Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. ಕ್ರಿಯಾಪದಗಳು
#Kannada Vyakarana – ಕ್ರಿಯಾಪದಗಳು
ಕ್ರಿಯೆ ನಡೆದಿರುವುದನ್ನು ತಿಳಿಸುವ ಪದಗಳೇ ಕ್ರಿಯಾಪದವಾಗಿರುತ್ತದೆ. ಒಂದು ವಾಕ್ಯ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥ ಕೊಡುವ ಪದಗಳನ್ನು ಕ್ರಿಯಪದಗಳೆನ್ನುವರು.
ಕ್ರಿಯಾ ಪದದ ರಚನೆ
ಧಾತು + ಕಾಲಸೂಚಕ ಪ್ರತ್ಯಯ + ಆಖ್ಯಾತ ಪ್ರತ್ಯಯ = ಕ್ರಿಯಾಪದ
ಓಡು + ಉತ್ತ + ಆನೆ = ಓಡುತ್ತಾನೆ
ಮಾಡು+ವ+ಅರು=ಮಾಡುವರು
ಧಾತು
ಕ್ರಿಯಾಪದದ ಮೂಲರೂಪ, ಕ್ರಿಯೆಯ ಅರ್ಥವನ್ನು ಸೂಚಿಸುವ ಮತ್ತು ಪ್ರತ್ಯಯವನ್ನು ಹೊಂದದಿರುವ ಪದವೇ ಧಾತು
ಉದಾ- ಓಡು, ಓಡು, ಮಾಡು, ಕೂಡು, ನೋಡು, ತಿನ್ನು
ಧಾತುಗಳಲ್ಲಿನ ವಿಧಗಳು
1. ಮೂಲಧಾತು(ಸಹಜ ಧಾತು)
ಒಂದು ಭಾಷೆಯಲ್ಲಿ ಮೊದಲಿನಿಂದಲೂ ನೈಸರ್ಗಿಕವಾಗಿ ಬಂದಿರುವ ಧಾತುಗಳೇ ಮೂಲದಾತುಗಳಾಗಿವೆ.
ಉದಾ- ತಿನ್ನು, ಓಡು, ಓದು, ಹುಡುಕು, ತಿಳಿ, ನಡುಗು, ಮಾಡು. ಮುಂತಾದವು
2. ಸಾಧಿತ ಧಾತುಗಳು
ಮೂಲಧಾತುಗಳಿಗೆ ಕೆಲವು ನಾಮ ಪ್ರಕೃತಿಗಳಿಗೆ ಅಥವಾ ಅನುಕರಣಾವ್ಯಯಗಳಿಗೆ ಇಸು ಪ್ರತ್ಯಯ ಸೇರಿಸಿಯಾದರೆ ಅದನ್ನು ಸಾಧಿತ ಧಾತು ಎನ್ನಲಾಗುತ್ತದೆ.
ಉದಾ- ಮೂಲಧಾತು+ ಇಸು = ಸಾಧಿತ ಧಾತು
ನಾಮ ಪ್ರಕೃತಿ + ಇಸು = ಸಾಧಿತ ಧಾತು
ಅನುಕರಣಾವ್ಯಯ+ಇಸು = ಸಾಧಿತ ಧಾತು
ಮೂಲಧಾತುವಿಗೆ ಇಸು ಸೇರಿಸಿದಾಗ ಸಾಧಿತ ಧಾತು
ತಿನ್ನು + ಇಸು = ತಿನ್ನಿಸು
ಓಡು + ಇಸು = ಓಡಿಸು
ತಪ್ಪು + ಇಸು = ತಪ್ಪಿಸು
ನಾಮ ಪ್ರಕೃತಿಗಳಿಗೆ ಇಸು ಪ್ರತ್ಯಯ ಸೇರುವುದರಿಂದ ಸಾಧಿತ ಧಾತು
ನಾಮಪ್ರಕೃತಿ = ಇಸು = ಸಾಧಿತ ಧಾತು
ಕನ್ನಡ + ಇಸು = ಕನ್ನಡಿಸು
ಭಾವ + ಇಸು = ಭಾವಿಸು
ಅಬ್ಬರ + ಇಸು = ಅಬ್ಬರಿಸು
ಅನುಕರಣಾವ್ಯಯಗಳಿಗೆ ಇಸು ಸೇರುವುದರಿಂದ ಸಾಧಿತಧಾತುವಾಗುವುದು
ಅನುಕರಣಾವ್ಯಯ + ಇಸು = ಸಾಧಿತಧಾತು
ಗಮಗಮ+ ಇಸು = ಗಮಗಮಿಸಿ
ಧಗ ಧಗ + ಇಸು = ಧಗಧಗಿಸು
See this; iPhone; https://amzn.to/3tAkIP1
ಸಕರ್ಮಕ ಮತ್ತು ಅಕರ್ಮಕ ಧಾತುಗಳು
ಒಂದು ವಾಕ್ಯದಲ್ಲಿ ಬಳಕೆಯಲ್ಲಿರುವ ಕ್ರಿಯಾ ಪದವು ಕರ್ಮ ಪದವನ್ನು ಬಳಸಿಕೊಂಡರೆ ಅದನ್ನು ಸಕರ್ಮಕ ಧಾತುಗಳೆನ್ನುವರು.
ಉದಾ- ರಕ್ಷಿಸು, ಬಿತ್ತಿದರು
ಅಕರ್ಮಕ ಧಾತು
ಒಂದು ವಾಕ್ಯದಲ್ಲಿ ಬಳಕೆಯಾಗಿರುವ ಕ್ರಿಯಾ ಪದವು ಕರ್ಮಪದವನ್ನು ಬಳಸಿಕೊಳ್ಳದಿದ್ದರೆ ಅದನ್ನು ಅಕರ್ಮಕ ಧಾತು ಎನ್ನುವರು
ಉದಾ- ಹೋದನು, ಬಂದನು
ಕ್ರಿಯಾ ಪದದಲ್ಲಿನ ವಿಧಗಳು
ಕ್ರಿಯೆ ನಡೆದಿರುವ ಕಾಲವನ್ನು ಆಧರಿಸಿ 2 ವಿಧಗಳನ್ನು ಮಾಡಲಾಗಿದೆ.
1. ಕಾಲರೂಪ ಕ್ರಿಯಾಪದ
2. ಅರ್ಥರೂಪ ಕ್ರಿಯಾಪದ
ಕಾಲರೂಪ ಕ್ರಿಯಾಪದ
ಇದರಲ್ಲಿ ಧಾತು, ಕಾಲಸೂಚಕ ಪ್ರತ್ಯಯ, ಆಖ್ಯಾತ ಪ್ರತ್ಯಯ ಬಳಕೆಯಾಗಿರುತ್ತದೆ.
ಉದಾ-
ಧಾತು + ಕಾಲಸೂಚಕ ಪ್ರತ್ಯಯ + ಆಖ್ಯಾತ ಪ್ರತ್ಯಯ
ಓದು + ಉತ್ತ + ಆನೆ = ಓದುತ್ತಾನೆ
ಆಡು + ಉತ್ತ + ಆನೆ = ಆಡುತ್ತಾನೆ
ಕಾಲಸೂಚಕ ಪ್ರತ್ಯಯ
ಕ್ರಿಯೆಯು ಯಾವ ಕಾಲದಲ್ಲಿ ನಡೆದಿದೆ ಎಂದು ಸೂಚಿಸುವ ಪ್ರತ್ಯಯಗಳನ್ನು ಕಾಲಸೂಚಕ ಪ್ರತ್ಯಯಗಳು ಎಂದು ಕರೆಯುವರು.
ಉದಾ- ಮಾಡುತ್ತಾನೆ, ಮಾಡಿವ, ಮಾಡಿದ
ಕಾಲರೂಪ ಕ್ರಿಯಾಪದ
ಕಾಲಸೂಚಕ ಪ್ರತ್ಯಯವನ್ನು ಆಧರಿಸಿ 3 ಕಾಲಗಳನ್ನು ಗುರುತಿಸಲಾಗಿದೆ.
1. ವರ್ತಮಾನಕಾಲ
ಯಾವೂದೇ ಕ್ರಿಯಾಪದದಲ್ಲಿ ‘ಉತ್ತ’ ಎಂಬ ಪ್ರತ್ಯಯ ಇದ್ದರೆ ಅದನ್ನು ವರ್ತಮಾನಕಾಲದ ಕ್ರಿಯಾಪದ ಎಂದು ಕರೆಯುವರು.
ಉದಾ- ಉತ್ತ, ಓದುತ್ತಿದ್ದಾನೆ, ಮಾಡುತ್ತಾನೆ, ಓಡುತ್ತಾನೆ
2. ಭೂತಕಾಲ ಕ್ರಿಯಾಪದ
ಯಾವುದೇ ಕ್ರಿಯಾಪದದಲ್ಲಿ ‘ದ’ ಎಂಬ ಪ್ರತ್ಯಯ ಇದ್ದರೆ ಅದು ಭೂತಕಾಲದ ಕ್ರಿಯಾಪದವಾಗುತ್ತದೆ.
ಉದಾ- ಓದಿದನು, ಮಾಡಿದನು, ಓಡಿದನು
3. ಭವಿಷ್ಯತ್ ಕಾಲ
ಯಾವುದೇ ಕ್ರಿಯಾಪದದಲ್ಲಿ ‘ವ’ ಎಂಬ ಪ್ರತ್ಯಯ ಇದ್ದರೆ ಅದೇ ಭವಿಷ್ಯತ್ ಕಾಲದ ಕ್ರಿಯಾಪದವಾಗಿರುತ್ತದೆ.
ಉದಾ- ಓದುವನು, ಮಾಡುವನು, ಬರುವನು, ಹೋಗುವನು.
ಅರ್ಥರೂಪ ಕ್ರಿಯಾಪದಗಳು
ಇಲ್ಲಿ ಕ್ರಿಯೆಯ ಅರ್ಥವನ್ನು ಆಧರಿಸಿ ಕ್ರಿಯಾಪದಗಳಿರುತ್ತವೆ.
1. ವಿದ್ಯರ್ಥಕ ಕ್ರಿಯಾಪದ
ಯಾವುದೇ ಒಂದು ಕ್ರಿಯಾಪದದ ಅರ್ಥದಲ್ಲಿ ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ, ಅರ್ಥದಲ್ಲಿ ಬಳಕೆಯಾದರೆ ಅಂತಹ ಪದಗಳಿಗೆ ವಿದ್ಯರ್ಥಕ ಕ್ರಿಯಾಪದಗಳು ಎಂದು ಕರೆಯುತ್ತೇವೆ.
ಉದಾ- ನಿನಗೆ ಒಳ್ಳೆಯ ಅಂಕಗಳು ದೊರಕಲಿ- ಹಾರೈಕೆ,
ಎಲ್ಲರು ಪಾಠವನ್ನು ಬರೆಯಿರಿ- ಆಜ್ಞೆ
ನಿನ್ನ ಕಾರ್ಯ ಸುಸೂತ್ರವಾಗಿ ಜಯಗೊಳ್ಳಲಿ- ಆಶೀರ್ವಾದ
2. ಸಂಭವನಾರ್ಥಕ ಕ್ರಿಯಾಪದ
ಕ್ರಿಯಾಪದದ ಅರ್ಥದಲ್ಲಿ ಕ್ರಿಯೆ ನಡೆಯುವಿಕೆ ‘ ಸಂಶಯ’ ಅಥವಾ ‘ ಊಹೆ’ , ‘ಅನುಮಾನ’ ಎಂಬ ಅರ್ಥದಲ್ಲಿ ಬಳಕೆಯಾದರೆ ಅದು ಸಂಭವನಾರ್ಥಕ ಕ್ರಿಯಾಪದವಾಗುತ್ತದೆ.
ಉದಾ- ಅವರು ಇಂದು ಬಂದಾರು, ಅವನು ಹಣ್ಣು ತಿಂದಾನು ನಾನು ಹೋದರೆ ಹೋದೆನು
3. ನಿಷೇಧಾರ್ಥಕ ಕ್ರಿಯಾಪದ
ಒಂದು ಕ್ರಿಯಾಪದದ ಅರ್ಥ ಕ್ರಿಯೆ ನಡೆದಿಲ್ಲ ಎಂಬ ಅರ್ಥದಲ್ಲಿ ಬಳಕೆಯಾದರೆ ಅದನ್ನು ನಿಷೇಧಾರ್ಥಕ ಕ್ರಿಯಾಪದ ಎಂದು ಕರೆಯುವರು.
ಉದಾ- ಅವನು ಇಂದು ಬಾರನು, ನಾಳೆ ಊಟ ಮಾಡರು, ಬಾರರು, ಹೋಗರು
ಆಖ್ಯಾತ ಪ್ರತ್ಯಯಗಳು
ಕ್ರಿಯಾಪದದ ಕೊನೆಯಲ್ಲಿ ಬರುವ ಪ್ರತ್ಯಯವನ್ನು ಆಖ್ಯಾತ ಪ್ರಯ್ಯಯ ಎನ್ನುತ್ತಾರೆ.
ಉದಾ- ಓದುತ್ತಾನೆ – ಆನೆ
ಓದುತ್ತಾಳೆ- ಆಳೆ
ನೋಡುವಳು- ಅಳು
ಹಾಡುವರು- ಅರು
ಕ್ರಿಯಾಪದದಲ್ಲಿ ಹಿಂದೆ ಸೇರುವ ಆಖ್ಯಾತ ಪ್ರತ್ಯಯಗಳು ಲಿಂಗ, ವಚನಗಳು ಸಂಬಂಧಿಸಿದ್ದು ಅದನ್ನು ಸೂಚಿಸುವ ಅಕ್ಷರಗಳ ಗುಂಪಾಗಿರುತ್ತದೆ.
ಉದಾ- ಓದುತ್ತಾನೆ – ಆನೆ- ಪುಲ್ಲಿಂಗ, ಏಕವಚನ
ಮಾಡುವಳು – ಅಳು – ಸ್ತ್ರೀಲಿಂಗ, ಏಕವಚನ
ಹಾಡುವರು – ಅರು – ನಪುಂಸಕಲಿಂಗ – ಬಹುವಚನ
ಕ್ರಿಯಾಪದದ ಕಾಲಪಲ್ಲಟ
ಒಂದು ಕಾಲದ ಕ್ರಯಾಪದವನ್ನು ಇನ್ನೊಂದು ಕಾಲದ ಪ್ರತ್ಯಯದೊಂದಿಗೆ ಬಳಸಿ ಹೇಳುವುದೇ ಕ್ರಿಯಾಪದದ ಕಾಲಪಲ್ಲಟ ಎನ್ನುವರು.
ಉದಾ- ಅವನು ರೈಲಿನಲ್ಲಿ ಹೋಗುವನು – ಭವಿಷ್ಯತ್.
ಅವನು ರೈಲಿನಲ್ಲಿ ಹೋಗುತ್ತಾನೆ – ವರ್ತಮಾನಕಾಲ
ಕರ್ತರಿ ಮತ್ತು ಕರ್ಮಣಿ ಪ್ರಯೋಗ
ಕರ್ತರಿ ಪ್ರಯೋಗ –
ಒಂದು ವಾಕ್ಯದಲ್ಲಿ ಕರ್ತೃ ಪ್ರಧಾನವಾಗಿದ್ದು, ಕ್ರಿಯಾಪದವು ಅದನ್ನು ಅನುಸರಿಸುವಙತಿದ್ದರೆ ಅದನ್ನು ಕರ್ತೃರಿ ಪ್ರಯೋಗ ಎನ್ನುವರು. ಕನ್ನಡದಲ್ಇ ಹೆಚ್ಚಾಗಿ ಬಳಕೆಯ್ಲಿರುವುದು ಇದೆ. ಇದರಲ್ಲಿ ಪ್ರಥಮ ವಿಭಕ್ತಿ ಪ್ರತ್ಯಯ ಹೆಚ್ಚು ಬಳಕೆಯಾಗುತ್ತದೆ.
ಉದಾ- ಹುಡುಗರು ಆಟವನ್ನು ಆಡಿದರು, ಲಕ್ಷ್ಮಿಯು ಶಾಲೆಗೆ ಹೋದಳು,
ಕರ್ಮಣಿ ಪ್ರಯೋಗ
ಒಂದು ವಾಕ್ಯದಲ್ಲಿ ಕರ್ಮ ಪದವು ಪ್ರಧಾನವಾಗಿ ಬರುವಂತಿದ್ದರೆ ಅದನ್ನು ಕರ್ಮಣಿ ಪ್ರಯೋಗ ಎನ್ನುವರು.
ಇಲ್ಲಿ ಕರ್ತೃ ಪದವು ತೃತೀಯ ವಿಭಕ್ತಿ ಪ್ರತ್ಯಯವನ್ನು , ಕರ್ಮ ಪದವು ಪ್ರಥಮ ವಿಭಕ್ತಿ ಪ್ರತ್ಯಯವನ್ನು ಹೊಂದಿರುತ್ತದೆ.
ಉದಾ- ಹುಡುಗರಿಂದ ಆಟವು ಆಡಲ್ಪಟ್ಟಿತು, ಲಕ್ಷ್ಮಿಯಿಂದ ಹಣ್ಣು ತಿನ್ನಲ್ಪಟ್ಟಿತು,