
Kurudu Kaanchana – ಕವಿ ಕಾವ್ಯ ಪರಿಚಯ
Kurudu Kaanchana – ದ.ರಾ.ಬೇಂದ್ರೆ; ಅಂಬಿಕಾತನಯದತ್ತ ఎంబ ಕಾವ್ಯನಾಮದಿಂದ ಪ್ರಸಿದ್ದತೆಯನ್ನು ಪಡೆದವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಹೊಸಗನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರು, ಭಾರತ ಸರಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ (೧೯೬೮) ‘ನಾಕುತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ (೧೯೭೪) ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪ್ರಶಸ್ತಿ (೧೯೫೯) ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ (೧೯೬೬) ಗೌರವ ಡಾಕ್ಟರೇಟನ್ನು ಪಡೆದ ವರಕವಿ ಇವರು.
ಗರಿ, ನಾದಲೀಲೆ, ಸಖೀಗೀತ, ಗಂಗಾವತರಣ, ಅರಳು ಮರಳು, ಉಯ್ಯಾಲೆ ಇವೆಲ್ಲಾ ಕೆಲವು ಮಹತ್ವದ ಕವನ ಸಂಕಲಗಳು. ನಾಟಕ, ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಂಶೋಧನೆ. ಆತ್ಮ ಚರಿ ತ್ರೆ, ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿಯೂ ಬೇಂದ್ರೆಯವರ ಕೊಡುಗೆ ಮಹತ್ವದ್ದಾಗಿದೆ.
ಕುರುಡು ಕಾಂಚಾಣ ಪದ್ಯದ ಭಾವಾರ್ಥಈ ಕವನವನ್ನು ದ. ರಾ. ಬೇಂದ್ರೆಯವರ ನಾದಲೀಲೆ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿದೆ. ಉಳ್ಳವರು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ ಎಂಬ ವ್ಯಾಖ್ಯಾನ ನೀಡಿದ ಕಾರ್ಲ್ ಮಾರ್ಕ್ಸ್ ಇದೇ ಅರ್ಥದಲ್ಲಿ ಕುರುಡು ಕಾಂಚಾಣ ಎಂಬ ಕವಿತೆಯೂ ತನ್ನ ಆಶಯವನ್ನು ಒಳಗೊಂಡಿದೆ.
samsang galaxy Tab: wonderful features once u look out:https://amzn.to/3Bst6U2
ಕುರುಡು ಕಾಂಚಾಣ ಕುಣಿಯುತಲಿತ್ತು।
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ॥
ಕುರುಡು ಕಾಂಚಾಣ
ಇಲ್ಲಿ ಆರ್ಥಿಕ ಅಸಮಾನತೆಯ ನೇರ ಪರಿಣಾಮ ಹೇಗಿದೆ, ಧನಿಕರ ಅಮಾನವೀಯತೆಯ ಕಣ್ಣಿಗೆ ಹಣ ಎಂಬುದು ಎಷ್ಟು ಪ್ರಾಶಸ್ತ್ಯ ನೀಡಿದೆ ಇದರಿಂದ ವರ್ಗ ಸಂಘರ್ಷಗಳು ಬೆಳೆದು ಮನುಷ್ಯನ ನಡುವೆ ಅಸಮಾನತೆ ಬೆಳೆದು ಸಾಮಾಜಿಕ ಅಸಮಾನತೆ ಸೃಷ್ಟಿಯಾಗಿ ದಮನಿತರ ಮೇಲೆ ಹಣವಂತರು ಇನ್ನೂ ಶೋಷಕರಾಗಿ ಬೆಳೆಯುತ್ತಾ ಸಾಗುತ್ತಾರೆ. ಇದರಿಂದಾಗಿ ಸಾಮಾಜಿಕ ಸಮಾನತೆಯ ಜೊತೆಗೆ ಆರ್ಥಿಕ ಸಬಲದ ತರಬೇಕು ಎಂಬುದನ್ನು ಕವಿತೆ ಹೇಳುತ್ತದೆ.
ಕುರುಡಾಗಿರುವ ಹಣ ಅಂದರೆ ಆರ್ಥಿಕ ಅಸಮಾನತೆಯೂ ಶೋಷಕರ ಪರವಾಗಿ, ಶೋಷಿತರ ವಿರುದ್ಧವಾಗಿದ್ದು, ಅವರ ನಿರ್ಗತಿಕತನ, ದಯನೀಯತೆಯ ಲಾಭ ಪಡೆದು ಅವರನ್ನು ಶೋಷಿಸುತ್ತಿರುವವರಿಗೆ ಮಾನವೀಯತೆಯ ಕಣ್ಣಿಲ್ಲದೆ ತುಳಿಯುತ್ತಾ ಶೋಷಿಸುತ್ತಿದ್ದಾರೆ.
ಬಾಣಂತಿಯೆಲುಬಿನಾ
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
ಬಡತನದಿಂದ ನಗುತ್ತಿರುವವರಲ್ಲೂ, ಬಾಣಂತಿಗೆ ಸಿಗಬೇಕಾದ ಹಾರೈಕೆ ಏನು ಸಿಗದೆ ಸಾಬೂನಿನಂತೆ ಬಿಳಿಚಿರುವಂತಾಗಲು ಹಣದ ಭೂತ ಹಣವಂತರ ಕಾಲಿಗೆ ಗೆಜ್ಜೆಯಾಗಿ ಅವರಿಗೆ ಸಿಗಬೇಕಾದ ಸೌಕರ್ಯ ಸಿಗದಿರುವವಂತೆ ಮಾಡಿದೆ.
ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ:
ಹಣದ ಕ್ರೌರ್ಯ ಯಾವ ಮಟ್ಟಿಗೆ ಇದೆ ಎಂದರೆ ಸಣ್ಣ ಕಂದಮ್ಮಗಳು ಯಾವ ಸೌಕರ್ಯ, ಆಹಾರ ದೊರೆಯದೆ ಸಾಯುವ ಸ್ಥಿತಿಗೆ ತಲುಪಿ, ನರಳಿ ಸಾಯುವಂತಾಗಲು ಧನಿಕರು ಅಥವಾ ಹಣವಂತರು ಯಾವುದೇ ಸಹಾಯ ನೀಡದೆ ಇದ್ದಾಗ ಅವು ಅಸುನೀಗುವ ಸ್ಥಿತಿಯ ಕ್ರೌರ್ಯವನ್ನು ಇಲ್ಲಿ ತೋರಿಸಲಾಗಿದೆ.
ಬಡವರ ಒಡಲಿನ
ಬಡ ಬಾನಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತೋ;
ಆರ್ಥಿಕ ಅಸಮಾನತೆಯಿಂದ ಬಡತನದ ಕೂಪಕ್ಕೆ ಸಿಲುಕಿದ್ದಾರೆ. ಬಡವರ ಶ್ರಮ, ಬಡವರ ದುಡಿಮೆ, ಇವುಗಳಿಂದ ಏನು ತಮಗೆ ದೊರಕಲಿಲ್ಲವಾದಾಗ ಅವರ ಒಡಲೊಳಗೆ ಏರುತ್ತಿರವ ಜ್ವಾಲೆಯನ್ನು ಹಣವಂತರು ತಮ್ಮ ಕೈಯಲ್ಲಿ ಪಂಜಿನಂತ ಹಿಡಿದಿದ್ದಾರೆ. ಆ ಪಂಜಿನ ಮೂಲಕವೂ ಶೋಷಿಸುತ್ತಿದ್ದಾರೆ.
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ
ದುಂಬಿದಂತುಧೋ ಉಧೋ ಎನ್ನುತಲಿತ್ತೋ;
ಬಡವರ ದರಿದ್ರ ಸ್ಥಿತಿ, ದಹಿನಯ ಸ್ಥಿತಿ, ಅವಿವೇಕವನ್ನು ಮೂಡಿಸಿರುವ ಕುರುಡು ಕಾಂಚಾಣವು ಹಣವಂತರು, ಶೋಷಕರು ಅನ್ಯಾಯದ ದಾರಿಯನ್ನು ಹಿಡಿಯುವ ಮೂಲಕ ಬಡವರ ಬಡತನದ ಪರಿಸ್ಥಿತಿಯನ್ನು ತಿಳಿಯಲಿಲ್ಲದಾಗಿದೆ.
ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೋ:
ಕುರುಡು ಕಾಂಚಾಣವು ನಿರ್ಗತಿಕರ, ಬಡವರ ಶ್ರಮವನ್ನು ಬೇಡುತ್ತದೆ. ಅದರ ಲಾಭವನ್ನು ಧನಿಕರಿಗೆ ನೀಡುವಂತಾಗಿದೆ. ಇದರಿಂದ ಅವರ ಶ್ರಮ, ಪರಿಶ್ರಮಕ್ಕೆ ಯಾವುದೇ ಬೆಲೆ ಸಿಗದಂತಾಗದೆ, ಉಳ್ಳವರ ಖಜಾನೆ ಅಥವಾ ಹಣೆಯನ್ನು ಸೇರುವಂತಾಗಿದೆ.
ಗುಡಿಯೊಳಗೆ ಗಣಣ. ಮಾ
ಹಡಿಯೊಳಗ ತನನ. ಅ೦-
ಗಡಿಯೊಳಗ ಝಣಣಣ ನುಡಿಗೊಡುತಿತ್ತೋ;
ಹಣವು ಎಲ್ಲೆಲ್ಲಿ ಹೇಗೆಗೆ ವರ್ತಿಸುತ್ತದೆ ಎಂದರೆ ದೇವಾಲಯದ ಒಳಗೆ ಆರ್ಥಿಕ ಅಸಮಾನತೆಯ ಪ್ರದರ್ಶನ, ಮಹಡಿಯಲ್ಲಿರುವ ಹಣವಂತರು ಬಡವರ ಬಗೆಗೆ ಹೊಂದಿರುವ ಅಸಮಾನತೆ, ಅಂಗಡಿಯಲ್ಲೂ ಹಣವಂತರಿಗೆ ಎಲ್ಲವೂ ದೊರಕುತ್ತದೆ ಆದರೆ ಬಡವನ ಪಾಲಿಗೆ ಯಾವುದು ದೊರಕುತ್ತಿಲ್ಲ ಏಕೆಂದರೆ ಕುರುಡಾಗಿರುವ ಕಾಂಚಾಣದ ಪ್ರಭಾವ ಬೀರಿರುವುದಾಗಿದೆ.
ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾರ ಬಿತ್ತೊ, ಹೆಗಲಲಿ ಎತ್ತೋ.
ಹಣವಂತರು, ಧನಿಕರು ಹಣದ ಕ್ರೋಡೀಕರಣದಿಂದ ವರ್ಗಭೇದಗಳು ಹೆಚ್ಚಾಗಿ ಅಸಮಾನತೆಯು ಹೋಗಲಾಗಿ ಮತ್ತೆ ಬಡವರು ಹಣವಂತರ ಬಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
ಕವಿತೆಯು ಶೋಷಕರ ಅಥವಾ ಹಣವಂತರು ಹೇಗೆ ಅಮಾನವೀಯ ದೃಷ್ಟಿಯಿಂದ ಶೋಷಿತರ ಶೋಷಣೆಯನ್ನು ಮಾಡುತ್ತಾರೆ ಎಂಬುದನ್ನು ತಿಳಿಸುತ್ತದೆ.