2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕನಲ್ಲಿ ನಡೆಯಲಿರುವ ಟಿ20 ವರ್ಲ್ಡ್ ಕಪ್ ಗೆ ಮೊದಲ ಬಾರಿಗೆ ಆಫ್ರಿಕಾ ಪ್ರದೇಶದಿಂದ ಉಗಾಂಡಾ ದೇಶ ಅರ್ಹತೆ ಗಳಿಸಿದ ಇದರಿಂದ ಜಿಂಬಾಬ್ವೆ ಈ ಟೂರ್ನಿಯಿಂದ ಹೊರ ಬಿದ್ದಿದೆ.
T20 ವರ್ಲ್ಡ್ ಕಪ್ ನಲ್ಲಿ ಒಟ್ಟು 20 ತಂಡಗಳು ಆಡಲಿವೆ. ಅವನ್ನು ತಲ 5 ತಂಡಗಳ ನಾಲ್ಕು ಗುಂಪುಗಳನ್ನಾಗಿ ಮಾಡಲಾಗುತ್ತದೆ. ಸೂಪರ್ 8 ಹಂತದಲ್ಲಿ ನಾಲ್ಕು ಗುಂಪುಗಳ 2 ಗುಂಪುಗಳ ಅಗ್ರ ಎರಡು ತಂಡಗಳು ಸೆಮಿ ಫೈನಲ್ ಗೆ ಅರ್ಹತೆ, ಕೊನೆಗೆ ಎರಡು ತಂಡಗಳು ಫೈನಲ್ ಹಂತಕ್ಕೆ ಬರಲಿವೆ. ಆಫ್ರಿಕಾದಲ್ಲಿ ನಡೆದ ಕ್ವಾಲಿಫೈಯರ್ ನಲ್ಲಿ ಉಗಾಂಡಾ ದೇಶ ರುವಾಂಡವನ್ನು ಸೋಲಿಸಿ ತನ್ನ ವಿಶ್ವಕಪ್ ಯಾತ್ರೆಗೆ ಹೊರಡುವ ಟಿಕೆಟ್ ಅನ್ನು ಪಡೆಯಿತು.
ಇದು ICC World Cup ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದೆ. ಇದರೊಂದಿಗೆ ನಮೀಬಿಯಾ ಜೊತೆ ವಿಶ್ವಕಪ್ ಗೆ ಅರ್ಹತೆ ಪಡೆದ ಎರಡನೇ ರಾಷ್ಟ್ರವಾಗಿ ಉಗಾಂಡ ಹೊರಹೊಮ್ಮಿದೆ. 1998ರಿಂದ ಉಗಾಂಡಾದೇಶ ICC ಯ ಸದಸ್ಯ ದೇಶವಾಗಿದ್ದರು ಇಲ್ಲಿವರೆಗೆ ಟೆಸ್ಟ್ ಅಥವಾ ಏಕದಿನ ತಂಡದ ಸ್ಥಾನಮಾನ ದೊರೆತಿಲ್ಲ.
T20 ವರ್ಲ್ಡ್ ಕಪ್ ಗೆ ಅರ್ಹತೆ ಪಡೆದಿರುವ ಓಮನ್, ನೇಪಾಳ, ಪಪುವ ನ್ಯೂಗಿನಿಯ ಹಾಗೂ ಕೆನಡಾ, ನಮೀಬಿಯಾ ತಂಡಗಳೊಂದಿಗೆ ಉಗಾಂಡ ಅರ್ಹತೆಗಿಟ್ಟಿಸಿರುವ ತಂಡಗಳಾಗಿವೆ. ಜೊತೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಆದಿತ್ಯವಹಿಸಿರುವ ದೇಶವಾಗಿರುವುದರಿಂದ ಆದೇಶದ ತಂಡವು ಅರ್ಹತೆ ಪಡೆದಿದೆ.
T20 World Cup ನಲ್ಲಿ ಭಾಗವಹಿಸಲಿರುವ ತಂಡಗಳು.
- West Indies
- America
- Australia
- England
- India
- Scotland
- Papua New guinea
- Canada
- Namibia
- Uganda
- Netherlands
- New Zealand
- Pakistan
- South Africa
- Srilanka
- Afghanistan
- Bangladesh
- Ireland
- Nepal
- Oman
ಇದರ ಮೂಲಕ ಉಗಾಂಡಾ ಟಿ 20 ವರ್ಲ್ಡ್ ಕಪ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವಕಪ್ ಕ್ರಿಕೆಟ್ನಲ್ಲಿ ಪ್ರದರ್ಶಿಸಲು ವೇದಿಕೆಯನ್ನು ಸಜ್ಜುಗೊಳಿಸಿಕೊಂಡಿದೆ