಯನಾಡುವುದು ನಿಮಗೆ ತರವೆ?
ತನ್ನ ಗಂಡ ಕೋಪದಿಂದ ಮಾತನಾಡಿದಾಗ ಅದಕ್ಕೆ ಪ್ರತಿಯಾಗಿ ಹೆಂಡತಿ ನಾನು ನಿಮ್ಮ ಎದುರಿಗೆ ಸದಾ ಕಾಣುವಂತಿದ್ದರೆ ನಿಮ್ಮ ಹಾಲಿನಂತ ಮನಸ್ಸು ಶಾಂತವಾಗಿ ನಡೆಯುವುದು ಆದರೆ ನಿಮ್ಮ ಕಣ್ಣಿಗೆ ನಾನು ಕಂಡಿಲ್ಲವೆಂದರೆ ನನ್ನನ್ನು ಹೂವಿನಂತೆ ನೋಡದೆ ಹಾವಿನಂತೆ ನೋಡಿ ನನ್ನನ್ನು ಜರೆಯುವುದು ಸರಿಯೇ? ಹೇಳಿ ಎಂದು ಗಂಡನಿಗೆ ಕೇಳುತ್ತಿದ್ದಾಳೆ ಇಲ್ಲಿ ಗಂಡನ ಮನದೊಳಗಿನ ಪ್ರೀತಿಯನ್ನು ತಿಳಿಯಬಹುದಾಗಿದೆ.
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ.
ನಾಳೆ ಮಂಗಳವಾರ: ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೆನೆ ನಾನು ಇಲ್ಲೆ?
ನಾನು ನನ್ನ ತವರು ಮನೆಗೆ ಬಂದಾಗಲೂ ಮತ್ತೆ ತಿರುಗಿ ಬರುವುದು ಯಾವಾಗ ಎಂದು ಯೋಚಿಸುತ್ತಿರುವೆ. ಅದಕ್ಕೆ ಚಿತ್ರದುರ್ಗದಿಂದ ಮೈಸೂರಿಗೆ ಹೋಗುವ ರೈಲನ್ನು ದಿನನಿತ್ಯವೂ ನೋಡುತ್ತಿರುತ್ತೇನೆ, ಆಗಲು ನಾನು ಯಾವಾಗ ನಿಮ್ಮನ್ನು ಬಂದು ಸೇರುವುದು ಎಂದುಕೊಳ್ಳುತ್ತಿರುತ್ತೇನೆ. ನಾಳೆ ಮಂಗಳವಾರ ಕಳೆದು ಮಾರನೆಯ ದಿನ ನವಮಿ ಕಳೆದ ಮೇಲೆ ನಾನು ಇಲ್ಲಿ ಇರುವೆನೇ?. ಅದು ಸಾಧ್ಯವಿಲ್ಲದ ಮಾತು ನಾನು ಬೇಗ ನಿಮ್ಮ ಬಳಿಗೆ ಬರುವೆ.
ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳುಹುವರು;
ಕಂದನಿಗೆ ಹೊಸ ಜರಿಯ ಲಂಗವುಡಿಸಿ.
ತಂದೆಯವರೇ ಬಂದು ತಪ್ಪಾಯಿತೆನ್ನುವರು
ಹೆಣ್ಣ ಹೆತ್ತವರನ್ನು ದೂರಬೇಡಿ.
ನಾನು ಹೊರಡುವಾಗ ಮಡಿಲಿಗೆ ಅಕ್ಕಿ ತುಂಬಿ ತಲೆಗೆ ಹೂವು ಮೂಡಿಸಿ ಪ್ರೀತಿ ಆಧಾರಗಳಿಂದ ಕಳುಹಿಸುವವರು, ಅದರೊಂದಿಗೆ ನಮ್ಮ ಮಗುವಿಗೆ ಹೊಸದಾದ ಜರಿ ಹೊಂದಿರುವ ಲಂಗ ಉಡಿಸಿ ನಮ್ಮನ್ನು ಕರೆದುಕೊಂಡು ನಮ್ಮ ತಂದೆಯವರೇ ಬಂದು ಬಿಡುವರು. ನಿಮ್ಮ ಬಳಿ ಕ್ಷಮೆ ಕೇಳುವರು, ಇಷ್ಟು ದಿನ ಮನೆಯಲ್ಲಿ ಇರಿಸಿಕೊಂಡದ್ದಕ್ಕೆ ಅದಕ್ಕಾಗಿ ನೀವು ಅವರನ್ನು ದೂರ ಬೇಡಿ ಗೌರವ ಸತ್ಕಾರಗಳಿಂದ ಅವರನ್ನು ನಡೆಸಿಕೊಳ್ಳಿ ಎಂದು ಹೇಳಿದ್ದಾರೆ
ಮರೆತಿಹಳು ಎನ್ನದಿರಿ. ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು.
ಬಂದು ಬಿಡುವೆನು ಬೇಗ, ಮುನಿಯದಿರಿ ಕೊರಗದಿರಿ.
ಚುಚ್ಚದಿರಿ ಮೊನೆಯಾದ ಮಾತನೆಸೆದು.
ಆದರೋಚಾರಗಳಿಂದ ಗಂಡನನ್ನು ಮರೆತಿದ್ದಾಳೆ ಎಂದುಕೊಳ್ಳಬೇಡಿರಿ. ಕಾಣದೆ ಇರುವ ತೋಟದಲ್ಲಿ ಮಲ್ಲಿಗೆ ಅರಳು ಹೊಡೆದಂತೆ ನೀವು ಹಾಗೆ ನೋಡಬೇಡಿ ಬೇಗ ನಿಮ್ಮ ಬಳಿಗೆ ಬಂದು ಬಿಡುವೆನು. ಅದಕ್ಕಾಗಿ ನನ್ನ ಮೇಲೆ ಕೋಪ ಮಾಡಿಕೊಂಡು ಕೊರಗಬೇಡಿ ಅದರಿಂದ ನೊಂದು ನನ್ನನ್ನು ತುಚ್ಚು ಮಾತುಗಳಿಂದ ನೋಯಿಸಬೇಡಿ ಎಂದು ಹೇಳಿದ್ದಾಳೆ.
ಇಲ್ಲಿ ಹೆಂಡತಿಯು ತವರಿಗೆ ಹೋದಾಗ ಗಂಡನಲ್ಲಿ ಉಂಟಾದ ವಿರಹ ಕೋಪ ಕೊರಗು ಹೆಂಡತಿಯ ಕಾತುರತೆಯನ್ನು ಈ ಕವಿತೆಯಲ್ಲಿ ನಾವು ಕಾಣಬಹುದಾಗಿದೆ.
.
ಹೆಂಡತಿ ತವರಿಗೆ ಹೋಗಿಹೇಳಿದ್ದಾಳೆ.
ReplyForwardAdd rea |
ReplyForwardAdd reaction |