Part – 15 ಕನ್ನಡ ವ್ಯಾಕರಣ #Kannada Vyakarana – ಗಣ – ಅಂಶಗಣ ಛಂದಸ್ಸು

Kannada Vyakarana - Amshagana Chandassu
Kannada Vyakarana – Amshagana Chandassu

Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ‌. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ಅಂಶಗಣ ಛಂದಸ್ಸು 

Kannada Vyakarana – ಅಂಶಗಣ ಛಂದಸ್ಸು

ಕನ್ನಡ ಛಂದಸ್ಸಿನಲ್ಲಿ ಅಕ್ಷರಗಳಿಂದ ಗಣವಿಭಾಗ ಮತ್ತು ಮಾತ್ರೆಗಳಿಂದ ಕೂಡಿದ ಮಾತ್ರಾ ಗಣಗಳನ್ನು ನೋಡಿದ್ದೇವೆ. ಅದೇ ರೀತಿಯಾಗಿ ಇಲ್ಲಿ ಅಂಶಗಳ ಆಧಾರದ ಮೇಲೆ ಗಣವಿಭಾಗ ಮಾಡುವುದನ್ನೇ ಅಂಶಗಣ ಎಂದು ಕರೆಯುವರು. ಇಲ್ಲಿ ಗುರುವಿಗೆ ಒಂದು ಅಂವೆಂದು, ೨ ಲಘುಗಳು ಒಟ್ಟಿಗೆ ಬಂದಾಗ ಅವನ್ನು ಒಂದು ಅಂಶವೆಂದು ಮಾರ್ಪಡಿಸಿಕೊಳ್ಳಲಾಗುತ್ತದೆ.  

 ದ್ರಾವಿದ ಭಾಷೆಗಳಲ್ಲಿ ದೇಶೀಯವಾದ ಹಾಡಿನ ಮಟ್ಟುಗಳು ಜಾತಿ ಎನಿಸಿವೆ. ಜಾತಿ ಛಂದಸ್ಸಿಗೆ ಮೂಲ ಮಾಪಕವಾದ ಅಕ್ಷರವನ್ನು ಅಂಶವೆಂದೂ ಅಂದರೆ ವಿಶಿಷ್ಟ ರೀತಿಯ ಗಣಗಳಿಗೆ ಅಂಶಗಣವೆಂದೂ ಹೆಸರು ಕೊಟ್ಟವರು ಬಿ.ಎಂ. ಶ್ರೀಯವರು. ಇಲ್ಲಿ ಅಂಶ ಎಂದರೆ ಜಾತಿ ಛಂದಸ್ಸಿನ ಪದ್ಯ ಪಾದಗಳ ಗಣಗಳಲ್ಲಿ ತಾಳಲಯಗಳು ಸರಿಯಾಗಿ ಹೊಂದಿಕೊಳ್ಳಲು ಮಾತ್ರಾ ಪರಿಮಾಣ ಹಿಗ್ಗಿ ಅಥವಾ ಕುಗ್ಗಿ ಹೊಂದಿಕೆಯಾಗಲು ಅನುವಾಗುವ ಅಕ್ಷರ. 

ಇದರಲ್ಲಿ ೩ ವಿಧಗಳಿವೆ

1. ಬ್ರಹ್ಮಗಣ – 2 ಅಂಶಗಳು

2. ವಿಷ್ಣುಗಣ – 3 ಅಂಶಗಳು

3. ರುದ್ರಗಣ – 4 ಅಂಶಗಳು.

ಲಕ್ಷಣಗಳು

* ಮೊದಲನೆಯ ಅಂಶ ಗುರು ಅಥವಾ 2 ಲಘುಗಳಿಂದ ಕೂಡಿರಬೇಕು

* ನಂತರದ ಅಂಶಗಳಲ್ಲಿ ಗುರು, ಲಘು, ಬಂದರೂ ಅದನ್ನು ಒಂದೊಂದು ಅಂಶವೆಂದು ಪರಿಗಣಿಸಲಾಗುತ್ತದೆ.

ಉದಾ – 1. ಬ್ರಹ್ಮಗಣ – ೨ ಅಂಶಗಳು

 –  U         U UU

ಐದು.       ಚಮ.ಚ

2. ವಿಷ್ಣುಗಣ

  –  U  –            UUU  –

ಆಂತರ್ಯ  ‌‌‌‌        ಕನವರಿಸ್

3. ರುದ್ರಗಣ

   –   U   –  U                   

ಮಾದುರ್ಯಂಗೆ

UU  – UU

ಕನ.ಕಾಂಬರ

See this: https://youtu.be/AyXZaXQL6lE?si=AcplczDmsSdYYBNT

ಅಂಶಗಣದ ಛಂದಸ್ಸುಗಳು

1.ಸಾಂಗತ್ಯ –

ಚಂಪೂ, ತ್ರಿಪದಿ, ರಗಳೆ, ಷಟ್ಪಧಿ ಮೊದಲಾದ ಛಂದೋರೂಪಗಳ ನಂತರ ಸಾಂಗತ್ಯ ಪ್ರಕಾರವು ಕನ್ನಡದಲ್ಲಿ ಸುಧೀರ್ಘವಾದ ಇತಿಹಾಸವನ್ನು ಹೊಂದಿದೆ. ಇಲ್ಲಿ ಸು 200ಕ್ಕೂ ಹೆಚ್ಚು ಕವಿಗಳು ಬಂದಿದ್ದಾರೆ. ಸಾಂಗತ್ಯವು ಆಧುನಿಕ ಕನ್ನಡದಲ್ಲಿಯೂ ಬಳಕೆಯಲ್ಲಿದೆ. ಇದೊಂದು ದೇಶೀಯ ಮಟ್ಟಾಗಿದ್ದು, ಅಂಶಗಣ ಛಂದಸ್ಸಿಗೆ ಸಂಬಂಧಿಸಿದೆ. ಹಾಗೂ ತುಂಬಾ ಸರಳ ಮತ್ತು ಸೊಗಸಾದ ಸ್ವರದ ಏರಿಳಿತಗಳನ್ನು ಅಳವಡಿಸಿಕೊಂಡಿರುವುದರಿಂದ ಹಾಡುಗಬ್ಬಗಳಿಗೆ ಒಳ್ಳೆಯ ಜಾತಿಯಾಗಿದೆ. ಸಾಂಗತ್ಯ ಸಾಹಿತ್ಯಕ್ಕೆ ಸಂಬಂಧಿಸಿದ ಮೊದಲ ಕೃತಿ – ದೇವರಾಜ ಎಂಬುವವನು 1410ರಲ್ಲಿ ಬರೆದ “ಸೊಬಗಿನ ಸೋನೆ” ರಚನೆಯನ್ನು ಮಾಡಿರುವುದು. ನಂತರ ಕನಕದಾಸ, ರತ್ನಾಕರವರ್ಣಿ, ನಂಜುಂಡ, ಪದ್ಮರಸ, ತಿರುಮಲಾರ್ಯ ಮೊದಲಾದ ಕವಿಗಳು ಸಾಂಗತ್ಯ ಪ್ರಕಾರದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಹಾಗೆ 16ನೇ ಶತಮಾನವನ್ನು ಸಾಂಗತ್ಯದ ಸುವರ್ಣಯುಗ ಎಂದು ಕರೆಯಲಾಗುತ್ತದೆ. 

ಸಾಂಗತ್ಯದ ಲಕ್ಷಣಗಳು

* 4 ಪಾದಗಳಿಂದ ಕೂಡಿದೆ

* 1 ಮತ್ತು 3ನೇ ಪಾದಗಳು,  2 ಮತ್ತು  4ನೇ ಪಾದಗಳು ಪರಸ್ಪರ ಸಮವಾಗಿರುತ್ತವೆ. 

* 1 ಮತ್ತು 3 ನೇ ಪಾದದಲ್ಲಿ ತಲಾ 4 ವಿಷ್ಣುಗಳು ಬರುತ್ತವೆ.

* 2 ಮತ್ತು 4ನೇ ಪಾದದಲ್ಲಿ 2 ವಿಷ್ಣುಗಳು ಅದರ ಮುಂದೆ ಬ್ರಹ್ಮಗಣ ಬರುತ್ತದೆ. 

* ಆದಿಪ್ರಾಸ ನಿಯತವಾಗಿರುತ್ತದೆ.

U U U U UU  – U   UUU  –   UUU –

ಉದಯಗಿ/ರಿಯ ಮೇಲೆ/ಮೆರೆವ ಭಾ/ನುವಿಗೆ ಮ

UU  –  –  U U –   –      –  U

ತ್ತಿದಿರಾದ/ಪ್ರತಿಸೂರ್ಯ/ನಂತೆ

U U U –    –  U  –    –  UU – U   –

ಪದುಳಿದು/ತ್ತುಂಗ ಸಿಂ/ಹಾಸನ/ವೇರಿ ದೇ

 U U  –    U U U –    –  UU U

ಹದಕಾಂ/ತಿ ಮೆರೆಯೆ ಪ್ರ/ಜ್ವಲಿಸಿ

 – U U  U U  –    –   U U –   U –   –   U

ಬಿನ್ನಹ ಗುರುವೆ ಧ್ಯಾನಕೆ  ಬೇಸರಾದಾಗ 

 – U   –  U U     –    U   –    U

ನಿನ್ನ ನಾದಿಯ ಮಾಡಿಕೊಂಡು

–  U U U  U    –  U   UU U – U U U U

ಕನ್ನಡದೊಳಗೊಂದು ಕಥೆಯ  ಪೇಳುವೆನದು

 – –   U   –  U – U    U   –

ನಿನ್ನಜ್ಞೆ ಕಂಡನನ್ನೊಡೆಯಾ

Read this one: https://rvwritting.com/part-14-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b5%e0%b3%8d%e0%b2%af%e0%b2%be%e0%b2%95%e0%b2%b0%e0%b2%a3-kannada-vyakarana-%e0%b2%97%e0%b2%a3-%e0%b2%85%e0%b2%95%e0%b3%8d%e0%b2%b7/

ತ್ರಿಪದಿ ಛಂದಸ್ಸು

ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಮುಖ ಛಂದೋರೂಪವಾಗಿದೆ. ನಮಗೆ ದೊರೆತ ಮೊದಲ ಛಂದೋರೂಪವೂ ಹೌದು. ಇದು ನಮಗೆ ಮೊದಲು ದೊರೆತಿದ್ದು ಬಾದಾಮಿಯಲ್ಲಿ. ಇದನ್ನೇ ಕಪ್ಪೆಅರಭಟ್ಟನ ಶಾಸನ ಎಂದು ಕರೆಯಲಾಗುತ್ತದೆ. ಇದು ಕೂಡ ದೇಸಿ ಮಟ್ಟಿನ ಛಂದಸ್ಸಾಗಿದ್ದು ಅಂಶ ಗಣಾಧಾರಿತವಾಗಿದೆ. 

ಲಕ್ಷಣಗಳು

* ತ್ರಿಪದಿಯು 3 ಸಾಲಿನ ಪದ್ಯವಾಗಿದೆ.

* ಇಲ್ಲಿ ಹನ್ನೊಂದು ಗಣಗಳಿರುತ್ತವೆ. 

* ಇದರ ಗಣವಿಭಾಗ

ವಿ/ವಿ/ವಿ/ವಿ

ವಿ/ಬ್ರ/ವಿ/ವಿ

ವಿ/ಬ್ರ/ವಿ

ಉದಾ- 

 –   UU  –  U   –    U    –  U   –   U     –

ಸಾಧುಗೆ /ಸಾಧು ಮಾ/ಧುರ್ಯಂಗೆ /ಮಾಧುರ್ಯಂ

–  –  U  UUU UUUU UU –  –

ಬಾಧಿಪ್ಪ/ಕಲಿಗೆ /ಕಲಿಯುಗ /ವಿಪರೀತನ್

  – U U –   –      UU- U

ಮಾಧವ/ನೀತನ್ /ಪೆರನಲ್ಲ

ಅಕ್ಕರ ಛಂದಸ್ಸು 

ಅಕ್ಕರ ಪದ್ಯದಲ್ಲಿ ನಾಲ್ಕು ಪಾದಗಳಿದ್ದು ಎಲ್ಲಾ ಪಾದಗಳು ಸಮವಾಗಿರುತ್ತವೆ. ಪ್ರತಿ ಪಾದದಲ್ಲಿಯೂ ಕ್ರಮವಾಗಿ ಬ್ರಹ್ಮಗಣ, ವಿಷ್ಣುಗಣ, ಕೊನೆಯಲ್ಲಿ ರುದ್ರಗಣ ಇರುತ್ತದೆ. 

ಇದರಲ್ಲಿ ಗಣಗಳ ಆಧಾರದ ಮೇಲೆ 5 ವಿಧಗಳನ್ನು ಮಾಡಲಾಗಿದೆ. 

1. ಪಿರಿಯಕ್ಕರ – 7 ಗಣಗಳು

2. ದೊರೆಯಕ್ಕರ – 6 ಗಣಗಳು

3. ನಡುವಕ್ಕರ – 5 ಗಣಗಳು

4. ಎಡೆಯಕ್ಕರ – 4 ಗಣಗಳು

5. ಕಿರಿಯಕ್ಕರ – 3 ಗಣಗಳು.

ಉದಾ- ಪಿರಿಯಕ್ಕರ

  –  U UU U U  – U U –  U U –  U  –    –    –    –    –    –  U –

ಬೀರ ದಳವಿಯ ನನ್ನಿಯ ಚಾಗದ ಶಾಸನಂ ಚಂದ್ರಾರ್ಕಾ  ತಾರಂಬರಂ

1 thought on “Part – 15 ಕನ್ನಡ ವ್ಯಾಕರಣ #Kannada Vyakarana – ಗಣ – ಅಂಶಗಣ ಛಂದಸ್ಸು”

  1. Catalina Heading

    I’ve been working with freelancers for over nine years now.

    One of the biggest things I want businesses to know about working with freelancers is how much time and money they can save by hiring freelancers for projects.

    Whether you’re a multi-level corporation or a small start-up, chances are, you could benefit from using freelance work.

    The details here: https://saloof.com/how

Leave a Comment

Your email address will not be published. Required fields are marked *

Scroll to Top