Hubballiyava – ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ನಾಡಿಗೆ ಚಿರಪರಿಚಿತರಾದವರು ದ. ರಾ. ಬೇಂದ್ರೆಯವರು, ಕನ್ನಡಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು ಕನ್ನಡದ ವರಕವಿ’ ಎಂದು ಪರಿಗಣಿಸಲಾಗಿದೆ. ಭಾರತೀಯ ಜ್ಞಾನಪೀಠವು 1973 ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ ‘ನಾಕುತಂತಿ’ ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಗರಿ ಕಾಮಕಸ್ತೂರಿ, ಸೂರ್ಯಪಾನ, ನಾದಲೀಲೆ’, ‘ಮೊದಲಾದ ಕವನ ಸಂಕಲನಗಳನ್ನು ಬೇಂದ್ರೆ ಪ್ರಕಟಿಸಿದರು. ಬೇಂದ್ರೆಯವರು ಕಾವ್ಯ ನಾಟಕ, ಸಣ್ಣಕಥೆ, ಹರಟಿ ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಸಾಹಿತ್ಯ ರಚಿಸಿದವರು. ಮರಾಠಿ ಭಾಷೆಯಲ್ಲಿ ಸಹ ಬೇಂದ್ರೆಯವರು ಸಾಹಿತ್ಯ ರಚನೆ ಮಾಡಿದ್ದಾರೆ.
watch this Video- about outer plantes: https://youtu.be/j8mndlWhK54?si=Lq_YmRn3UnZgpdAO
ಬೇಂದ್ರೆ ಅವರಿಗೆ 1968ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿತು. 1976ರಲ್ಲಿ ಕಾಶಿಯ ವಿದ್ಯಾಪೀಠವೂ ಗೌರವ ಡಾಕ್ಟರೇಟ್ ನೀಡಿತು. ಕೇಂದ್ರ ಸರ್ಕಾರ 1968ರಲ್ಲಿ ಪದಶ್ರೀ ಪ್ರಶಸ್ತಿ ನೀಡಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋಗೌರವ ಇವರಿಗೆ ಸಂದಿದೆ. ಅದಮಾರು ಮಠದವರು ‘ಕರ್ನಾಟಕ ಕವಿ ಕುಲ ತಿಲಕ’ ಬಿರುದನ್ನು 1972ರಲ್ಲಿ ನೀಡಿದರು. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟಇವರಿಗೆ ನೀಡಲಾಯಿತು. 1956ರಲ್ಲಿ ಅರಳು ಮರಳು ಕವನ ಸಂಗ್ರಹಕ್ಕೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಈ ಪದ್ಯವನ್ನು ಬೇಂದ್ರೆಯವರ ಸಖೀಗೀತಾ ಎಂಬ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಈ ಪದ್ಯವು ಒಬ್ಬ ಹೆಣ್ಣು, ವೇಶ್ಯೆ ಯು ತನ್ನ ವಿರಹ ವೇದನೆಯಲ್ಲಿದ್ದಾಳೆ. ತನ್ನ ಪ್ರೀತಿ ಪಾತ್ರನಾದ ಹುಬ್ಬಳ್ಳಿಯಿಂದ ಬರುವ ಪುರುಷನ ಮೇಲೆ ಇಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಹೆಣ್ಣಿನಲ್ಲೂ ಶುದ್ಧವಾದ ಪ್ರೀತಿ ವಿರಹಗಳಿರುತ್ತವೆ ಎಂಬುದನ್ನು ಕವಿ ಇಲ್ಲಿ ತೋರಿಸಿದ್ದಾರೆ
Kannadiga tayi – summary: https://rvwritting.com/kannadigara-tayi/
Hubballiyava – ಹುಬ್ಬಳ್ಳಿಯಾಂವಾ ಕವಿತೆಯ ಸಾರಾಂಶ
ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರ ಸರತಿ ಬಂದು ಹೋದಾಂವಾ
ಒಂದು ಹೆಣ್ಣು ವೈಶ್ಯಾ ಸ್ತ್ರೀಯು ತನ್ನ ವಿರಹದಲ್ಲಿ ಹೇಳಿಕೊಳ್ಳುತ್ತಿದ್ದಾಳೆ, ವಾರದಲ್ಲಿ ಮೂರು ಬಾರಿ ಬರುತ್ತಿದ್ದ ನನ್ನ ಇನಿಯ ಇನ್ನು ಯಾಕೆ ಬಂದಿಲ್ಲವಲ್ಲ ಹುಬ್ಬಳ್ಳಿಯಿಂದ ಎಂದು ಅವನ ಬರುವಿಕೆಗಾಗಿ ಕಾದಿದ್ದಾಳೆ.
ಭಾರಿಜರದ ವಾರಿ ರುಮಾಲಾ ಸುತ್ತಿಕೊಂಡಾಂವಾ
ತುಂಬ ಮಾಸಿ ತೀಡಿಕೋತೆ ಹುಬ್ಬ ಹಾರಸಾಂವಾ
ಮಾತುಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ
ಇನ್ನೂಯಾಕ….
ಆ ಹೆಣ್ಣು ತನ್ನ ನಲ್ಲ ಹೇಗಿದ್ದ ಎಂಬುದನ್ನು ವರ್ಣಿಸುತ್ತಿದ್ದಾಳೆ ತಲೆಗೆ ಶ್ರೀಮಂತಿಕೆಯ ಸಂಕೇತದಂತಿರುವ ಜರಿ ಹೊಂದಿರುವ ರುಮಾಲು ಕಟ್ಟಿದ್ದಾನೆ, ದಪ್ಪ ಮೀಸೆಯನ್ನು ತಿರುವುತ್ತಾ ಹುಬ್ಬನ್ನು ಕುಣಿಸುತ್ತಾ ಪ್ರತಿ ಮಾತು ಮಾತಿಗೆ ನಗಿಸುತ್ತಾ ತಾನು ಹಾಡಿ ತನ್ನನ್ನು ಆಡಿಸುತ್ತಾ ಏನೋ ಹೇಳಿದರೆ ಅದಕ್ಕೊಂದು ಪದ ಕಟ್ಟಿ ಹಾಡುತ್ತಿದ್ದ ನನ್ನ ನಲ್ಲ.
ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇನಂದಾಂವಾ
ಬಂಗಾರ-ಹುಡಿಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರೆ ಕಳೆದು ಬಸವೇರ ಬಿಟ್ಟುದಾಟಿ ಬಂದಾಂವಾ
ಜೋಗ ತೇರಿಗೆ ಮೂಗುತಿ ಅಂತ ನನಗ ಅಂದಾಂವಾ
ಇನ್ನೂಯಾಕ….
ಜೋಗತಿ ಪರಂಪರೆಯ ಹಿನ್ನೆಲೆಯಲ್ಲಿ ಬಂದಿರುವ ಹೆಣ್ಣುಮಗಳಾದ್ದರಿಂದ ಅವಳು ಕೊರಳಲ್ಲಿ ಹಾಕಿದ್ದ ತಾಳಿಗೆ ಬಂಗಾರದ ಗುಂಡು ಬೇಕೆ ಎಂದು ಕೇಳುವ, ಬಂಗಾರವನ್ನು ಹಿಡಿ ಹಿಡಿಯಷ್ಟು ಕೊಡುವಂತಹವನು ಅವನು. ವೇಶ್ಯಾ ಕಸುಬು ಮಾಡುವವರನ್ನು, ಬಸವೀಯರನ್ನು ಬಿಟ್ಟು ನನ್ನ ಬಳಿ ಬಂದವ ಹಾಗೆ ಎಲ್ಲಾ ಜೋಗತಿಯರಲ್ಲೇ ನೀನೇ ಸೌಂದರ್ಯವಂತವಳು ಎಂದು ನನ್ನ ರಮಿಸುತ್ತಿದ್ದವನು. ಅದಕ್ಕಾಗಿ ಇವನು ನನಗೆ ಹೆಚ್ಚು ಪ್ರೀತಿಯ ನಲ್ಲನಾಗಿದ್ದ.
ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹಿಡೀಲೆರೊಕ್ಕಾತಗದು ಹಿಡಿ ಹಿಡಿ ಅನ್ನಾಂವಾ
ಖರೇಅಂತ ಕೈ ಮಾಡಿದರ ಹಿಡದಬಿಡಾಂವಾ
ಇನ್ನೂಯಾಕ….
ಆ ಹೆಣ್ಣು ಮತ್ತು ಹುಬ್ಬಳ್ಳಿಯಾಂವಾನ ಸಲ್ಲಾಪದಲ್ಲಿ ಬಂದಿರುವಂತದ್ದು ಅವಳು ಇನ್ನೂ ಜೊತೆಯಲ್ಲೇ ಇರು ಎಂದರೆ ತನ್ನ ಕೆಲಸ ಕಾರ್ಯಗಳು ಇವೆ ಎಂದು ಹೊರಡುವನು, ನಾನು ಬೇಸರದಿಂದ ತಲೆಕೆಳಗೆ ಮಾಡಿದರೆ ನನ್ನ ಜೊತೆ ಇದ್ದು ಬಿಡುವನು, ತನ್ನ ಜೇಬಿನಿಂದ ರೊಕ್ಕ ತೆಗೆದು ತಗೋ ಎಂದು ಹೇಳುವಾಗ ನಾನು ತೆಗೆದುಕೊಳ್ಳಲು ಕೈ ಮಾಡಿದರೆ ನನ್ನ ಕೈ ಹಿಡಿದು ಮತ್ತೆ ರಮಿಸುವವನಾಗಿದ್ದನು.
ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿಸ ಬಂದಾಂವಾ
ಬೆರಳಿಗುಂಗರಾ ಮೂಗಿನಾಗಮೂಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗನಟ್ಟಾಂವಾ
ಇನ್ನೂಯಾಕ….
ಪರಿಶುದ್ಧದ ಪ್ರೇಮ ಅಥವಾ ಪ್ರೀತಿ ಬೆರತಾಗ ಹೇಗಿರುತ್ತದೆಂದರೆ ನಾನು ನೀನು ಚಹಾದ ಚೂಡ ಸೇರಿದಾಗ ಹೇಗೆ ರುಚಿಸುತ್ತೋ ಹಾಗೆ ನಮ್ಮ ಜೋಡಿ, ನೀನು ಕೋಪ ಮಾಡಿಕೊಂಡರೆ ರೌದ್ರಾವತಾರದಂತೆ ಕಂಡರೂ ನೀನು ಸೌಂದರ್ಯ ವತಿಯಿಂದ ಹೇಳಿ ಬೆರಳಿಗೆ ಉಂಗುರ ಮೂಗಿಗೆ ಮೂಗುಬಟ್ಟು ಕೊಟ್ಟಿರುವ ಇವನು ನನ್ನ ಕಣ್ಣಿನಲ್ಲಿ ಗೊಂಬೆ ಹಾಗೆ ಕಾಣುವವನಾಗಿ ನನ್ನ ಎದೆಯಲ್ಲಿ ಬೆರೆತಿದ್ದಾನೆ.
ಹುಟ್ಟಾಯಾಂವಾ ನಗೀಕ್ಯಾದಿಗಿ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೇ ಪ್ರೀತಿ ವೇಳೇ ಮಡಚಿಕೊಂಡಾಂವಾ
ಜಲಜಲಕಗೆಣ್ಯಾ ಆಗಿ ಬರತೇನಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
ಇನ್ನೂಯಾಕ….
ನನ್ನ ಗೆಣೆಕಾರ ಅಥವಾ ಪ್ರೀತಿಯ ನಲ್ಲ ಹುಟ್ಟಿನಿಂದಲೇ ಮುಖದಲ್ಲಿ ನಗುವನ್ನು ಕೇದಿಗೆ ಹೂವಿನಂತೆ ಇಟ್ಟುಕೊಂಡಿದ್ದಾನೆ. ಇವಳು ನನ್ನ ಹೆಣ್ಣೇ ಎಂದು ನನ್ನನ್ನು ಪ್ರೀತಿಯಿಂದ ಸೇರಿರುವವನು, ಜನ್ಮ ಜನ್ಮಕ್ಕೂ ನಿನ್ನ ಗೆಳೆಯನಾಗಿ ಬರುತ್ತೇನೆ ಎಂದು ಹೇಳಿ ಅವನ ಮನಸ್ಸಿನಲ್ಲೂ ನನ್ನನ್ನು ಗೆಳತಿಯನ್ನಾಗಿ ಇಟ್ಟುಕೊಂಡಿದ್ದಾನೆ.
ಯಲ್ಲಿ! ಮಲ್ಲಿ! ಪಾರೀ! ತಾರೀ! ನೋಡೀರೇನೆವ್ವಾ?
ನಿಂಗಿ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ?
ಸೆಟ್ಟರ ಹುಡುಗ ಸೆಟಗೊಂಡೋದಾಅಂತ ನನ್ನಜೀವಾ
ಹಾದೀಬೀದೀ ಹುಡುಕತೈತ್ರೆ ಬಿಟ್ಟಎಲ್ಲಾ ಹ್ಯಾಂವಾ
ಇನ್ನೂಯಾಕ….
ಅವಳ ವಿರಹ ವೇದನೆ ಹೆಚ್ಚಾಗುವಿಕೆಯಿಂದ ಎರಡು ರೀತಿಯ ಯೋಚನೆಯ ತೊಳಲಾಟದಲ್ಲಿ ಬಿದ್ದಿದ್ದಾಳೆ. ಅವನು ಬೇರೆ ಯಾರಾದರೂ ಹೆಣ್ಣಿನ ಸಹವಾಸ ಬೆಳೆಸಿದರೆ ಅಥವಾ ವ್ಯಾಪಾರಕ್ಕಾಗಿ ಹೋದಾಗ ಅವನಿಗೆ ಏನಾದರೂ ಆಗಿದೆಯೇನೋ ಎಂಬ ಭಯದಲ್ಲೂ ನಗುತ್ತಾ ಅಲ್ಲಿ ಇದ್ದ ಮಹಿಳೆಯರ ಬಳಿ ಕೇಳುತ್ತಿದ್ದಾಳೆ ಎಲ್ಲಿ ನನ್ನ ನಲ್ಲ ಎಂದು ಕೇಳುತ್ತಾ ನಿಮ್ಮ ಬಳಿ ಬಂದಿದ್ದನೇ ಎಂದು ಕೇಳುತ್ತಾ ಸೆಟ್ಟರ ಹುಡುಗ ನನ್ನ ಮೇಲೆ ಕೋಪಿಸಿಕೊಂಡು ಹೋದನೋ ಎಂದು ಎಲ್ಲ ಕಾರಣಗಳನ್ನು ಬಿಟ್ಟು ಹಾದಿ ಬೀದಿ ಎಂದು ಅವನಿಗಾಗಿ ಹುಡುಕುತ್ತಿದ್ದಾಳೆ.
ಈ ಕವಿತೆಯು ವಿರಹ ಕವಿತೆಯಾಗಿ ಕಾಣುತ್ತೆ ಇಲ್ಲಿ ಪರಿಶುದ್ಧ ಪ್ರೀತಿಯ ಸಂಕೇತವಾಗಿ ಕಾಣುವ ಜೊತೆಗೆ ಆಧ್ಯಾತ್ಮದ ಹುಡುಕಾಟವಾಗಿಯೂ ಈ ಕವಿತೆ ಕಾಣುತ್ತದೆ.
Pingback: %Navellaru Onde Jaathi% - rvwritting