Kalyani Chalukyaru – ಕಲ್ಯಾಣಿ ಚಾಲುಕ್ಯರು ರಾಷ್ಟ್ರಕೂಟರ ಸಾಮಂತರಾಗಿದ್ದರು ನಂತರ ರಾಷ್ಟ್ರಕೂಟರು ಅವನತಿಯತ್ತ ಸಾಗಿದ ನಂತರ ಈ ವಂಶದ ತೈಲಪ ಎರಡು ರಾಜಮಾನತನವನ್ನು ಸ್ಥಾಪಿಸಿದ. ಈ ರಾಜಮನೆತನವು ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶದ ಹಲವು ಪ್ರದೇಶಗಳನ್ನು ಒಳಗೊಂಡಿತ್ತು. ಇವರು ಮೊದಲು ಮಾನ್ಯ ಕೆಟದಿಂದ ಆಳ್ವಿಕೆ ನಡೆಸುತ್ತಿದ್ದರು ತದನಂತರದಲ್ಲಿ ಕಲ್ಯಾಣವನ್ನು ಸ್ಥಾಪಿಸಿ ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿಂದ ಆಳ್ವಿಕೆಯನ್ನು ಮುಂದುವರೆಸಿದರು.
Kalyani Chalukyaru – ಕಲ್ಯಾಣಿ ಚಾಲುಕ್ಯರು – ಮೂಲ
೧. ಶಾಸನಾಧಾರಗಳು – ಕೌಠೆಂ ಯೆವ್ವೂರು, ನೀಲಗುಂದ, ಮೀರಜ್.
೨. ಸಾಹಿತ್ಯ ಆಧಾರಗಳು – *ರನ್ನನ ಗದಾಯುದ್ಧ – ಕಲ್ಯಾಣಿ ಚಾಲುಕ್ಯರ ಉಲ್ಲೇಖ
* ಬಿಲ್ಹಣ – ವಿಕ್ರಮಾಂಕ ದೇವ ಚರಿತ
*ಮೂರನೇ ಸೋಮೇಶ್ವರ – ವಿಕ್ರಮಾಂಕಾಭ್ಯುದಯಂ
* ಸೋಮೇಶ್ವರ – ಮಾನಸೋಲ್ಲಾಸ.
Kalyani Chalukyaru – ಕಲ್ಯಾಣಿ ಚಾಲುಕ್ಯರು ರಾಜಕೀಯ ಇತಿಹಾಸ
೧. ಎರಡನೇ ತೈಲಪ್ಪ ಅಥವಾ ತೈಲ 2
* ರಾಷ್ಟ್ರಕೂಟರ ಕರ್ಕನನ್ನು ಸೋಲಿಸಿ ರಾಷ್ಟ್ರಕೂಟ ರಾಜಧಾನಿಯಾದ ಮಾನ್ಯಖೇಟದಿಂದಲೇ ಕಲ್ಯಾಣಿ ಚಾಲುಕ್ಯರ ಮನೆತನ ಸ್ಥಾಪನೆ.
* ರಟ್ಟರು ಕುಂಡಿ ದೇಶದ ರಾಜರು , ರತ್ನಗಿರಿ, ಕೋಲಾರ ಜಿಲ್ಲೆಗಳ ಪ್ರದೇಶವಾಳುತ್ತಿದ್ದ ಶಿಲಾಹಾರ ವಂಶದ ಅಪರಾಜಿತ ಮುಂತಾದವರು ಇವನ ಸಾರ್ವಭೌಮತ್ವಕ್ಕೆ ಒಳಪಟ್ಟರು.
* ಗಂಗ ಮಾರಸಿಂಹನು ಕರ್ಕನ ಮಗ ಇಂದ್ರನನ್ನು ಎರಡನೇ ತೈಲಪ್ಪನ ವಿರುದ್ಧ ತಂದರು ಇದನ್ನು ವಿಫಲ ವಾಗುವಂತೆ ಮಾಡಿದನು.
* ಗಂಗಾ ಪಾಂಚಾಳನನ್ನು ಸೋಲಿಸಿ, ಚಾಲುಕ್ಯ ಪಂಚಾನನ ಎಂಬ ಬಿರುದನ್ನು ಪಡೆದ.
* ಪರಮಾರರ ರಾಜ ಮುಂಜನನ್ನು ಸೆರೆಹಿಡಿದು ತಂದರು. ಅವನಿಗೆ ತಕ್ಕ ಮರ್ಯಾದೆಯಿಂದ ನಡೆಸಿಕೊಂಡರು ತಪ್ಪಿಸಿಕೊಂಡು ಹೋಗಲು ಮುಂದಾದಾಗ ಸೆರೆಯಲ್ಲಿರಿಸಿದರು ಅಲ್ಲೇ ನಿಧನನಾದನು.
* ಚೋಳರಲ್ಲಿ ರಾಜರಾಜನು ಸಾಮ್ರಾಜ್ಯ ವಿಸ್ತರಿಸಲು ಹೊರಟಾಗ ಈತನು ಗಂಗರನ್ನು ಸೋಲಿಸಲು ಮುಂದಾದಾಗ ರಾಜರಾಜ ಚೋಳ ಎದುರಾಗುತ್ತಾನೆ ಕೊನೆಗೆ ಸೋಲುತ್ತಾನೆ.
* ಇವನ ಸಾಮ್ರಾಜ್ಯ ತುಂಗಭದ್ರಾ ನದಿಯಿಂದ ಗೋದಾವರಿ ನದಿಯವರೆಗೆ ಹಬ್ಬಿತ್ತು.
೨. ಇರಿವಬೆಡಂಗ ಅಥವಾ ಸತ್ಯಾಶ್ರಯ
* ಅಧಿಕಾರಕ್ಕೆ ಬಂದಾಗ ಪರಮಾರರು, ಶಿಲಹಾರರು, ಗೂರ್ಜರ ಮೇಲೆ ಯುದ್ಧ ಮಾಡಿದ.
* ಪರಮಾರರ ಸಿಂಧೂ ರಾಜನಿಂದ ಈತನು ಸೋಲು ಅನುಭವಿಸಿದ.
* ಶಿಲ್ಹಾರ ರಾಜನಾದ ಅಪರಾಜಿತನನ್ನು ಸೋಲಿಸಿ ಅವನ ರಾಜಧಾನಿಯನ್ನು ಸುಟ್ಟನು ಎಂಬ ವಿಷಯವನ್ನು ರನ್ನನು ತನ್ನ ಕಾವ್ಯದಲ್ಲಿ ಹೇಳುತ್ತಾನೆ.
* ಚೋಳರ ವಿರುದ್ಧದ ಸೆಣಸಾಟದಲ್ಲಿ ಸತ್ಯಾಶ್ರಯನ ಸೋದರ ದಸವರ್ಮನ ಸಾವು, ಇವರನ್ನು ಚಾಳುಕ್ಯರು ಆಂಧ್ರದಲ್ಲಿ ಸೋಲಿಸಿದರು.
* ಇವನ ಬಿರುದುಗಳು – ಇರಿವಬೆಡಂಗ, ಆಕಳಂಕಚರಿತ, ಸಾಹಸಭೀಮ, ಅಹವಮಲ್ಲ,
* ರನ್ನ ಇವನ ಆಶ್ರಯದಲ್ಲಿದ್ದನು.
* ಇವನ ನಂತರ ವಿಕ್ರಮಾದಿತ್ಯ, ಅಯ್ಯಣ್ಣ ಆಳ್ವಿಕೆ ನಡೆಸಿದರು.
೩. ಇಮ್ಮಡಿ ಜಯಸಿಂಹ
* ಜಗದೇಕಮಲ್ಲ ಎಂಬ ಬಿರುದು ಇವನಿಗಿದೆ.
* ಪರಮಾರ ಭೋಜ, ಕಳಚೂರಿಯ ಗಂಗೆಯದೇವ, ದಕ್ಷಿಣದ ರಾಜೇಂದ್ರ ಚೋಳರು ಇವನ ಮೇಲೆ ಎರಗಿದರು, ಇದರಲ್ಲಿ ಜಯಸಿಂಹ ಸೋತನು. ನಂತರ ಭೋಜ ಮತ್ತು ಕಳಚೂರಿಗಳನ್ನು ಆಕ್ರಮಿಸಿ ಅವರನ್ನು ಸೋಲಿಸಿದನು.
* ಸೇವುಣರ ಬಿಲ್ಲಮನನ್ನು ಸೋಲಿಸಿ ಶತ್ರುತ್ವ ಮರೆತು ತನ್ನ ಮಗಳನ್ನು ಮದುವೆ ಮಾಡಿಕೊಟ್ಟು ಸಂಬಂಧ ಬೆಳೆಸಿದ.
* ಚೋಳರ ರಾಜರಾಜನ ನಡುವೆ ಮತ್ತು ಈತನ ನಡುವಿನ ಯುದ್ಧದಲ್ಲಿ ಭಾಗಿಯಾದಾಗ ಈತನು ಸೋತನು. ಇಲ್ಲಿ ವೆಂಗಿಯ ವಿಜಯಾದಿತ್ಯನ ಪರವಾಗಿ ಯುದ್ಧ ಮಾಡಿದನು. ಅವನಿಗೆ ಮಸ್ಕಿಯ ಪ್ರಾಂತ್ಯಾಧಿಕಾರಿಯಾಗಿ ಮಾಡಿದನು.
* ಪತ್ನಿ ಸುಗ್ಗಲಾದೇವಿ – ದೇವರ ದಾಸಿ ಮಗ್ಗ ಭಕ್ತೆಯಾಗಿದ್ದಳು.
೪. ಮೊದಲನೇ ಸೋಮೇಶ್ವರ
* ಇವನು ರಾಜಧಾನಿಯನ್ನು ಮಾನ್ಯಖೇಟದಿಂದ ಕಲ್ಯಾಣಕ್ಕೆ ರಾಜಧಾನಿಯನ್ನು ವರ್ಗಾಯಿಸಿದ.
* ಇವನ ಕಾಲದಲ್ಲೂ ಚೋಳರ ರಾಜಾಧಿರಾಜ ಮತ್ತು ಚಾಲುಕ್ಯರ ಹೋರಾಟ ಮುಂದುವರಿದಿದ್ದವು. ಕೊಪ್ಪಂಬಳಿ ಯುದ್ಧವಾಗಿ ಚೋಳರು ನಾಶವಾದರು.
* ರಾಜಾಧಿರಾಜನ ನಂತರ ಇಮ್ಮಡಿ ರಾಜೇಂದ್ರನು ಚಾಲುಕ್ಯರ ಮೇಲೆ ಮುಗಿಬಿದ್ದ, ಅವನನ್ನು ಹಿಂದಕ್ಕೆ ಹೋಗುವಂತೆ ಮಾಡಿದನು. ತುಂಗಭದ್ರಾ ನದಿ ತೀರದಲ್ಲಿ ಸೋಲಿಸಿದನು. ಇಲ್ಲಿ ಗೆದ್ದು ಕೊಲ್ಲಾಪುರದಲ್ಲಿ ವಿಜಯಸ್ತಂಭವನ್ನು ನಿರ್ಮಾಣ ಮಾಡಿದನು.
* ಬಿಲ್ಹಣನು ಇದನ್ನು ಉಲ್ಲೇಖಿಸಿದ್ದಾರೆ.
೫. ಎರಡನೇ ಸೋಮೇಶ್ವರ
* ಇವನ ಮೇಲೆ ಚೋಳರ ವೀರ ರಾಜೇಂದ್ರ ದಂಡೆತ್ತಿ ಬಂದನು. ಆಗ ಆರನೇ ವಿಕ್ರಮಾದಿತ್ಯ ಮತ್ತು ಗೋವೆಯ ಪ್ರಾಂತ್ಯಾಧಿಕಾರಿ ಜಯಸಿಂಹ ನಿಂದ ಸೋಲಿಸಿದರು.
* ಇಲ್ಲಿ ವಿಕ್ರಮಾದಿತ್ಯನಿಗೆ ವೀರರಾಜೇಂದ್ರ ಮಗಳನ್ನು ಕೊಟ್ಟು ವಿವಾಹ ಮಾಡುತ್ತಾನೆ.
* ನಂತರ ವೀರರಾಜೇಂದ್ರನು ತೀರಿಕೊಂಡ ನಂತರ ಚೋಳರಲ್ಲಿ ರಾಜನಿಲ್ಲದಾಗ ಅಧಿರಾಜೇಂದ್ರನನ್ನು ಆರನೇ ವಿಕ್ರಮಾದಿತ್ಯ ಸಿಂಹಾಸನದ ಮೇಲೆ ಕೂರಿಸಿದ, ಹೆಚ್ಚು ದಿನ ಆಳ್ವಿಕೆ ನಡೆಸಲಾಗಲಿಲ್ಲ. ವೆಂಗಿಯಲ್ಲಿ ಇಮ್ಮಡಿ ರಾಜೇಂದ್ರನ ರಾಜನಾಗಿ ನಂತರ ಚೋಳ ಮತ್ತು ವೆಂಗಿಯ ಎರಡು ಕಡೆಗೆ ತಾನೇ ರಾಜನಾಗಿ ಕುಲತ್ತುಂಗ ಹೆಸರಿನಿಂದ ಆಳ್ವಿಕೆಯನ್ನು ಮುಂದುವರಿಸಿದ.
* ನಂತರ ತನ್ನ ತಮ್ಮನ ವಿರುದ್ಧ ದ್ವೇಷ ಉಂಟಾಗಿ ಚೋಳ ಮತ್ತು ಚಾಲುಕ್ಯರು ಒಟ್ಟಾಗಿ ವಿಕ್ರಮಾದಿತ್ಯನನ್ನು ಸೋಲಿಸಿದರು. ನಂತರ ಈತನೇ ಸೋಮೇಶ್ವರನನ್ನು ಬಂಧಿಸಿ ರಾಜನಾದನು.
೬. ಆರನೇ ವಿಕ್ರಮಾದಿತ್ಯ
* 1076ರಲ್ಲಿ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದ ಇದನ್ನ ವಿಕ್ರಮ ಶಕೆ ಎಂದು ಕರೆಯುತ್ತಾರೆ.
* ಇವನ ಕಾಲದಲ್ಲೂ ಚೋಳ ಮತ್ತು ಚಾಲುಕ್ಯರ ಸಂಘರ್ಷಗಳು ಮುಂದುವರೆದವು. ಸಿಂಹಳದ ರಾಜ ವಿಜಯಬಾಹು ಕುಲೋತ್ತುಂಗನನ್ನು ಸೋಲಿಸಿದ ಇದರಿಂದಾಗಿ ವಿಕ್ರಮಾದಿತ್ಯ ಅಲ್ಲಿಗೆ ರಾಯಭಾರಿಗಳನ್ನು ಕಳುಹಿಸಿದ್ದ.
* ಕರಹಾಡದ ಶಿಲಹಾರರ ಭೋಜನನ್ನು ಸೋಲಿಸಿ ಮತ್ತೊಮ್ಮೆ ದಂಡತ್ತಿ ಹೋಗಿ ಸೋಲಿಸಿದ.
* ಆಳುಪರು, ಪೈವೆಯ ನಾಗವರ್ಮ ಹಾಗೂ ಗೊಗ್ಗಿಯರ ಬಂಡಾಯವನ್ನು ಅಡಗಿಸಿದನು.
* ಹೊಯ್ಸಳರು ಇವನ ಮಾಂಡಳೀಕರಾಗಿ ಆಳ್ವಿಕೆ ನಡೆಸುತ್ತಿದ್ದಾಗಲೇ ವಿಷ್ಣುವರ್ಧನ ಸ್ವತಂತ್ರನಾಗಲು ಬಯಸಿದ ಇದರಿಂದ ಚಾಲುಕ್ಯರ ಸೇನೆಯನ್ನು ಮೊದಲು ಸೋಲಿಸಿದ, ನಂತರ ವಿಕ್ರಮಾದಿತ್ಯ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿ ವಿಷ್ಣುವರ್ಧನನ್ನು ಹಲಸೂರು, ಹೊಸಬೀಡು ಯುದ್ಧಗಳಲ್ಲಿ ಸೋಲಿಸಿದ.
* ಪರಮಾರರ ರಾಜ ಉದಯಾದಿತ್ಯನನ್ನು ಸೋಲಿಸಿದ.
* ಗೂರ್ಜರ ರಾಜ ಸಿಂಧೂರಾಜ, ರತ್ನಪುರದ ಕಲಚೂರಿ ಜಾಜಲ್ಲದೇವ, ತ್ರಿಪುರಿಯ ಯಶಃಕರ್ಣನನ್ನು ಸೋಲಿಸಿದನು.
* ಬಿಲ್ಹಣನ ವಿಕ್ರಮಾಂಕ ದೇವ ಚರಿತ ಇವನ ಮೇಲೆ ರಚಿತವಾಗಿದೆ.
* ವಿಜ್ಞಾನೇಶ್ವರ ಇವನ ಆಸ್ಥಾನದಲ್ಲಿ ಇದ್ದ ಇವನ ಕೃತಿ ಮಿತಾಕ್ಷರ.
* ವಿಕ್ರಮ ಪುರ ಎಂಬ ಹೊಸ ಪಟ್ಟಣವನ್ನು ನಿರ್ಮಾಣ ಮಾಡಿದ.
೭. ಮೂರನೇ ಸೋಮೇಶ್ವರ
* ಇವನ ಕಾಲದಲ್ಲೂ ವಿಷ್ಣುವರ್ಧನ ಸ್ವತಂತ್ರನಾಗಲು ಮುಂದಾಗುತ್ತಾನೆ ಅದಕ್ಕೆ ಅವಕಾಶ ಸಿಗಲಿಲ್ಲ.
* ಇವನು ರಾಜಕೀಯಕ್ಕಿಂತ ಸಾಹಿತ್ಯದ ಕಡೆ ಹೆಚ್ಚು ಒಲವು ಹೊಂದಿದ್ದ – ಇವನು ರಚಿಸಿದ ಕೃತಿಗಳು ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ.
* ಇವನು ಸರ್ವಜ್ಞ ಚಕ್ರವರ್ತಿ ಎಂದು ಪ್ರಸಿದ್ಧಿಯಾಗಿದ್ದ ಜೊತೆಗೆ ಭೂಲೋಕ ಮಲ್ಲನೆಂಬ ಬಿರುದು ಕೂಡ ಇತ್ತು.
೮. ಎರಡನೇ ಜಗದೇಕಮಲ್ಲ
* ಇವನ ಕಾಲದಲ್ಲಿ ಇವರ ಸಾಮಂತರುಗಳು ದಂಗೆ ಹೇಳಲು ಶುರು ಮಾಡಿದರು
* ಹೊಯ್ಸಳರ ವಿಷ್ಣುವರ್ಧನ, ಕಳಚೂರಿಯ ಬಿಜ್ಜಳ ಮುಂತಾದವರು ದಂಗೆ ಎದ್ದರು
೯.ಮುಮ್ಮಡಿ ತೈಲಪ
* ಬಿಜ್ಜಳ ಸ್ವತಂತ್ರನೆಂದು ಘೋಷಿಸಿಕೊಂಡ.
* ಕಾಕತೀಯರ ಪ್ರೋಲನು ಘೋಷಿಸಿಕೊಂಡ.
೯. ನಾಲ್ಕನೇ ಸೋಮೇಶ್ವರ
* ಇವನ ಕಾಲದಲ್ಲಿ ಇವನ ಸಾಮ್ರಾಜ್ಯವು ಕಳಚೂರಿಗಳ ವಶವಾಯಿತು.
* ಇವನು ಕಲ್ಯಾಣವನ್ನು ಬಿಟ್ಟು ಹೊರಟುಹೋದ
* ಕಲ್ಯಾಣ ಸೆವುಣರ ಕೈ ಸೇರಿತು.
See this video: https://youtu.be/KK2IzyrK_p4?si=DL0MLtOgPbjL9gvJ
Kalyani Chalukyaru – ಕಲ್ಯಾಣಿ ಚಾಲುಕ್ಯರು – ಆಡಳಿತ ಪದ್ಧತಿ
* ಬಾದಾಮಿ ಚಾಲುಕ್ಯರ ಆಡಳಿತ ಪದ್ಧತಿಯನ್ನು ಅನುಸರಿಸುತ್ತಿದ್ದರು.
* ಆಡಳಿತಕ್ಕೆ ಸಹಾಯಕವಾಗಲೆಂದು ಮಂತ್ರಿಮಂಡಲವಿತ್ತು.
* ಇಲ್ಲಿ ಮಹಾ ಪ್ರಧಾನ, ಸಂದಿ ವಿಗ್ರಹಿ, ಧರ್ಮಾಧಿಕಾರಿ, ಮನೆವೆರ್ಗಡೆ, ತಂತ್ರಪಾಲ, ಸೇನಬೋವ, ಅಂತಃಫುರಾಧ್ಯಕ್ಷ, ಕಡಿತವೆರ್ಗಡೆ ಮುಂತಾದವರಿದ್ದರು.
ಪ್ರಾಂತ್ಯ ಆಡಳಿತ
* ಆಡಳಿತದ ಅನುಕೂಲಕ್ಕಾಗಿ
* ರಾಷ್ಟ್ರ – ರಾಷ್ಟ್ರಪತಿ
* ವಿಷಯ- ವಿಷಯ ಪತಿ,
* ನಾಡು- ನಾಡರಸ ಠಾಣೆ
* ಗ್ರಾಮ – ಗಾವುಂಡ
ವೃತ್ತಿ ಸಂಘಗಳು
* ಇಲ್ಲಿನ ಜನರು ವಿವಿಧ ವೃತ್ತಿಗಳಲ್ಲಿ ಭಾಗಿಗಳಾಗಿದ್ದರೂ ತಮ್ಮ ವೃತ್ತಿಗನುಗುಣವಾಗಿ ವೃತ್ತಿ ಸಂಘಗಳನ್ನು ನಿರ್ಮಿಸಿಕೊಂಡಿದ್ದರು. ಉದಾಹರಣೆಗೆ, ಗೋವಳಿಗರ ಸಂಘ, ಕುಂಬಾರರ ಸಂಘ, ಗಾಣಿಗರ ಸಂಘ, ತೆಲ್ಲಿಗರ ಸಂಘ ಮುಂತಾದವು.
ಆರ್ಥಿಕ ಪರಿಸ್ಥಿತಿ
* ಕೃಷಿ ಇವರ ಮುಖ್ಯ ಕಸುಬಾಗಿತ್ತು
* ಭೂಕಂದಾಯ ಮುಖ್ಯ ವರಮಾನವಾಗಿತ್ತು.
* ಹಿಂದೆ ಇದ್ದ ಸರಕು ಸಾಗಾಣೆಗಳ ವೃತ್ತಿತರಿಗೆ, ಮಾರಾಟ ತೆರಿಗೆ ಮುಂತಾದವಿದ್ದವು. ಇದರ ಜೊತೆಗೆ ಸಿದ್ದಾಯ, ತಿಪ್ಪೆಸುಂಕ, ನೀರುಣಿ, ಸುಂಕ, ಭತ್ತಾಯ ಎಂಬ ಇನ್ನಿತರ ಸುಂಕಗಳಿದ್ದವು.
ನಾಣ್ಯಗಳು
* ದ್ರಮ್ಮ, ಗದ್ಯಾಣ, ಪಣ, ಸುವರ್ಣ, ಸಲಿಕೆ, ಗುಲಿಕೆ ಎಂಬ ನಾಣ್ಯಗಳಿದ್ದವು.
ಧರ್ಮ
* ವೈದಿಕ ಸಂಪ್ರದಾಯ ಜನಪ್ರಿಯವಾಗಿತ್ತು
* ಶೈವ ವೈಷ್ಣವ ಸಂಪ್ರದಾಯಗಳು ಇದ್ದವು
* ಶೈವ ಕಾಳಮುಖ ಪ್ರಚಲಿತದಲ್ಲಿತ್ತು, ಬಳ್ಳಿಗಾವೆ ಪ್ರಮುಖ ಕಾಳಮುಖ ಕೇಂದ್ರವಾಗಿತ್ತು.
* ಬೌದ್ಧರ ಕೇಂದ್ರಗಳು ಡಂಬಳ, ಕೋಳಿವಾಡ, ಬಳ್ಳಿಗಾವೆಗಳಲ್ಲಿ ಇದ್ದವು.
* ಜೈನರಲ್ಲಿ ಸಲ್ಲೇಖನ ವ್ರತ ಪ್ರಚಲಿತದಲ್ಲಿತ್ತು.
ಶಿಕ್ಷಣ
* ದೇವಸ್ಥಾನ, ತಪೋವನ, ಘಟಿಕಾಸ್ಥಾನ, ಅಗ್ರಹಾರಗಳು ಶಿಕ್ಷಣ ಸಂಸ್ಥೆಗಳಾಗಿದ್ದವು.
* ದೇವಸ್ಥಾನ – ಅದರೊಂದಿಗೆ ಮಠ ಅಲ್ಲಿ ವಿದ್ಯಾರ್ಥಿಗಳಿಗೆ ಊಟೋಪಚಾರದ ಜೊತೆಗೆ ಶಿಕ್ಷಣವು ದೊರಕುತ್ತಿತ್ತು
* ತಪೋವನ – ಸನ್ಯಾಸಿಗಳ ಬಳಿ ಶಿಕ್ಷಣ ಅಲ್ಲೇ ಇರಬೇಕಾಗಿತ್ತು. ಉದಾಹರಣೆಗೆ ಕಾರ್ತಿಕೇಯ ತಪೋವನ –
ಬಳ್ಳಾರಿಯ ಕುಡಿತೀನಿಯಲ್ಲಿ
ಬೆಳಗಾಂ ಜಿಲ್ಲೆಯ ಸೋಗಲದ ಸುವರ್ಣಾಕ್ಷಿಯಲ್ಲಿ.
* ಘಟಿಕಾ – ಇದು ವಿದ್ಯಾರ್ಥಿಗಳಿಗೆ ವಿದ್ವಾಂಸರುಗಳಿಗೆ ಉಚ್ಚ ಶಿಕ್ಷಣದ ಕೇಂದ್ರ. ಉದಾಹರಣೆಗೆ ಧಾರವಾಡದ ಕಾಡಿಯೂರು,
ಬಳ್ಳಾರಿಯ ಮೋರಿಗೆರೆ ಬಿಜಾಪುರದ ಕಡಲೇವಾಡ ಗುಲ್ಬರ್ಗದ ನಾಗಾಯಿ
* ಅಗ್ರಹಾರಗಳು – ಬ್ರಾಹ್ಮಣರ ವಾಸ ಸ್ಥಳಗಳು. ಷಟ್ಕರ್ಮನಿರತರನ್ನು ಕರೆಸಿ ಅವರ ಮೂಲಕ ವಿದ್ಯಾ ಪ್ರಸಾರ ಮಾಡುತ್ತಿದ್ದರು. ಉದಾಹರಣೆಗೆ ಬಳ್ಳಿಗಾವೆ, ಗದಗ – ಉಮ್ಮಚ್ಚಿಗೆ ನರಗುಂದ, ಮಣಿಗನಹಳ್ಳಿ, ಬಾಗೇವಾಡಿ,
* ರಾಜವಂಶದ ಸ್ತ್ರೀಯರಿಗೂ ಶಾಸ್ತ್ರ ಮತ್ತು ಕಲಾ ಶಿಕ್ಷಣ ದೊರೆಯುತ್ತಿತ್ತು.
ಸಾಹಿತ್ಯ
* ಇವರ ಕಾಲದಲ್ಲಿ ಸಂಸ್ಕ್ರತ ಮತ್ತು ಕನ್ನಡಗಳೆರಡರಲ್ಲೂ ಸಾಹಿತ್ಯ ಸೃಷ್ಟಿ
ಸಂಸ್ಕ್ರತ
ವಾದಿರಾಜ-
* ಯಶೋಧರ ಚರಿತಂ
* ಪಾರ್ಶ್ವನಾಥ ಚರಿತಂ
* ನ್ಯಾಯವಿನಿಶ್ಚಯ ಕುರಿತು ನ್ಯಾಯ ವಿನಿಶ್ಚಯ ಟೀಕೆ
* ತರ್ಕಶಾಸ್ತ್ರಕ್ಕೆ – ಪ್ರಮಾಣತ್ರಯ
ಬಿಲ್ಹಣ – ವಿಕ್ರಮಾಂಕದೇವ ಚರಿತಂ(ಇವನು ಕಾಶ್ಮೀರದವ)
ವಿಜ್ಞಾನೇಶ್ವರ – ಮಿತಾಕ್ಷರ (ಕಾನೂನು ಗ್ರಂಥ)(ಯಾಜ್ಞವಲ್ಕ್ಯಸೃತಿಯ ಭಾಷ್ಯ)
ಸೋಮೇಶ್ವರ III – ವಿಕ್ರಮಾಂಕಾಭ್ಯುದಯಂ, ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥ ಚಿಂತಾಮಣಿ
ಜಗದೇಕಮಲ್ಲ II – ಸಂಗೀತ ಚೂಡಾಮಣಿ
ಕನ್ನಡ
ರನ್ನ – ಅಜಿತನಾಥಪುರಾಣ
ಗದಾಯುದ್ಧ ಅಥವಾ ಸಾಹಸ ಭೀಮ ವಿಜಯ
ಚಾವುಂಡರಾಯ II – ಲೋಕೋಪಕಾರ
ಚಂದ್ರರಾಜ – ಮದನತಿಲಕ (ಮೊದಲ ಕಾಮಶಾಸ್ತ್ರ ಕೃತಿ)
ಶ್ರೀಧರಾಚಾರ್ಯ – ಜಾತಕತಿಲಕ(ಮೊದಲಜ್ಯೋತಿಷ್ಯ ಗ್ರಂಥ) & ಚಂದ್ರಪ್ರಭ ಚರಿತೆ
ಕೀರ್ತಿವರ್ಮ – ಗೋವೈದ್ಯ
ದುರ್ಗಸಿಂಹ – ಪಂಚತಂತ್ರ
ವಚನಕಾರರು ಇದೇ ಕಾಲದಲ್ಲಿ ಬಂದಿದ್ದಾರೆ.
ಲಲಿತ ಕಲೆಗಳು
* ನಾಟಕ ಶಾಲೆಯೊಂದನ್ನು ಮಹಾಸಾಮಂತ ಮಾರ್ತ್ತಣಯ್ಯನು ಮುಗದದ ಜೈನ ಬಸದಿ ಆವರಣದಲ್ಲಿ ನಿರ್ಮಿಸಿದ್ದ
* ನಾಗಾಯಿ ಶಾಸನದಲ್ಲಿ ಇಬ್ಬರು ಸಂಗೀತಗಾರ್ತಿಯರನ್ನು ಉಲ್ಲೇಖಿಸಿದೆ
* ವಿಕ್ರಮಾದಿತ್ಯನ ರಾಣಿ ಚಾಂದಲಾದೇವಿ ನೃತ್ಯ ಮತ್ತು ಸಂಗೀತದಲ್ಲಿ ನೃತ್ಯ ವಿದ್ಯಾಧರಿ ಅಭಿನವ ಸರಸ್ವತಿ ಎಂಬ ಬಿರುದನ್ನು ಪಡೆದಿದ್ದಾರೆ.
* ಸೋಮೇಶ್ವರನ ಮಾನಸೋಲ್ಲಾಸದಲ್ಲಿ ದಕ್ಷಿಣದವರ ಸಂಗೀತವನ್ನು ಕರ್ನಾಟಕ ಸಂಗೀತ ಎಂದು ಪ್ರಥಮವಾಗಿ ಉಲ್ಲೇಖಿಸಲಾಗಿದೆ.
ಕಲೆ ಮತ್ತು ವಾಸ್ತು ಶಿಲ್ಪ
ಇವರ ದೇವಾಲಯದ ಲಕ್ಷಣಗಳು
* ಕಟ್ಟಡಗಳು ಆಯತಾಕಾರದಲ್ಲಿವೆ
* ಗರ್ಭಗೃಹದ ಸುತ್ತಲೂ ಪ್ರದಕ್ಷಿಣ ಪಥವಿಲ್ಲ
* ದೇವಾಲಯದ ಪ್ರವೇಶ ದ್ವಾರಗಳು ಮುಂಭಾಗದಲ್ಲಿರದೆ ಪಕ್ಕದಲ್ಲಿದೆ.
* ಪ್ರವೇಶ ದ್ವಾರ ತೀರ ಅಲಂಕೃತವಾಗಿಲ್ಲ
* ಕಂಬಗಳು ದುಡ್ಡಗಿವೆ
* ಮಂಟಪದಲ್ಲಿ ಜಾಲಾಂದ್ರದ ಕಿಟಕಿಗಳಿವೆ
* ಮೃದುವಾದ ಕಲ್ಲು ಕ್ಲೊರೈಟಿಕ್ ಷಿಸ್ಟ್ ಬಳಕೆ.
* ಇವರ ದೇವಾಲಯಗಳು ಪ್ರಾಚೀನ ಚಾಲುಕ್ಯರ ಹಾಗೂ ನಂತರದ ಹೊಯ್ಸಳರ ಶೈಲಿಗಳ ನಡುವಣ ಕೊಂಡಿಯಂತಿವೆ.
* ಚಾಲುಕ್ಯ ವಿಮಾನ ಪಿರಮಿಡ್ ಮಾದರಿಯಂತೆ
* ದೇವಾಲಯದ ಹೊರಗೋಡೆಗಳ ಅಲಂಕಾರದಲ್ಲಿ ನಾಗರಾ ಮತ್ತು ದ್ರಾವಿಡ ಶೈಲಿಗಳ ಸಮ್ಮಿಲನ. ಗೋಡೆಗಳ ಮೇಲಿನ ರಥಗಳು ನಾಗರ ಶೈಲಿಯಲ್ಲಿದ್ದರೆ ಗೋಡೆಯ ಕಂಬಗಳು ದ್ರಾವಿಡ ಶೈಲಿಯಲ್ಲಿ
* ಪ್ರತಿ ದೇವಾಲಯದಲ್ಲಿ ಗರ್ಭಗೃಹ, ಅರ್ಧಮಂಟಪ, ಮಹಾಮಂಟಪ, ಇಕ್ಕೆಲಗಳಲ್ಲಿ ಅಂತರಾಳಕ್ಕೆ ಹತ್ತಿರವಾಗಿ ಎರಡು ತೆರೆದ ಕಿರು ಮಂಟಪದ ಮತ್ತೊಂದು ಕಿರುಗೋಡೆಯಿಂದ ಆವೃತವಾದ ಒಂದು ನಂದಿ ಮಂಟಪ ವಿರುತ್ತದೆ.
* ಚಾಲುಕ್ಯ ಶೈಲಿಗೆ ಬದಲಾಗುತ್ತಿರುವ ರಚನೆಯನ್ನು ಕುಕ್ಕನೂರಿನ ನವಲಿಂಗ ಮತ್ತು ಕಲ್ಲೇಶ್ವರ ದೇವಾಲಯದಲ್ಲಿ ಕಾಣಬಹುದು. ಕೊಣ್ಣೂರಿನ ದೇವಾಲಯದ ಗೋಪುರದ ಅಂಚುಗಳಲ್ಲಿ ಸುಂದರ ಕೆತ್ತನೆಗಳನ್ನು ನೋಡಬಹುದು. ಔತ್ತರೇಯ ರೇಖಾ ನಗರ ಗೋಪುರದಂತೆ ಕಾಣುತ್ತದೆ.
* ಹಾವೇರಿ ತಾಲೂಕು, ಚೌಡದಾನಪುರ, ಮುಕ್ತೇಶ್ವರ ದೇವಾಲಯ ಚಾಲುಕ್ಯರ ಹೊಸ ಲಕ್ಷಣವಾದ ಅಗಲವಾದ ಹೊರಚಾಚಿದ ವಕ್ರದವ್ಯಗಳುಳ್ಳ ಇಳಿ ಮಾಡು ಅಥವಾ ಛಜ್ಜಾ ಹೊಂದಿದೆ.
* ಲಕ್ಕುಂಡಿಯ ಕಾಶಿವಿಶ್ವೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ, ಇಟಗಿಯ ಮಹಾದೇವ ದೇವಾಲಯ – ಇದು ಎರಡು ಗರ್ಭಗೃಹ ಹೊಂದಿದ್ದು, ಸುಂದರ ಗೋಪುರವಿದೆ. ಇದನ್ನು ಶಾಸನದಲ್ಲಿ ದೇವಾಲಯಗಳ ಚಕ್ರವರ್ತಿ ಎಂದು ವರ್ಣಿಸಿದೆ.
* ಇವರ ದೇವಾಲಯಗಳು ಗದಗ, ಹಾನಗಲ್, ಬಳ್ಳಿಗಾವೆ, ಕಿದ್ರಾಪುರ ಮುಂತಾದೆಡೆ ಇವೆ.
Pingback: Basic Geography - The Interior of the Earth - ಭೂಮಿಯ ಅಂತರಾಳ - 1 - rvwritting