Hogogu – Summary of Hogogu 1st B.com Kannada Poem ಹೋಗೋಗು ಪದ್ಯದ ಸಾರಾಂಶ

Hogogu
Hogogu

Hogogu – ಕವಿ ಕಾವ್ಯ ಪರಿಚಯ :

Hogogu – ಸವಿತಾ ನಾಗಭೂಷಣ ಇವರು ಜನಿಸಿದ್ದು ಚಿಕ್ಕಮಗಳೂರು. ಬಿ.ಕಾಂ. ಪದವೀಧರೆ ೨೦ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆಸಲ್ಲಿಸಿ. ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ‘ನಾ ಬರುತ್ತೆನೆ ಕೇಳು’ ‘ಚಂದ್ರನ ಕರೆಯಿರಿ ಭೂಮಿಗೆ’ ‘ಆಕಾಶ ಮಲ್ಲಿಗೆ’, ‘ಜಾತ್ರೆಯಲ್ಲಿ ಶಿವ’ ಇವು ಪ್ರಸಿದ್ಧ ಕವನಸಂಕಲನಗಳು. ‘ಕಾಡುಲಿಲ್ಲಿ’ ‘ಹಳ್ಳಿಯದಾರಿ’ ಕಾದಾಂಬರಿಗಳು, ‘ಹೂಮನಸಿನ ಹೋರಾಟಗಾರ ಮತ್ತು ಲೇಖನಗಳು’ ಇವರ ಲೇಖನಗಳ ಸಂಕಲನವಾಗಿದೆ. ಇವರಿಗೆ ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ, ಬಿ.ಎಸ್.ಶ್ರೀದರ್ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿಗಳು ದೊರೆಕಿದೆ. ಶಿವಮೊಗ್ಗ ತಾಲ್ಲೂಕಿನ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

See the video about Hogogu poem: https://youtu.be/jeh2d355YeA?si=FkZhlTkDlTLlxtrP

ಸುಡಲು ಒಂದು ದಿಮ್ಮಿ ಸಾಕು!

ಅದೆಷ್ಟು ಮರ ಕಡಿಯುತ್ತೀಯ?

ಹೋಗೋಗು….

ಈ ಪದ್ಯದಲ್ಲಿ ನಮಗೆ ಬೇಕಿರುವ ಆಹಾರ ಪದಾರ್ಥಗಳಿಗೆ ಕಾರ್ಖಾನೆಗಳಿಗೆ ಅಭಿವೃದ್ಧಿ ಚಟುವಟಿಕೆಗಳಿಗೆ ಎಷ್ಟು ಬೇಕಿದೆಯೋ ಅಷ್ಟು ಮರಗಳನ್ನು ಕಡಿದು, ಬಳಸಿಕೊಳ್ಳಬೇಕು ಆದರೆ ನಾವು ಅಗತ್ಯಕ್ಕಿಂತ ಹೆಚ್ಚಿನ ಮರಗಳನ್ನು ಕಡಿಯುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇದರೊಂದಿಗೆ ನಮ್ಮಲ್ಲಿನ ದುರಾಸೆ ಅಥವಾ ಅತಿಯಾಸೆ ಎಂಬುದು ಎದ್ದು ಕಾಣುವಂತೆ ತೋರುತ್ತಿದೆ.

ಉಡಲು ಇಷ್ಟಗಲ ಬಟ್ಟೆ ಸಾಕು!

ಅದೆಷ್ಟು ನೆಲ ಕಡಿಯುತ್ತೀಯ?

ಹೋಗೋಗು….

Tanaji summary: https://rvwritting.com/thanaji/

ನಮಗೆ ನಮ್ಮ ದೇಹಕ್ಕೆ ದೇಹವನ್ನು ಮುಚ್ಚಲು ಎಷ್ಟು ಬಟ್ಟೆಯ ಅವಶ್ಯಕತೆ ಇದೆಯೋ ಅಷ್ಟನ್ನು ನಾವು ಬೆಳೆದು ಉತ್ಪಾದಿಸಿಕೊಳ್ಳಬೇಕು ಆದರೆ ನಾವು  ವ್ಯಾಪಾರಿ ಮನೋಭಾವನೆಗೆ ಒಳಗಾಗಿ ನಮ್ಮ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮನಸ್ಥಿತಿಗೆ ಬಂದು ಭೂಮಿಯ ಫಲವತ್ತತೆಯನ್ನು ಹಾಳು ಮಾಡುವ ಮೂಲಕ ಭೂಮಿಯನ್ನು ಬರೆದು ಮಾಡಲು ಮುಂದಾಗುತ್ತಿದ್ದೇವೆ. ಇದರಿಂದ ವಿಶಾಲವಾಗಿರುವ ಭೂಮಿಯ ನಶಿಸುವಿಕೆಗೆ ದಾರಿಯನ್ನು ತೋರಿದಂತಾಗುತ್ತಿದೆ.

ಉಣಲು ಒಂದು ಹಿಡಿ ಅಕ್ಕಿ ಸಾಕು

ಅದೆಷ್ಟು ನದಿ ಬತ್ತಿಸುತ್ತೀಯ?

ಹೋಗೋಗು….

ನಾವು ಜೀವಿಸಲು ಬೇಕಿರುವುದು ಆಹಾರ ಆಹಾರದಲ್ಲಿ ತಾನು ಬದುಕಲು ಒಂದು ಇಡೀ ಅಕ್ಕಿ ತಿಂದು ಬದುಕುತ್ತೇನೆ ಆದರೆ ಇದೇ ಹಿಡಿ ಹ**** ಬೆಳೆಯಲು ನಮ್ಮಲ್ಲಿನ ನದಿ ನೀರು ಕೆರೆ ಅಣೆಕಟ್ಟೆ ಎಲ್ಲವುಗಳು ಬತ್ತಿ ಹೋಗುವಷ್ಟು ನೀರನ್ನು ಬಳಸಿ ಅವನು ಬೆಳೆಯುತ್ತಿದ್ದೇವೆ ಹೀಗೆ ಮುಂದುವರೆದರೆ ಮುಂದೊಂದು ದಿನ ನಾವು ಕುಡಿಯಲು ನೀರಿಲ್ಲದ ಸ್ಥಿತಿಗೆ ತಲುಪಿ ಬಿಡುತ್ತೇವೆ. ಅದರಿಂದ ಆಧುನಿಕ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಿತ ನೀರಿನ ಬಳಕೆ ಹೆಚ್ಚಿಸಬಹುದಾಗಿದೆ ಇದರೊಂದಿಗೆ ಭೂಮಿಯು ನಶಿಸುವ ಕಾರ್ಯವನ್ನು ಮಾಡುವ ಸ್ಥಿತಿಯಿಂದ ಹಿಂದೊಗಬಹುದು.

ಹೃದಯ ಬರಡಾದರೆ

ಕಣ್ಣು ಕುರುಡಾದರೆ

ಬರದೆ ಕಾಡಿಸುವುದು ಮಳೆಗಾಲ

ಬಂದೇ ತೀರುವುದು ಬರಗಾಲ

ಹೃದಯ ಮತ್ತು ಕಣ್ಣು ಇವುಗಳ ಮೂಲಕ ನಾವು ಸಹಾಯ ಪಡೆಯುವವರಿಗೆ ಸಹಾಯ ಮಾಡುವವರಲ್ಲಿ ಮುಖ್ಯವಾಗಿ ಇರಬೇಕಾಗುತ್ತದೆ ಕಣ್ಣು ಮತ್ತು ಹೃದಯ ಗುರುತಿಸಿ ಸಹಾಯ ಮಾಡುವುದು ಹಾಗೆ ನಮ್ಮಲ್ಲಿ ಮಳೆಗಾಲ ಮತ್ತು ಬರಗಾಲವೂ ಕೂಡ ನಮ್ಮಿಂದಲೇ ಬರುತ್ತದೆ ಏಕೆಂದರೆ ಅರಣ್ಯವನ್ನು ನಾಶ ಮಾಡುವ ಮೂಲಕ ಬರಗಾಲ ಬರುವಂತೆ ಮಾಡುತ್ತೇವೆ ಹಾಗೆಯೇ ಅರಣ್ಯವನ್ನು ನಾಶ ಮಾಡದೆ ಹೆಚ್ಚಿಸಿದರೆ ಮಳೆಗಾಲ ಯಥಾಪ್ರಕಾರವಾಗಿ ಬರುತ್ತದೆ ಆದ್ದರಿಂದ ಸಕಲ ಜೀವ ಸಂಕುಲವು ಸಮೃದ್ಧಿಯಿಂದ ಕೂಡಿರಲು ಸಾಧ್ಯವಾಗುತ್ತದೆ ಅದಕ್ಕೆ ಬೇಕಾಗಿರುವುದು ಮನುಷ್ಯನ ಕಣ್ಣು ಮತ್ತು ಹೃದಯ ಇದ್ದಾಗ ಮಾತ್ರ ಇವೆಲ್ಲವೂ ಸಾಧ್ಯವಾಗಲು ಆಗುತ್ತದೆ.

ನಾಕು ತಾಸೋ ನಲವತ್ತು ಗಂಟೆಯೋ

ನಾಕು ವರುಷವೋ ಏಸು ವರುಷವೋ

ಉಳಿಗಾಳ? ಕಾದು ಬರುವುದೆ ಕೊನೆಗಾಲ?

ಹೋಗೋಗು….

ಮನುಷ್ಯ ಹುಟ್ಟು ಮತ್ತು ಸಾವಿನ ನಡುವಿನ ಬದುಕನ್ನು ಬದುಕುವುದು ನಾಲ್ಕು ವರ್ಷವೂ 40 ವರ್ಷವೂ ತಿಳಿಯದು ಆದರೆ ಬದುಕಿದಷ್ಟು ದಿನ ಉಪಕಾರಿಯಾಗಿ ಬದುಕಬೇಕು ಅದು ಹೇಗೆಂದರೆ ಸರಳವಾಗಿ ಬದುಕಿ ಈ ಪ್ರಪಂಚದ ಸಂಪನ್ಮೂಲಗಳನ್ನು ಮುಂದಿನ ಜನಾಂಗಕ್ಕೆ ಹಾಗೆಯೇ ತಲುಪಿಸಬೇಕು ಅವಾಗ ನನ್ನ ಬದುಕಿಗೆ ಸಾರ್ಥಕತೆ ಎಂಬುದು ದೊರೆಯುತ್ತದೆ ಸಾರ್ಥಕತೆ ದೊರೆಯುವ ಮೂಲಕವಾಗಿ ಪ್ರಪಂಚಕ್ಕೆ ಯಾವುದೇ ನಾಶವನ್ನುಂಟು ಮಾಡದೆ ನಮ್ಮ ಜೀವನಕ್ಕೂ ಸಾರ್ಥಕತೆಯನ್ನು ಪಡೆದುಕೊಳ್ಳಬಹುದು.

ಗಿಡ ನೆಡು, ಬಾವಿ ತೋಡು,

ನೆನೆಯುವರು ಮಂದಿ ನಿನ್ನ ಅರೆಗಳಿಗೆ

ನಡೆದುಕೊಂಡಂತೆ ಅವರವರ ದೇವರಿಗೆ!

ದೇವರು ಎಂಬುದರ ಮೇಲೆ ಹೇಗೆ ನಂಬಿಕೆಯನ್ನು ಇರಿಸಿದ್ದೆವೋ ಹಾಗೆಯೇ ಈ ಭೂಮಿಯನ್ನು ದೇವರಂತೆ ತಿಳಿದು ಅಲ್ಲಿ ಬದುಕಿರುವವರಿಗೆ ನಮ್ಮಿಂದ ಆಗುವ ಸಹಾಯವನ್ನು ಗಿಡ ನೆಡುವ ಮೂಲಕ ಬಾವಿ ತೋಡುವ ಮೂಲಕ ನಾವು ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡಿದರೆ ನಮ್ಮನ್ನು ದೇವರಂತ ಸಮಾಜ ಕಾಣುತ್ತದೆ ಅದಕ್ಕಾಗಿ ನಾವು ಸಮಾಜದ ಉದ್ದಾರದ ಪರವಾಗಿ ಕೆಲಸಗಳನ್ನು ಮಾಡಬೇಕು.

ಈ ಕವಿತೆಯಲ್ಲಿ ಮನುಷ್ಯನ ದುರಾಸೆ ಹೆಚ್ಚಾಗಿ ಭೂಸಂಪತ್ತುಗಳ ನಾಶ ಹೆಚ್ಚುತ್ತಿದೆ ಇದರಿಂದ ಇಲ್ಲಿ ಬದುಕುತ್ತಿರುವ ಎಲ್ಲರಿಗೂ ಎಲ್ಲವೂ ದೊರಕಬೇಕಾದರೆ ಸುಸ್ಥಿರವಾದ ಜೀವನ ಶೈಲಿಯ ಅವಶ್ಯಕತೆ ಇದೆ ಎಂಬುದನ್ನು ಈ ಕವಿತೆಯು ತಿಳಿಸುತ್ತದೆ

Leave a Comment

Your email address will not be published. Required fields are marked *

Scroll to Top