Hoysalaru – ಹೊಯ್ಸಳರು – One of the major dynasty of Karnataka For ur upcoming exams – 8

ಹೊಯ್ಸಳರು - Hoysalaru
ಹೊಯ್ಸಳರು – Hoysalaru

Hoysalaru – ಹೊಯ್ಸಳರು ಕರ್ನಾಟಕದಲ್ಲಿ 11ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ತದನಂತರ ಸ್ವತಂತ್ರವಾಗಿ ಆಳ್ವಿಕೆ ನಡೆಸಿ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜವಂಶವಾಗಿದೆ.

Hoysalaru – ಹೊಯ್ಸಳರ ಮೂಲ

ಶಾಸನಾಧಾರಗಳು

* ವಿಷ್ಣುವರ್ಧನನ ಬೇಲೂರು ಶಾಸನ – ಸಳ ಹುಲಿಯನ್ನು ಕೊಂದು ಹೊಯ್ಸಳ ಸಾಮ್ರಾಜ್ಯ ನಿರ್ಮಿಸಿದ ಬಗ್ಗೆ ತಿಳಿಸುತ್ತದೆ.

ಸಿವೆಲ್ ಪ್ರಕಾರ – ” ಹೊಯ್ಸಳರು ಬೆಟ್ಟದ ನಾಯಕರುಗಳ ಕುಟುಂಬಕ್ಕೆ ಸೇರಿದವರಾಗಿ ಮೈಸೂರು ಪಶ್ಚಿಮ ತುದಿಯಲ್ಲೂ ಘಟ್ಟಗಳ ಹತ್ತಿರ ಮೂಡಿಗೆರೆಗೆ ಸಂಬಂಧಿಸಿದವರು ಎಂದಿದ್ದಾರೆ

ಲೂಯಿಸ್ ಪ್ರಕಾರ – “ಹೊಯ್ಸಳರು ಮಲೆನಾಡಿನವರು ಮತ್ತು ಕನ್ನಡಿಗರು ಎಂದು ಹೇಳಿದ್ದಾರೆ”.

ಹೊಯ್ಸಳರ ರಾಜಕೀಯ ಇತಿಹಾಸ

1. ನೃಪಕಾಮ 

* ಹೊಯ್ಸಳ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದವನು.

* ಮೂಡಿಗೆರೆಸುತ್ತಮುತ್ತಲಿನ ಪ್ರದೇಶದ ಮೇಲೆ ಹತೋಟಿ ಸಾಧಿಸಿದನು.

* ಮಲೆನಾಡಿನಲ್ಲಿ ವಾಸಿಸುತ್ತಿದ್ದ ಮಾಲೆಪರನ್ನು ಸೋಲಿಸಿ ಮಾಲೆಪೆರೊಳ್ಗಂಡ ಎಂಬ ಬಿರುದು ಪಡೆದನು.

* ಚಾಳುಕ್ಯರ ಅಧೀನಕ್ಕೊಳಪಟ್ಟರು.

* ಚಾಳುಕ್ಯರ ವಿರುದ್ಧ ಕದಂಬರಿಗೆ ಸಹಾಯ ಮಾಡಿದನು.

2. ವಿನಯಾದಿತ್ಯ

* ಇವನ ಕಾಲದಲ್ಲಿ ದಕ್ಷಿಣ ಭಾರತದ ರಾಜಕೀಯ ಶಾಂತವಾಗಿತ್ತು.

* ಇವನು ಸಾಮ್ರಾಜ್ಯ ವಿಸ್ತರಣೆಗೆ ಮುಂದಾದನು.

* ದಕ್ಷಿಣದ ರಾಜ್ಯಗಳ ಮೇಲೆ ಪ್ರಭುತ್ವ ಸಾಧಿಸಿದನು.

* ಗಂಗರ ಪ್ರದೇಶ ಗೆದ್ದಿದ್ದರಿಂದ ರಕ್ಕಸಗಂಗ ಎಂಬ ಬಿರುದನ್ನು ತಾನೇ ಧರಿಸಿದನು.

* ಚಾಳುಕ್ಯರ ಸೋಮೇಶ್ವರ ಹೊಯ್ಸಳ ದೇವಿಯನ್ನು ಮದುವೆಯಾಗಿ ಸಂಬಂಧ ಸುಧಾರಿಸಿತು. ಇದರಿಂದ ಚಾಳುಕ್ಯರ ಪರವಾಗಿ ಚೋಳರನ್ನು ಸೋಲಿಸೊದನು.

* ತನ್ನ ರಾಜಧಾನಿಯನ್ನು ಸೊಸೆವೂರಿನಿಂದ ಹಳೇಬೀಡಿಗೆ ವರ್ಗಾಯಿಸಿ ಅದಕ್ಕೆ ” ದೋರಸಮುದ್ರ” ಎಂಬ ಹೆಸರು ನೀಡಿದನು.

* ಇವನು ಜೈನಮತಾವಲಂಬಿಯಾಗಿದ್ದ.

Read chola dynasty:https://rvwritting.com/chola-dynasty-%e0%b2%9a%e0%b3%8b%e0%b2%b3-%e0%b2%b8%e0%b2%be%e0%b2%ae%e0%b3%8d%e0%b2%b0%e0%b2%be%e0%b2%9c%e0%b3%8d%e0%b2%af-this-chapter-uses-in/

3. ಎರೆಯಂಗ

* ಪರಮಾರ ಜಯಸಿಂಹ ಚಾಳುಕ್ಯರ ಮೇಲೆ ದಂಡೆತ್ತಿ ಹೋಗಿ ತಂದೆಯ ಸಲಹೆ ಮೇರೆಗೆ ಚಾಳುಕ್ಯರ ಪರವಾಗಿ ನಿಂತು ಅವನನ್ನು ಸೋಲಿಸಿದ.

* ಚಾಳುಕ್ಯ ಸೋದರರಲ್ಲಿ ಸಿಂಹಾಸನಕ್ಕಾಗಿ ವೈರತ್ವ ಮೂಡಿದಾಗ ತಂದೆಯ ಆದೇಶದಂತೆ ವಿಕ್ರಮಾದಿತ್ಯನ ಪರವಾಗಿ ನಿಂತ

4. ಒಂದನೇ ಬಲ್ಲಾಳ

* ಚೋಳ ಸಾಮಂತರಾಗಿದ್ದ ಚೆಂಗಾಳ್ವರನ್ನು ಸೋಲಿಸಿ ನೊಳಂಬವಾಡಿಯನ್ನು ವಶಪಡಿಸಿಕೊಂಡನು.

* ಉಚ್ಚಂಗಿ ದುರ್ಗದ ಪಾಂಡ್ಯರನ್ನು ಸೋಲಿಸಿದ

* ಬೇಲೂರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿ ದೋರಸಮುದ್ರವನ್ನು ಉಪರಾಜಧಾನಿಯನ್ನಾಗಿ ಮಾಡಿದನು.

* ಪರಮಾರರ ಯುವರಾಜನಾದ ಜಗದ್ದೇವನನ್ನು ತಮ್ಮ ವಿಷ್ಣುವರ್ಧನನ ಜೊತೆ ಸೇರಿ ಸೋಲಿಸಿದನು.

5. ವಿಷ್ಣುವರ್ಧನ ( 1108-1152)

ಗಂಗರಾಜ್ಯವನ್ನು ಚೋಳರ ವಿರುದ್ಧ ಗೆದ್ದು ವೀರಗಂಗಾ ಮತ್ತು ತಲಕಾಡುಗೊಂಡ ಎಂಬ ಬಿರುದನ್ನು ಪಡೆದನು. ಇದರ ನೆನಪಿಗಾಗಿ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯ ನಿರ್ಮಾಣ ಮತ್ತು ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದನು.

* ಕೋಲಾರದಲ್ಲಿದ್ದ ಚೋಳರನ್ನು ಕಂಚಿಯವರೆಗೆ ಓಡಿಸಿಕೊಂಡು ಹೋದುದರಿಂದ ಕಂಚಿಗೊಂಡ ಎಂಬ ಬಿರುದನ್ನು ಪಡೆದನು.

* ಕೊಂಗಾಳ್ವ ನೀಡುಗಲ್ಲಿನ ಚೋಳರನ್ನು ಸೋಲಿಸಿ ಅವನ್ನು ವಶಪಡಿಸಿಕೊಂಡನು.

* ಉಚ್ಚಂಗಿಯ ಪಾಂಡ್ಯರನ್ನು ಸೋಲಿಸಿದನು

* 6ನೇ ವಿಕ್ರಮಾದಿತ್ಯನ ಎದುರಾಗಿ ಸ್ವತಂತ್ರನಾಗಲು ಹವಣಿಸಿದರು ಸ್ವತಂತ್ರನಾಗಲು ಸಾಧ್ಯವಾಗಲಿಲ್ಲ.

* ರಮಾನುಜಾಚಾರ್ಯರಿಂದ ವೈಷ್ಣವನಾದ.

* ಈತನ ಸೇನಾನಿ ಕೇತಮಲ್ಲ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ನಿರ್ಮಿಸಿದ 1121 ರಲ್ಲಿ

* ಗಂಗವಾಡಿ, ನೊಳಂಬವಾಡಿ, ಹಲಸಿಗೆ ಮುಂತಾದವುಗಳ ವಿಜಯವಾದ ನೆನಪಿಗಾಗಿ 5 ವಿಜಯ ನಾರಾಯಣ ದೇವಾಲಯಗಳನ್ನು ತಲಕಾಡು, ಬೇಲೂರು, ಮೇಲುಕೋಟೆ, ಗದಗ, ಬಂಕಾಪುರಗಳಲ್ಲಿ ಕಟ್ಟಿಸಿದನು.

* ಈತನ ಬಿರುದುಗಳು ತಲಕಾಡುಗೊಂಡ,  ಮಲೆಪೆರೊಳ್ ಗಂಡ ಗಂಡಗಿರಿನಾಥ.

6. ವಿಜಯ ನರಸಿಂಹ

* ಈತನು ಸುಖಲೋಲುಪನಾಗಿದ್ದನು

* ಬಿಜ್ಜಳನು ಬನವಾಸಿ ತುಂಗಭದ್ರಾ ಪ್ರದೇಶಗಳನ್ನು ವಶಪಡಿಸಿಕೊಂಡನು

7. ಇಮ್ಮಡಿ ವೀರಬಲ್ಲಾಳ

* ಈತನು ಅತ್ಯಂತ ಪರಾಕ್ರಮಿ ಮತ್ತು ಸಮರ್ಥನಾಗಿದ್ದನು

* ಇವನ ಹೆಸರಿನಿಂದಲೇ ಹೊಯ್ಸಳ ರಾಜವಂಶಕ್ಕೆ ಬಲ್ಲಾಳ ಎಂಬ ಹೆಸರು ಬಂದಿತು

* ಚೋಳ ರಾಜನಾದ ಮುಮ್ಮಡಿ ಕುಲೋತ್ತುಂಗನಿಗೆ ಎದುರಾಗಿ ಮಾರವರ್ಮ ಸುಂದರಪಾಂಡ್ಯ ಧಂಗೆ ಎದ್ದಿದ್ದರಿಂದ ಇವನನ್ನು ಸೋಲಿಸಿ ಚೋಳ ಸಾಮ್ರಾಜ್ಯ ರಕ್ಷಿಸಿದ್ದರಿಂದ ಅವನಿಗೆ ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಪಡೆದುಕೊಂಡನು.

* ಚೆಂಗಾಳ್ವ, ಕೊಂಗಾಳ್ವರನ್ನು ಸೋಲಿಸಿದನು.

* ಉಚ್ಚಂಗಿ ಕೋಟೆಯಲ್ಲಿ ಪಾಂಡ್ಯರಾಜ ಕಾಮ ದೇವನನ್ನು ಸೋಲಿಸಿ ಅವನಿಂದ ಕಪ್ಪ ಕಾಣಿಕೆ ಪಡೆದನು. ರಾಜ್ಯವನ್ನು ಅವನಿಗೆ ಬಿಟ್ಟುಕೊಟ್ಟಿದ್ದರಿಂದ ಪಾಂಡ್ಯ ರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದನ್ನು ಪಡೆದನು

* ಕಾಂತಾರ, ಹಾನಗಲ್ಲಿನ ಕದಂಬರು, ತುಳು ರಾಜರನ್ನು ಸೋಲಿಸಿದ.

* ಬಲ್ಲಾಳನು ಕಲ್ಯಾಣವನ್ನು ಜಯಿಸಿದನು ಸೋಮೇಶ್ವರನನ್ನು ಸೋಲಿಸಿದ್ದರಿಂದ ದಕ್ಷಿಣ ಚಕ್ರವರ್ತಿ ಎಂಬ ಬಿರುದನ್ನು ಪಡೆದನು.

* ಕುಂತಳ ಸಾಮ್ರಾಜ್ಯದ ಅಧಿಪತ್ಯಕ್ಕಾಗಿ ಸೇವಣ್ಣರಿಗೂ ವಹಿಸಲ್ಲರಿಗೂ ಘರ್ಷಣೆಯಾಗಿ ಶೇವರ್ಣರ ಬಿಲ್ಲಮ ಕಲ್ಯಾಣ ವಶಪಡಿಸಿಕೊಂಡು ಸೊರಟೂರಿಗೆ ಹೋದ ಅಲ್ಲಿ ಅವನನ್ನು ಸೋಲಿಸಿದನು ನಂತರ ಲಕ್ಕುಂಡಿಯಲ್ಲೂ ಯುದ್ಧವಾಗಿ ಅವನನ್ನು ಸೋಲಿಸಲಾಗಿ ಅದು ಹೊಯ್ಸಳ ಸಾಮ್ರಾಜ್ಯವಾಗಿ ಬದಲಾಯಿತು.

* ಇವನ ಆಸ್ಥಾನದಲ್ಲಿ ಜನ್ನ, ರುದ್ರಭಟ್ಟ ಎಂಬ ಕವಿಗಳಿದ್ದರು.

8. ಎರಡನೇ ನರಸಿಂಹ (1220-1235)

* ಸೇವುಣರ ದೊರೆ ಮಹಾದೇವನ ವಿರುದ್ಧ ಗೆಲವು

* ಚೋಳ ರಾಜ ಮುಮ್ಮಡಿ ರಾಜರಾಜನು ಸುಂದರ ಪಾಂಡ್ಯನಿಗೆ ಕಪ್ಪ ಕೊಡದ ಕಾರಣ ಇವರನ್ನು ಬಂಧಿಸಿ ಸೆರೆಯಲ್ಲಿಟ್ಟನು.  ನಂತರ ತಪ್ಪಿಸಿಕೊಂಡು ವೀರನರಸಿಂಹ ಬಳಿ ಸಹಾಯ ಯಾಚನೆ ನಂತರ ಇವನನ್ನು ಚೋಳರಾಜನನ್ನಾಗಿ ಮಾಡಿದ.

* ಶ್ರೀರಂಗಂಬಳಿಯ ಕಣ್ಣನೂರಿನಲ್ಲಿ ಹೊಸ ರಾಜಧಾನಿಕಟ್ಟಿ ಅಲ್ಲಿಂದ ಆಳ್ವಿಕೆಯನ್ನು ಮುಂದುವರಿಸಿದ.

* ಇವನ ನಂತರ ಸೋಮೇಶ್ವರ – ಈತನಿಗೆ ಇಬ್ಬರು ಮಕ್ಕಳು ಮೂರನೇ ನರಸಿಂಹನಿಗೆ ಕರ್ನಾಟಕದ ಜಿಲ್ಲೆಗಳ ಆಡಳಿತ, ರಾಮನಾಥನಿಗೆ ತಮಿಳು ಪ್ರಾಂತ್ಯದ ಆಡಳಿತ. ರಾಮನಾಥನು ಹೆಚ್ಚು ಕಾಲ ಅಲ್ಲಿ ನೆಲೆ ನಿಲ್ಲಲಾಗದೆ ತಮಿಳು ಹೊಯ್ಸಳರು ನಾಶ ಹೊಂದಿದರು.

9. ಮೂರನೇ ವೀರಬಲ್ಲಾಳ(1291-1343)

* ಇವನು ಈ ವಂಶದ ಕೊನೆಯ ರಾಜ

* ಚಿಕ್ಕಪ್ಪ ರಾಮನಾಥನ ಮಗ ವಿಶ್ವನಾಥನನ್ನು ಸೋಲಿಸಿ ದಾಯಾದಿ ದ್ವೇಷ ಕೊನೆಗೊಳಿಸಿದನು

* ಸೇವುಣರನ್ನು ಸೋಲಿಸಿದ ಇದರಿಂದ ಬನವಾಸಿ, ಸಂತಲಿಗೆ, ಕೊಗಲಿಗಳ ವಶ.

* ಕಂಪಿಲೆಯ ವಶ

* 1910 ರಲ್ಲಿ ಇವನ ಕಾಲದಲ್ಲಿ ಮಲ್ಲಿಕಾಫರ್ ದಾಳಿ ಮಾಡಿದನು. ಅಪಾರ ಧನಕನಕ ನೀಡಿ ರಾಜಧಾನಿ ಹಾಳುಗೆಡದಂತೆ ನೋಡಿಕೊಂಡನು.

* 1926ರಲ್ಲಿ ಮೊಹಮ್ಮದ್ ಬಿನ್ ತುಘಲಕ್ ಸಂಬಂಧಿ ಬಹಾವುದ್ದೀನ್ ಧಂಗೆ ಎಂದು ಇವನ ಬಳಿ ಆಶ್ರಯದಲ್ಲಿದ್ದ. ಮೊಹಮದ್ ಬಿನ್ ತುಘಲಕ್ ಸೈನ್ಯ ಬಂದಾಗ ಅವನಿಗೆ ಇವನನ್ನು ಒಪ್ಪಿಸಿದನು.

* ತನ್ನ ಕುಮಾರನಿಗೆ ಪಟ್ಟ ಕಟ್ಟಲು ವಿಜಯನಗರ ನಿರ್ಮಾಣ ಮಾಡಿದ

* ಘಿಯಾಸುದ್ದೀನ್ ಸೈನ್ಯವನ್ನು ಕಣ್ಣನೂರಿನಲ್ಲಿ ಸೋಲಿಸಿದ ನಂತರ ಮತ್ತೆ ಯುದ್ಧವಾಗಿ ವೀರಬಲ್ಲಾಳನ ಸೆರೆಯಾಗುತ್ತದೆ ನಂತರ ಅವನನ್ನು ಕೊಲೆ ಮಾಡಲಾಗುತ್ತದೆ.

you want to by the Dell Laptop; Visit this link:https://amzn.to/44016BB

ಹೊಯ್ಸಳರ ಆಡಳಿತ

* ಗಂಗರು ಮತ್ತು ಕಲ್ಯಾಣ ಚಾಲುಕ್ಯರ ಆಡಳಿತ ಅಳವಡಿಸಿಕೊಂಡಿದ್ದರು

* ಮೊದಲು ಮೈಸೂರು ಸಂಸ್ಥಾನಕ್ಕೆ ಸೀಮಿತವಾಗಿದ್ದರು ವೀರಬಲ್ಲಾಳನ ಕಾಲದಿಂದ ಕರ್ನಾಟಕದ ಬಹುತೇಕ ಭಾಗಗಳನ್ನು  ಒಳಗೊಂಡಿತ್ತು.

* ಆರಂಭದಲ್ಲಿ ಸೊಸೆವೂರು ನಂತರ ದ್ವಾರಸಮುದ್ರ, ರಾಜಧಾನಿಯಾಗಿತ್ತು. ಬೇಲೂರು, ಅರಸೀಕೆರೆ, ತೊಣ್ಣೂರು, ಬಂಕಾಪುರ, ಲಕ್ಕುಂಡಿ, ಹೊಸ ಪಟ್ಟಣ, ಕಣ್ಣಾನೂರು ಉಪರಾಜಧಾನಿಗಳಾಗಿದ್ದವು.

* ರಾಜತ್ವ ವಂಶ ಪಾರಂಪರ್ಯವಾಗಿತ್ತು

* ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ರಾಜನಲ್ಲಿ ಕೇಂದ್ರೀಕೃತವಾಗಿತ್ತು

ಮಂತ್ರಿ ಪರಿಷತ್ತು

* ಇವರ ಕಾಲದ ಮಂತ್ರಿ ಪರಿಷತ್ತಿಗೆ ‘ಪಂಚ ಪ್ರಧಾನ’ ಸಮಿತಿ ಎಂದು ಹೆಸರಾಗಿತ್ತು. ಅವರು

* ಸಂಧಿ ವಿಗ್ರಹಿ

* ಶ್ರೀ ಕರ್ಣಾಧಿಕಾರಿ

* ಹಿರಿಯ ಭಂಡಾರಿ

* ಸೇನಾಪತಿ

* ಮಹಾಪಸಯತ 

ಪ್ರಾಂತ್ಯಾಡಳಿತ

* ಸಾಮ್ರಾಜ್ಯ

* ಪ್ರಾಂತ – ಪ್ರಾಂತಗಳು, ತಲಕಾಡು, ಕೊಂಗುನಾಡು, ನಂಗಿಲಿ, ಗಂಗವಾಡಿ, ಹಾನಗೆರೆ, ಹಲಸಿಗೆ, ಬನವಾಸಿ

* ನಾಡು – ಹೆಗ್ಗಡೆ, ನಾಡ ಹೆಗ್ಗಡೆ

* ಗ್ರಾಮ – ಗೌಡ, ಗಾವುಂಡ

* ಸೇನೆ – ಅಶ್ವಸೈನ್ಯ, ಪದಾತಿದಳ, ಗಜಸೈನ್ಯ, ರಥಸೈನ್ಯ

ಹೊಯ್ಸಳರ ಆರ್ಥಿಕ ಪರಿಸ್ಥಿತಿ

* ವ್ಯವಸಾಯ ಮುಖ್ಯ ಕಸುಬಾಗಿತ್ತು

* ವ್ಯವಸಾಯಕ್ಕೆ ಪ್ರೋತ್ಸಾಹವಿತ್ತು ಇದಕ್ಕಾಗಿ ಕೆರೆಕಟ್ಟೆ ಬಾವಿಗಳ ನಿರ್ಮಾಣ

* ಬಿತ್ತನೆ ಬೀಜಗಳಿಗೆ ಹಣವನ್ನು  ಸಾಲವಾಗಿ ಮಂಜೂರು ಮಾಡುತ್ತಿದ್ದರು.

* ನೀರಾವರಿಗೆ ಗಮನ ನೀಡಿದರು

* ನೇಕಾರಿಕೆ ಸಾರ್ವತ್ರಿಕವಾಗಿತ್ತು

* ಕಾಳು ಮೆಣಸು, ಏಲಕ್ಕಿ, ಶ್ರೀಗಂಧ, ತೇಗ, ದಾಲ್ಚಿನ್ನಿ ಮುಂತಾದ ವಸ್ತುಗಳು ರಫ್ತಾಗುತ್ತಿದ್ದವು.

* ವಾಣಿಜ್ಯ ಸಂಘಗಳು – ವಿವಿಧ ವ್ಯಾಪಾರಿಗಳು ತಮ್ಮಲ್ಲಿ ಸಂಘಗಳನ್ನು ಸೃಷ್ಟಿಸಿಕೊಂಡಿದ್ದವು

* ವ್ಯಾಪಾರ ಕೇಂದ್ರಗಳು – ಬೇಲೂರು, ದ್ವಾರಸಮುದ್ರ, ಆಸಂದಿ, ಅರಸೀಕೆರೆ, ಬೆಳಗೊಳ, ಬಳ್ಳಿಗಾವಿ

* ರಫ್ತು ವಸ್ತುಗಳು – ಹತ್ತಿ ಬಟ್ಟೆ, ಅಡಿಕೆ, ತೆಂಗಿನ ಕಾಯಿ, ದಂತದ ವಸ್ತುಗಳು

* ನಾಣ್ಯಗಳು – ಹೊನ್ನು ಹಣ ಗದ್ಯಾಣ

ಧರ್ಮ

* ಜೈನ, ವೈಷ್ಣವ, ಶೈವ ಪಂಥಗಳು ಆಚರಣೆಯಲ್ಲಿದ್ದವ

ಜೈನ ಧರ್ಮ – 

* ಅತ್ಯಂತ ಪ್ರಬಲವಾದ ಧರ್ಮವಾಗಿತ್ತು

* ಮೂಡಿಗೆರೆ ಜೈನ ಧರ್ಮದ ಪ್ರಬಲ ಧರ್ಮ

* ವಿಷ್ಣುವರ್ಧನನು ಜೈನ ಧರ್ಮತಾವಲಂಬಿಯಾಗಿದ್ದನು

* ಶಾಂತಲಾದೇವಿ – ಜೈನ ದೇವಾಲಯಗಳಿಗೆ ವಿಶೇಷ ಧನ ಸಹಾಯ. ಬೆಳಗೊಳದಲ್ಲಿ “ಸವತಿ ಗಂಧವಾರಣ” ಬಸದಿ ಎಂಬ ಜೈನ ದೇವಾಲಯ ನಿರ್ಮಾಣ.

ವೈಷ್ಣವಧರ್ಮ

* ರಾಮಾನುಜರು ವಿಷ್ಣುವರ್ಧನನನ್ನು ಮತಾಂತರಿಸಿದರು

* ಮೇಲುಕೋಟೆಯಲ್ಲಿ ನೆಲೆ ನಿಂತರು. ಮೇಲುಕೋಟೆ ವೈಷ್ಣವ ಧರ್ಮದ ಪ್ರಮುಖ ಕೇಂದ್ರವಾಯಿತು

* ವಿಷ್ಣುವರ್ಧನ ಅನೇಕ ವಿಷ್ಣು ದೇವಾಲಯಗಳನ್ನು ನಿರ್ಮಿಸಿದ

* ರಾಮಾನುಜರು 20 ವರ್ಷಗಳ ಕಾಲ ನೆಲೆ ನಿಂತು ಭಕ್ತಿ ಮತ್ತು ಪ್ರಸತ್ತಿಗಳನ್ನು ಪ್ರತಿಪಾದಿಸಿದರು

ಹೊಯ್ಸಳರ ಕಾಲದ ಸಾಹಿತ್ಯ

* ಇವರ ಕಾಲದಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಬೆಳೆಯಿತು

ಕನ್ನಡ

* ನಾಗಚಂದ್ರ – ಮಲ್ಲಿನಾಥ ಪುರಾಣ, ರಾಮಚಂದ್ರಚರಿತಪುರಾಣ

* ನಯಸೇನ – ಧರ್ಮಾಮೃತ

* ರಾಜಾದಿತ್ಯ – ಕ್ಷೇತ್ರಗಣಿತ, ವ್ಯವಹಾರಗಣಿತ, ಲೀಲಾವತಿ ಗ್ರಂಥ

* ಜನ್ನ –  ಯಶೋಧರ ಚರಿತ, ಅನಂತನಾಥ ಪುರಾಣ

* ನೇಮಿಚಂದ್ರ –  ಅರ್ಧನೇಮಿ

* ರುದ್ರ ಭಟ್ಟ (ಮೊದಲ ಬ್ರಾಹ್ಮಣ ಕವಿ) – ಜಗನ್ನಾಥ ವಿಜಯ, ರಸಗಲಿಕೆ

* ಪೊಲಾಳ್ವ ದಂಡನಾಥ – ಹರಚಾರಿತ್ರ

* ಮಲ್ಲಿಕಾರ್ಜುನ –  ಸೂಕ್ತಿ ಸುಧಾರ್ಣವ

* ಕೇಶಿರಾಜ – ಶಬ್ದಮಣಿ ದರ್ಪಣ

ಸಂಸ್ಕ್ರತ

* ರಾಮಾನುಜರು – ಬ್ರಹ್ಮಸೂತ್ರ ಭಗವದ್ಗೀತೆಗೆ ಭಾಷ್ಯ  ಬರೆದರು. ವೇದಾಂತಸಾರ, ವೇದಾಂತ ಸಂಗ್ರಹ, ವೇದಾಂತ ದೀಪಿಕಾ. ವಿಶಿಷ್ಟಾದ್ವೈತ ಸಿದ್ದಾಂತದ ಮೇಲೆ ಬರೆದರು.

* ವರದನಾರಾಯಣ ಭಟ್ಟಾರಕ – ಪ್ರಜ್ಞಾಪರಿತ್ರಾಣ ಮತ್ತು ಪಶಾಶರನ ತತ್ವ ರತ್ನಾಕರ

* ವಿಷ್ಣುಚಿತ್ತ – ಪ್ರಮೇಯ ಸಂಗ್ರಹ, ಸಂಗತಿ ಮಾಲಾ

* ತ್ರಿವಿಕ್ರಮ ಪಂಡಿತ – ಉಷಾಪಹರಣ

* ನಾರಾಯಣ ಪಂಡಿತ – ಮಾಧ್ವ ವಿಜಯ, ಮಣಿ ಮಂಜರಿ, ಪಾರಿಜಾತ ಪಹರಣ

ಹೊಯ್ಸಳರ ಕಲೆ ಮತ್ತು ವಾಸ್ತು ಶಿಲ್ಪ

ಲಕ್ಷಣಗಳು

* ಇವರದ್ದು ಸ್ವತಂತ್ರ ಶೈಲಿಯಾಗಿದೆ ಜೊತೆಗೆ ದ್ರಾವಿಡ ಶೈಲಿಯು ಇದರ ಮೇಲಿದೆ

* ದೇವಾಲಯದಲ್ಲಿ ಗರ್ಭಗೃಹ, ಅಂತರಾಳ, ಮಹಾಮಂಟಪ, ಮುಖಮಂಟಪ ಹೊಂದಿದೆ.

* ವಿಮಾನ ನಕ್ಷತ್ರಾಕಾರವಾಗಿದೆ

* ಗರ್ಭಗೃಹದ ತಳವಿನ್ಯಾಸ ನಕ್ಷತ್ರಾಕಾರವಾಗಿದೆ

* ಶಿಖರ ಅಥವಾ ವಿಮಾನ ವೇಸರ ಶೈಲಿಯಲ್ಲಿದೆ

* ಚರಕಿ ಯಂತ್ರದಲ್ಲಿ ತಿರುವಿದಂತಿರುವ ವೃತ್ತಾಕಾರದ ಅಡ್ಡ ಕೊಯ್ತುವುಳ್ಳ ಕಂಬಗಳು. ಈ ಕಂಬಗಳ ಮೇಲಿನ ಚಾಚು ಪೀಠಗಳ ಮೇಲೆ ಸಾಲ ಭಂಜಿಕೆಯರ ವಿಗ್ರಹಗಳಿವೆ

* ದೇವಾಲಯಗಳು ಐದು ಅಥವಾ ಆರು ಅಡಿಯ ಜಗತಿಯ ಮೇಲಿವೆ

* ಸಭಾಮಂಟಪದ ಗೋಡೆಗಳ ಮೇಲೆ ಜಲಾಂದ್ರ ಕಿಟಕಿಗಳಿವೆ

* ನವರಂಗದ ಕೇಂದ್ರದಲ್ಲಿ ಆಳವಾದ ಭುವನೇಶ್ವರಿಗಳಿವೆ.

21 thoughts on “Hoysalaru – ಹೊಯ್ಸಳರು – One of the major dynasty of Karnataka For ur upcoming exams – 8”

Leave a Comment

Your email address will not be published. Required fields are marked *

Scroll to Top