1. Parampare poem Summary – ಪರಂಪರೆ ಪದ್ಯದ ಭಾವಾರ್ಥ – 1st B.Sc – SEP – BCU

Parampare poem Summary
Parampare poem Summary

Parampare poem Summary -ವಿಜಯದಬ್ಬೆ ಬರೆದಿರುವ ಸ್ತ್ರೀ ಸಂವೇದನೆಯುಳ್ಳ ಕವಿತೆಯಾಗಿದ್ದು, ಶತಮಾನಗಳಿಂದ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾಗಿ ಸ್ತ್ರೀಯು ನಲುಗುತ್ತಿದ್ದಾಳೆ ಇದಕ್ಕೆ ನಮ್ಮ ಪರಂಪರೆಯಲ್ಲಿ ತುಳಿತಕ್ಕೊಳಗಾದ ಮಹಾನ್ ಮಹಿಳೆಯರನ್ನೇ ನೋಡಬಹುದು. ಆ ಹಿನ್ನೆಲೆಯಲ್ಲಿ ಈ ಪದ್ಯದವನ್ನು ನೋಡಬಹುದು.

Parampare poem Summary – Summary

ಹೇಗೆ ಸಹಿಸಿದೆ ತಾಯಿ

ಹೇಗೆ ಸಹಿಸಿದೆ?

ಇರುಳು ಹಗಲು ಎವೆ ಮುಚ್ಚದೆ

ಲಂಕೆಯ ದೆವ್ವ ಬನದಲ್ಲಿ

ಹೆದರಿ ಗೂಡಾಗಿ ಕುಳಿತು

ಕಾದ ಮೌಲ್ಯಗಳು

ಅಪಸಂಕೆಯ ಬೆಂಕಿಯಲ್ಲಿ

ಸೀದು ಕರಿಕಾಗುವಾಗ

ಹೇಗೆ ನುಂಗಿದೆ?

ತ್ರೇತಾಯುಗ ಅಥವಾ ರಾಮಾಯಣ ಕಾಲದಲ್ಲಿ ಪುರುಷಪ್ರಧಾನ ವ್ಯವಸ್ಥೆಗೆ ಸಿಕ್ಕಿದ ಸೀತೆಯು ಹೇಗೆ ನಲುಗಿದಳು, ಅದರಲ್ಲೂ ರಾವಣನ ಸ್ತ್ರೀ ವ್ಯಾಮೋಹವು ಸೀತೆಯನ್ನು ಶೋಷಣೆಗೆ ತಳ್ಳುವ ಮೂಲಕ ರಾವಣನ ಅಶೋಕವನವು ಅವಳಿಗೆ ಶೋಕವನವಾಗಿ ಒಂದು ರೀತಿ ದೆವ್ವದ ಬನದಲ್ಲಿ ಶೋಷಣೆಗೆ ಒಳಗಾಗಿ ಮೌಲ್ಯಗಳ ಅಪಶಂಕೆಯಲ್ಲಿ ಸೀತೆ ಬಿದ್ದು ಅದರಿಂದ ಇನ್ನೂ ಹೆಚ್ಚಿನ ಶೋಷಣೆಗೆ ಒಳಗಾದಳು.

see videohttps://youtu.be/aekz7HCqHxs?si=vSuLZUnRLeL8sqaP

See video; https://youtu.be/iGp-pgxKknk?si=K4XPVGno2ccwK-Pm

ಬಿಚ್ಚಬಹುದು:

ಉಟ್ಟ ಸೀರೆಯನ್ನೂ

ಕಟ್ಟಿದ ಪೇಟವನ್ನೂ,

ಬಿಚ್ಚಿ ತೋರಿಸಬಹುದೆ? ತೋರಿಸಿ ಒಪ್ಪಿಸಬಹುದೆ?

ನಮ್ಮೆಲ್ಲ ಭೂತ ವರ್ತಮಾನದ

ಸತ್ಯವನ್ನು?

ಶೋಷಣೆಯ ಯಾತನೆಗೆ ಒಳಗಾದ ಸೀತೆಯು ತನ್ನ ಮೇಲಿದ್ದ ಸೀರೆ ತಲೆಯ ಮೇಲಿದ್ದ ಪೇಟವನ್ನು ಬಿಚ್ಚಿ ಇಡಬೇಕಾಯಿತು. ರಾಣಿಯಾದವಳು ಸಾಮಾನ್ಯ ಸ್ತ್ರೀ ಆಗಿ ಮಾರ್ಪಾಡಾಗಿ ಅವಳ ಮೇಲೆ ಬಂದಿದ್ದ ಅಪನಂಬಿಕೆ ತದನಂತರದಲ್ಲಿ ಕಾಡಿಗೆ ಒಬ್ಬಂಟಿಯಾಗಿ ಹೋಗಬೇಕಾದ ಸಂದರ್ಭ ಇವೆಲ್ಲವೂ ಅವಳನ್ನು ಶೋಷಣೆಗೀಡು ಮಾಡಿತು ಆ ಸತ್ಯವನ್ನು ಇಂದು ನಾವು ಒಪ್ಪಬೇಕಾಗಿದೆ. 

ಬಾಯ್ದೆರೆದ ಭೂಮಿಯೊಳಕ್ಕೆ

ಎಲ್ಲ ಸೀತೆಯರ ಹಾಗೆ

ಸರಿಯಬಾರದು,

ನಿಮ್ಮೆಲ್ಲರ ನುಂಗಿದ

ಭೂಮಿಯ ಮೇಲೆ

ಈ ಹರಲಿಗಳ ಹೊತ್ತು

ತಿರುಗಲೇಬೇಕೆಂಬ ಸಂಕಲ್ಪ.

ಅಂದಿನ ಶೋಷಣೆಯಿಂದ ಸೀತೆ ತಾನು ಪರಿಶುದ್ಧಳು ಎಂದು ಸಾಬೀತುಪಡಿಸಲು ಮುಂದಾದ ಹಾಗೆ ಇಂದಿನ ಸ್ತ್ರೀಯರು ಮುಂದಾಗಬಾರದು. ಅಂತಹ ಶೋಷಣೆಗೆ ನಾವು ಮುಂದಾಗಬಾರದೆಂಬ ಸಂಕಲ್ಪ ಮಾಡಿಕೊಂಡು ನಾವು ಹರಲಿಗಳಾಗಬೇಕು ಎಂದಿದ್ದಾರೆ.

ಆದರೆ

ಈ ನಾಲಗೆ ನೋಟದ ಬೆಂಕಿಗೆ

ಇದು ಈಡೇ

ನಿಮ್ಮೆಲ್ಲರ ದೃಢತೆ

ಕಣ್ಣ ಬೆಳಕಾಗಿ ಬಂದು

ಈ ಮನದ ಮಲ್ಲಿಗೆಗೆ

ವಜ್ರಲೇಪವ ಬಳಿದು ಉಳಿಸಬೇಕು.

ಈಗಾಗಲೇ ಹೆಣ್ಣು ಬೇರೆಯವರ ಮಾತಿಗೆ , ಅವರ ನೋಟಕ್ಕೆ ಬೆಂದು, ಶೋಷಿಸಿಕೊಂಡು ಭೂಮಿ ಸೇರಿರುವ ಹೆಣ್ಣು ಮಕ್ಕಳಂತೆ ಮುಂದೆ ಬರುವ ಹೆಣ್ಣು ಮಕ್ಕಳು ಇಂತಹ ಶೋಷಣೆಗೆ ಒಳಗಾಗದೆ ಅವರಿಗಾದ ಶೋಷಣೆಯನ್ನು ತಿಳಿದು ಅದನ್ನು ವಜ್ರ ಲೇಪನದಂತೆ ತನ್ನ ಮನಸ್ಸಿಗೆ ಲೇಪಿಸಿಕೊಂಡಾಗ ನಾವು ಶೋಷಣೆಗೆ ಒಳಗದಿರುವ ದೃಡತೆ ಬೆಳೆಯುವಂತೆ ನಾವು ಆಗಬೇಕು ಎಂದಿದ್ದಾರೆ.

ಇಲ್ಲ ದಿನದಿನದ ಗರಗಸಕ್ಕೆ

ಕತ್ತೊಡ್ಡಿ ಸಾಕೆನಿಸಿದಾಗ

ನಿನ್ನಲ್ಲಿಗೆ ಬರುವೆ.

ಅಲ್ಲೂ ನನ್ನ ತಿವಿಯುತ್ತವೆಯೆ

ನೂರಾರು ಶೋಭ ಕಲ್ಪನೆಯರ

ಪ್ರಶ್ನೆ ಮರುಪ್ರಶ್ನೆಗಳು:

ಯಾಕೆ ಬಂದೆ ತಂಗೀ ಎನ್ನುವ ಅಕ್ಕ

ನೀನೇಕೆ ಬಂದೆ ಹೇಳು.

ಇಲ್ಲಿ ದಿನನಿತ್ಯ ನಡೆಯುವ ಶೋಷಣೆಯ ಗರಗಸಕ್ಕೆ ಸಿಕ್ಕಿ, ಅವರು ಕೂಡ ಸೀತೆಯ ಬಳಿಗೆ ಹೋಗುವಂತಾಗಿದೆ. ಅಲ್ಲಿಗೆ ಹೋದಾಗಲೂ ಅದೇ ಶೋಷಣೆಯ ಪ್ರಶ್ನೆಯ ಸುರಿಮಳೆಗಳು ನೀನೇಕೆ ಬಂದೆ ತಂಗಿ ಇಲ್ಲಿಗೆ ಎಂದು ಕೇಳುವುದೇ ಹೆಚ್ಚಿರುತ್ತವೆ ಅಥವಾ ಅಂತ ಶೋಷಣೆಗೆ ಒಳಗಾಗದೇ  ಹಿಂದೆ ಸರಿಯಲಿಕ್ಕೂ ಆಗದ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಇದ್ದಾರೆ.

ಮಗಳ ಈ ನೋವು

ನಿನಗಲ್ಲದೆ ಯಾರಿಗೆ ತಿಳಿಯುತ್ತದೆ?

ಆ ಕತ್ತಲಲ್ಲಿ

ನನ್ನಂಥ ನೀನು

ನನ್ನ ಮೈದಡವುತ್ತೀ

ಎಂಬುದೊಂದೇ ಬೆಳಕು.

ಇಂತಹ ಶೋಷಣೆಯ ನೋವಿನಲ್ಲಿ ಬಿದ್ದವರಿಗೆ ಮಾತ್ರ ಶೋಷಣೆ ಅರಿವಾಗುತ್ತದೆ. ಇಂತಹ ಶೋಷಣೆಯ ಪರಿಸ್ಥಿತಿಯನ್ನು ಎದುರಿಸಿದವರಿಗೆ ಇದು ತಿಳಿಯುತ್ತದೆ ಎಂಬ ಸಣ್ಣದೊಂದು ಬೆಳಕು ನನ್ನಲ್ಲಿ ಮೂಡಿದೆ.  ಅಂದರೆ ಸ್ತ್ರೀಯರೆಲ್ಲರೂ  ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗಿರುವವರೇ ಇದ್ದಾರೆ ಎಂದು ತಿಳಿಯುತ್ತದೆ.

ಈ ಕತ್ತಲಲ್ಲಿ

ನಿನ್ನ ಮಡಿಲಲ್ಲಿ ಮಲಗಿ

ಮತ್ತೇ ಕೇಳುತ್ತೇನೆ

ಈ ಎಲ್ಲ ಶಿಕ್ಷೆ ಯಾಕಾಗಿ?

ಇಂತಹ ಶೋಷಣೆಯ ಕತ್ತಲಲ್ಲಿ ನಿನ್ನ ಮಡಿಲಲ್ಲಿ ಮಲಗಿ ಕೇಳುತ್ತೇನೆ.  ಯಾಕಾಗಿ ಈ ಶೋಷಣೆ,  ಯಾರಿಗಾಗಿ ಈ ಶೋಷಣೆಯ ಶಿಕ್ಷೆ ಅನುಭವಿಸಬೇಕಿದೆ. ಭೂಮಿಯ ಮೇಲೆ ಹೆಣ್ಣಾಗಿ ಹುಟ್ಟಿದ್ದರಿಂದ ಇಂತಹ ಶಿಕ್ಷೆ ಅನುಭವಿಸಬೇಕೇ ಎಂದು ಕೇಳುತ್ತಿದ್ದಾರೆ.

ಕವಿತೆಯು ಶೋಷಣೆಯನ್ನು ಪರಂಪರೆಯಿಂದ  ಅನುಭವಿಸಿಕೊಂಡು ಬಂದಂತಹ, ಸೀತೆಯ ಮೂಲಕ ವರ್ತಮಾನದ ಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಇದರ ಮೂಲಕ ಸಮಾಜದಲ್ಲಿ ಸ್ತ್ರೀ ಮೇಲೆ ನಡೆಯುತ್ತಿರುವ ಶೋಷಣೆಯು ಕಡಿಮೆಯಾಗಬೇಕು ಎಂಬ ಆಶಯವನ್ನು ಒಳಗೊಂಡಿದೆ.

1 thought on “1. Parampare poem Summary – ಪರಂಪರೆ ಪದ್ಯದ ಭಾವಾರ್ಥ – 1st B.Sc – SEP – BCU”

  1. Pingback: 1. ಬ್ಲೇನ್ ಹಿಂ ಕದನ ಪದ್ಯದ ಭಾವಾರ್ಥ - Blen Heem Kadana poem summary - rvwritting

Leave a Comment

Your email address will not be published. Required fields are marked *

Scroll to Top