
Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ಷಟ್ಪಧಿಗಳು
Kannada Vyakarana – ಷಟ್ಪಧಿಗಳು
ಕನ್ನಡ ಸಾಹಿತ್ಯದಲ್ಲಿ ಕಂದಪದ್ಯ ಯಾವ ಮಟ್ಟಿಗೆ ಬಳಕೆಯಾಗಿದೆಯೋ ಅಷ್ಟರ ಮಟ್ಟಿಗೆ ಷಟ್ಪಧಿಯು ಬಳಕೆಯಾಗಿದೆ. ಹಾಗೆಯೇ ಅಷ್ಟೇ ಜನಪ್ರಿಯವು ಆಗಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಕುಮಾರವ್ಯಾಸನ “ಕರ್ನಾಟ ಭಾರತ ಕಥಾಮಂಜರಿ” ಯನ್ನು ಗಮಕದಲ್ಲಿ ಹಾಡುತ್ತಿದ್ದರು. ಇದರಿಂದ ಎಲ್ಲಾ ಗ್ರಾಮವಾಸಿಗಳಿಗೂ ಷಟ್ಪಧಿಯ ಅರಿವು ಬಂದಂತಾಗಿತ್ತು. ಇದರಲ್ಲಿ ಭಾಮಿನಿ ಷಟ್ಪದಿಯು ಬಳಕೆಯಾಗಿದೆ. ಕನ್ನಡದಲ್ಲಿ ಷಟ್ಪಧಿ ಮೊದಲು ಬಳಕೆಯಾದುದು ‘ಚಂದ್ರರಾಜನ ಮದನ ತಿಲಕದಲ್ಲಿ’ ನಂತರ ರಾಘವಾಂಕ, ಕುಮಾರವ್ಯಾಸ, ಕನಕದಾಸ ಮೊದಲಾದವರ ಕಾವ್ಯಗಳಲ್ಲಿ ಷಟ್ಪಧಿಗಳು ಬಳಕೆಯಾಗುವುದರೊಂದಿಗೆ ಶಾಸನಗಳಲ್ಲೂ ಬಳಕೆಯಾಗಿದೆ. ಉದಾ- ಚಿತ್ರದುರ್ಗ ಶಾಸನ, ಚಡಚಣ ಶಾಸನ ಮುಂತಾದವು. ಷಟ್ಪಧಿಗಳು ಕನ್ನಡ ವಿಷಯ ಜಾತಿಗಳಲ್ಲೊಂದು, ಇದರ ಲಕ್ಷಣಗಳನ್ನು 1ನೇ ನಾಗವರ್ಮ ಹೇಳಿದ್ದಾನೆ.
ಷಟ್ಪಧಿ ದೇಸಿ ಸಂಪ್ರದಾಯಕ್ಕೆ ಸೇರಿದುದಾಗಿದೆ. ಹಾಗೆಯೇ ಇದು ಕನ್ನಡ ನಾಡಿನಲ್ಲೇ ಹುಟ್ಟಿದ್ದು. ಇದು 15 ರಿಂದ 18ನೇ ಶತಮಾನದಲ್ಲಿ ಹವ್ಯಾಯುತವಾಗಿ ಬೆಳೆಯಿತು. ಷಟ್ಪಧಿಗಳಲ್ಲಿ ಎಷ್ಟೇ ವಿಧವಿದ್ದರೂ ಕನ್ನಡ ಕಾವ್ಯ ಕವಿಗಳ ಪ್ರತಿಭೆಯನ್ನು ಕನ್ನಡಿಗರಿಗೆ ಅನಾವರಣ ಮಾಡಿಸಿದ್ದು ೨ ಷಟ್ಪಧಿಗಳು. ಅವು ಭಾಮಿನಿ ಷಟ್ಪಧಿ ಮತ್ತು ವಾರ್ಧಕ ಷಟ್ಪಧಿ.
ಭಾಮಿನಿ ಷಟ್ಪಧಿಯಲ್ಲಿ ರಚಿತವಾದ ಕಾವ್ಯ – ಕರ್ನಾಟ ಭಾರತ ಕಥಾ ಮಂಜರಿ.
ವಾರ್ಧಕ ಷಟ್ಪಧಿಯಲ್ಲಿ ರಚಿತವಾದ ಕಾವ್ಯ – ಹರಿಶ್ಚಂದ್ರ ಕಾವ್ಯ.
ಲಕ್ಷಣಗಳು
* ಷಟ್ಪಧಿಯಲ್ಲಿ ೬ ವಿಧಗಳಿವೆ
* ಷಟ್ಪಧಿಯು 6 ಸಾಲಿನಿಂದ ಕೂಡಿರುವ ಪದ್ಯಜಾತಿಯಾಗಿದೆ.
* ಷಟ್ ಅಂದರೆ ೬ ಸಾಲು – ಇದನ್ನು ೩ ಸಾಲುಗಳ ೨ ಭಾಗ ಮಾಡಿ ಪೂರ್ವಭಾಗ ಮತ್ತು ಉತ್ತರಭಾಗ ಎಂದು ಕರೆಯಲಾಗುತ್ತದೆ.
* 1, 2, 4, 5ನೇ ಪಾದಗಳು ಚಿಕ್ಕದಾಗಿದ್ದು, ಪರಸ್ಪರ ಸಮವಾಗಿರುತ್ತವೆ. ಹಾಗೆಯೇ 3 ಮತ್ತು 6ನೇ ಸಾಲುಗಳು ಸಮವಾಗಿರುತ್ತವೆ.
* 3 ಮತ್ತು 6ನೇ ಸಾಲಿನ ಕೊನೆಯಾಕ್ಷರ ಹ್ರಸ್ವವಾಗಿದ್ದರೂ ಗುರುವಾಗಿರುತ್ತದೆ.
See this one: https://youtu.be/pdanm8EnDuk?si=hRcNE5eJ_SO4ibrd
ಉದಾ- ಹರಿಶ್ಚಂದ್ರಕಾವ್ಯ
U U – U. – U. – – U. – UU – U
ಅನುವುಳ್ಳ ಬುದ್ಧಿಯಂ ಕಂಡೆನೆಂದತಿಮೆಚ್ಚಿ
UUU – – U UU – U – – U –
ತನಗೆ ತಾ ತೂಪಿರಿದುಕೊಂಡು ಕಣ್ಮುಚ್ಚು ತಂ
U U U – – U – U U – U U U U U U U U U U U UUU UU-
ಮನದೊಳುತ್ಪತ್ತಿ ಮಾತ್ರವ ಮಂತ್ರಿಸಿದ ಜಲವನೊಸೆದುದೆಸೆದೆಸೆಗೆ ತಿಳಿದು
U U U – – U – U U – U U UU –
ವಿನಯದಿಂ ನೋಡನೋಡಲು ದಿಕ್ಕು ಧರಣಿ ತೆ
UU – U – U – – – U U U U UU
ಕ್ಕನೆ ತೀವಿ ನಿಂದ ನಾನಾ ಪಕ್ಷಿ ಮೃಗ ಕುಲಕೆ
U U UUUUU UUUUU – U – – U – – U – – U U U –
ಕೊನೆವೆರಳನಲುಗಿಬತಲೆದೂಗಿಕೈವೀಸಿದಂ ದೇಶಮಂಗೋಳಿಡಿಸಲು
ಷಟ್ಪಧಿ ಮೊದಲುವಾಂಶಗಣವಾಗಿದ್ದು ನಂತೆ 12ನೇ ಶತಮಾನದಿಂದೀಚೆಗೆ ಮಾತ್ರಾ ಛಂದಸ್ಸಾಗಿ ಬದಲಾಯಿತು.
ಷಟ್ಪಧಿಯಲ್ಲಿ 6 ವಿಧಗಳಿವೆ.
ರಾಘವಾಂಕ ವೀರೇಶ ಚರಿತೆಯಲ್ಲಿ ಉದ್ದಂಡ ಷಟ್ಪಧಿಯನ್ನು ಬಳಸಿದ್ದಾನೆ.
1 ಶರ ಷಟ್ಪಧಿ
2 ಕುಸುಮ ಷಟ್ಪಧಿ
3 ಭೋಗ ಷಟ್ಪಧಿ
4 ಭಾಮಿನೀ ಷಟ್ಪಧಿ
5 ಪರಿವರ್ದಿನಿ ಷಟ್ಪಧಿ
6 ವಾರ್ಧಕ ಷಟ್ಪಧಿ
1. ಶರ ಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು.
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ.
* 1, 2, 4, 5ನೇ ಸಾಲನಲ್ಲಿ 4 ಮಾತ್ರೆಯ 2 ಗಣಗಳು ಮತ್ತು 3, 6 ನೇ ಸಾಲಿನಲ್ಲಿ 4 ಮಾತ್ರೆಯ 3 ಗಣಗಳು ಬರುತ್ತವೆ.
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ.
* ಒಟ್ಟು 60 ಮಾತ್ರೆಗಳಿಂದ ಕೂಡಿರುತ್ತದೆ.
* 4/4
4/4
4/4/4+ಒಂದು ಗುರು
4/4
4/4
4/4/4+ಒಂದು ಗುರು = 56+4= 60ಮಾತ್ರೆಗಳು.
ಉದಾ-
– UU U U U U
ಕ್ಲೇಶದ/ವಿಧವಿಧ
– U U UU U U
ಪಾಶದ /ಹರಿದುವಿ
– U U – U U UUUU –
ಲಾಸದಿ /ಸತ್ಯವ /ತಿಳಿವನ /ವೇ
– UU U U U U
ಈಶನ /ಕರುಣೆಯ
– U U U U U U
ನಾಶಿಸು/ವಿನಯದಿ
– U U – U – – U U U
ದಾಸನ ಹಾಗೆಯೇ ಗೀ ಮನವೆ.
2. ಕುಸುಮ ಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು.
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ.
* 1, 2, 4, 5ನೇ ಸಾಲಿನಲ್ಲಿ 5 ಮಾತ್ರೆಯ 2 ಗಣಗಳು ಮತ್ತು 3, 6 ನೇ ಸಾಲಿನಲ್ಲಿ 3 ಮಾತ್ರೆಯ 3 ಗಣಗಳು ಬರುತ್ತವೆ.
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ.
* ಒಟ್ಟು 74 ಮಾತ್ರೆಗಳಿಂದ ಕೂಡಿರುತ್ತದೆ.
* 5/5
5/5
5/5/5+ಒಂದು ಗುರು
5/5
5/5
5/5/5+ಒಂದು ಗುರು = 70+4= 74ಮಾತ್ರೆಗಳು.
U UU – – U –
ಬಿಸಿಲಿಗಂ/ಗಾಳಿಗಂ
U U – U UU UUU
ನಸುಬಾಡೆ/ತನುಲತಿಕೆ
U U U – U U U U U – U – –
ಕುಸುಮ ಕೋ/ಮಳೆ ಹೊಸೆದ /ಹೂವಿನಂ/ತೆ
U U U U U U U U UU
ಕುಸುಮಶರ/ನೊಡನೆ ರತಿ
U U U – – U –
ಯೊಸೆದು ಬ/ರ್ಪಂತೆ ರಂ
U U – U U U U – UU UU U –
ಜಿಸಿ ರಾಮ/ನೊಡನೆ ಜಾ/ನಕಿ ನಡೆದ/ಳು.
– U U U U U U U U
ನಾಡುಮನ/ಸಿಜನೊಲವಿ
– U U U – U –
ನಾಡುವೆಡೆ/ಸಂತತಂ
– U UU UUU UU U U – U –
ಬೀಡು ರತಿ/ಪತಿಗೆ ಸತ/ತ ನಿಧಾನ/ವು.
3. ಭೋಗ ಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು.
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ.
* 1, 2, 4, 5ನೇ ಸಾಲಿನಲ್ಲಿ 3 ಮಾತ್ರೆಯ 4 ಗಣಗಳು ಮತ್ತು 3, 6 ನೇ ಸಾಲಿನಲ್ಲಿ 3 ಮಾತ್ರೆಯ 6 ಗಣಗಳು ಬರುತ್ತವೆ.
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ.
* ಒಟ್ಟು 88 ಮಾತ್ರೆಗಳಿಂದ ಕೂಡಿರುತ್ತದೆ.
* 3/3/3/3
3/3/3/3
3/3/3/3/3/3+ಒಂದು ಗುರು
3/3/3/3
3/3/3/3
3/3/3/3/3/3+ಒಂದು ಗುರು = 84+4= 88ಮಾತ್ರೆಗಳು.
UUU – U – U – – U
ತಿರುಕ/ನೋರ್ವ/ನೂರ/ ಮುಂದೆ
U U U U – – U – U
ಮುರುಕು/ಧರ್ಮ/ಶಾಲೆ/ಯಲ್ಲಿ
UUU – U – U UUU – U – U –
ಒರಗಿ/ರುತ್ತ/ಲೊಂದು/ಕನಸ /ಕಂಡ/ನೆಂತ/ನೆ
UUU – U – U U UU
ಪುರದ/ರಾಜ/ಸತ್ತ/ನವಗೆ
UUU – U – U UU U
ವರಕು/ಮಾರ /ರಿಲ್ಲ/ದಿರಲು
UU U – U U U U – U – U U U U –
ಕರಿಯ/ಕೈಗೆ/ ಕುಸುಮ/ಮಾಲೆ/ಯಿತ್ತು/ ಪುರದೊ/ಳು.
ಮೆರೆಯುತ್ತಿದ್ದ ಭಾಗ್ಯವೆಲ್ಲ
ಹರಿದು ಹೋಯಿತೆನುವ ತಿರುಕ
ಮರಳಿ ನಾಚಿ ಪೋಗುತಿದ್ದ ಮರುಳನಂತೆಯೇ
ಧರೆಯ ಭೋಗವನ್ನು ಮೆಚ್ಚಿ
ಪರವ ಮರೆತು ಕೆಡಲು ಬೇಡ
ಧರೆಯ ಭೋಗ ಕನಸಿನಂತೆ ಕೇಳು ಮಾನವಾ