Part – 9 ಕನ್ನಡ ವ್ಯಾಕರಣ #Kannada Vyakarana – ಅಲಂಕಾರಗಳು

Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ‌. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ಅಲಂಕಾರಗಳು

Alankaragalu - Kannada Vyakarana
Alankaragalu – Kannada Vyakarana

Kannada Vyakarana – ಅಲಂಕಾರಗಳು

Kannada Vyakarana ಅಲಂಕಾರಗಳು ಎಂದಾಕ್ಷಣ ಸೌಂದರ್ಯ ಎಂಬುದು ಅರಿವಿಗೆ ಬರುತ್ತದೆ. ಇಲ್ಲಿ ಅಲಂಕಾರ ಎಂಬುದು ಕಾವ್ಯಕ್ಕೆ ಒದಗಿಸುವ ಸೌಂದರ್ಯ ಎಂದೇ ಕರೆಯಬಹುದು. ಬಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇದನ್ನು ಬಳಸಿಕೊಳ್ಳಲಾಗುತ್ತದೆ.  ಅಂದರೆ ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಚಮತ್ಕಾರಕ್ಕೆ ಅಲಂಕಾರ ಎಂದು ಕರೆಯಬಹುದು. ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ‘ ಅಲಂಕಾರವೆಂದರೆ ಯಾವುದು ಭಾಷೆಗೆ ಚೆಲುವು, ಶಕ್ತಿ, ತಂದುಕೊಡುತ್ತೋ ಅದೆಲ್ಲಾ ಅಲಂಕಾರ ಎಂದು ಹೇಳಲಾಗುತ್ತಿತ್ತು, ಅದನ್ನೇ ಕಾವ್ಯದ ಚರ್ಚೆಯ ಸಂದರ್ಭದಲ್ಲಿ ಲೋಕಭಾಷೆ(ಸಾಮಾನ್ಯ ಭಾಷೆಯಲ್ಲಿ), ಶಾಸ್ತ್ರ ಭಾಷೆಯಲ್ಲಿ ಇಲ್ಲ ಒಂದು ಬಗೆಯ “ಉಕ್ತಿ ವೈಚಿತ್ರ”ವನ್ನು ಅಲಂಕಾರ ಎಂದು ಕರೆಯಲಾಗುತ್ತದೆ.

ಅಲಂಕಾರ ಎಂಬುದು ‘ಅಲಂ’ ಎನ್ನುವ ಧಾತುವಿನಿಂದ ಬಂದಿದೆ. ಅಂದರೆ ಸಹಜ ಸೌಂದರ್ಯವನ್ನು ಎದ್ದುಕಾಣುವಂತೆ ಮಾಡುವುದು ಅಲಂಕಾರವಾಗಿದೆ. 

ಅಲಂಕಾರದಲ್ಲಿ 2 ವಿಧಗಳಿವೆ

1. ಶಬ್ದಾಲಂಕಾರ

2. ಅರ್ಥಾಲಂಕಾರ

1.ಶಬ್ದಾಲಂಕಾರ

ಎಲ್ಲಿ ಶಬ್ದದಿಂದಲೇ ಕಾವ್ಯಕ್ಕೆ ಸೊಗಸು ಉಂಟಾಗುತ್ತೊ ಅದು ಶಬ್ದಾಲಂಕಾರವಾಗುತ್ತದೆ.  ಶಬ್ದದ ರಚನೆ ಮತ್ತು ಪದಗಳ ಜೋಡಣೆಯಲ್ಲಿ ಚಮತ್ಕಾರದಿಂದ ಮಾತಿನ ಅಥವಾ ಕಾವ್ಯದ ಸೌಂದರ್ಯ ಹೆಚ್ಚಿಸುವುದನ್ನು ಶಬ್ದಾಲಂಕಾರ ಎನ್ನುವರು. 

ಉದಾ- ಪಾತರಗಿತ್ತಿ ಪಕ್ಕ ನೋಡಿದೇನೆ ಪಕ್ಕ

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

Read this one: https://rvwrittingblog.blogspot.com/2024/01/blog-post.html

ಶಬ್ದಾಲಂಕಾರದಲ್ಲಿ 3 ವಿಧಗಳು

1. ಅನುಪ್ರಾಸ –

ಯಾವುದಾದರೊಂದು ಅಕ್ಷರ ಮತ್ತೆ ಮತ್ತೆ ಪುನರುತ್ಪತ್ತಿಯಾದರೆ ಅದನ್ನು ಅನುಪ್ರಾಸ ಎನ್ನುವರು, ಅರ್ಥಗಳು ಪುನರಾವರ್ತನೆಗೊಳ್ಳುವ ಮೂಲಕ ಆ ಮಾತಿಗೆ ಸೌಂದರ್ಯ ಹೆಚ್ಚು ಬರುವಂತಿದ್ದರೆ ಅದೇ ಅನುಪ್ರಾಸ. 

ಉದಾ – ತರಿಕೆರೆ ಏರಿ ಮೇಲೆ  ಮೂರು ಕರಿ ಕುರಿ ಮರಿ ಮೇಯುತ್ತಿತ್ತು.

* ಸುರಗಿರಿದೊರಗಿದಬಿರುದಾರಕರುಳಂ ಕೊರೆಕೊರೆದು ಮರುಳಿರುಳ ತಿಂಬೆಡೆಯೊಳ್

* ತುಪ್ಪದ ಮಾತಿಗೆ ಒಪ್ಪಿಕೊಂಡು ತಿಪ್ಪೆ ಪಾಲಾದ.

ಪದ್ಯದ ಸಾಲಿನಲ್ಲಿ ಪುನರಾವರ್ತನೆಗೊಳ್ಳುವ ಅಕ್ಷರಗಳ ಆಧಾರದ ಮೇಲೆ 2 ವಿಧಗಳು

೧. ವೃತ್ಯಾನುಪ್ರಾಸ –

ಒಂದೋ ಅಥವಾ ಒಂದಕ್ಕಿಂತ ಹೆಚ್ಚು ಅಕ್ಷರಗಳು ಅಥವಾ ವ್ಯಂಜನಗಳು ಪುನರಾವರ್ತನೆಯಾದರೆ ಅದನ್ನು ವೃತ್ಯಾನುಪ್ರಾಸ ಎನ್ನುವರು. 

ಉದಾ- ಎಳೆಗಿಳಿಗಳ ಬಳಗಗಳು

ನಳನಳಿಸಿ ಬೆಳೆದ ಕಳವೆಯ

೨. ಛೇಕಾನುಪ್ರಾಸ – 

ಪದ್ಯದ ಸಾಲಿನಲ್ಲಿ ಎರಡೆರಡು ವ್ಯಂಜನ ಪದಗಳು ಜೊತೆಜೊತೆಯಾಗಿ ಪ್ರಯೋಗಗೊಳ್ಳುವುದಾಗಿದೆ. 

ಉದಾ- ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.

2. ಯಮಕ –

ಇಲ್ಲಿ ಮೂರು ಅಥವಾ ಅದಕ್ಕಿ.ತ ಹೆಚ್ಚು ಅಕ್ಷರಗಳಿರುವ ಪದಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೆ ಅದನ್ನು ಯಮಕ ಎನ್ನುವರು. 

ಉದಾ- ಕರಿಯ ತಂಗಿಯ ಕರಿಯಲೆಂದು ಕರಿಯನೇರಿ ಹೋದೆಡೆ ಅವಳು

ಹೋಳಿಗೆಯ ಕರಿಯಲಾರಂಭಿಸಿದಳು

ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿಂ ಮಳೆಗಳಿಂ

ದಲ್ಲಿಗಲ್ಲಿಗೆ ವನಸ್ಥಳಗಳಿಂ ಕೊಳಗಳಿಂ

ಮಲ್ಲಿಗೆಯಲ್ಲಿದೆ ಸಂಪುಗೆಯಲ್ಲದೆ

ದಾಳಿಂಬೆಮಲ್ಲದೊಪ್ಪುವ ಚೆಂದೆಂಗಲ್ಲದೆ

ಮಾವಲ್ಲದೆ ಕಾಂಗಲ್ಲದೆ ನಾಡೊಳ್

3. ಚಿತ್ರಕವಿತ್ವ

ಚಿತ್ರ ವಿಚಿತ್ರ ರೀತಿಯಲ್ಲಿ ಅಕ್ಷರ, ಶಬ್ದಗಳನ್ನಾಗಲಿ ಕುಶಲತೆಯಿಂದ ಪದಗಳನ್ನು ಬಳಸುವುದಕ್ಕೆ ಚಿತ್ರಕವಿತ್ವ ಎನ್ನುವರು. 

ಉದಾ- ಮಾನಿನಿ ಮುನ್ನ ಮಾಂ ನಾನರ ನೀನಾ ನಿನ್ನನುಮಾನವೇಂ

ನನ್ನನೀನೇನನ್ನು

ನಿನ್ನನಾನೇನನ್ನೆ

ನನ್ದನ ನನ್ದನ ನಿನ್ನೊ

ನ್ದನ್ದದ ಮೈಮುನ್ದೆ ನಿನ್ದುದೆನ್ದೆಲೆ ಮುದದಿ

Read this one: https://rvwritting.com/kattuvevu-navu/

ಅರ್ಥಾಲಂಕಾರಗಳು

ಎಲ್ಲಿ ಶಬ್ದದಿಂದಲ್ಲದೆ ಅರ್ಥದಿಂದಲೇ ಕಾವ್ಯಕ್ಜೆ ಸೋಗಸು ಉಂಟಾಗುತ್ತದೋ ಅದನ್ನೇ ಅರ್ಥಾಲಂಕಾರ ಎನ್ನುವರು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಇಲ್ಲಿ ಬಳಸಿರುವ ಪದಗಳ ಅರ್ಥ ಚಮತ್ಕಾರದಿಂದ ಮಾತಿನ ಅಥವಾ ಕಾವ್ಯದ ಸೌಂದರ್ಯ ಹೆಚ್ಚಾಗುವುದನ್ನು ಅರ್ಥಾಲಂಕಾರ ಎನ್ನುವರು. 

ಉದಾ- ಸೀತೆಯ ಮುಖ ಚಂದ್ರನಂತೆ ಇದೆ

ಇಲ್ಲಿ ಕೆಲವು ವಿಧಗಳಿವೆ 

1. ಉಪಮಾಲಂಕಾರ

ಉಪಮೆ ಎಂದರೆ ಸಾದೃಶ್ಯ ಸಂಪತ್ತು ಅಥವಾ ಹೋಲಿಕೆ. ಇಲ್ಲಿ 2 ವಸ್ತು ಅಥವಾ ಪದಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಸೂಚಿಸುತ್ತದೆ. ಅಂದರೆ ಎರಡು ವಸ್ತುಗಳಲ್ಲಿರುವ ಸಾದೃಶ್ಯ ಸಂಪತ್ತನ್ನು ಹೇಳುವ ಅಲಂಕಾರವೇ ಉಪಮಾಲಂಕಾರ. ಇಲ್ಲಿ ಸಾದೃಶ್ಯವೆಂದರೆ ಸುಂದರವಾದ ಹೋಲಿಕೆ ಎಂದರ್ಥ. 

ಉದಾ- ಅವಳ ಮುಖ ಚಂದ್ರನಂತೆ ದುಂಡಗಿದೆ

ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು. 

ಇದರಲ್ಲಿ ಬಹುಮುಖ್ಯವಾಗಿ 4 ಅಂಶಗಳನ್ನು ಗಮನಿಸಬೇಕಿದೆ. 

* ಉಪಮಾನ – ಯಾವ ವಸ್ತುವಿಗೆ ಹೋಲಿಸುತ್ತೇಯೋ ಅಂದರೆ ಹೋಲಿಸಲು ಇರುವ ಮಾನವಾದ ವಸ್ತು ಹಾಗೆಯೇ ಇದನ್ನು ಅವರ್ಣ್ಯ ಎನ್ನಲಾಗುತ್ತದೆ.

* ಉಪಮೇಯ – ಯಾವ ವಸ್ತುವನ್ನು ಹೋಲಿಸುತ್ತದೆಯೋ ಅಂದರೆ ಹೋಲಿಸಲು ಇರುವ ಪದ ಇದನ್ನು ವರ್ಣ್ಯ ಎನ್ನಲಾಗುತ್ತದೆ.

* ಉಪಮವಾಚಕ – ಸಂಬಂಧಸೂಚಕ ಅಂದರೆ ಹೋಲಿಕೆಯನ್ನು ಸೂಚಿಸುವ ಪದಗಳು – ಅಂತೆ, ಹಾಂಗೆ, ವೊಲ್.

* ಸಾಧಾರಣಧರ್ಮ/ಸಮಾನಧರ್ಮ – ಉಪಮಾನ, ಉಪಮೇಯಕ್ಕೂ ಹೊಂದಿಕೆ ಆಗುವಂತಹ ಕ್ರಿಯಾಪದ

ಇದರಲ್ಲಿ 2 ವಿಧಗಳಿವೆ

೧. ಪೂರ್ಣೋಪಮೆ – ಉಪಮಾನ, ಉಪಮೇಯ, ಉಪಮಾವಾಚಕ, ಸಮಾನಧರ್ಮ ಇವು 4 ಇದ್ದರೆ ಇದನ್ನು ಪೂರ್ಣೋಪಮೆ ಎನ್ನುವರು. 

೨. ಲುಪ್ತೋಪಮೆ – ಉಪಮಾನ, ಉಪಮೇಯ, ಉಪಮಾವಾಚಕ, ಸಮಾನಧರ್ಮ ಇದರಲ್ಲಿ ಒಂದು ಲೋಪವಾದರೂ ಅದನ್ನು ಲುಪ್ತೋಪಮೆ ಎನ್ನುವರು.

2. ರೂಪಕಾಲಂಕಾರ 

ಇಲ್ಲಿ ಉಪಮಾನಕ್ಕೂ ಉಪಮೇಯಕ್ಕೂ ಅಭೇದ ಕಲ್ಪಿಸಿ ಹೇಳುವುದಾಗಿದೆ. ಹೋಲಿಕೆ ಮಾಡದೆ ಅದೇ ಇದು ಎಂದು ಹೇಳುವುದಾಗಿದೆ.

ಉದಾ- ನಿನ್ನ ಮುಖ ಚಂದ್ರ

ಹೊನ್ನ ಬಿಸಿಲು ಸೂಸಿಸೂಸಿ

3. ಉತ್ಪ್ರೇಕ್ಷಾಲಂಕಾರ

ಅತಿಶಯವಾದ ಅಂಶಗಳನ್ನು ಒಳಗೊಳ್ಳುವ ಅಲಂಕಾರವಾಗಿದೆ. ಅಂದರೆ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಭಾವಿಸಿಕೊಳ್ಳಲಾಗುತ್ತದೆ. ಇಲ್ಲಿ ಅತಿಯಾಗಿ ಕಲ್ಪಿಸಿ ವರ್ಣಿಸುವುದಾಗಿದೆ. 

ಉದಾ- ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು.

ಇದೇ ಖಂಡಿತವಾಗಿಯೂ ಚಂದ್ರ

ರಕ್ತವೆಂಬ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು

ಕಲ್ಲಿನಂತೆ ಆನೆಗಳು ಸತ್ತು ಬಿದ್ದಿದ್ದವು. 

4. ಶ್ಲೇಷಾಲಂಕಾರ

ಒಂದು ಶಬ್ದಾನುಪೂರ್ವದಲ್ಲಿ ನಾನಾರ್ಥಗಳನಿಟ್ಟು ಆ ಅರ್ಥಗಳ ಮೂಲಕ ಬೇರೆ ಬೇರೆ ವಸ್ತುಗಳನ್ನು ವರ್ಣಿಸುವುದು. 

  ಬೇರೆ ಬೇರೆ ಅರ್ಥವನ್ನು ಹೊಂದಿದ ಒಂದೇ ಶಬ್ದವು ಉಪಮೇಯ ಮತ್ತು ಉಪಮಾನಗಳಿಗೆ ಬೇರೆ ಬೇರೆ ಅರ್ಥ ನೀಡುವಂತೆ ವರ್ಣಿಸಲ್ಪಟ್ಟಿದ್ದರೆ ಅದು ಶ್ಲೇಷಾಲಂಕಾರ ಎನ್ನುವರು. 

ಉದಾ- ಹೊಳೆಯ ದಡದಲ್ಲಿರುವ ಮಣ್ಣು ಹೊಳೆಯುತ್ತಿತ್ತು.

ಅತಿಶಯ ಪದಾರ್ಥ ನಿಖರ

ಪ್ರತೀತಿಯಂ ಪಡೆವ ಪಾದ ವಿನ್ಯಾಸಂಭೂ

ನೂತಮಾಗದಲ್ತೆ ನಿರ್ದೋ

ಷತೆಯಿಂದ ಸಮಂತು ಕವಿಗಂ ರವಿಗಂ

5. ಅರ್ಥಾಂತರನ್ಯಾಸ

ಸಾಮಾನ್ಯಾರ್ಥ, ವಿಶೇಷಾರ್ಥಗಳೆರಡೂ ಉಕ್ತವಾಗಿದ್ದು ಒಂದರಿಂದ ಮತ್ತೊಂದು ಸಮರ್ಥಿತವಾಗುತ್ತಿದ್ದರೆ ಅದೇ ಇದು. ಅಂದರೆ ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲೆ ಸಮರ್ಥನೆ ನೀಡುವುದನ್ನು ಅರ್ಥಾಂತರನ್ಯಾಸ ಎನ್ನುವರು. 

ಉದಾ- ಆತನು ಉಂಡಮನೆಗೆ ಕೇಡುಬಗೆದನು

ಕೃತಘ್ನರು ಏನನ್ನು ತಾನೆ ಮಾಡುವುದಿಲ್ಲ?

6. ದೃಷ್ಟಾಂತಾಲಂಕಾರ

ಎರಡು ಬೇರೆ ಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಎಂಬಂತೆ ತೋರುತ್ತಿದ್ದರೆ ಅದನ್ನು ದೃಷ್ಟಾಂತಾಲಂಕಾರ ಎನ್ನುವರು. 

ಉದಾ- ಮಾತು ಬಲ್ಲವನಿಗೆ ಜಗಳವಿಲ್ಲ

ಊಟ ಬಲ್ಲವನಿಗೆ ರೋಗವಿಲ್ಲ.

ಊರು ಉಪಕಾರ ಅರಿಯದು

ಹೆಣ ಶೃಂಗಾರ ಅರಿಯದು

7. ದೀಪಕಾಲಂಕಾರ

ಇದರಲ್ಲಿ ಎರಡು ವಸ್ತುಗಳಿದ್ದು ಒಂದು ಪ್ರಸ್ತುತವಿದ್ದು ಇನ್ನೊಂದು ಅಪ್ರಸ್ತುತವಾಗಿರುತ್ತದೆ. ಈ ಎರಡರಲ್ಲೂ ಒಂದೇ ಗುಣಧರ್ಮವಿರುತ್ತದೆ. ಅಪ್ರಸ್ತುತವನ್ನು ವರ್ಣಿಸುವ ಮೂಲಕ ಪ್ರಸ್ತುತ ವರ್ಣಿಸುವುದು. 

ಉದಾ- 

ಗುರುವಿಲ್ಲದ ಮಠ, ನೀರಿಲ್ಲದ ಬಾವಿ, ತಾಯಿಯಿಲ್ಲದ ತವರು

Leave a Comment

Your email address will not be published. Required fields are marked *

Scroll to Top