Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. ವಿಭಕ್ತಿ ಪ್ರತ್ಯಯಗಳು & ಅವ್ಯಯಗಳು
#Kannada Vyakarana – ವಿಭಕ್ತಿ ಪ್ರತ್ಯಯಗಳು
ನಾಮಪದಗಳನ್ನು ಬೇರೆ ಬೇರೆ ಅರ್ಥದಲ್ಲಿ ಬಳಸಬೇಕಾದರೆ ನಾಮಪ್ರಕೃತಿಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸಲಾಗುತ್ತೆ ಈ ಪ್ರತ್ಯಯಗಳಿಗೆ ವಿಭಕ್ತಿ ಪ್ರತ್ಯಯಗಳೆನ್ನುವರು. ಪ್ರಕೃತಿಗಳಿಗೆ ಪ್ರತ್ಯಯ ಸೇರಿ ಆಗುವುದಕ್ಕೆ ವಿಭಕ್ತಿ ಎಂದು ಕರೆಯಲಾಗುತ್ತೆ.
ಇದರಲ್ಲಿನ ವಿಶೇಷತೆ
* ನಾಮ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರುವಾಗ ಕೆಲವು ಹೊಸ ಅಕ್ಷರಗಳು ಬರುತ್ತವೆ
# ನಾಮ ಪ್ರಕೃತಿ ‘ಅ’/’ಉ’ ಕಾರಾಂತ್ಯವಾಗಿದ್ದರೆ ಅಲ್ಲಿ ‘ನ’ಕಾರ ಬರುತ್ತದೆ.
# ನಾಮ ಪ್ರಕೃತಿ ‘ಎ’/’ಇ’ ಕಾರಾಂತ್ಯವಾಗಿದ್ದರೆ ಅಲ್ಲಿ ‘ಯ’ ಕಾರ ಬರುತ್ತದೆ.
#Kannada Vyakarana – ಕನ್ನಡದಲ್ಲಿ ೭ ವಿಭಕ್ತಿ ಪ್ರತ್ಯಯಗಳಿವೆ
ವಿಭಕ್ತಿ ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ
ಪ್ರಥಮ ಉ ಮ್
ದ್ವಿತೀಯ ಅನ್ನು ಅಂ,ಅನ್,ಆನ್
ತೃತೀಯ ಇಂದ ಇನ್, ಇಂದಂ, ಇಂದೆ
ಚತುರ್ಥಿ ಗೆ,ಇಗೆ,ಕೆ ಗೆ,ಕೆ,ಕ್ಕೆ
ಪಂಚಮಿ – ಅ. ಅ
ಸಪ್ತಮಿ ಅಲ್ಲಿ, ಓಳ್, ಉಳ್
ಸಂಭೊಧನಾ ಆ,ಏ, ಇರಾ,ಈ. ಆ,ಏ,ಇರಾ,ಈ
ಕಾರಕಗಳು
ಒಂದು ನಾಮ ಪ್ರಕೃತಿಯನ್ನು ವಾಕ್ಯದಲ್ಲಿ ಬೇರೆ ಬೇರೆ ಅರ್ಥಕ್ಕೆ ಒಗ್ಗಿಸುವಂತೆ ಬದಲಾಯಿಸುವುದನ್ನೇ ಕಾರಕಗಳೆದು ಕರೆಯುತ್ತಾರೆ.
ವಿಭಕ್ತಿ ವಿಭಕ್ತಿ ಪ್ರತ್ಯಯ – ಕಾರಕಗಳು
ಪ್ರಥಮ ಉ, ಮ್ ಕರ್ತ್ರರ್ಥ – ನಾಮಪದವನ್ನು ಕೆಲಸ ಮಾಡುವ ವ್ಯಕ್ತಿಯನ್ನಾಗಿ ಸೂಚಿಸುತ್ತದೆ.
ದ್ವಿತೀಯ ಅನ್ನು, ಅಮ್ – ಕರ್ಮಾರ್ಥ – ನಾಮಪದವನ್ನು ಕೆಲಸಕ್ಕೆ ಒಳಪಡುವ ವ್ಯಕ್ತಿಯನ್ನಾಗಿ ಸೂಚಿಸುತ್ತದೆ.
ತೃತೀಯ ಇಂದ, ಇಮ್, ಕರಣಾರ್ಥ(Tools)ಸಾಧನ – ನಾಮಪದವನ್ನು ಕೆಲಸವನ್ನು ಮಾಡಲು ಬಳಸುವ ಸಾಧನವನ್ನಾಗಿ ಸೂಚಿಸುತ್ತದೆ.
ಚತುರ್ಥಿ ಗೆ,ಕೆ,ಇಗೆ – ಸಂಪ್ರದಾನಾರ್ಥ (Receive)- ನಾಮಪದವನ್ನು ವಸ್ತುವನ್ನು ಪಡೆಯುವ ವ್ಯಕ್ತಿಯನ್ನಾಗಿ ಮಾಡುತ್ತದೆ.
ಪಂಚಮಿ – ದೆಸೆಯಿಂದ – ಅಪಾದಾನಾರ್ಥ(ಅಗಲುವಿಕೆ, ಬಿಡುವುದು) – ನಾಮಪದವನ್ನು ಮತ್ತೊಂದು ನಾಮಪದದಿಂದ ಬೇರ್ಪಡುವಂತೆ ಮಾಡುತ್ತದೆ.
ಷಷ್ಠಿ – ಅ – ಸಂಬಂಧ – ನಾಮಪದವನ್ನು ಮತ್ತೊಂದು ನಾಮಪದದಿಂದ ಸಂಬಂಧ ಕಲ್ಪಿಸುತ್ತದೆ.
ಸಪ್ತಮಿ – ಅಲ್ಲಿ, ಓಳ್ – ನಾಮಪದವನ್ನು ಆಧಾರವನ್ನು ಕಲ್ಪಿಸುವ/ಒದಗಿಸುವ ವ್ಯಕ್ತಿಯನ್ನಾಗಿ ಅಥವಾ ವಸ್ತುವನ್ನಾಗಿ ಸೂಚಿಸುತ್ತದೆ.
: ಅವ್ಯಯಗಳು
ಅವ್ಯಯ ಎಂದರೆ ಬದಲಾಗದೇ ಇರುವುದು ಎಂದರ್ಥ. ವಾಕ್ಯದಲ್ಲಿ ಲಿಂಗ, ವಚನ, ವಿಭಕ್ತಿ ಯಾವುದೇ ರೂಪಬೇಧ ಹೊಂದದೇ ಹಾಗೆಯೇ ಬಳಕೆಯಾಗುವ ಪದವೇ ಅವ್ಯಯಗಳು.
ಉದಾ-
ವಿದ್ಯಾರ್ಥಿಗಳು ಸುಂದರವಾಗಿ ಹಾಡಿದರು,
ವಿದ್ಯಾರ್ಥಿಯು ಸುಂದರವಾಗಿ ಬರೆದನು
ಅವ್ಯಯಗಳನ್ನು ಅವುಗಳ ಅರ್ಥ ಮತ್ತು ಸ್ವರೂಪದ ಮೇಲೆ 6 ವಿಧಗಳಾಗಿ ಮಾಡಲಾಗಿದೆ.
1. ಸಾಮಾನ್ಯಾವ್ಯಯ
ಕ್ರಿಯೆಯು ನಡೆದ ರೀತಿಯನ್ನು ಸೂಚಿಸುತ್ತದೆ. ಜೊತೆಗೆ ಇದು ಕ್ರಿಯಾಪದಕ್ಕೆ ವಿಶೇಷವಾಗಿದೆ ಆದ್ದರಿಂದ ಇದಕ್ಕೆ ಕ್ರಿಯಾ ವಿಶೇಷಣ ಎಂದೂ ಕರೆಯಲಾಗುತ್ತದೆ.
ಉದಾ- ಚಿನ್ನಾಗಿ, ಮೆಲ್ಲಗೆ , ಸುಮ್ಮನೆ, ಬೇಗನೆ, ಹಾಗೆ, ತರುವಾಯ, ಬೇಗ, ನೆಟ್ಟನೆ, ಸೊಗಸಾಗಿ, ಬೇರೆ, ಒಡನೆ, ಕೂಡಲೆ.
2. ಅನುಕರಣಾವ್ಯಯ
ಇವುಗಳಿಗೆ ನಿರ್ಧಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ತಾನು ಹೇಗೆ ಕೇಳಿರುತ್ತೇನೆಯೋ ಪುನಃ ಹಾಗೆಯೇ ಅನುಕರಣೆ ಮಾಡಿ ಹೇಳುವ ಶಬ್ದಗಳನ್ನೇ ಅನುಕರಣಾವ್ಯಯಗಳು. ಅನುಕರಣೆ ಮಾಡಿ ಹೇಳುವ ಶಬ್ದಗಳಾಗಿವೆ.
ಉದಾ- ವಟವಟ, ಸರಸರ, ಜುಳುಜುಳು, ಜುಮ್ಮಬೆ, ಪಿಸಿಪಿಸಿ, ಮಿಣಮಿಣ, ಧರಧರ, ಸುಯ್ಯನೆ, ಧಗ್ಗನೆ, ಝಣಝಣ, ರೊಯ್ಯನೆ. ಮುಂತಾದವು
3. ಭಾವಸೂಚಕಾವ್ಯಯ
ಮನಸ್ಸಿನಲ್ಲಿ ಉಂಟಾಗುವ ಸಂತೋಷ, ದುಃಖ, ಕೋಪ, ಆಶ್ಚರ್ಯ, ಮೆಚ್ಚುಗೆ, ತಿರಸ್ಕಾರ, ಮುಂತಾದ ಭಾವನೆಗಳನ್ನು ವ್ಯಕ್ತಪಡಿಸುವ ಪದಗಳು. ಇವುಗಳೇ ಆಶ್ಚರ್ಯಸೂಚಕ (ನಿಪಾತಾವ್ಯಯ) ಭಾವಸೂಚಕಾವ್ಯಗಳೆನ್ನುವರು. ಉದಾ-
ಅಯ್ಯೋ! ಅದ್ಯಾಂಕಗಾಯ್ತೋ
ಅಕ್ಕಟಾ, ಆಹಾ!, ಭಳಿರೇ, ಓಹೋ ಮುಂತಾದವು
4. ಕ್ರಿಯಾರ್ಥಕಾವ್ಯಯ
ಇಲ್ಲಿ ಬಂದಿರುವ ಪದಗಳು ಕ್ರಿಯಾಪದ ಸ್ಥಾನದಲ್ಲಿ ನಿಂತು ಇರುವ ವಾಕ್ಯದ ಅರ್ಥವನ್ನು ಪೂರ್ಣಗೊಳಿಸಲು ಬಳಕೆಯಾಗುವ ಕೆಲವು ಅವ್ಯಯಗಳನ್ನು ಕ್ರಿಯಾರ್ಥಕ ಅವ್ಯಯಗಳು ಎನ್ನುವರು.
ಉದಾ- ನಿನಗೆ ಇದು ಬೇಕ,
ಅಲ್ಲ, ಸಾಕು, ಅಹುದು, ಹೌದು, ಇಲ್ಲಿ, ಬೇಡ, ಉಂಟು.
5. ಸಂಬಂಧಾರ್ಥಕಾವ್ಯಯ
ಇಲ್ಲಿ ಬರುವ ಪದಗಳು ಎರಡು ಪದಗಳ ಅಥವಾ ವಾಕ್ಯಗಳ ಸಂಬಂಧವನ್ನು ಬೆಸೆಯುವ ಅವ್ಯಯಗಳನ್ನು ಸಂಬಂಧಾರ್ಥಕಾವ್ಯಯಗಳು.
ಉದಾ-
ಅವನು ಮತ್ತು ಇವನು ಜೊತೆಗೆ ಬಂದರು. ಆದ್ದರಿಂದ, ಹಾಗಾದರೆ, ಆದಕಾರಣ, ಅಥವಾ, ಅಲ್ಲದೆ, ಇನ್ನೂ, ಆದರೆ, ಏಕೆಂದರೆ, ನಾನೂ ಅವಳೂ ಸಿನೆಮಾ ನೋಡಿದೆವು, ಊ,ಉ.
: 6. ಅವಧಾರಣಾರ್ಥಕಾವ್ಯಯ
ಹಲವು ವಸ್ತುಗಳಲ್ಲಿ ಒಂದನ್ನು ನಿಗಧಿಪಡಿಸಿ ಅಥವಾ ನಿಶ್ಚಯಿಸಿ ಹೇಳುವ ಪದವನ್ನು ಅವಧಾರಣಾರ್ಥಕಾವ್ಯಯ(ಅವಧಾರಣ – ಗಮನವನ್ನು ತನ್ನೆಡೆಗೆ ಸೆಳೆಯುವುದನ್ನು ಅವಧಾರಣ ಎನ್ನುತ್ತೇವೆ).
ಇದು ‘ ಏ’ ಪ್ರತ್ಯಯದಿಂದ ಕೂಡಿರುತ್ತದೆ.
ಉದಾ- ಅವಳೇ ಇಲ್ಲಿಗೆ ಬಂದಿದ್ದು, ನೀನೇ ಅವನಿಗೆ ಹೇಳಿದ್ದು, ಅದುವೇ, ನೀನೇ, ಅವರೇ, ಅದೇ.