Kannadigara Tayi ಕನ್ನಡಿಗರ ತಾಯಿ ಪದ್ಯದ ಭಾವಾರ್ಥ

Kannadigara Tayi ಕನ್ನಡಿಗರ ತಾಯಿ – ಎಂ. ಗೋವಿಂದ ಪೈ:

Kannadigara tayi ಕನ್ನಡಿಗರ ತಾಯಿ
Kannadigara tayi ಕನ್ನಡಿಗರ ತಾಯಿ

Kannadigara Tayi ಕನ್ನಡಿಗರ ತಾಯಿ – ಕನ್ನಡದ ಮೊದಲ ರಾಷ್ಟ್ರಕವಿಎಂ. ಗೋವಿಂದ ಪೈ ಅವರು.ಕಾಸರಗೋಡುಜಿಲ್ಲೆಯ ಮಂಜೇಶ್ವರದಲ್ಲಿ 13.03.1883 ರಲ್ಲಿ ಜನಿಸಿದರು. ತಂದೆ ಸಾಹುಕಾರ ತಿಮ್ಮಪ್ಪ, ತಾಯಿ ದೇವಕಿಯಮ್ಮ. ಬಿ.ಎ. ಪದವಿಯನ್ನು ಪಡೆದಿದ್ದ ಗೋವಿಂದ ಪೈ ಅವರು ದೇಶಿಕ ಭಾಷೆಗಳಲ್ಲಲ್ಲದೆ ವಿದೇಶಿ ಭಾಷೆಗಳ ಪಾಂಡಿತ್ಯವನ್ನುಳ್ಳವರಾಗಿದ್ದರು. ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.

     ಸಂಶೋಧಕ, ವಿಮರ್ಶಕ, ಅನುವಾದಕರಾಗಿಯೂಜನಪ್ರಿಯರು. ಕವನ ಸಂಕಲನಗಳು: ಗಿಳಿವಿಂಡು, ನಂದಾದೀಪ, ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯಗದ್ಯಾನುವಾದ. “ಸಿಂಗಲ ಸುತ್ತ’ ಬೌದ್ಧ ಸೂತ್ರಗಳ ಕನ್ನಡಅನುವಾದ. ರವೀಂದ್ರನಾಥಠಾಕೂರ್, ಅಹಮ್ಮದ್‌ ಇಟ್ಬಾಲ್, ಉಮರ್‌ಖಯ್ಯಾಂನ ರುಬಾಯಿಗಳನ್ನು ಭಾಷಾಂತರಿಸಿದ್ದಾರೆ. ವೈಖಾಖ ಮತ್ತುಗೊಲ್ಗೊಥಾಖಂಡ ಕಾವ್ಯಗಳನ್ನು ಪ್ರಕಟಿಸಿದ್ದಾರೆ.


     ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿತ್ರಭಾನು, ಹೆಬ್ಬೆರಳು, ಪಾರ್ಶ್ವನಾಥತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರಚರಿತೆ, ಭಗವಾನ್ ಬುದ್ದ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ತಮ್ಮಜೀವಿತಾವಧಿಯನ್ನು ಸಂಶೋಧನೆ. ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದ ಅವರಿಗೆ ನರಿಗೆ 1949ರಲ್ಲಿ ಮದ್ರಾಸ್ ಸರ್ಕಾರರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ. ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು.

ಪದ್ಯವು ಕರ್ನಾಟಕ ಏಕೀಕರಣ ಪೂರ್ವದಲ್ಲಿ ರಚಿತವಾದ ಕವಿತೆಯಾಗಿದ್ದು ಅವಳ ಮುಖ ಎಲ್ಲಾ ಕಡೆಯೂ ಕಾಣಬೇಕು ಎಂಬುದರ ಜೊತೆಗೆ ಕನ್ನಡಿಗರು, ಕನ್ನಡ , ಅಲ್ಲಿನ ಆಚಾರ-ವಿಚಾರ, ನಡೆ-ನುಡಿ, ಇಲ್ಲಿನ ಭವ್ಯತೆ, ಪ್ರಾಕೃತಿಕತೆ, ಸಾಂಸ್ಕೃತಿಕತೆ, ವಾಸ್ತುಶಿಲ್ಪದ, ರಾಜ ಮನೆತನಗಳ ವೈಭವ  ಪ್ರಪಂಚದಾದ್ಯಂತ ಪಸರಿಸ ಬೇಕು.

Kannadigara Tayi ಕನ್ನಡಿಗರ ತಾಯಿ – ಕವಿತೆಯ ಸಾರಾಂಶ


ಏಕೀಕರಣ ಪೂರ್ವದಲ್ಲಿ ರಚಿತವಾಗಿರುವ ಕವನವಾಗಿದ್ದು ಕನ್ನಡಿಗರ ತಾಯಿಯಾಗಿರುವ ನೀನು  ಬಂದು ನಮಗೆ ಮುಖವ ತೋರು,  ಅದರೊಂದಿಗೆ ಇಲ್ಲಿ ನೆಲೆಸಿರುವ  ನಿನ್ನ ಮಕ್ಕಳನ್ನು ಆಶೀರ್ವಾದಿಸಿ ಅವರನ್ನು ಹರಸುವ ಜನ್ಮ ಮಾತೆಯಾಗು ಎಂದಿದ್ದಾರೆ.

     ನಾವು ಯಾವುದೇ ತಪ್ಪು ಮಾಡಿದರೂ ನಮ್ಮನ್ನು ತಾಯಿಯಂತೆ ಅಕ್ಕರೆಯಿಂದ ಸಲಹುವವಳು ನೀನು , ಜೊತೆಗೆ ನಮ್ಮ ಬಾಳು – ಬದುಕು ಕೂಡ ನೀನೇ ಆಗಿರುದರಿಂದ ನಿನ್ನನ್ನು ಮರೆಯಲು ಸಾಧ್ಯವಿಲ್ಲ. 

    ಕನ್ನಡ ನಾಡಿನಲ್ಲಿರುವ ಕನ್ನಡಿಗರ ದೇಹ, ಅವರ ಮನಸ್ಸು, ಅವರ ನುಡಿ ಕನ್ನಡವೇ ಆಗಿದೆ. ಜೊತೆಗೆ ಇಲ್ಲಿ ಹಣ್ಣು, ಕಾಯಿಗಳನ್ನು ನೀಡುವ ವಿವಿಧ/ಹಲವು ಮರಗಳು ಇವೆ. ಅದರೊಂದಿಗೆ ಹೂವು, ಬಳ್ಳಿ, ತರು, ಲತೆಗಳನ್ನು  ಹೊಂದಿರುವ ಪ್ರಾಕೃತಿಕ ಸಂಪತ್ತಿದೆ.

     ಫಲ ನೀಡುವ ತೆನೆಯು, ಹಾಲಿನ ಕೆನೆಯು ಜೊತೆಗೆ ತಂಗಾಳಿಯು,  ಕಾಡು ಪ್ರಾಣಿಗಳು, ನದಿಗಳು, ನಗರಗಳು ಎಲ್ಲವೂ ಇಲ್ಲಿವೆ.  ಕನ್ನಡನಾಡಿನಲ್ಲಿ ಇಲ್ಲದೆ ಇರುವುದು ಯಾವುದಾದರೂ ಇದೆಯೇ ಎಂದು  ಪ್ರಶ್ನಿಸುತ್ತಿದ್ದಾರೆ. 

    ಜೇನು ಸುರಿವಂತೆ, ಬಿಳಿ ಹಾಲಿನಂತೆ ಶುಭ್ರವಾಗಿರುವ ಭೂಮಿಯಂತೆ ಈ ನಾಡು. ಶಬರಿ ರಾಮನಿಗಾಗಿ ಕಾದ ನಾಡುವೇ ಇದಾಗಿದ್ದು. ಅದರಂತೆ ಒಳ್ಳೆಯವರಿಗೆ ಒಳ್ಳೆಯದಾಗಿ ಕೆಟ್ಟವರಿಗೆ ಕೆಟ್ಟದಾಗಿಯೂ ಕಾಣಿಸಿಕೊಳ್ಳುವ ನಾಡು ನಮ್ಮ ಕನ್ನಡನಾಡಾಗಿದೆ.


     ಪಾಂಡವರು ತಮ್ಮ ಅಜ್ಞಾತವಾಸವನ್ನು ಕಳೆದದ್ದು ವಿರಾಟ ರಾಯನ ಅರಮನೆಯಲ್ಲಿ,  ಅಲ್ಲೇ ಅಡುಗೆ ಭಟ್ಟನಾಗಿದ್ದ ಭೀಮಾ- ವಲಲ ಎಂಬ ಹೆಸರಿನಲ್ಲಿದ್ದು-ಕೀಚಕನನ್ನು ಸದೆಬಡಿದಿದ್ದು ಇಲ್ಲೇ, ಹಾಗೆಯೇ ಇಡೀ ಕೌರವ ವಂಶವನು ಗೆದ್ದಿದ್ದು ಇದೇ ನಾಡಿನಲ್ಲಿ  ಅಲ್ಲವೇ ಇದೆಲ್ಲವನ್ನು ಈ ನಾಡು ನೋಡಿಲ್ಲವೇ.
   ನಂದ ನಂದನನು ಇಲ್ಲಿಂದಲೇ ಸಂಧಿಗೆ ಹೋಗಲಿಲ್ಲವೇ ಶಕರು, ಶಾತವಾಹನರು ಇವರೆಲ್ಲರೂ ಸೇರಿ ಭಾರತ ದೇಶದ ಅರ್ಧ ಭಾಗವನ್ನು ಆಳಲಿಲ್ಲವೇ ಈ ನಾಡನ್ನು ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಕದಂಬರು, ಹೊಯ್ಸಳರು,  ಕಳಚೂರ್ಯರು, ವಿಜಯನಗರದ ಅರಸರ ಮನೆತನಗಳನ್ನು ನಮ್ಮ ನಾಡನ್ನು ಕಟ್ಟಿ, ಮೆರೆದು, ಆಳ್ವಿಕೆ  ನಡೆಸಿದವರಾಗಿದ್ದಾರೆ.


    ಶ್ರೇಷ್ಠ ರಾಜ ಮನೆತನಗಳು ನಮ್ಮ ನಾಡನ್ನು ಆಳಿದಂತೆ ಬೇರೆಲ್ಲೂ ಆಳ್ವಿಕೆ ನಡೆಸಲಿಲ್ಲ. ಜೈನ ಯತಿವರ್ಯರಾದ ಕೂಡಕುಂದಾಚಾರ್ಯರು, ಮಾಧ್ವಯತಿಗಳಾದ ಮಧ್ವಾಚಾರ್ಯರು, ಸಾಮಾಜಿಕ ಸಮಾನತೆಗಾಗಿ ದುಡಿದ ಬಸವಣ್ಣನವರು ಬೇರೆ ಬೇರೆ ಮತಗಳ ಆಚಾರ್ಯರುಗಳು ಇಲ್ಲಿ ನೆಲೆಸಿ ಇರಲಿಲ್ಲವೇ ಜೊತೆಗೆ ಧರ್ಮ ಪ್ರಚಾರ ಮಾಡ್ಡಿದ್ದೆಲ್ಲವೂ ಇಲ್ಲಿಂದಲೇ .


    ಕನ್ನಡದ ಶ್ರೇಷ್ಠ ಸಾಹಿತ್ಯ ನಿರ್ಮಾತೃ ಎಂದು ಕರೆಸಿಕೊಂಡ ಪಂಪ, ರನ್ನ, ಲಕ್ಷ್ಮಿಪತಿ, ಜನ್ನ, ಷಡಕ್ಷರಿ, ಮುದ್ದಣ್ಣ , ದಾಸರಾದ ಪುರಂದರದಾಸರಿದ್ದ ನಾಡಿದು. 
    ತಾಯೇ, ನಿನ್ನ ಬಸಿರು ಹೊಟ್ಟೆ ಚಿನ್ನದ ಗಣಿಯಾಗಿದ್ದು ಅಲ್ಲಿ ವಿದ್ಯಾವಂತರಿಂದ ನಿರ್ಮಿತವಾದ ಹಂಪಿ, ಬೇಲೂರು ಹಳೇಬೀಡು ಇವೆಲ್ಲವೂ ಎಷ್ಟು ಸುಂದರ ಮಯವಾಗಿದ್ದವು ಶ್ರವಣಬೆಳಗೊಳ,ಕಾರ್ಕಳ ಮುಂತಾದ ಪ್ರದೇಶದ ವಾಸ್ತು ಶಿಲ್ಪದ ಶ್ರೇಷ್ಟತೆಯನ್ನು ಕನ್ನಡ ನಾಡು ಹೊಂದಿದೆ .

Watch video about Geography: https://youtu.be/giHrSF6pu-8


    ನಮ್ಮ ಕನ್ನಡ ನಾಡಿನಲ್ಲಿ ಇಲ್ಲದ ಶಿಲ್ಪ ಕಲೆಗಳಿಲ್ಲ ನಿನ್ನ ಹಳೆಯ ಘತದ ವೈಭವವನ್ನು ಶ್ರೇಷ್ಠ ವಾಸ್ತುಶಿಲ್ಪದ ಕಲ್ಲುಗಳೆ ಹೇಳುತ್ತವೆ ಅದರೊಂದಿಗೆ ನಾವು ತಿಳಿಯದ ಶ್ರೇಷ್ಠತೆಯನ್ನು ಬಾಯಾರಿಕೆಯ ಮೂಲಕ ತೀರಿಸು ನಮಗೆ ತಿಳಿಸು ಎಂದಿದ್ದಾರೆ. 
    ಹೊಸತಿನ ವೀಣೆ ಕಿನ್ನರಿಯಲ್ಲಿ ನಿನ್ನ ಬಗೆಗಿರುವ ಶ್ರೇಷ್ಠತೆಯ ಹಾಡುಗಳನ್ನು ಉಕ್ಕಿಸು, ಆರ್ಯರು ಇಲ್ಲಿಗೆ ಬಂದಿಲ್ಲ ಅವರ ಭಾಷೆಯು ನಮಗೆ ದಕ್ಕಿಲ್ಲ. ಕನ್ನಡ ಭಾಷೆ ಶ್ರೇಷ್ಠ ಎಂದು ಎಲ್ಲರಿಗೂ ತಿಳಿಯುವಂತಾಗಲಿ ಅದೇ ರೀತಿ ನಿನ್ನ ಪಡಿಯಚ್ಚನ್ನು ಮಾಡು  ಎಂದು. 


    ಹಿಂದಿನಿಂದ ಬೆಳೆದು ಬಂದಿರುವ ನಿನ್ನ ಭಾಷೆಯನ್ನು ಎಲ್ಲರಿಗೂ ಪ್ರಚಾರ ಮಾಡಿ ತಲುಪಿಸು ಇದರಿಂದ ನಿನ್ನಲ್ಲಿ ಹೊಸತನ್ನು ತರುವ ಮೂಲಕ ಮರೆವು ಎಂಬುದನ್ನು ದೂರ ತಳ್ಳು ಅದರ ಮೂಲಕ ನಮ್ಮಲ್ಲಿ ಹೊಸ ತನ ತರಲು ಸಾಧ್ಯ. 


    ನಿನ್ನ ನಡೆ ನುಡಿಗೆ ಮುಪ್ಪು ಎಂದಾದರೂ ಬರುವುದು ಸಾಧ್ಯವೇ? ಯಾವುದು ಪ್ರಾಣಿ ತನ್ನಲ್ಲೇ ಸುಗಂಧವಿದ್ದರೂ ಬೇರೆ ಪ್ರಾಣಿಗಳ ಬಳಿ ಸುಗಂಧಕ್ಕೆ ಹೋಗುವಂತೆ ಕನ್ನಡವು ತನ್ನ ಶ್ರೇಷ್ಠತೆ ಹೊಂದಿದೆ ಆದರೂ ನಾವು  ಭಾಷೆ ಬಳಿ ಹೋಗುತ್ತಿಲ್ಲವೇ ಎಂದು ಪರ ಭಾಷೆಯ ಹುಡುಕುತ್ತಿದ್ದಾರೆ. 

    ಕನ್ನಡಕ್ಕೆ ಕಸ್ತೂರಿಯನ್ನು ಹೊಸ ಸಿರಿಯನ್ನು ಸುಗಂಧವನ್ನು ಕೊಡು ಇವೆಲ್ಲವನ್ನು ನಾವಾದರೂ ಕೊಡುವುದಕ್ಕೆ ನಮಗೆ ಶಕ್ತಿಯನ್ನಾದರೂ ಕೊಡು 
    ಹೊಸ ಸುಗಂಧ ಶ್ರೇಷ್ಠತೆ ನೀಡುವ ಮೂಲಕ ಜಗತ್ತಿನಾದ್ಯಂತ ಕನ್ನಡ ನಾಡಿನ ಹೆಸರನ್ನು ಹಬ್ಬಿಸು. ನೀನು ಪಡೆದಿರುವ ಕಥೆಯು ಕಡಲಿನ ಕೊರತೆಗಳಂತೆ ನಿನ್ನ ಶ್ರೇಷ್ಠತೆ ಯಾವತ್ತಿಗೂ  ಹೊಟ್ಟೆಯಂತೆ ಬತ್ತುವುದಿಲ್ಲ .


    ಸೋಲು ಗೆಲುವು ಎಂಬುದು ಇರುತ್ತದೆ ಅದರಲ್ಲಿ ನೀನು ಸೋತೆ ಆದರೆ ಸೋತರು ನೀನೆ ಗೆದ್ದೆ. ಇದರಿಂದ ನಿನ್ನ ಅಳಿವು ಎಂಬುದೇ ಸಾಧ್ಯವಿಲ್ಲ ಏಕೆಂದರೆ ಸಾವಿರ ಸಾವಿರ ವರ್ಷಗಳ ಕಾಲ ನಿನ್ನ ಅಭಿವೃದ್ಧಿ ಬೆಳೆಯುತ್ತಾ ಸಾಗುತ್ತಿದೆ. 


   ನಮ್ಮ ಬಾಹುಬಲದಲ್ಲಿ, ಮನೋಬಲದಲ್ಲಿ ನಿನ್ನನ್ನು ಗೆಲ್ಲಿಸುವಂತೆ ಬಲವನ್ನು ನೀಡು, ಅದರಿಂದ ನಿನ್ನ ಹಿರಿಮೆ ಕುಗ್ಗದಂತೆ ಮಾಡದೆ ಇಗ್ಗುವಂತೆ ಮಾಡಿ ನಿನ್ನ ಹೆಸರನ್ನು ಬೆಳೆಸುವ ಮೂಲಕ ನಿನ್ನ ನುಡಿಯು ನಾಶವಾಗದಂತೆ ಕಾಲದಿಂದ ಕಾಲಕ್ಕೆ ಸಾಗುವಂತೆ ಮಾಡಲು  ನಮಗೆ ಶಕ್ತಿ ನೀಡು. 


    ನಮ್ಮ ಎದೆಯಂತೆ ತಾಯಿ ನೀನು ಬಲಿಷ್ಠವಾಗು ನಮ್ಮನ್ನು ಬಲಿಷ್ಠ ಮಾಡು ಹಾಗೆಯೇ ಎಲ್ಲರ ಬಾಯಲ್ಲೂ ನೀನು ನೆಲೆಸಿರುವಂತೆ ಇರು ಹಾಗೆಯೇ ಕನಸಿನಲ್ಲಿರುವಂತೆ ಇರು, ಇದನೊಂದು ನೀನು ಮಾಡು ಎಂದು ನಿನ್ನ ಕೋರುತ್ತಿದ್ದೇನೆ
     ನಿನ್ನ ಕೀರ್ತಿ ಜಗತ್ತಿನ ಕೀರ್ತಿಯಾಗುವಂತೆ ಮಾಡಿ ನಮಗೆ ತೋರು ಎಂದಿದ್ದಾರೆ.

1 thought on “Kannadigara Tayi ಕನ್ನಡಿಗರ ತಾಯಿ ಪದ್ಯದ ಭಾವಾರ್ಥ”

  1. Pingback: - rvwritting

Leave a Comment

Your email address will not be published. Required fields are marked *

Scroll to Top