Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ….

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre
ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ.

Read this: Part – 3: https://rvwritting.com/kannada-sahitya-charitre-part-3-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0/

ಕನ್ನಡ ಸಾಹಿತ್ಯ ಚರಿತ್ರೆ, Kannada Sahitya Charitre – ಪೊನ್ನ

ವೆಂಗಿಮಂಡಲವು ಇವನ ಊರು

ಪುಂಗನೂರಿನ ನಾಗಮಯ್ಯನ ಮಕ್ಕಳಾದ ಮಲ್ಲಪಾರ್ಯ ಮತ್ತು ಪುನ್ನಮಾರ್ಯರು ಇವನಿಂದ ಶಾಂತಿಪುರಾಣ ಹೇಳಿಸಿದರು. 

ದಾನಶೂರ ಅತ್ತಿಮಬ್ಬೆ ಇದರ ಸಾವಿರ ಪ್ರತಿ ಮಾಡಿಸಿದಳು.

ಕೃತಿಗಳು

1. ಶಾಂತಿಪುರಾಣ

2. ಭುವನಯಕರಾಮಾಭ್ಯುದಯ(ರಾಮಕಥೆ)

3. ಜಿನಾಕ್ಷರ ಮಾಲೆ

4. ಗತಪ್ರತ್ಯಾಗತ(ಇದು ಸಂಸ್ಕ್ರತ ಗ್ರಂಥವಾಗಿರಬೇಕು).

ಬಿರುದುಗಳು

* ರತ್ನತ್ರಯರಲ್ಲೊಬ್ಬ

* ಕವಿ ಕಕ್ರವರ್ತಿ

* ಉಭಯ ಕವಿಚಕ್ರವರ್ತಿ

* ಕುರುಳ್ಗಳ ಸವಣ

* ಅಸಹಾಯಕವೀಶ್ವರ

ಆಶ್ರಿತ ರಾಜ – ರಾಷ್ಟ್ರಕೂಟರ 3ನೇ ಕೃಷ್ಣ

ಕೃತಿಗಳು

೧. ಜಿನಾಕ್ಷರ ಮಾಲೆ

* 39 ಕಂದಪದ್ಯಗಳಲ್ಲಿ ಕೂಡಿದ ಜಿನಸ್ತುತಿಯಾಗಿದೆ. 

* ಇದು ಆಗಮಿಕ ಕೃತಿ – ಅಂದರೆ ಧಾರ್ಮಿಕ ಕೃತಿ. “ಲೋಕೋತ್ತರ ಲೌಕಿಕ ಪರಿಣತಿ ಪುನ್ನಿಗಂಗೆ, ಶಾಂತೀಶ್ವರರಾಮಕಥಾ ಪ್ರಶಸ್ತಿಯಿಂದಾದ ಕೃತಿಗಳಿಂ”. 

೨. ಭುವನೈಕರಾಮಾಭ್ಯದಯ – ರಾಮಕಥೆ – 

*ಇದು ಲೌಕಿಕ ಗ್ರಂಥವಾಗಿದೆ.

* ಇದರಲ್ಲಿ 14ಆಶ್ವಾಸಗಳಿರಬೇಕು.

ಪಂಪನ ಪಂಪಭಾರತದಲ್ಲಿ – ಅರಿಕೇಸರ ಗೊಜ್ಜಿಗನೊಡನೆ ಹೋರಾಡಿದ ಕಥೆ ಬರುತ್ತದೆ.

ರನ್ನನ ಗಧಾಯುದ್ಧದಲ್ಲಿ – ತೈಲಪ ಚಾಳುಕ್ಯನಿಗೂ ರಾಜರಾಜೇಂದ್ರ ಚೋಳನಿಗೂ ನಡೆಯುವ ಸಮರದ ಕಥೆ ಬರುತ್ತದೆ.

ಪೊನ್ನನ ಭುವನೈಕರಾಮಾಭ್ಯುದಯದಲ್ಲಿ ರಾಷ್ಟ್ರಕೂಟ ಕೃಷ್ಣನು ತಕ್ಕೋಳದಲ್ಲಿ ಚೋಳ ರಾಜಾದಿತ್ಯನನ್ನು ಸೋಲಿಸಿದ ಕಥೆಯನ್ನು ವರ್ಣಿಸಿರಬಹುದಾಗಿದೆ. 

೩. ಶಾಂತಿಪುರಾಣ –

16ನೇ *ತೀರ್ಥಂಕರನಾದ ಶಾಂತಿನಾಥನ ಚರಿತೆಯಾಗಿದೆ.

* 12ಆಸ್ವಾಗಳನ್ನು ಹೊಂದಿದೆ.

* ಇದು ಚಂಪೂಕೃತಿಯಾಗಿದೆ. 

* 11 ಭವಾವಳಿಗಳು – 9 ಆಸ್ವಾಸಗಳು  ಭವಾವಳಿಗಳು. 3  ಆಸ್ವಾಸಗಳು – ಶಾಂತಿನಾಥನ ಚರಿತ್ರೆಯನ್ನು ಹೇಳುತ್ತವೆ. 

* ಕಾಳಿದಾಸನ ಕಾವ್ಯನಾಟಕಗಳ ಪ್ರಭಾವವೂ ಇವನ ಮೇಲೆ ಆಗಿರಬಹುದು.

೧. 5ನೇ ಆಶ್ವಾಸದಲ್ಲಿ ಜೋತಿಃ ಪ್ರಭೆಯ ಸ್ವಯಂವರ ವರ್ಣನೆಯಲ್ಲಿ ಕಾಳಿದಾಸನ ” ರಘುವಂಶದ – ಇಂದುಮತೀ ಸ್ವಯಂವರ” ವರ್ಣನೆಯ ಪದ್ಯಗಳಿವೆ. 

* ಪೊನ್ನ ಮತಧರ್ಮ ಮತ್ತು ಪಂಡಿತ ಕಾವ್ಯ ಧರ್ಮಗಳಲ್ಲಿ ಮಾತ್ರ ಯಶಸ್ಸು ಪಡೆದಿದ್ದಾನೆ.

Read this: Karnataka History Brief Intro: https://rvwrittingblog.blogspot.com/2024/02/karnataka-history.html

ಕನ್ನಡ ಸಾಹಿತ್ಯ ಚರಿತ್ರೆ, Kannada Sahitya Charitre – ರನ್ನ

* ರತ್ನತ್ರಯರಲ್ಲಿ ರನ್ನ ಮೂರನೆಯವನು.

ಕವಿಜನದೊಳ್ ರತ್ನತ್ರಯ

ಪವಿತ್ರಮೆನೆ ನೆಗೆಳ್ದಿ ಪಂಪನುಂ ಪೊನ್ನಿಗನುಂ

ಕವಿರತ್ನನುಮಿಮೂವರ್

ಕವಿಗಳ್ ಜಿನಸಮಯದೀಪಕರ್ ಪೆರರೊಳಗೆ. ಎಂದು ರತ್ನತ್ರಯರನ್ನು ರನ್ನ ಹೇಳಿದ್ದಾನೆ. 

* ಇವನ ಊರು – ಮುಧೋಳ ಅಥವಾ ಮುಧುವಳಲು

* ಜೈನಮತದ ಬಳೆಗಾರ ಕುಲದಲ್ಲಿ ಜನನ

* ಗುರು – ಅಜಿತಸೇನಾಚಾರ್ಯರು

* ಪೋಷಕ – ಚಾವುಂಡರಾಯ

* ಆಶ್ರಿತರಾಜ – ಸತ್ಯಾಶ್ರಯ ಅಥವಾ ಇರಿವಬೆಡಂಗ

ಕೃತಿಗಳು

೧. ಗದಾಯುದ್ಧ ಅಥವಾ ಸಾಹಸ ಭೀಮ ವಿಜಯಂ

೨. ಅಜಿತಪುರಾಣ

೩. ಪರಶುರಾಮಚರಿತ – ಚಾವುಂಡರಾಯನ ವಿಷಯದ ಗ್ರಂಥವಾಗಿರಬೇಕು.

೪. ಚಕ್ರೇಶ್ವರ ಚರಿತ 

೫. ಅಜಿತ ತೀರ್ಥೇಶ್ವರ ಚರಿತ

1. ಅಜಿತಪುರಾಣ 

* ಇದೊಂದು ಆಗಮಿಕ ಅಥವಾ ಧಾರ್ಮಿಕ ಕೃತಿಯಾಗಿದೆ.

* 2ನೇ ತೀರ್ಥಂಕರ ಅಜಿತಸ್ವಾಮಿ ಮತ್ತು ಸಗರನ ಚರಿತ್ರೆಯ ಪುರಾಣವಾಗಿದೆ.

* ದಾನ ಚಿಂತಾಮಣಿ ಇದನ್ನು ಹೇಳಿಸಿದ್ದಾಳೆ. ಲಕ್ಕುಂಡಿಯ ಶಾಸನದಲ್ಲಿ ಇವಳನ್ನು ಹೊಗಳಿ ಬರೆದಿದ್ದಾನೆ. 

* ಅಜಿತಪುರಾಣವನ್ನು “ಪುರಾಣತಿಲಕ – ಪುರಾಣಚೂಡಾಮಣಿ” ಎಂದು ರನ್ನ ಸೂಚಿಸುತ್ತಾನೆ. 

2. ಗದಾಯುದ್ಧ

ಇದರ ಮತ್ತೊಂದು ಹೆಸರು – ಸಾಹಸ ಭೀಮ ವಿಜಯಂ

* ಇದೊಂದು ರನ್ನನ ಲೌಕಿಕ ಕೃತಿಯಾಗಿದೆ.

* ಇದು ರನ್ನನ ಕೃತಿರತ್ನವಾಗಿದೆ.

*ಆಕರ – ವ್ಯಾಸ ಭಾರತದ ಗದಾಸೌಪ್ತಿಕ ಪರ್ವ ಮತ್ತು ಪಂಪಭಾರತದ 13ನೇ ಆಶ್ವಾಸ.

ಭಾಸನ ಊರುಭಂಗ

ಭಟ್ಟನಾರಾಯಣನ – ವೇಣಿಸಂಹಾರ

* ಗದಾಯುದ್ಧದಲ್ಲಿ ನಾಯಕನಾಗಿ ಭೀಮ, ಇವನಿಗೆ ಸತ್ಯಾಶ್ರಯನನ್ನು ಹೋಲಿಸಿ ಕಾವ್ಯದ ರಚನೆ ಮಾಡಿದ್ದಾನೆ. ಜೊತೆಗೆ ಭೀಮನಿಗೆ ಪಟ್ಟವನ್ನು ಕಟ್ಟಿದ್ದಾನೆ. 

* ಕುವೆಂಪು ” ಗದಾಯುದ್ಧದ ತುಂಬಾ ನಾಟಕೀಯ ಸನ್ನಿವೇಶ ಸಂವಾದಗಳು ಸೂರೆಯಾಗಿವೆ, ಶಕ್ತಿಗೆ ಎರಡನೆಯದಾಗಿ ನಾಟಕೀಯತೆಯಿಂದಲೇ ಅಥವಾ ಶಕ್ತಿ ಸಮನ್ವಿತವಾದ ನಾಟಕೀಯಿತೆಯಿಂದಲೇ ರನ್ನ ವರಕವಿ, ಚಿರಕವಿ ಮತ್ತು ಮಹಾಕವಿಯಾಗಿ ನಿಂತಿದ್ದಾನೆ. 

* ಭೀಮ ನಾಯಕ, ಧುರ್ಯೋಧನ ಪ್ರತಿನಾಯಕ, ವೀರ – ರೌದ್ರ ರಸಗಳು ಪ್ರಧಾನವಾಗಿ ಈ ಕಾವ್ಯದಲ್ಲಿ ಬಂದಿದೆ. 

* ಬಿ.ಎಂ.ಶ್ರೀ ” ರನ್ನನು ಭೀಮನನ್ನು ಇಳಿಸಿಲ್ಲ, ಆದರೆ ದುರ್ಯೋಧನನನ್ನು ಏರಿಸಿರುವನು ಘನತೆಗೊಯ್ದಿರುವನು” ಎಂದಿದ್ದಾರೆ.

ಚಾವುಂಡರಾಯ

* ೧೦ನೇ ಶತಮಾನದವನು

* ಇವನೂ ಕೂಡ ಕವಿ ಮತ್ತು ಕಲಿಯೂ ಆಗಿದ್ದ.

* ಗಂಗದೊರೆ ರಾಚಮಲ್ಲನ ಮಂತ್ರಿಯಾಗಿದ್ದ

* ಶ್ರವಣಬೆಳಗೊಳದ ಗೊಮ್ಮಟ ಮೂರ್ತಿ ನಿರ್ಮಾಣ 

ಬಿರುದುಗಳು

* ವೀರಮಾರ್ತಾಂಡದೇವ

* ಸಮ್ಯಕ್ತ್ಯರತ್ನಾಕರ

ಕೃತಿಗಳು

ಚಾವುಂಡರಾಯ ಪುರಾಣ 

* ಇದೊಂದು ಗದ್ಯ ಕೃತಿಯಾಗಿದೆ. 

* ಇದು ಕಥಾ ಗದ್ಯ ಮತ್ತು ಶಾಸ್ತ್ರಗದ್ಯಗಳಿಂದ ಕೂಡಿ ವಿಶಿಷ್ಟವಾಗಿದೆ. 

ಮೂಲ ಆಕರ – ಆದಿಪುರಾಣ

ತ್ರಿಷಷ್ಟಿಲಕ್ಷಣಮಹಾಪುರಣ

* 24ತೀರ್ಥಂಕರರು ಮತ್ತು 63 ಶಲಾಕಪುರುಷರ ಚರಿತ್ರೆ ಇದರ ವಿಷಯವಾಗಿದೆ. 

* ಆಕರ – ಜಿನಸೇನ ಮತ್ತು ಗುಣಭದ್ರರ ಮಹಾಪುರಾಣ

ಒಂದನೇ ನಾಗವರ್ಮ 

*10ನೇ ಶತಮಾನದಲ್ಲಿ ಬಾಳಿದವನು 

*ಇವನು ಕೂಡ ಕಲಿ ಮತ್ತು ಕವಿಯು ಆಗಿದ್ದನು

* ಊರು ವೆಂಗಿಮಂಡಲದ ವೆಂಗಿಪಳು.

*ಇವನೊಬ್ಬ ಬ್ರಾಹ್ಮಣ ಕವಿಯಾಗಿದ್ದನು. 

* ಇವನಲ್ಲಿ ಲೌಕಿಕ ಕಾವ್ಯ ಕಂಡು ಬರುತ್ತದೆ. ಧಾರ್ಮಿಕ ಕಾವ್ಯವನ್ನು ಈತನು ಬರೆದಿಲ್ಲ. 

ಬಿರುದು

* ಕವಿರಾಜಹಂಸ

ಕೃತಿಗಳು

೧. ಛಂದೋಂಬುಧಿ

* ಕನ್ನಡದ ಮೊದಲ ಛಂದಶಾಸ್ತ್ರ ಗ್ರಂಥ.

* ಕರ್ನಾಟಕ ವಿಷಯಜಾತಿ ಎಂಬುದನ್ನು ಪ್ರತ್ಯೇಕ ವಿಭಾಗ ಮಾಡಿ ಹೇಳಿದ್ದಾನೆ. 

ಕರ್ನಾಟಕ ಕಾದಂಬರಿ

*ಬಾಣನ ಸಂಸ್ಕೃತದ ಕಾದಂಬರಿಯು ಇದರ ಆಕರವಾಗಿದೆ.

*ಆಶ್ರಿತ ರಾಜ – ಚಂದ್ರರಾಜ.

* ಸಂಸ್ಕ್ರತದ ಕಾದಂಬರಿ ಗದ್ಯ ಪ್ರಕಾರವಾಗಿದ್ದು, ಇದು ಕಾವ್ಯ ಪ್ರಕಾದದಲ್ಲಿ ರಚನೆಯಾಗಿದೆ ಅದರಲ್ಲೂ ಚಂಪೂವಿನಲ್ಲಿ ರಚಿತವಾಗಿದೆ. 

* ಹಳಗನ್ನಡ ಭಾಷೆ – ದೇಸಿಯತೆ ಹೆಚ್ಚಿದೆ. 

* ಇವನಲ್ಲೂ ಮಾರ್ಗ – ದೇಸಿಗಳ ಸಮನ್ವಯತೆಯನ್ನು ಕಾಣಬಹುದು.

ದುರ್ಗಸಿಂಹ

11ನೇ ಶತಮಾನದಲ್ಲಿದ್ದವನು ಆಶ್ರಿತ ರಾಜ ಚಾಲುಕ್ಯರಾಜ ಜಗದೇಕಮಲ್ಲ ಜಯಸಿಂಹನ ಬಳಿ ಸಂಧಿ ವಿಗ್ರಹಿ ಮತ್ತು ಕವಿಯಾಗಿದ್ದನು. ಈತನು ಸ್ಮಾರ್ತ ಭಾಗವತ ಅಥವಾ ಬ್ರಾಹ್ಮಣ ಕವಿಯಾಗಿದ್ದನು. *ಈತನ ಊರು- ಸೈಯಡಿ. ಈಶ್ವರಯ್ಯ ಮತ್ತು ರೇವಾಂಬಿಕೆಯರ ಮಗ.

ಕೃತಿಗಳು

ಪಂಚತಂತ್ರ

ಗುಣಾಢ್ಯನ ಪೈಶಾಚ ಭಾಷೆಯಲ್ಲಿನ ಬೃಹತ್ಕಥೆಯಲ್ಲಿ ೫ ಕಥೆಗಳನ್ನು ವಸುಭಾಗಭಟ್ಟ ತೆಗೆದುಕೊಂಡು ರಚಿಸಿದ್ದ ಅದನ್ನು ದುರ್ಗಸಿಂಹ ರಚಿಸಿರಬಹುದು. 

* ಇದು ಚಂಪೂ ಪ್ರಕಾರದಲ್ಲಿದೆ. 

* ಪಿಂಗಳಕನೆಂಬ ಸಿಂಹಕ್ಕೆ ಸಂಜೀವಕನೆಂಬ ಎತ್ತು ಮಾಡಿದ ಉಪದೇಶ ಮೊದಲ ಭಾಗದಲದಲಿ.

* ಇಲ್ಲೂ ಮಾರ್ಗ – ದೇಸಿಗಳ ಪರಂಪರೆ ಮುಂದುವರಿದಿದೆ. 

* ಈ ಪಂಚತಂತ್ರವು ಜನಪ್ರಿಯ ಮತ್ತು ನೀತಿಬೋಧಕವಾದ ಸಂಸ್ಕ್ರತ ಗ್ರಂಥವನ್ನು ಕನ್ನಡಿಸಿದ್ದಾನೆ. 

ಚಂದ್ರರಾಜ

* ಆಶ್ರಿತರಾಜ – ಚಾಲುಕ್ಯ ಜಯಸಿಂಹ 

ಕೃತಿಗಳು

 ಮದನತಿಲಕ

* ಕನ್ನಡದ ಮೊದಲ ಕಾಮಶಾಸ್ತ್ರದ ಕೃತಿಯಾಗಿದೆ. 

* ಇದೊಂದು ಸಂಕಲನ ಗ್ರಂಥವಾಗಿದೆ. 

* ಇದು ಚಿತ್ರ ಕವಿತಾಪ್ರಧಾನದಲ್ಲಿ ರಚನೆಯಾಗಿದೆ.

* ಹೊಸಗನ್ನಡ ಅಥವಾ ಪೊಸಗನ್ನಡದಲ್ಲಿ ಕಾವ್ಯ ರಚನೆಯಾಗಿದೆ ” ಮುನಿಮತಮನೆ ಪೇಳ್ದನೆಸೆಯೆ ಪೊಸಗನ್ನಡದಿಂ”.

“ಪೊಸಗನ್ನಡದಿಂ ವ್ಯಾವರ್ಣಿಸುವೆಂ ಸತ್ಕ್ರತಿಯನೆಂದು”.

ಶ್ರೀಧರಾಚಾರ್ಯ

ಇವನ ಕೃತಿ ಜಾತಕ ತಿಲಕ.

ಇದು ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ.

ಇದು ಸಂಕಲನ ರೂಪವಾಗಿದೆ ಶಾಸ್ತ್ರ ಮತ್ತು ಕಾವ್ಯ ಮಿಳಿತವಾಗಿದೆ. 

೨. ಚಂದ್ರಪ್ರಭ ಚರಿತೆ ಜೈನ ಪುರಾಣ ಕಾವ್ಯ ಇದು ಲಭ್ಯವಿಲ್ಲ

ಶಾಂತಿನಾಥ

 *ಆಶ್ರಿತರಾಜ – ಚಾಲುಕ್ಯ ಭುವನೈಕ ಮಲ್ಲನ ಲಕ್ಷ್ಮನೃಪ ನ ಬಳಿ ಮಂತ್ರಿಯಾಗಿದ್ದ.

ಬಿರುದುಗಳು

* ಸಹಜಕವಿ

* ಚತುರಕವಿ

ಕೃತಿಗಳು

ಸುಕುಮಾರ ಚರಿತ

ಜೈನ ಕತಾಪರಂಪರೆಯಲ್ಲಿದ್ದ ಸುಕುಮಾರ ಚರಿತ್ರೆ ರಚಿಸಿದ್ದ ಚಂಪುವಿನಲ್ಲಿ ಬರೆಯುತ್ತಿದ್ದ ಸಂಪ್ರದಾಯವನ್ನು ಬದಲಿಸಿದ ವಡ್ಡಾರಾಧನೆಯ ಛಾಯೆ ಇದರ ಮೇಲಿರಬಹುದು ಈ ಕೃತಿಯಿಂದ ತೀರ್ತನ್ಕರು ಮತ್ತು ಚಕ್ರವರ್ತಿಗಳ ಬಗೆಗೆ ಬರೆಯುತ್ತಿದ್ದುದ್ದನ್ನು ಇವನು ಬದಲಿಸಿದ

ನಾಗವರ್ಮ

*  ಉದಯಾದಿತ್ಯನ

ಸಂದಿ ವಿಗ್ರಹಿಯಾಗಿದ್ದ. 

* ಚಂದ್ರಚೂಡಾಮಣಿಶತಕ ಅಥವಾ ಜ್ಞಾನಸಾರ ಇವನ ಕೃತಿ

ಇದು ಕನ್ನಡದ ಮೊದಲ ಶತಕವಾಗಿದೆ. 

* ಬ್ರಾಹ್ಮಣ ಕವಿಗಳು ಲೌಕಿಕ ಕೃತಿಗಳನ್ನು ಮಾತ್ರ ಮೊದಲಿಗೆ ಅನುಮಾದಿಸುತ್ತಿದ್ದರು. ಮೊದಲ ಬಾರಿಗೆ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಕೃತಿಯನ್ನು ಅನುವಾದಿಸಿದನು.

ReplyForwardAdd reaction

1 thought on “Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ….”

  1. Pingback: Kannada Sahitya Charitre Part - 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ - ನಾಗಚಂದ್ರ, ನಯಸೇನ, ಬ್ರಹ್ಮಶಿವ... - rvwritting

Leave a Comment

Your email address will not be published. Required fields are marked *

Scroll to Top