ಸಮಾಸಗಳು – Kannada Vyakarana
Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಅನುಗುಣವಾಗಿ ಸೀರಿಕೊಳ್ಳುವ ಮೂಲಕ ಒಂದೇ ಪದವಾಗಿ ಮಾಡುವ ಪ್ರಕ್ರಿಯೆಗೆ ಸಮಾಸಗಳೆನ್ನುವರು. ಸಮಾಸಕ್ಕೂ ಮತ್ತು ಸಂಧಿಗೂ ಇರುವ ವ್ಯತ್ಯಾಸವೆಂದರೆ ಸಮಾಸದಲ್ಲಿ ಪದಗಳು ಜೋಡಣೆ, ಸಂಧಿಯಲ್ಲಿ ಅಕ್ಷರಗಳ ಜೋಡಣೆಯಾಗುತ್ತದೆ. ಒಂದು ಪದವನ್ನು ಬಿಡಿಸಿ ಬರೆಯುವುದಕ್ಕೆ ಅಥವಾ ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ ವಿಗ್ರಹವಾಕ್ಯ ಎಂದು ಕರೆಯಲಾಗುತ್ತದೆ. ಹಾಗೆಯೇ ಇಲ್ಲೂ ಕೂಡ ಪೂರ್ವಪದ ಮತ್ತು ಉತ್ತರಪದ ಎಂಬ ವಿಭಾಗ ಕ್ರಮವು ಇದೆ.
ಸಮಾಸಗಳಲ್ಲಿ 8 ವಿಧಗಳಿವೆ
* ತತ್ಪುರುಷ ಸಮಾಸ
* ಕರ್ಮಧಾರೆಯ ಸಮಾಸ
* ದ್ವಿಗು ಸಮಾಸ
* ಅಂಶಿ ಸಮಾಸ
* ದ್ವಂದ್ವ ಸಮಾಸ
* ಕ್ರಿಯಾ ಸಮಾಸ
* ಬಹುವ್ರಿಹಿ ಸಮಾಸ
* ಗಮಕ ಸಮಾಸ
See this link: https://amzn.to/47m5DOS
೧. ತತ್ಪುರುಷ ಸಮಾಸ
ಇಲ್ಲಿ 2 ನಾಮಪದಗಳು ಸೇರಿ ಸಮಾಸವಾಗುವಾಗ ಉತ್ತರ ಪದದ ಅರ್ಥ ಪ್ರಧಾನವಾಗಿರಬೇಕು. ಅದನ್ನು ತತ್ಪುರುಷ ಸಮಾಸ ಎಂದು ಕರೆಯಲಾಗುತ್ತದೆ.
: ಇದರಲ್ಲಿ ಉತ್ತರಪದ ಪ್ರಧಾನವಾಗಿರುತ್ತದೆ.
ಉದಾ- ತಲೆಯಲ್ಲಿ + ನೋವು = ತಲೆನೋವು
ಅರಸನ + ಮನೆ = ಅರಮನೆ.
ಜ್ಞಾನ + ವೃದ್ಧ = ಜ್ಞಾನವೃದ್ಧ
ಮರದ + ಕಾಲು = ಮರಗಾಲು
ಕಲ್ಲಿನ + ಹಾಸಿಗೆ = ಕಲ್ಲುಹಾಸಿಗೆ
ಹಗಲಿನಲ್ಲಿ + ಕನಸು = ಹಗಲುಕನಸು
ಧನದ + ಹರಣ = ಧನಹರಣ
ಕಾಲಿನ + ಬಳೆ = ಕಾಲುಬಳೆ
ದನದ + ರಕ್ಷಣೆ = ಧನರಕ್ಷಣೆ
ಕಣ್ಣುಕುರುಡ, ಕವಿವಂದಿತ, ಉತ್ತಮೋತ್ತಮ, ಬೆಟ್ಟತಾವರೆ.
2. ಕರ್ಮಧಾರೆಯ ಸಮಾಸ
ಇಲ್ಲಿ ಪೂರ್ವಪದದಲ್ಲಿ ಗುಣವಾಚಕ, ವಿಶೇಷಣ, ವಿಶೇಷ್ಯವಾಗಿದ್ದು, ಉತ್ತರಪದ ನಾಮವಾಗಿರುವುದನ್ನು ಕರ್ಮಧಾರೆಯ ಸಮಾಸ ಎಂದು ಕರೆಯಲಾಗುತ್ತದೆ. ಇದರಲ್ಲಿ ಪೂರ್ವ ಪದ ಗುಣವಾಚಕ ಹಾಗೂ ಉತ್ತರ ಪದ ನಾಮಪದವಾಗಿರುತ್ತೆ.
ಉದಾ- ಕೆಂಪಾದ +ತಾವರೆ= ಕೆಂದಾವರೆ
ಇನಿದಾದ + ಮಾವು = ಇಮ್ಮಾವು
ಮೆಲುವಾದ + ಮಾತು =ಮೆಲ್ವಾತು
ಹಿರಿದು + ಜೇನು=ಹೆಜ್ಜೇನು
ಹಳೆಯ+ಕನ್ನಡ=ಹಳೆಗನ್ನಡ
ಹೊಸದು+ಕನ್ನಡ=ಹೊಸಗನ್ನಡ
ಹಿರಿದು+ಮರ=ಹೆಮ್ಮರ
ಹಿರಿದು+ಬಾಗಿಲು=ಹೆಬ್ಬಾಗಿಲು
ಹಳೆಯದು+ಬಟ್ಟೆ=ಹಳೆಯಬಟ್ಟೆ
ಬಿಳಿದು+ಕೊ=ಬೆಳ್ಗೊಡೆ
ಹಿರಿಯವರು+ಮಕ್ಕಳು=ಹಿರಿಮಕ್ಕಳು
ನೀಲವಾದ+ಉತ್ಪಲ=ನೀಲೋತ್ಪಲ
3. ದ್ವಿಗುಸಮಾಸ
ಇಲ್ಲಿ ಸಮಾಸ ಪದವು ಪೂರ್ವದಲ್ಲಿ ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿ ನಾಮಪದ ಸೇರಿ ಸಮಾಸವಾಗುವುದಕ್ಕೆ ದ್ವಿಗು ಸಮಾಸ ಎನ್ನುವರು.
ಉದಾ- ಮೂರು+ಕಣ್ಣು=ಮುಕ್ಕಣ್ಣು
ಒಂದು+ಕಟ್ಟು=ಒಗ್ಗಟ್ಟು
ಎಂಟು+ದೆಸೆ=ಎಣ್ದೆಸೆ
ಎರಡು+ಮಡಿ=ಇಮ್ಮಡಿ
ಮೂರು+ಮಡಿ=ಮುಮ್ಮಡಿ
ಎರಡು+ಬಾಳ್=ಇರ್ವಾಳ್
ಮೂರು+ಗಾವುದ=ಮೂಗಾವುದ
ಎರಡು+ಪೆಂಡಿರ್=ಇರ್ವಂಡಿರ್
4. ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥ ಪ್ರಧಾನವಾಗಿರುವ ಸಮಾಸವಾಗಿರುವುದು.
ಉದಾ- ಮುಕ್ಕಣ್ಣ – ಮೂರು ಕಣ್ಣುಳ್ಳವನು ಆವನೋ ಅವನು ಮುಕ್ಕಣ್ಣ
ಕೆಂಗಣ್ಣ – ಕೆಂಪಾದ ಕಣ್ಣುಳ್ಳವನು ಆವನೋ ಅವನೆ ಕೆಂಗಣ್ಣ
ಹಣೆಗಣ್ಣ- ಹಣೆಯಲ್ಲಿ ಕಣ್ಣುಳ್ಳವನು ಆವನೋ ಅವನೇ ಹಣೆಗಣ್ಣ
ಅರ್ಜುನ – ಗಾಂಡೀವವನ್ನು ಹಿಡಿದಿರುವವನು ಆವನೋ ಅವನೆ ಗಾಂಡೀವಿ
5. ಅಂಶಿ ಸಮಾಸ
ಇಲ್ಲಿ ಸಮಾಸವಾಗುವಾಗ ಪೂರ್ವ ಪದವು ಅಂಶವಾಗಿದ್ದು ಉತ್ತರಪದವು ಅದರ ಭಾಗವಾಗಿ ಸಮಾಸವಾಗುವುದಕ್ಕೆ ಅಂಶಿ ಸಮಾಸ ಎನ್ನುವರು. ಇಲ್ಲಿ ಅಂಶ ಎಂದರೆ – ಪೂರ್ಣಭಾಗ,
ಅಂಶಿ ಎಂದರೆ – ಪೂರ್ಣಭಾಗದ ಒಂದು ಭಾಗ ಎಂದರ್ಥ.
ಉದಾ- ಮೂಗಿನ + ತುದಿ = ತುದಿಮೂಗು
ಕೈಯ+ಅಡಿ =ಅಂಗೈ
ಕಾಲ+ಅಡಿ =ಅಂಗಾಲು
ಕಾಲ+ಮುಂದು=ಮುಂಗಾಲು
ಪಗಲಿನ+ಮುಂದು=ಮಂಬಗಲ್
ಕಣ್ಣ+ಕಡೆ=ಕಡೆಗಣ್ಣ
ಹುಬ್ಬಿನ+ಕುಡಿ=ಕುಡಿಹುಬ್ಬು
ತಲೆಯ+ಮುಂದು= ಮುಂದಲೆ
ಹುಬ್ಬಿನ+ಕೊನೆ=ಕೊನೆಹುಬ್ಬು
6. ದ್ವಂದ್ವ ಸಮಾಸ
ಇಲ್ಲಿ ಸಮಾಸಬಾಗುವಾಗ ೨ ಅಥವಾ ಎರಡಕ್ಕಿಂತವಹೆಚ್ಚು ಪದಗಳು ಸೇರಿ ಪದವಾಗಿ ಎಲ್ಲ ಪದಗಳ ಅರ್ಥವು ಪ್ರಧಾನವಾಗಿದ್ದರೆವಾದನ್ನು ದ್ವಂದ್ವ ಸಮಾಸ ಎನ್ನುವರು
ಉದಾ- ಭಿಮನು+ಅರ್ಜುನನು= ಭೀಮಾರ್ಜುನರು
ಗುಡುಗು+ಸಿಡಿಲು+ಮಿಂಚು=ಗುಡುಗುಸಿಡಿಲುಮಿಂಚು
ಕೆರೆಕಟ್ಟೆಬಾವಿ, ಆನೆಕುದುರೆಒಂಟೆ, ಗ್ರಹನಕ್ಷತ್ರ, ಕೈಕಾಲುಗಳು, ವಿದ್ಯಾಧನ, ಗಿರಿವನದುರ್ಗ
7. ಕ್ರಿಯಾ ಸಮಾಸ
ಇಲ್ಲಿ ಸಮಾಸವಾಗುವ ಪದಗಳಲ್ಲಿ ಪೂರ್ವ ಪದವು ನಾಮಪದಬಾಗಿದ್ದು, ಉತ್ತರಪದ ಕ್ರಿಯಾಪದವಾಗಿ ಸೇರುವ ಪದಗಳನ್ನೇ ಕ್ರಿಯಾ ಸಮಾಸ ಎನ್ನುವರು.
ಉದಾ- ಕೈಯನ್ನು+ಆನು=ಕೈಯಾನು
ಬಿಲ್ಲನ್ನು+ಕೊಂಡು=ಬಿಲ್ಗೊಂಡಮೋಸವನ್ನು+ಮಾಡು=ಮೋಸಮಾಡು
ಕಣ್ಣನ್ನು+ತೆರೆ=ಕಣ್ದೆರೆ
ಸಾಕ್ಷಿಯನ್ನು+ಮಾಡು=ಸಾಕ್ಷಿಮಾಡು
ಕೈಯನ್ನು+ಮುಗಿ=ಕೈಮುಗಿ
ತಲೆಯನ್ನು+ಬಾಗು=ತಲೆಬಾಗಮನೆಯನ್ನು+ಕಟ್ಟು=ಮನೆಕಟ್ಟು
ವಿಷವನ್ನು+ಕಾರು=ವಿಷಕಾರು
ತಲೆಯನ್ನು+ಕೊಡವಿ=ತಲೆಗೊಡವಿ
ಕಳ್ಳನ್ನು+ಕುಡಿದ= ಕಳ್ಗುಡಿದ
8. ಗಮಕ ಸಮಾಸ
ಇಲ್ಲಿ ಸಮಾಸವಾಗುವಾಗ ಪೂರ್ವಪದದಲ್ಲಿ ಸರ್ವನಾಮ ಅಥವಾ ಕೃದಂತವಾಗಿದ್ದು, ಉತ್ತರಪದದಲ್ಲಿ ನಾಮಪದದೊಡನೆ ಸೇರಿ ಆಗುವ ಸಮಾಸವಾಗಿದೆ.
ಉದಾ- ಆ ಹೆಂಗಸು= ಅವಳು+ಹೆಂಗಸು
ತಿಂದಕೂಳು=ತಿಂದುದು+ಕೂಳು
ಮಾಡಿದಡಿಗೆ=ಮಾಡಿದುದು+ಅಡಿಗೆ
ಅರಳುಮೊಗ್ಗು=ಅರಳುವುದು+ಮೊಗ್ಗು
ಸೊಕ್ಕಾನೆ=ಸೊಕ್ಕಿದುದು+ಆನೆ
ಬೆಂದಡಿಗೆ=ಬೆಂದುದು+ಅಡಿಗೆ
ಉಡುದಾರ=ಉಡುವುದು+ದಾರ
ಸಿಡಿಮದ್ದು= ಸಿಡಿಯುವುದು+ಮದ್ದು