Navu Hudugiyare Heege……Poem summary ನಾವು ಹುಡುಗಿಯರೇ ಹೀಗೆ….2.

Navu Hudugiyare heege....
Navu Hudugiyare heege….ನಾವು ಹುಡುಗಿಯರೇ ಹೀಗೆ…
Navu hudugiyare heege - ಪ್ರತಿಭಾ ನಂದಕುಮಾರ್ - Prathibha Nandakumar
Navu hudugiyare heege – ಪ್ರತಿಭಾ ನಂದಕುಮಾರ್ – Prathibha Nandakumar

Navu Hudugiyare Heege…..ಕವಿ ಕಾವ್ಯ ಪರಿಚಯ: ಪ್ರತಿಭಾ ನಂದಕುಮಾರ್

Navu Hudugiyare Heege…..ಪ್ರತಿಭಾ ನಂದಕುಮಾರ್ : ಲೇಖಕಿ ಪ್ರತಿಭಾ ನಂದಕುಮಾರ್ ಅವರು 1955 ಡಿಸೆಂಬರ್ 25ರಂದು ಜನಿಸಿದರು. ಮೂಲತಃ ಬೆಂಗಳೂರಿನವರು. ತಂದೆ ವಿ.ಎಸ್. ರಾಮಚಂದ್ರರಾವ್, ತಾಯಿ ಯಮುನಾಬಾಯಿ, ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ

ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವನ್ನಾಗಿಸಿಕೊಂಡಿರುವ ಕವಯತ್ರಿ, ಅವರ ಪ್ರಕಟಿತ ಪುಸ್ತಕಗಳು- ನಾವು ಹುಡುಗಿಯರೇ ಹೀಗೆ, ಈ ತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾತಾರಂ, ಅವರು ಪುರಾವೆಗಳನ್ನು ಕೇಳುತ್ತಾರೆ. ಮುನ್ನುಡಿ ಬೆನ್ನುಡಿಗಳ ನಡುವೆ, ಕಾಫಿ ಹೌಸ್, ಮುದುಕಿಯರಿಗಿದು ಕಾಲವಲ್ಲ: ಇವು ಅವರ ಕವನ ಸಂಕಲನಗಳು. ಯಾನ-ಕಥಾಸಂಕಲನ, ಆಕ್ರಮಣ- ಅನುವಾದಿತ ಕಥೆಗಳು, ಸೂರ್ಯಕಾಂತಿ- ಅನುವಾದಿತ ಡೋಗ್ರಿ ಕವನಗಳು.

ಸಾಹಿತ್ಯ ಕ್ಷೇತ್ರದ ಕೃಷಿಗಾಗಿ ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮುದ್ದಣ್ಣ ಕಾವ್ಯ ಪ್ರಶಸ್ತಿ, ಡಾ.ಶಿವರಾಮ ಕಾರಂತ ಪ್ರಶಸ್ತಿ, ಪು.ತಿ.ನ ಕಾವ್ಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಅನುದಿನದ ಅಂತರಗಂಗೆ’ ಪ್ರತಿಭಾ ನಂದಕುಮಾರ್ ಅವರ ಆತ್ಮಕಥನ.

Poem – Navu Hudugiyare Heege

ನಾವು ಹುಡುಗಿಯರೇ ಹೀಗೆ….

-ಪ್ರತಿಭಾ ನಂದಕುಮಾರ್

ಹೌದು ಕಣೆ ಉಷಾ ನಾವು ಹುಡುಗಿಯರೇ ಹೀಗೆ….

ಏನೇನೋ ವಟಗುಟ್ಟಿದರೂ

ಹೇಳಬೇಕಾದ್ದನ್ನು ಹೇಳದೆ

ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.

ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ

ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ

ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.

ಹೇಳಲೇಬೇಕು ಎನ್ನಿಸಿದ್ದನ್ನು

ಹೇಳಹೋಗಿ ಹೆದರಿ ಏನೇನೋ ತೊದಲುತ್ತೇವೆ.

ಐ ಲವ್ ಯೂ’ ಅಂತ ಹೇಳಲು ಕಷ್ಟಪಟ್ಟು

ಬೇರೆ ಏನೇನೋ ದಾರಿ ಹುಡುಕಿ

ಸಂದೇಶ ಮುಟ್ಟಿಸಲು ಹೆಣಗುತ್ತೇವೆ.

ಅದನ್ನು ಅರ್ಥ ಮಾಡಿಕೊಳ್ಳಲಾರದೆ

ಹುಡುಗರು ಕೈ ತಪ್ಪಿದಾಗ

ಮುಸುಮುಸು ಅಳುತ್ತೇವೆ.

ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ

ನಾವೇ ದುರಂತ ನಾಯಕಿಯರೆಂದು

ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.

Devaru Ruju Madidanu poem summary:https://rvwritting.com/devaru-ruju-madidanu-poem-summary-1/

ಗಂಡನಲ್ಲಿ ಅವನನ್ನು ಹುಡುಕುತ್ತೇವೆ.

ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.

ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ

ಅರಳುವುದೇ ಇಲ್ಲ ಉಷಾ….

ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪವಾಗಿ

ಕೈಗೊಂದು ಕಾಲಿಗೊಂದು ಮಕ್ಕಳಾಗಿ

ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ

See this video; https://youtu.be/D0ZI_ifeYUo?si=hGtDNrtH2k92xIs8

‘ಅವನು’ ಸಿಗುತ್ತಾನೆ.

ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ

ಅಂತ ರೋಷ ತಾಳುತ್ತೇವೆ.

ಆದರೆ ಮೇಲೆ ನಗುನಗುತ್ತಾ ಅವನ’

ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.

ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?

ನಾವು ಹುಡುಗಿಯರೇ ಹೀಗೆ….

Navu Hudugiyare Heege…..Summary

ನಾವು ಹುಡುಗಿಯರೇ ಹೀಗೆ ಪ್ರತಿಭಾ ನಂದಕುಮಾರ್ ರವರು ರಚಿಸಿರುವ ಕವಿತೆಯಾಗಿದ್ದು ಈ ಕವಿತೆಯು ಹೆಣ್ಣು ತಾನು ಒಳಗಾಗಿರುವ ಮಾನಸಿಕ ಬಂಧನ ಬಾಹ್ಯ ಬಂಧನಗಳಿಂದ ಹೇಗೆ ತಮ್ಮ ತುಮುಲಗಳನ್ನು ಮನಸ್ಸಿನಲ್ಲಿ ಅದು ಬಿಟ್ಟುಕೊಂಡು ತನ್ನ ಆಯ್ಕೆ ಸ್ವತಂತ್ರ ಸಮಾನತೆಯನ್ನು ಕಳೆದುಕೊಳ್ಳುತ್ತಿದ್ದಾಳೆ ಎಂಬುದನ್ನು ಚಿತ್ರಿಸಲಾಗಿದೆ ಜೊತೆಗೆ 70 80ರ ದಶಕದ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯನ್ನು ಈ ಕವನದ ಮೂಲಕ ಕವಯತ್ರಿ ಬಿತ್ತರಿಸುತ್ತಿದ್ದಾರೆ.

ಇಲ್ಲಿ ಇಬ್ಬರು ಹೆಣ್ಣು ಮಕ್ಕಳು ತಮ್ಮ ಭಾವನೆಗಳನ್ನು ಮಾತಾಡಿಕೊಳ್ಳುವಂತೆ ಚಿತ್ರಿಸಿದ್ದಾರೆ ಹೌದು ಕಣೆ ನಾವು ಮೊದಲಿನಿಂದಲೂ ಹುಡುಗಿಯರು ಹೀಗೆ ಇರಬೇಕು ಇದೇ ರೀತಿ ನಡೆದುಕೊಳ್ಳಬೇಕು ಎಂಬ ಚಲನೆ ಇಲ್ಲದ ಸ್ಥಿತಿಯಲ್ಲಿ ಬದಲಾವಣೆಯಾಗದಂತ ಸ್ಥಿತಿಯಲ್ಲೇ ಉಳಿದು ಬರುತ್ತಿದ್ದೇವೆ ಎಂಬುದನ್ನು ಕವಿಯತ್ರಿ ಹೇಳುತ್ತಿದ್ದಾರೆ.

ಹುಡುಗಿಯರಾಗಿ ಏನೇನೋ ಎಷ್ಟೆಷ್ಟೋ ಮಾತುಗಳನ್ನು ಮಾತಾಡಿಕೊಂಡರು ನಾವು ಏನು ಹೇಳಬೇಕೆಂದು ಅಂದುಕೊಂಡಿರುತ್ತೇವೆಯೋ ಅದನ್ನು ಹೇಳಲಿಕ್ಕೆ ಬಾಯಿಕೊಡದ ಈ ಸಮಾಜದಿಂದಾಗಿ ಎಂತಹ ಮಾನಸಿಕ ಹಿಂಸೆ ತುಮುಲಗಳನ್ನು ಅನುಭವಿಸಿ ಸಾಯುತ್ತಿದ್ದೇವೆ. ನಮ್ಮಲ್ಲಿ ರೋಮಾಂಚವೆನಿಸುವ ಪುಳಕವೆನಿಸುವ ಆಲೋಚನೆಗಳನ್ನು ಮಾಡಿಕೊಂಡರು ಅಡುಗೆ ಮನೆಯೊಳಗಿರುವ ಡಬ್ಬಿ ಗಳಲ್ಲಿ ಹಿಟ್ಟನ್ನು ಹೇಗೆ ಒತ್ತಿ ಒತ್ತಿ ಅದನ್ನು ಗಟ್ಟಿ ಮಾಡಿ ಎಲ್ಲೂ ಸೋರದಂತೆ ಮುಚ್ಚಳ ಮುಚ್ಚುತ್ತೇವೆಯೋ ಹಾಗೆಯೇ ನಮ್ಮ ಆಲೋಚನೆಗಳನ್ನು ಹೊರಗಡೆ ಹೇಳಿಕೊಳ್ಳದ ಹಾಗೆ ಜೋಪಾನವಾಗಿ ನಾವೇ ಇಟ್ಟುಕೊಳ್ಳುವಂತೆ ಈ ವ್ಯವಸ್ಥೆಯು ನಮ್ಮ ದನಿಯನ್ನು ಹಿಂಗಿಸುವ ಮೂಲಕ ಮಾಡಿದೆ.

ಈಗ ಧೈರ್ಯ ಮಾಡಿ ನಮ್ಮ ಮನಸ್ಸಿನ ಭಾವನೆಗಳನ್ನು ಹೊರ ಹೇಳಲು ಹೋದಾಗ ಈ ಸಮಾಜದ ಬಂಧನದ ಹೆದರಿಕೆಯಿಂದ ಏನು ಹೇಳಬೇಕೋ ಅದನ್ನು ಹೇಳಲಿಕ್ಕಾಗದೆ ತೊದಲುತ್ತೇವೆ.

ಇನಿಯನ ಪ್ರೀತಿಯ ಸವಿಯನ್ನು ಊಣಲು ಬಯಸಿ ಅವನಿಗೆ ಐ ಲವ್ ಯು ಎಂದು ಹೇಳಲು ತನ್ನ ಇಚ್ಛೆಯನ್ನು ಧೈರ್ಯವಾಗಿ ಹೊರಹಾಕುವಲ್ಲಿಯೂ ಸಫಲಳಾಗದೆ ಅದನ್ನು ಹೇಳಲು ಬೇರೆ ಬೇರೆ ದಾರಿ ಹಿಡಿದು ಹೇಳಲು ಹೆಣಗಾಡುತ್ತೇನೆ. ಹೇಗೋ ಅವನಿಗೆ ತನ್ನ ಇಚ್ಛೆಯನ್ನು ತನಗೆ ತಿಳಿದ ಸನ್ನೆ ಸಂಜ್ಞೆಗಳನ್ನು ಮಾಡಿದರು ಅವನಿಗೆ ಅರ್ಥವಾಗದಿರುವಾಗ ತನ್ನ ಪ್ರೀತಿಯ ಭಾಷೆ ತಿಳಿಯಲಿಲ್ಲದ್ದರಿಂದ ತನ್ನ ಬಾಳ ಸಂಗಾತಿ ಆಗಬೇಕಾದ ಅವನು ನನ್ನಿಂದ ದೂರಾದ ಎಂಬ ನೋವಿನಲ್ಲಿ ಯಾರಿಗೂ ತನ್ನ ಭಾವನೆಗಳು ತಿಳಿಯಬಾರದೆಂದು ಮುಸುಮುಸು ಅಳುವಂತೆ ಈ ವ್ಯವಸ್ಥೆಯು ನನಗೆ ಮಾಡಿದೆ.

ಕೈ ತಪ್ಪಿದ ಇನಿಯನಿಂದಾಗಿ ಮನೆಯಲ್ಲಿ ತೋರಿದ ಬೇರೊಬ್ಬನನ್ನು ಮದುವೆಯಾಗಬೇಕಾದಾಗ ನಾವೇ ಮನೆಯವರಿಗೋಸ್ಕರ ತಮ್ಮನ್ನು ತ್ಯಾಗ ಮಾಡಿಕೊಳ್ಳುತ್ತಿದ್ದೇವೆಂಬ ದುರಂತ ನಾಯಕಿಯಾಗಿ ಅವರಿವರಿಂದ ಸಾಂತ್ವನ ಅನುಕಂಪವನ್ನು ಬಯಸುವಂತೆ ಈ ಸಮಾಜ ನಮ್ಮನ್ನು ನಿರ್ಮಾಣ ಮಾಡಿದೆ.

ಮದುವೆಯಾದ ಗಂಡನಲ್ಲಿ ಕಳೆದುಕೊಂಡಿದ್ದ ಇನಿಯನನ್ನು ಹುಡುಕಲು ಮುಂದಾಗುವಲ್ಲಿ ನನ್ನ ಪ್ರೇಮ ಪ್ರೀತಿಯ ವಿಷಯ ಅವನಿಗೆ ತಿಳಿಯಬಾರದು ಎಂದು ಬಣ್ಣ ಹಚ್ಚಿ ಪಾತ್ರ ಮಾಡುವವರಂತೆ ನಾನು ನಟಿಸುತ್ತಿದ್ದೇನೆ ಇಷ್ಟೊತ್ತಿಗೆಲ್ಲ ನನ್ನ ಮನಸ್ಸಿನಲ್ಲಿ ಉಂಟಾಗಿದ್ದ ಭಾವನೆಗಳೆಲ್ಲ ಒಂದು ಹಂತಕ್ಕೆ ಬಂದು ಮರೆಯಾಗಿ ಬಿಟ್ಟಿರುತ್ತವೆ ಅವುಗಳಿಗೆ ನೀರು ಎರದು ಬೆಳೆಸುವ ಶಕ್ತಿಯು ನನ್ನಲ್ಲಿಲ್ಲ ಎಂದು ಕವಯತ್ರಿ ಹೇಳುತ್ತಾರೆ.

ಮದುವೆಯಾಗಿ ನಾಲ್ಕು ವರ್ಷಗಳು ಕಳೆದ ಮೇಲೆ ಸಂಸಾರ ಸಂತಾನದಿಂದ ನಮ್ಮ ದೇಹ ದಪ್ಪವಾಗಿ ಬಿಟ್ಟಿರುತ್ತದೆ ಅದರೊಂದಿಗೆ ಕೈಗೊಂದು ಕಾಲಿಗೊಂದು ಮಕ್ಕಳಾಗಿರುತ್ತಾರೆ ಮನೆಗೊಂದು ತರಕಾರಿ ತರಲು ಮಾರುಕಟ್ಟೆಗೆ ಹೋದಾಗ ಅಲ್ಲಿ ತಾನು ಪ್ರೀತಿಸಿದ ಇನಿಯನು ಕಂಡಾಗ ಮನದಲ್ಲೇ ನನ್ನ ಇವತ್ತಿನ ಈ ಸ್ಥಿತಿಗೆ ನೀನೇ ಕಾರಣ ಎಂದು ಕೋಪಾವೇಶದಿಂದ ಮನಸ್ಸು ಉಕ್ಕಿದರು ಅದನ್ನು ಹೊರಗಡೆ ಹೇಳಿಕೊಳ್ಳಲಿಕ್ಕಾಗದೆ ತೋರಿಸಿಕೊಳ್ಳಲಿಕ್ಕಾಗದೆ ನಗುನಗುತ್ತಾ ಅವನನ್ನು ಮಾತನಾಡಿಸದೆ ಅವನ ಹೆಂಡತಿ ಮಕ್ಕಳ ಯೋಗ ಕ್ಷೇಮವನ್ನು ವಿಚಾರಿಸುತ್ತೇವೆ. ಏಕೆಂದರೆ ನನ್ನ ಪರಿಸ್ಥಿತಿಯೇ ಅವಳ ಪರಿಸ್ಥಿತಿಯೂ ಆಗಿದೆ.

ಈ ಕವಿತೆಯಲ್ಲಿ ಹೆಣ್ಣಿನ ಅಂತರಂಗದ ಭಾವನೆಗಳು ಹೇಗೆ ಸಮಾಜದ ಬಂಧನಗಳಿಂದ ಅಸಹಾಯಕತೆಗಳಿಂದ ತನ್ನತನವನ್ನು ಕಳೆದುಕೊಂಡು ಹೆಣ್ಣು ಇರುವ ಸ್ಥಿತಿಯನ್ನು ಚಿತ್ರಿಸುತ್ತದೆ.

Leave a Comment

Your email address will not be published. Required fields are marked *

Scroll to Top