
KWIN City – ಜ್ಞಾನ, ಆರೋಗ್ಯ, ನಾವಿನ್ಯತೆಯೊಂದಿಗೆ ವ್ಯಾಪಾರದ ಭೂದೃಶವನ್ನು ಮರು ವ್ಯಾಖ್ಯಾನಿಸುವ ಮಹತ್ವಕಾಂಕ್ಷಿ ಯೋಜನೆ KWIN ಸಿಟಿಯಾಗಿದೆ.
KWIN City
ಇದು ಡಾಬಸ್ ಪೇಟೆ- ದೊಡ್ಡಬಳ್ಳಾಪುರ ನಡುವಿನ ಆಯಕಟ್ಟಿನ ಜಾಗದಲ್ಲಿ 5800 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರವಾಗಿದೆ. ಇದು ಬೆಂಗಳೂರು- ಹುಬ್ಬಳ್ಳಿ – ಮುಂಬೈಗೆ ಸಂಧಿಸುವಂತಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 648ಗಳು ಇದರ ಬಳಿಯೇ ಇರುವುದರಿಂದ ಇದರ ಅಭಿವೃದ್ಧಿಗೆ ಹೆಚ್ಚು ಹೊತ್ತು ಸಿಗಲಿದೆ.
KWIN ಸಿಟಿ ಇದು ಬೆಂಗಳೂರು ಮತ್ತು ತುಮಕೂರು ನಡುವಿನ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಜೊತೆಗೆ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟಿರುವುದರಿಂದ ಇನ್ನೂ ಅಭಿವೃದ್ಧಿ ಕಾರ್ಯಕ್ರಮಗಳು ವೇಗವನ್ನು ಪಡೆದುಕೊಳ್ಳಲಿವೆ. KWIN Cityಯ ಲಕ್ಷಣಗಳು* ಇದು 5,800 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದೆ. ಇದು ನಾಲ್ಕು ಮುಖ್ಯ ಅಂಗಗಳ ಮೇಲೆ ಅಭಿವೃದ್ಧಿ ಹೊಂದಲಿದೆ. ಅವು ಜ್ಞಾನ, ಆರೋಗ್ಯ, ನಾವಿನ್ಯತೆ ಮತ್ತು ಸಂಶೋಧನೆ. ಇದು ಯೋಜನಾಬದ್ಧವಾಗಿ ನಿರ್ಮಾಣಗೊಳ್ಳುತ್ತಿರುವುದರಿಂದ ಸಾರಿಗೆ ವ್ಯವಸ್ಥೆಯ ಸಮಸ್ಯೆಗಳಿರುವುದಿಲ್ಲ. ಇಲ್ಲಿ ನೀರು, ವಿದ್ಯುತ್ ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಸೃಜನಾತ್ಮಕ ಮತ್ತು ಜೀವನ ಪದ್ಧತಿ ಸುಸ್ಥಿರತೆಯಿಂದ ಕೂಡಿರುತ್ತದೆ.
Sony Camera: https://amzn.to/47HlN7a
KWIN ನಗರವು ವ್ಯಾಪಾರ ಪರಿಸರವನ್ನು ಮರುರೂಪಿಸುತ್ತದೆ ಇದಕ್ಕಾಗಿ 4 ಅಂಗಗಳನ್ನು ಗುರುತಿಸಿದೆ ಇದರ ಮೂಲಕ ಆರ್ಥಿಕ ಪ್ರಗತಿಯು ವೇಗ ವರ್ಗಗೊಳ್ಳುತ್ತದೆ ಅವು
1.ಜ್ಞಾನ
2.ಆರೋಗ್ಯ
3.ನಾವಿನ್ಯತೆ
4.ಸಂಶೋಧನೆ. ಇಲ್ಲಿನ ಕ್ವೀನ್ ನಗರವು ನವೀನತೆ ಮತ್ತು ಜ್ಞಾನದ ತಳಹದಿಯ ಮೇಲೆ ಅಭಿವೃದ್ಧಿ ಹೊಂದುವ ಮೂಲಕ ಇದು ಜ್ಞಾನಾಧಾರಿತ ಉಪಕ್ರಮಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಂಯೋಜಿಸುವುದರೊಂದಿಗೆ ಒಳ್ಳೆಯ ವಾತಾವರಣವನ್ನು ನಿರ್ಮಿಸಲು ಸಹಾಯಕವಾಗುತ್ತದೆ.
ನಾಲ್ಕು ಅಂಗಗಳು
1. ಜ್ಞಾನ – Knowledge – ರಾಷ್ಟ್ರೀಯ ಅಂತರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಂತೆ ಆಧುನಿಕ ಪಠ್ಯಕ್ರಮ ಹೊಂದಿರುವ ಪ್ರಧಾನ ಶಿಕ್ಷಣ ಕೇಂದ್ರದ ಸ್ಥಾಪನೆ. ಯುಜಿಸಿ ನಿಯಮದಂತೆ ಕ್ಯಾಂಪಸ್ಗಳ ನಿರ್ವಹಣೆಯಲ್ಲಿ 500 ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆಕರ್ಷಿಸಲು, ನಿಯಮಗಳನ್ನು ಸಾಕಾರಗೊಳಿಸಲು ಇದರಿಂದ ಸಾಧ್ಯವಾಗುತ್ತದೆ.
2. ಆರೋಗ್ಯ – Wellbeing – ಇಲ್ಲಿ ಜೀವ ವಿಜ್ಞಾನದ ಪಾರ್ಕ್ ಹೊಂದಿರಲಿದೆ. ಇದನ್ನು ಏಷ್ಯಾದ ಪ್ರಮುಖ ವೈದ್ಯಕೀಯ ಕೇಂದ್ರವಾಗಿ ಮಾಡುವುದರ ಜೊತೆಗೆ ಭವಿಷ್ಯದ ದೃಷ್ಟಿಯಿಂದ ವೃತ್ತಿಪರರನ್ನು ನಿರ್ಮಾಣ ಮಾಡುವುದರ ಜೊತೆಗೆ ದೇಶದ ಮತ್ತು ಅಂತರಾಷ್ಟ್ರೀಯವಾಗಿ ವೈದ್ಯಕೀಯ ವಿಭಾಗದಲ್ಲಿ ಕರ್ನಾಟಕದ ಸ್ಥಾನಮಾನವನ್ನು ಹೆಚ್ಚಿಸುವುದಾಗಿದೆ.
3. ನಾವಿನ್ಯತಾ – ಇದು ಜೀವ ವಿಜ್ಞಾನ ಭವಿಷ್ಯದ ಸಂಚಾರ, ಸೆಮಿಕಂಡಕ್ಟರ್, ಆಧುನಿಕ ಪರಿಕರಗಳು, ಆಧುನಿಕ ವೈಮಾಂತರಿಕ್ಷ ,ತಯಾರಿಕೆ, ರಕ್ಷಣಾ ವಿಭಾಗಗಳು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಇದರೊಂದಿಗೆ ಜಾಗತಿಕ ಬೇಡಿಕೆಗಳನ್ನು ಪೂರೈಸುವ ಪಾತ್ರವನ್ನು ಕರ್ನಾಟಕವು ತಿಳಿದು ಅದನ್ನು ಪೂರೈಸಬಹುದು.
4. ಸಂಶೋಧನೆ – ಜೈವಿಕ ಔಷಧ ಮತ್ತು ವೈಜ್ಞಾನಿಕ ಸಂಶೋಧನೆ ಪ್ರಯೋಗ ಕೇಂದ್ರಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳ ಸ್ಥಾಪನೆ. ಇದರೊಂದಿಗೆ ಜಾಗತಿಕವಾದ ಜ್ಞಾನಾಧಾರಿತ ಆರ್ಥಿಕತೆಗೆ ಬೇಕಾದ ಪ್ರಕಟಣೆಗಳು, ಸೆಮಿನಾರ್ ಗಳು, ಉಪನ್ಯಾಸಗಳ ಮೂಲಕ ಕೊಡುಗೆಯನ್ನು ನೀಡಲಾಗುತ್ತದೆ.
ಇದು ಯಾವುದೇ ನಗರ ಪಟ್ಟಣಗಳ ಮೂಲಕ ಅನುಕೂಲಕರವಾದ ಸಂಪರ್ಕವನ್ನು ಪರಿಗಣಿಸಿ ನಿರ್ಮಿಸಲಾಗುತ್ತಿದೆ. ಜೊತೆಗೆ ನಗರದೊಳಗೆ ತಡೆರಹಿತ ಸಂಪರ್ಕವಿರುತ್ತದೆ ಇದಕ್ಕೆ ಕೇಂದ್ರೀಯ ಮೊನೋ ರೈಲು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಗುಣಾತ್ಮಕವಾದ ಸುಸ್ಥಿರವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತಹ ವ್ಯವಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ.
ಸುಸ್ತಿರವಾದ ಜೀವನಕ್ಕಾಗಿ ಮಕ್ಕಳ ಬೆಳವಣಿಗೆಗೆ, ನೀರಿನ ಮೌಲ್ಯ, ಹಸಿರು ಕಾರಿಡಾರ್, ನಡಿಗೆಯವರಿಗೆ, ಸೈಕ್ಲಿಂಗ್, ಸಾರ್ವಜನಿಕ ಸಾರಿಗೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಗಳ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ 40% ಜಾಗವನ್ನು ಉದ್ಯಾನಗಳಿಗೆ ಸೀಮಿತ ಪಡಿಸಲಾಗಿದೆ, ನಗರದೊಳಗೆ ತೆರೆದ ಸ್ಥಳಗಳು ಮತ್ತು ವಿವಿಧ ಕಾಲುವೆ ವ್ಯವಸ್ಥೆಗಳೊಂದಿಗೆ ಸಂಪರ್ಕ ಹೊಂದಿದ 10 ಲಕ್ಷಕ್ಕೂ ಹೆಚ್ಚು ಕಾಲುವೆಗಳ ನಿರ್ಮಾಣ. ಸಾಂಸ್ಕೃತಿಕವಾಗಿಯೂ ಮಹತ್ವ ನೀಡುವ ಮೂಲಕ ವೈವಿಧ್ಯಮಯವಾದ ಜನರನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಲಕ್ಷಾಂತರ ಉದ್ಯೋಗಗಳ ನಿರ್ಮಾಣಕ್ಕೂ ಇದು ಸಾಧ್ಯವಾಗಿಸುತ್ತದೆ.