Read all of you – Kannada Sahitya Charitre Part – 6. ಕನ್ನಡ ಸಾಹಿತ್ಯ ಚರಿತ್ರೆ. ಬಸವಯುಗ: ದೇವರ ದಾಸಿಮಯ್ಯ, ಅಲ್ಲಮ ಪ್ರಭು

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre - Part - 6
ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre – Part – 6

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವೇಶ್ವರನಿಂದ ಕುಮಾರವ್ಯಾಸನ ಕಾಲದವರೆಗೆ. *12ನೇ ಶತಮಾನದ ಮಧ್ಯ ಭಾಗದಿಂದ 15ನೇ ಶತಮಾನದ ಮಧ್ಯ ಭಾಗದವರೆಗೆ ಈ ಒಂದು ಯುಗವನ್ನು ಗುರುತಿಸಲಾಗಿದೆ.

See this video: https://youtu.be/fPSb3GdzIsY?si=zlCloB0VTlOWBnA8

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವಯುಗ

ರಾಜಕೀಯವಾಗಿ

* ರಾಜಕೀಯ ಸ್ಥಿತ್ಯಂತರಗಳು ಕಂಡು ಬಂದವು, ಕೆಲವು ರಾಜಮನೆತನಗಳ ಏಳ್ಗೆ, ಕೆಲವು ರಾಜಮನೆತನಗಳ ಅವನತಿಯನ್ನು ಈ ಯುಗದಲ್ಲಿ ಕಾಣಬಹುದು. 

* ಕಲ್ಯಾಣ ಚಾಲುಕ್ಯರು, ತನ್ನ  9ನೇ ವಿಕ್ರಮಾದಿತ್ಯ ಮತ್ತು ಮೂರನೇ ಸೋಮೇಶ್ವರನ ಕಾಲದಲ್ಲಿ ಬೆಳೆದು ನಂತರ ಇಳಿಮುಖವಾಗುವುದನ್ನು ನೋಡಬಹುದು. 

* ಕಳಚೂರ್ಯರು ಏಳಿಗೆಗೆ ಬಂದದ್ದು.  ಬಿಜ್ಜಳನು ಅಭಿವೃದ್ಧಿ ಹೊಂದಿದ ಇದೇ ಕಾಲದಲ್ಲಿ.  ನಂತರ ನಿಜಭುಜಬಲ ಚಕ್ರವರ್ತಿಯಾಗಿ ಮೆರೆದನು. 

* ಹೊಯ್ಸಳರು ಸಾಮಂತರಾದವರು ವಿಷ್ಣುವರ್ಧನನ ಕಾಲದಿಂದ ಸ್ವತಂತ್ರರಾಗಿ ಆಳ್ವಿಕೆಯನ್ನು ಮುಂದುವರಿಸಿದರು. ಉತ್ತರದಲ್ಲಿ ಯಾದವರು ಬೆಳೆದು 13ನೇ ಶತಮಾನದಲ್ಲಿ ಹೊಯ್ಸಳ ಯಾದವರ ಹೋರಾಟ ಹೆಚ್ಚಿ ನಾಡಿನ ಒಕ್ಕೂಟ  ಕಡಿಮೆಯಾಗುವುದನ್ನು ಕಾಣಬಹುದು. 

* ಇದಾದ ನಂತರ ಮಹಮದೀಯರ ದಾಳಿಗಳು ಹೆಚ್ಚಾದವು,  ಅಲ್ಲಾವುದ್ದೀನ್ನ ದಂಡನಾಯಕನಾಗಿರುವ ಮಲ್ಲಿಕಾಫರ್ ದಾಳಿಗಳು ಹೆಚ್ಚಾದವು ಇದರಿಂದ ಸಾಂಸ್ಕೃತಿಕ ಪರಂಪರೆಯ ಮೇಲೆ ಹೆಚ್ಚಿನ ಹೊಡೆತ ಬೀಳುವುದನ್ನು ಕಾಣಬಹುದು. 

* ಇದೇ ಸಮಯದಲ್ಲಿ ಅಂದರೆ 1336ರಲ್ಲಿ ವಿಜಯನಗರವು ಎಲ್ಲಾ ವಿಭಾಗಗಳನ್ನು ಅಥವಾ ಕ್ಷೇತ್ರಗಳನ್ನು ಕ್ರೋಡೀಕರಣ ಮಾಡಿ ಎಲ್ಲವನ್ನು ಒಳಗೊಂಡ ವಿಜಯನಗರ ಸಾಮ್ರಾಜ್ಯವಾಗಿ ಬೆಳೆಯಿತು. ಜೊತೆಗೆ ಬಹುಮನಿ ಸುಲ್ತಾನರ ಅಧಿಪತ್ಯ ಶುರುವಾಗಿದ್ದು,  ಹಾಗೆಯೇ ಮೈಸೂರು ಒಡೆಯರು ಕೂಡ ಶ್ರೇಯೋಭಿವೃದ್ಧಿಗೆ ಬಂದದ್ದು ಇದೇ ಸಂದರ್ಭದಲ್ಲಿಯೇ. 

ಸಾಂಸ್ಕ್ರತಿಕವಾಗಿ

* ಹೊಸ ಧರ್ಮಗಳ ಬೆಳವಣಿಗೆಯನ್ನು ಕಾಣಬಹುದು. ಇಲ್ಲಿ ಜೈನ ಧರ್ಮವು ಅವನತಿಯತ್ತ ಸಾಗುವುದನ್ನು ಕಾಣಬಹುದು.

* ದೈವಭಕ್ತಿ ಪ್ರಧಾನವಾದ ಮತಗಳ ಉದಯವನ್ನು ಕಾಣಬಹುದು. 

* ಸಮಾಜದ ಆಚಾರ ವಿಚಾರಗಳನ್ನು ರೂಢಿ ಸಂಪ್ರದಾಯಗಳನ್ನು ವಿರೋಧಿಸುವ ಮನಸ್ಥಿತಿಯೂ ಇದೇ ಕಾಲದಲ್ಲಿ ಬೆಳೆಯುವುದನ್ನು ನಾವು ಗಮನಿಸಬಹುದು. 

* ವೀರಶೈವ ಮತದ ಉಗಮ ಇದು ಮುಂದೆ ಚಳುವಳಿಯಾಗಿ ಮತವಾಗಿ ಬದಲಾವಣೆ ಹೊಂದಿತು. ಸಾಮಾನ್ಯ ಜನರ ಮೇಲೆ ಮೊಹಮ್ಮದೀಯರ ಧಾಳಿ ಇವೆಲ್ಲವನ್ನ ವಿಜಯನಗರ ಸಾಮ್ರಾಜ್ಯ ಹಿಮ್ಮೆಟ್ಟಿಸಿತು. 

ಯುಗದ ವೈಶಿಷ್ಟ್ಯಗಳು

* ಮಾರ್ಗ ಪರಂಪರೆಯಿಂದ ದೇಸಿ ಸಂಕ್ರಮಣ ಹೊಂದಿದ ಯುಗವಾಗಿ ಕಾಣಿಸಿಕೊಂಡಿದೆ.

* ವಚನಗಳ ಮತ್ತು ವಚನ ಸಾಹಿತ್ಯದ ಉಗಮ. ಇದೊಂದು “ಭಾವಗೀತಾ ಲಕ್ಷಣದಿಂದ ಕೂಡಿದ ಅನುಭವಗದ್ಯವಾಗಿದೆ”.  ಇದರಲ್ಲಿ ಶಿವಶರಣರ  ನೀತಿ, ತತ್ವಗಳ ಬೋಧನೆ ಪ್ರಸಾರವನ್ನು ಕೂಡ ಕಾಣಬಹುದು.

* ಇಲ್ಲಿ ರಗಳೆ, ತ್ರಿಪದಿ, ಷಟ್ಪದಿ, ವಚನಗಳು ಸಾಹಿತ್ಯ ರೂಪವಾಗಿ ಬೆಳೆದು, ಇವುಗಳ ಮೇಲೆ ಪ್ರತ್ಯೇಕವಾದ ಕಾವ್ಯ ರಚನೆಗಳಾಗಿರುವುದನ್ನು ಕಾಣಬಹುದು.

* ಲಘು ರಚನೆಯ ಸಾಹಿತ್ಯಗಳಾದ ಕಾಲಜ್ಞಾನ, ನೀತಿ ಪದ್ಯ, ವ್ಯಾಖ್ಯಾನ ಗದ್ಯ ಮುಂತಾದವು ಧರ್ಮದ ಮಹತ್ವದಿಂದ ರಚನೆಯಾದವು.

* ಈ ಕಾಲದಲ್ಲಿ ಜೈನ ಕವಿಗಳನ್ನು ಬಿಟ್ಟು ಬೇರೆಯವರು ಕಾವ್ಯಗಳನ್ನು ರಚಿಸಿದ್ದಾರೆ ಉದಾಹರಣೆಗೆ ಹರಿಹರನ ಗಿರಿಜಾ ಕಲ್ಯಾಣ. 

* ಈ ಯುಗದಲ್ಲಿ ಧರ್ಮದ ತತ್ವಗಳ ಮೇಲೆ ಕೃತಿ ರಚನೆ ಯಾದವು ಅಥವಾ ಕೃತಿಗಳಲ್ಲಿ ಅವುಗಳ ವಿಷಯವೇ ಹೆಚ್ಚಾಯಿತು.

ಉದಾ- ವೀರಶೈವರ ಗ್ರಂಥಗಳಲ್ಲಿ ಶಿವಲೀಲೆ ಶಿವಶರಣರ ವಿಚಾರಗಳೆ ಮುಖ್ಯವಾದವು.

ಬ್ರಾಹ್ಮಣರಲ್ಲಿ – ಪುರಾಣಗಳು ಜೈನರಲ್ಲಿ – ತೀರ್ಥಂಕರ, ಜಿನನ ವಿಚಾರಗಳು ಮುಂತಾದವು.

* ಒಂದೊಂದು ಕಾವ್ಯರೂಪದಲ್ಲಿ ಒಂದೊಂದು ಕಾವ್ಯ ರಚನೆಯಾಗುತ್ತಿತ್ತು.  ಅಂದರೆ ಜೈನರು ಚಂಪುವಿನಲ್ಲಿ Stats ರಚನೆ ಮಾಡಿದರು, ಶಿವಶರಣರು – ವಚನಗಳಲ್ಲಿ,  ಇದು ನಿರ್ಧಾರಕವಾಗಿ ಹೀಗೆ ನಿಯಮದ ರೀತಿಯಲ್ಲಿತ್ತು.

ಇದು ಮುಂದೆ ಕಡಿಮೆಯಾಗಿ ವೀರಶೈವರು ಚಂಪು ವಿನಲ್ಲಿ,  ಜೈನರು ರಗಳೆ, ವಚನ, ಷಟ್ಪದಿ, ಪ್ರಕಾರಗಳಲ್ಲೂ ರಚನೆಗೆ ಮುಂದಾಗಿರುವುದನ್ನು ನೋಡಬಹುದು.

* ಭಾಷೆಯ ವಿಷಯದಲ್ಲಿ ಹಳಗನ್ನಡದಿಂದ ನಡುಗನ್ನಡ ಭಾಷೆಗೆ ಪರಿವರ್ತನೆಯಾಗಿರುವುದನ್ನು ಕಾಣಬಹುದು. ಚಂಪುವಿನಲ್ಲಿ ಅದೇ ಬಿಗಿಹಿಡಿತ ಕಾಣಬಹುದು.

* ರಳಾ ಕುಳಾ ಕ್ಷಳ ಅಕ್ಷರಗಳು ಬರವಣಿಗೆಯಲ್ಲಿ ಮತ್ತು ಮಾತಿನಲ್ಲೂ  ಬಳಕೆ ತೀರಾ ಕಡಿಮೆಯಾಗಿರುವುದನ್ನು ಕಾಣಬಹುದು. 

* ಈ ಯುಗದಲ್ಲಿ ಭಕ್ತಿರಸ ಪ್ರಧಾನವಾಗಿ ಬೆಳೆಯಿತು. ಶೃಂಗಾರ ರಸವನ್ನು ಮುಖ್ಯವಾಗಿಟ್ಟುಕೊಂಡು ರಚನೆಯಾಗಿದ್ದ “ಲೀಲಾವತಿ” ಕಾವ್ಯ ಇದೇ ಯುಗದಲ್ಲಿ ಬಂದಿತು. 

* ಪಂಪ ಯುಗದಲ್ಲಿದ್ದ ಆಗಮಿಕ ಮತ್ತು ಧಾರ್ಮಿಕ ವಿಭಾಗಗಳು ಕಾಣಲಿಲ್ಲ.  ಬದಲಿಗೆ ಆಧ್ಯಾತ್ಮ, ಅನುಭಾವಿಗಳ ಹಿನ್ನೆಲೆಯಲ್ಲಿ ಕಾವ್ಯ ರಚನೆಯ ಪರಂಪರೆ ಯುಗದಲ್ಲಿ ಬೆಳೆಯಿತು.

* ಸಂಕಲನ ಗ್ರಂಥವಾದ “ಸೂಕ್ತಿಸುಧಾರ್ಣವ”.  ವ್ಯಾಕರಣ ಗ್ರಂಥವಾದ “ಶಬ್ದಮಣಿದರ್ಪಣ” ಇದೇ ಕಾಲದಲ್ಲಿ ಅಥವಾ ಇದೇ ಯುಗದಲ್ಲಿ ಬಂದ ಕೃತಿಗಳಾಗಿವೆ.

Read part – 5: https://rvwritting.com/7%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af-%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0%e0%b3%86-kannada-sahitya-charitre/

ಪ್ರಮುಖ ವಚನಕಾರರು

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ದೇವರ ದಾಸಿಮಯ್ಯ

* ದೇವರ ಅಥವಾ ಜೇಡರ ದಾಸಿಮಯ್ಯ ಚಾಲುಕ್ಯ ಜಯಸಿಂಹನ ಕಾಲದಲ್ಲಿದ್ದ ಎಂದು ಭೀಮಕವಿ ಮತ್ತು ಹರಿಹರರು ತಿಳಿಸಿದ್ದಾರೆ.

* ಬ್ರಹ್ಮ ಶಿವನು ತನ್ನ ಕೃತಿಯಾದ “ಸಮಯ ಪರೀಕ್ಷೆ”ಯಲ್ಲಿ ಇವನ ಹೆಸರನ್ನು ಉಲ್ಲೇಖಿಸಿ ಹೇಳಿದ್ದಾನೆ.

* ಜೇಡರ ದಾಸಿಮಯ್ಯನ ಬಗೆಗೆ ಬಸವಣ್ಣನವರ ವಚನ

ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪು ನೀರ ಸವಿದಂತಾಯಿತಯ್ಯ ಎನ್ನ ಯುಕ್ತಿ ನಿಮ್ಮ ವಚನಂಗಳ ಕೇಳದೆ ಅನ್ಯ ಪುರಾಣಗಳ ಕೇಳಿ ಕೆಟ್ಟೆನಯ್ಯ ಕೂಡಲಸಂಗಮದೇವ.

* ಜೇಡರ ದಾಸಿಮಯ್ಯ ತನ್ನ ವಚನಗಳಲ್ಲಿ ಡೋಹರ ಕಕ್ಕ, ಮಾದರ ಚೆನ್ನ ಮುಂತಾದವರನ್ನು ಹೆಸರಿಸಿದ್ದಾನೆ.

* ಇವರು ರಚಿಸಿದ ವಚನಗಳಲ್ಲಿ ಉಪಲಬ್ದ 150 ವಚನಗಳಿವೆ. 

* ಇವರ ವಚನಗಳಲ್ಲಿ ಎದ್ದು ಕಾಣುವ ಗುಣಗಳು, ವೀರಶೈವ ನಿಷ್ಠೆ, ನಿಷ್ಟೂರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕತೆಯ ಸಂಕ್ಷಿಪ್ತ ಶೈಲಿ, ದೃಷ್ಟಾಂತಗಳನ್ನು ಕಾಣಬಹುದು. 

* ಇವರ ಅಂಕಿತನಾಮ “ರಾಮನಾಥ”.

ಕೆಲವು ವಚನಗಳು

* ನಿಮ್ಮ ಶರಣರ ಸೂಳ್ಳುಡಿಯ ಒಂದರಗಳಿಗೆ ಇತ್ತಡೆ ನಿಮ್ಮನ್ನಿತ್ತೆ ಕಾಣ ರಾಮನಾಥ.

* ಒಡಲೆಂಬ ಬಂಡಿಗೆ ಮೃಡ ಶರಣರ ನುಡಿಗಡಣವೇ ಕಡೆಗೀಲು.

* ಜ್ವರ ವಿಡಿದ ಬಾಯಿಗೆ ನೊರೆ ವಾಲು ಒಲಿವುದೇ.  ಎಳ್ಳು ಇಲ್ಲದ ಗಾಣದಲ್ಲಿ ಎಣ್ಣೆ ಉಂಟೆ?

ಸಕಲೇಶ ಮಾದರಸ

* ಬಸವ ಪುರಾಣ,  ಪದ್ಮರಾಜ ಪುರಾಣದಿಂದ ಇವನ ಇತಿಹಾಸ ತಿಳಿಯಬಹುದು.

* ಇವನ ಗುರು – ಅವನ ತಂದೆ ಮಲ್ಲರಸ.

* ಇವನ 88 ವಚನಗಳು ದೊರಕಿವೆ. 

* ಇವನು ಶ್ರೀಶೈಲದಿಂದ ಬಸವನ ಅಂದರೆ ಕಲ್ಯಾಣಕ್ಕೆ ಬಂದು ಗುರು ಕೃಪೆಗೆ ಒಳಗಾಗಿ ವಿರಕ್ತಿ ಹೊಂದಿದ ಎಂಬ ಇತಿಹಾಸವಿದೆ. 

ಕೆಲವು ವಚನಗಳು

* ಜನ ಮೆಚ್ಚು ಶುದ್ಧನಲ್ಲದೆ ಮನಮೆಚ್ಚುಶುದ್ದನಲ್ಲಯ್ಯ.

* ತನುವಿನ ಮೇಲೆ ಬ್ರಹ್ಮಚರ್ಯತ್ವವಳವಟ್ಟರೇನು

ಮನದ ಮೇಲೆ ಬ್ರಹ್ಮಚರ್ಯತ್ವವಳವಡದನ್ನಕ್ಕ? 

* ಮೆಳೆಯ ಮೇಲೆ ಕಲ್ಲನಿಕ್ಕಿ ಮೆಳೆ ಭಕ್ತನಾಗಬಲ್ಲದೆ?

* ಜ್ಯೋತಿಯ ಮುಟ್ಟಿದ ಬತ್ತಿ ಎಲ್ಲ ಜ್ಯೋತಿಯಪ್ಪವಯ್ಯ.

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಅಲ್ಲಮ ಪ್ರಭು

* ಬಸವಣ್ಣನಿಗೆ ಹಿರಿಯನಾಗಿದ್ದನು. 

* ಶಿವಶರಣರಲ್ಲೇ ಶ್ರೇಷ್ಠ ವ್ಯಕ್ತಿತ್ವದವನು.

* ದಕ್ಷಿಣ ಕರ್ನಾಟಕದ ಬಳ್ಳಿಗಾವೆಯವನು.

* ಅನುಭವ ಮಂಟಪದ ಅಧ್ಯಕ್ಷ ಮತ್ತು ಶೂನ್ಯಸಿಂಹಾಸನದ ಅಧಿಪತಿಯಾಗಿದ್ದವನು. 

* ಯಾವ ಧರ್ಮಕ್ಕೂ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ಎಲ್ಲಾ ಧರ್ಮಗಳ ಸಾರ ತಿಳಿದು ಕಟುವಿಮರ್ಶೆಗೆ ಒಳಪಡಿಸಿದವರು.

 * ಇವರ ಅಂಕಿತನಾಮ ಗುಹೇಶ್ವರ. 

ಕೆಲವು ವಚನಗಳು

* ನಿಮ್ಮ ನಿಲವ ಅನುಭವ ಸುಖಿಬಲ್ಲ. 

* ಅರಿಯಬಾರದ ಘನವನರಿದವರು ಅರಿಯದಂತಿರ್ಪರು ಗುಹೇಶ್ವರ.

ಸೂಕ್ಷ್ಮತೆ ಹೊಂದಿರುವ ವಚನಗಳು

* ಕಾಯದ ಮೊದಲಿಂಗೆ ಬೀಜವಾಗುದೆಂದರಿಯದೀ  ಲೋಕ 

ಇಂದ್ರಿಯಗಳು ಬೀಜವಲ್ಲ….

* ಬೆಟ್ಟಕ್ಕೆ ಚಳಿಯಾದರೆ ಏನು ಹೊದಿಸುವರಯ್ಯ

 ಬಯಲು ಬೆತ್ತಲೆ ಇದ್ದರೆ ಏನು ನುಡಿಸುವರಯ್ಯ.

* ಲಿಂಗಾನುಭವಿಗಳ ಸಂಘದಿಂದಾನು ಕಣ್ದೆರೆದೆನು ಕಾಣ ಗುಹೇಶ್ವರ.

* ತನ್ನ ತಾನರಿದರೆ ನುಡಿಯಲ್ಲ ಪರ ತತ್ವ ನೋಡಾ.

* ನಾನು ಘನ, ತಾನು ಘನವೆಂಬ ಹಿರಿಯರುಂಟೆ,

ಜಗದೊಳಗೆ ಹಿರಿಯರ ಹಿರಿತನ ದಿಂದೇನಾಯ್ತು 

 ಹಿರಿದು ಕಿರಿದೆಂಬ ಶಬ್ದವಡಗಿದೆ ಆತನೆ

ಶರಣ ಗುಹೇಶ್ವರ.

* ನಾ ದೇವನಲ್ಲದೆ ನೀ ದೇವನೇ?

  • ವೇದವೆಂಬುದು ಓದಿನ ಮಾತು 

ಶಾಸ್ತ್ರವೆಂಬುದು ತಗರ ಹೋರಟೆ

ಪುರಾಣವೆಂಬುದು ಪುಂಡರಗೋಷ್ಠಿ 

ತರ್ಕವೆಂಬುದು ತಗರಾ ಹೊರಟೆ

ಭಕ್ತಿ ಎಂಬುದು ತೋರಂಬ ಲಾಭ 

ಗುಹೇಶ್ವರನೆಂಬುದು ಮೀರಿದ ಘನವು.

ಬೆಡಗಿನ ವಚನಗಳು

ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡ ಅನಲಂಗೆ ಅಂಗವಿಲ್ಲದಂಗನೇ ಸತಿಯಾಗಿಪ್ಪಳು

 ಇವರಿಬ್ಬರ ಬಸಿರಲ್ಲಿ ಹುಟ್ಟಿದಳೆಮ್ಮ ತಾಯಿ

 ನಾ ಹುಟ್ಟಿ ತಾಯ ಕೈವಿಡಿದು ಸಂಗಮಾಡಿ ನಿರ್ದೋಷಿಯಾದನು ಕಾಣ ಗುಹೇಶ್ವರ.

* ತನ್ನ ಜ್ಞಾನದ ಬೆಳಕಿನ ಮೂಲಕ ಲೋಕದ  ವಿಮರ್ಶೆ ಮಾಡಿದವರು.

* ದ.ರಾ ಬೇಂದ್ರೆ – ” ಕರ್ಕಶವಾದ ತರ್ಕ, ಸಹಜ ವಕ್ರವಾದ ಬೆಡಗು, ಹುಟ್ಟುಗನ್ನಡದ ವಿಡಾಯ, ಧೀರ ವಿಚಾರ, ಆಧ್ಯಾತ್ಮ ಸಾಹಸದ ಹಾಸ್ಯ , ಮಾತಿನ ಸುಳಿವುಗಳಲ್ಲಿ ಜ್ಯೋತಿಯ ಹೊಳಹನ್ನು ಹುಟ್ಟಿಸುವ ಶಿಲ್ಪ ಸರಳ ಸಜ್ಜನಿಕೆ” ಎಂದಿದ್ದಾರೆ.

Leave a Comment

Your email address will not be published. Required fields are marked *

Scroll to Top