Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ.ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ.
Kannada Vyakarana – ಸಂಧಿಗಳು
ಒಂದು ಭಾಷೆಯಲ್ಲಿ ಹೊಸ ಪದಗಳನ್ನು ಸೃಷ್ಠಿಸಬೇಕಾದರೆ ಅವುಗಳಿಗೆ ಒಗ್ಗುವಂತಹ ನಿಯಮಗಳನ್ನು ಕೂಡ ಅನುಸರಿಸಬೇಕಾಗುತ್ತದೆ. ಇದರಿಂದ ಭಾಷೆಯಲ್ಲಿ ಪದಗಳ ಜೋಡಣೆ ಸಾಧ್ಯವಾಗುತ್ತದೆ. ಹಾಗೆ ಹೊಸ ಪದಗಳನ್ನು 4 ವಿಧದಲ್ಲಿ ಸೃಷ್ಠಿಸಬಹುದು. ಅವು
1. ಸಂಧಿಗಳು
2.ಸಮಾಸಗಳು
3.ತದ್ದಿತಾಂತಗಳು
4. ಕೃದಂತಗಳು
ಸಂಧಿ ಎಂದರೇನು?
ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಸೇರುವುದಕ್ಕೆ ಸಂಧಿ ಎಂದು ಕರೆಯುತ್ತಾರೆ. ಸಂಧಿಪದಗಳನ್ನು ಪೂರ್ವ ಪದ ಮತ್ತು ಉತ್ತರಪದ ಎಂದು ವಿಭಾಗಿಸಲಾಗುತ್ತದೆ. ಈ ರೀತಿ ವಿಭಾಗಿಸಿಕೊಂಡರೆ ಸಂಧಿ ಕಾರ್ಯ ನಡೆಯಲು ಸುಲಭವಾಗುತ್ತದೆ. ಅಂದರೆ ಪೂರ್ವಪದ+ಉತ್ತರಪದ=ಸಂಧಿಪದ ಎಂದು ವಿಭಾಗಿಸಲಾಗುತ್ತದೆ.
ಸಂಧಿಗಲ್ಲಿ 2 ವಿಧ
1. ಕನ್ನಡ ಸಂಧಿಗಳು
2. ವ್ಯಂಜನ ಸಂಧಿಗಳು. ಈ ರೀತಿಯ ವಿಭಾಗ ಕ್ರಮವನ್ನು ಮಾಡಲಾಗಿದೆ ಏಕೆಂದರೆ ಕನ್ನಡದಲ್ಲಿ ಹೆಚ್ಚಿನ ಸಂಸ್ಕ್ರತ ಪದಗಳು ಬಳಕೆಯಾಗುವುದರಿಂದ ಈ ರೀತಿಯ ವಿಭಾಗ ಕ್ರಮ ನೋಡಬಹುದು.
ಸಂಧಿ ಕಾರ್ಯದಲ್ಲಿ ಭಾಗವಹಿಸುವ ಅಕ್ಷರಗಳನ್ನು ಆಧರಿಸಿ 2 ವಧಗಳನ್ನು ಮಾಡಲಾಗಿದೆ.
೧. ಕನ್ನಡ ಸ್ವರ ಸಂಧಿ
೨. ಕನ್ನಡ ವ್ಯಂಜನ ಸಂಧಿ.
See this link : https://amzn.to/48okv0j
Kannada Vyakarana -ಕನ್ನಡ ಸ್ವರ ಸಂಧಿಗಳು
ಇಲ್ಲಿ ಕನ್ನಡ ಪದಗಳ ಮುಂದೆ ಕನ್ನಡ ಪದಗಳು ಸೇರಿದಾಗ ಅವು ಕನ್ನಡ ಸಂಧಿಗಳೇ. ಹಾಗೆಯೇ ಕನ್ನಡ ಪದಗಳ ಮುಂದೆ ಸಂಸ್ಕ್ರತ ಪದಗಳು ಸೇರಿ ಸಂಧಿ ಆದಾಗ ಅವನ್ನು ಕನ್ನಡ ಸಂಧಿಗಳೆಂದೇ ಕರೆಯಲಾಗುತ್ತದೆ.
ಇದರಲ್ಲಿ ೨ ವಿಧ
೧. ಲೋಪ ಸಂಧಿ
೨. ಆಗಮ ಸಂಧಿ
ಲೋಪ ಸಂಧಿ –
ಸ್ವರದ ಮುಂದೆ ಸ್ವರ ಬಂದು ಸಂಧಿಯಾದಾಗ ಪೂರ್ವ ಪದದ ಕೊನೆಯಾಕ್ಷರ ಲೋಪವಾದರೆ ಅಥವಾ ಬಿಟ್ಟುಹೋದರೆ ಅದನ್ನು ಲೋಪಸಂಧಿ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ –
೧. ಮಾತು+ಇಲ್ಲ=ಮಾತಿಲ್ಲ.
(ಉ). (ಇ) = ಉ ಲೋಪವಾಗುತ್ತದೆ.
೨. ಬೇರೆ+ಒಬ್ಬ= ಬೇರೊಬ್ಬ
(ಎ) (ಒ) ಇಲ್ಲಿ ಎ ಲೋಪವಾಗುತ್ತದೆ. ಏನಾದುದು, ಊರೂರು, ನೀರಿಲ್ಲ, ಊರಲ್ಲಿ, ದೇವರಿಂದ, ಹಣದಾಸೆ, ಉಸಿರಾಟ, ದ್ವೇಷಿಸು, ಹಾಗಲ್ಲ, ಒಂದೆರಡು, ತುಂಬಿರುವ, ದಿಕ್ಕಾಗಿ, ಹಿಡಿದೆಳೆದು, ಕಾಡಿಗೆ, ಅವನಿಗಿಲ್ಲ, ಏನೇನು, ನಿನ್ನೊಟ್ಟಿಗೆ, ಅವನಾರು.
see this link: https://rvwrittingblog.blogspot.com/2023/12/kali-river.html
ಆಗಮ ಸಂಧಿ
ಸ್ವರದ ಮುಂದೆ ಸ್ವರ ಬಂದು ಸಂಧಿಯಾಗಿ ಪೂರ್ವ ಪದದ ಕೊನೆಯ ಅಕ್ಷರ ಲೋಪವಾದರೆ, ಆ ಸಂಧಿ ಪದದ ಅರ್ಥ ಏನಾದರೂ ಕೆಡುವಂತಿದ್ದರೆ, ಆಗ ಹೊಸದಾದ ‘ಯ’ ಅಥವಾ ‘ವ’ ಎಂಬ ವ್ಯಂಜನಾಕ್ಷರಗಳು ಬರುತ್ತವೆ. ಅವನ್ನು ಆಗಮ ಸಂಧಿ ಎನ್ನುವರು.
ಉದಾ – ಮರವನ್ನು =ಮರ+ಅನ್ನು
ಚಳಿಯಿಂದ=ಚಳಿ+ಇಂದ
ಆವೂರು=ಆ+ವೂರು
ಇದರಲ್ಲಿ ೨ ವಿಧ
೧. ಯಕಾರಾಗಮ ಸಂಧಿ
ಪೂರ್ವ ಪದದ ಅಂತ್ಯದಲ್ಲಿ ಸ್ವರಗಳಲ್ಲಿನ ಅ, ಇ, ಈ, ಎ, ಏ, ಐ ಗಳು ಇದ್ದು ಎದುರುಗಡೆ ಅಥವಾ ಉತ್ತರಪದದಲ್ಲಿ ಯಾವುದೇ ಸ್ವರವಿದ್ದರೂ ಅದನ್ನು ಯಕಾರಾಗಮಸಂಧಿ ಎಂದು ಕರೆಯಲಾಗುತ್ತದೆ.
ಉದಾ- ಬ+ಎಂದನು= ಬಾಯೆಂದನು.
ಗಾಳಿ+ಅನ್ನು = ಗಾಳಿಯನ್ನು
ಕೆರೆಯಲ್ಲಿ=ಕೆರೆ+ಅಲ್ಲಿ. ಮಳೆಯಿಂದ, ನಿನ್ನೆಯಿಂದ, ಗಿರಿಯನ್ನು, ಹುಡುಗಿಯಲ್ಲಿ.
ವಕಾರಾಗಮ ಸಂಧಿ
ಪೂರ್ವ ಪದದ ಅಂತ್ಯದಲ್ಲಿನ ಉ,ಊ,ಓ ಸ್ವರಗಳಿದ್ದು ಎದುರುಗಡೆ ಯಾವುದೇ ಸ್ವರವಿದ್ದರೂ ಅದು ‘ವ’ಕಾರವಾಗುತ್ತದೆ. ಇದನ್ನೆ ವಕಾರಾಗಮ ಸಂಧಿ ಎಂದು ಕರೆಯಲಾಗುತ್ತದೆ.
ಉದಾ- ಗುರು+ಅನ್ನು=ಗುರುವನ್ನು
ಮಗು+ಇಗೆ=ಮಗುವಿಗೆ
ಪೂ+ಅನ್ನು=ಪೂವನ್ನು
ಹಸುವನ್ನು, ಹೂವಿಂದ,
ಕನ್ನಡ ವ್ಯಂಜನ ಸಂಧಿಗಳು
೧. ಆದೇಶ ಸಂಧಿ
ಸಂಧಿಕಾರ್ಯ ನಡೆಯುವಾಗ ಉತ್ತರಪದದ ಮೊದಲಕ್ಷರದ ವ್ಯಂಜನದ ಬದಲಿಗೆ ಇನ್ನೊಂದು ವ್ಯಂಜನ ಬಂದು ಸೇರಿದರೆ ಅದನ್ನು ಆದೇಶ ಸಂಧಿ ಎಂದು ಕರೆಯಲಾಗುತ್ತದೆ.
ಉದಾ-
ಮಳೆಗಾಲ=ಮಳೆ+ಕಾಲ
ಕಂಬನಿ=ಕಣ್+ಪನಿ, ಮೈದೊಳೆ
ಆದೇಶ ಸಂಧಿ ಕೆಲವು ವಿಶಿಷ್ಟತೆಗಳು
* ಉತ್ತರ ಪದದ ಮೊದಲ ಅಕ್ಷರ ವರ್ಗಾಕ್ಷರದಲ್ಲಿನ ಯಾವುದೇ ಅಕ್ಷರ ಬಂದರೂ ಅದೇ ವರ್ಗದ ಮೂರನೆ ಸಾಲಿನ ಅಕ್ಷರ ಬರುವುದು
ಉದಾ- ಮಳೆಗಾಲ=ಮಳೆ+ಕಾಲ ಇಲ್ಲಿ ಉತ್ತರಪದದ ಮೊದಲ ಅಕ್ಷರ ಕ ವರ್ಗದಿಂದ ಬಂದಿದೆ ಅದಕ್ಕೆ ಅದೇ ವರ್ಗದ ಮೂರನೇ ಸಾಲಿನ ಅಕ್ಷರ ಗ ಬರುತ್ತದೆ.
ಬೆಟ್ಟದಾವರೆ= ಬೆಟ್ಟ+ ತಾವರೆ
* ಉತ್ತರ ಪದದ ಆದಿಯಲ್ಲಿರುವ ಪ, ಬ, ಮ ವ್ಯಂಜನಾಕ್ಷರಗಳು ಇದ್ದಾಗ ‘ವ’ ಕಾರವು ಸಂಧಿ ಪದದಲ್ಲಿ ಆದೇಶವಾಗಿ ಬರುತ್ತದೆ. ಇದನ್ನು ಆದೇಶ ಸಂಧಿ ಎನ್ನಲಾಗುತ್ತದೆ.
ಉದಾ – ಬೆಮರ್ವನಿ = ಬವರ್+ಪನಿ. ಇಲ್ಲಿ ಪ ಅಕ್ಷರಕ್ಕೆ ಬದಲಾಗಿ ವ ಅಕ್ಷರವು ಬಂದಿದೆ. ಕಡುವೆಳ್ಪು, ಮೆಲ್ವಾತು, ಎಳವಳ್ಳಿ.
* ಆದೇಶ ಸಂಧಿಯಲ್ಲಿ ಪೂರ್ವಪದದ ಕೊನೆಯಲ್ಲಿ ವ್ಯಂಜನಾಂತ್ಯವಾಗಿದ್ದು, ಉತ್ತರಪದದ ಆರಂಭದಲ್ಲಿ ‘ಸ’ ವ್ಯಂಜನಾಕ್ಷರ ಬಂದಾಗ ಅದಕ್ಕೆ ಆದೇಶವಾಗಿ ಚ, ಜ ಗಳು ಸಂಧಿಯಾಗುವಾಗ ಆದೇಶವಾಗಿ ಬರುತ್ತವೆ. ಇದನ್ನು ಆದೇಶ ಸಂಧಿ ಎಂದು ಕರೆಯಲಾಗುತ್ತದೆ.
ಉದಾ- ಇಂಚರ= ಇನ್+ಸರ. ಇಲ್ಲಿ ಉತ್ತರಪದದ ಸ ಅಕ್ಷರಕ್ಕೆ ಪದಲಾಗಿ ಚ ಅಕ್ಷರ ಬಂದಿದೆ.
ಮುಂಜೆರಗು, ಇರ್ಚ್ಛಾಸಿರ.
ಸಂಸ್ಕ್ರತ ಸಂಧಿಗಳು
ಎರಡು ಸಂಸ್ಕ್ರತ ಪದಗಳು ಸೇರಿ ಸಂಧಿಯಾದರೆ ಅದು ಸಂಸ್ಕ್ರತ ಸಂಧಿ ಎಂದು ಕರೆಯಲಾಗುತ್ತದೆ.
ಉದಾ- ವಿದ್ಯಾಭ್ಯಾಸ= ವಿದ್ಯಾ+ಅಭ್ಯಾಸ.
ಗುರೂಪದೇಶ.
ಸಂಧಿ ಕಾರ್ಯದಲ್ಲಿ ಭಾಗವಹಿಸುವ ಅಕ್ಷರಗಳ ಮೇಲೆ ೨ ರೀತಿಯಲ್ಲಿ ಸಂಧಿಗಳನ್ನು ಗುರುತಿಸಲಾಗಿದೆ.
೧. ಸಂಸ್ಕ್ರತ ಸ್ವರ ಸಂಧಿಗಳು
೨. ಸಂಸ್ಕ್ರತ ವ್ಯಂಜನ ಸಂಧಿಗಳು.
ಸಂಸ್ಕ್ರತ ಸ್ವರ ಸಂಧಿ
ಸ್ವರದ ಮುಂದೆ ಸ್ವರ ಬಂದು ಸಂಧಿ ಕಾರ್ಯ ನಡೆದರೆ ಅದನ್ನು ಸ್ವರ ಸಂಧಿ ಎಂದು ಕರೆಯಲಾಗುತ್ತದೆ.
ಇದರಲ್ಲಿ ೪ ವಿಧಗಳಿವೆ.
ಅವು – * ಸವರ್ಣ ದೀರ್ಘ ಸಂಧಿ
* ಗುಣಸಂಧಿ
* ವೃದ್ಧಿಸಂಧಿ
* ಯಣ್ ಸಂಧಿ
ಸವರ್ಣ ದೀರ್ಘ ಸಂಧಿ
ಸವರ್ಣ ಅಥವಾ ಒಂದೇ ಜಾತಿಯ ಸ್ವರಗಳು (ಅ -ಆ, ಇ – ಈ, ಉ – ಊ) ಪರಸ್ಪರ ಎದುರಾಗಿ ಅದೇ ಜಾತಿಯ ದೀರ್ಘಾಕ್ಷರಗಳು ( ಆ, ಈ, ಊ) ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘ ಸಂಧಿ ಎನ್ನಲಾಗುತ್ತದೆ.
ಉದಾ- ವಿದ್ಯಾಭ್ಯಾಸ= ವಿದ್ಯಾ+ಅಭ್ಯಾಸ. ಇಲ್ಲಿ ಆ ಎದುರಿಗೆ ಅ ಸವರ್ಣ ಅಕ್ಷರವೇ ಬಂದಿದೆ.
ಗಿರೀಶ, ಕವೀಂದ್ರ, ಸರ್ವಾಧಿಕಾರಿ, ಸತ್ಯಾಗ್ರಹ, ದಿನಾಚರಣೆ, ಪಂಚಾಕ್ಷರಿ, ರವೀಂದ್ರ, ಲಕ್ಷ್ಮೀಶ, ಗೌರೀಶ, ದೇವಾಲಯ, ಮಹಾನುಭಾವ, ಹಿಮಾಲಯ.
ಗುಣಸಂಧಿ
ಇಲ್ಲಿ ಗುಣಾಕ್ಷರಗಳು ಮುಖ್ಯ ಅವು- ಏ, ಓ, ಅರ್.
ಪೂರ್ವಪದದ ಕೊನೆಯಲ್ಲಿರುವ ಅ, ಆ ಅಕ್ಷರಗಳಿಗೆ ಇ,ಈ ಸ್ವರಗಳು ಬಂದರೆ ಅವುಗಳ ಸ್ಥಾನದಲ್ಲಿ ಏ ಸ್ವರಾಕ್ಷರವು ಬರುತ್ತದೆ. ಹಾಗೆಯೇ ಅ,ಆ ಅಕ್ಷರಗಳಿಗೆ ಉ,ಊ ಸ್ವರಾಕ್ಷರಗಳು ಬಂದರೆ ಅವುಗಳ ಸ್ಥಾನದಲ್ಲಿ ಓ ಸ್ವರಾಕ್ಷರವು ಬರುತ್ತದೆ. ಅ, ಆ ಅಕ್ಷರಗಳಿಗೆ ಋ. ಸ್ವರಾಕ್ಷರಗಳು ಬಂದರೆ ಅವುಗಳ ಸ್ಥಾನದಲ್ಲಿ ಅರ್ ಆದೇಶವಾಗಿ ಬರುತ್ತದೆ ಇದನ್ನೇ ಗುಣಸಂಧಿ ಎಂದು ಕರೆಯಲಾಗುತ್ತದೆ.
ಪೂರ್ವಪದ+ಉತ್ತರಪದ=ಸಂಧಿಪದ
ಅ,ಆ + ಇ,ಈ= ಏ
ಅ,ಆ + ಉ.ಊ = ಓ
ಅ,ಆ + ಋ = ಅರ್.
ಉದಾ- ದೇವೇಂದ್ರ = ದೇವ + ಇಂದ್ರ
ವೀರೇಶ= ವೀರ + ಈಶ
ಸುರೇಶ = ಸುರ + ಈಶ
ಚಂದ್ರೋದಯ = ಚಂದ್ರ+ ಉದಯ
ರಾಜರ್ಷಿ = ರಾಜ + ಋಷಿ. ಮಹರ್ಷಿ, ಗಜೇಂದ್ರ, ವೀರೇಂದ್ರ, ಮಹೇಶ್ವರ, ದೇವೇಶ, ಗಣೇಶ, ನರೇಂದ್ರ,
ವೃದ್ಧಿಸಂಧಿ
ಪೂರ್ವ ಪದದ ಕೊನೆಯಲ್ಲಿರುವ ಅ,ಆ ಸ್ವರಗಳಿಗೆ ಏ,ಐ ಸ್ವರಾಕ್ಷರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಸ್ವರಾಕ್ಷರವು, ಹಾಗೆಯೇ ಅ,ಆ ಸ್ವರಗಳಿಗೆ ಓ,ಔ ಸ್ವರಾಕ್ಷರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಸ್ವರವು ಆದೇಶವಾಗಿ ಬರುವುದನ್ನು ವೃದ್ದಿಸಂಧಿ ಎಂದು ಕರೆಯಲಾಗುತ್ತದೆ.
ಪೂರ್ವಪದ+ಉತ್ತರಪದ=ಸಂಧಿಪದ
ಅ,ಆ + ಏ,ಐ = ಐ
ಅ,ಆ + ಓ ಔ = ಔ
ಉದಾ- ಶಿವೈಕ್ಯ= ಶಿವ + ಐಕ್ಯ
ವನೌಷಧ = ವನ+ ಔಷಧ
ಲೋಕೈಕ = ಲೋಕ + ಐಕ
ಏಕೈಕ, ಜನೈಕ್ಯ, ಸರ್ವ್ಯೆಕ್ಯ, ಅಷ್ಟೈಶ್ವರ್ಯ.
ಯಣ್ ಸಂಧಿ
ಪೂರ್ವ ಪದದ ಕೊನೆಯಲ್ಲಿರುವ ಇ, ಈ, ಉ, ಊ ಸ್ವರಾಕ್ಷರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ,ಈಗಳ ಬದಲಾಗಿ ‘ಯ್’ ಅಕ್ಷರವು, ಇ,ಈ,ಉ,ಊ ಸ್ವರಾಕ್ಷರಗಳಿಗೆ ಸವರ್ಣವಲ್ಲದ ಉ,ಊ ಗಳ ಬದಲಾಗಿ ‘ವ್’ ಅಕ್ಷರವು, ಹಾಗೆಯೇ ಋ ಅಕ್ಷರಕ್ಕೆ ರ್ ಅಕ್ಷರವು ಆದೇಶವಾಗಿ ಬರುತ್ತದೆ.
ಯರಲವ ಆದೇಶವಾಗಿ ಬರುತ್ತದೆ.
ಪೂರ್ವಪದ+ಉತ್ತರಪದ=ಸಂಧಿಪದ
ಇ,ಈ,ಉ,ಊ+ ಇ,ಈ = ಯ್
ಇ,ಈ,ಉ,ಊ + ಉ,ಊ= ವ್
ಇ,ಈ,ಉ,ಊ + ಋ = ರ್
ಉದಾ- ಅತ್ಯಂತ = ಅತಿ +ಅಂತ
ಪಿತ್ರಾರ್ಜಿತ = ಪಿತೃ+ಅರ್ಜಿತ
2. ಸಂಸ್ಕ್ರತ ಸಂಧಿಗಳು
ವ್ಯಂಜನದ ಮುಂದೆ ಸ್ವರ ಬಂದರೆ, ವ್ಯಂಜನಾಕ್ಷರಗಳ ಮುಂದೆ ವ್ಯಂಜನಗಳು ಬಂದರೆ ಅದನ್ನು ಸಂಸ್ಕ್ರತ ವ್ಯಂಜನ ಸಂಧಿ ಎಂದು ಕರೆಯಲಾಗುತ್ತದೆ.
೧. ಜಶ್ತ್ವ ಸಂಧಿ
ಪೂರ್ವ ಪದದ ಕೊನೆಯಲ್ಲಿರುವ ಕಚಟತಪ ವ್ಯಂಜನಾಕ್ಷರಗಳಿಗೆ ಯಾವುದೇ ಅಕ್ಷರಗಳು ಅದರ ಪರವಾಗಿ ಬಂದರೂ ಅದೇ ವರ್ಗದ ಮೂರನೇ ಸಾಲಿನಲ್ಲಿರುವ ಗಜಡದಬ ಳು ಆದೇಶಗಳಾಗಿ ಬರುತ್ತವೆ. ಇದೇ ಜಶ್ತ್ವ ಸಂಧಿ.
ಉದಾ – ವಾಗೀಶ = ವಾಕ್+ಈಶ
ಅಜಂತ = ಅಚ್+ಅಂತ
ದಿಗಂತ, ವಾಗ್ದೇವಿ, ವಾಗ್ದಾನ, ವಾಗ್ದಾಳಿ, ದಿಗ್ದೆಸೆ, ದಿಗ್ದೇವತೆ, ಋಗ್ವೇದ, ದಿಗ್ದಿಗಂತ, ಷಡಂಗ, ಅಜ್ವರ್ಣ, ಅಜಾದಿ
ಶ್ಚುತ್ವ ಸಂಧಿ
ಪೂರ್ವ ಪದದ ಕೊನೆಯಲ್ಲಿರುವ ಸ ಕಾರಕ್ಕೆ ಶ ಪರವಾದಾಗ ಶ ಕಾರ ಬರುತ್ತದೆ, ಪೂರ್ವ ಪದದ ಕೊನೆಯಲ್ಲಿ ತ ವರ್ಗಾಕ್ಷರಕ್ಕೆ ಚ ವರ್ಗಗಳು ಪರವಾದಾಗ ಚ ವರ್ಗಾಕ್ಷರಗಳೇ ಆದೇಶಗಳಾಗಿ ಬರುತ್ತದೆ.
ಪೂರ್ವಪದ+ಉತ್ತರಪದ=ಸಂಧಿಪದ
ಸ್ +ಶ = ಶ
ತ್ + ಚ,ಶ = ಚ
ಉದಾ- ಮನಶ್ಚುದ್ಧಿ = ಮನಸ್ + ಶುದ್ಧಿ
ಮನಶ್ಚಂಚಲ = ಮನಸ್ + ಚಂಚಲ
ಸಚ್ಚಿತ್ರ = ಸತ್ + ಚಿತ್ರ
ಬೃಹಚ್ಛತ್ರ = ಬೃಹತ್ + ಛತ್ರ, ಯಶಶ್ಚಂದ್ರಕೆ, ಮನಶ್ಚಾಪಲ್ಯ, ಯಶಶ್ಚಂದ್ರ, ತಪಶ್ಯಾಂತಿ, ಪಯಶ್ಚಯನ, ಜಗಜ್ಜ್ಯೋತಿ, ಶರಚ್ಚಂದ್ರ
ಅನುನಾಸಿಕ ಸಂಧಿ
ಪೂರ್ವ ಪದದ ಕೊನೆಯಲ್ಲಿರುವ ಕಚಟತಪ ವ್ಯಂಜನಾಕ್ಷರಗಳಿಗೆ ಯಾವುದೇ ಅನುನಾಸಿಕಾಕ್ಷರ ಪರವಾಗಿ ಅದೇ ವರ್ಗದ ಙ,ಞ,ಣ,ನ,ಮ ಅನುನಾಸಿಕಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಕರೆಯಲಾಗುತ್ತದೆ.
ಕ್, ಙ್
ಚ್, ಞ್
ಟ್, ಣ್
ತ್, ನ್
ಪ್,ಮ್
ಉದಾ- ಚಿತ್+ಮಯ = ಚಿನ್ಮಯ
ಸತ್ + ಮಾರ್ಗ = ಸನ್ಮಾರ್ಗ
ದಿಕ್ + ನಾಗ = ದಿಙ್ನಾಗ
ಉನ್ಮಾದ, ತನ್ಮಯ, ಸನ್ಮಣಿ, ಕಣ್ಮಣಿ, ಜಗನ್ಮಾಯೆ, ಮಾಙ್ಮಾದುರ್ಯ, ಷಣ್ಮುಖ, ಸನ್ಮಾನ, ಅಮ್ಮಯ