ತಾನಾಜಿ ಕಥನ ಕವನದ ವಿಶ್ಲೇಷಣೆ ಅಥವಾ ಸಾರಾಂಶ – Summary of Thanaji poem

Thanaji - ತಾನಾಜಿ
Thanaji – ತಾನಾಜಿ

Thanaji – ಕವಿ ಕಾವ್ಯ ಪರಿಚಯ : ಕೆ.ವಿ. ಪುಟ್ಟಪ್ಪ

Kuvempu
Kuvempu

Thanaji – ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿದ್ದಾರೆ.

ಕೊಳಲು, ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯತ್‌ರಷ್ಯಾ, ಕೃತ್ತಿಕೆ ಮೊದಲಾದ ಕವನ ಸಂಕಲನಗಳು, “ಕಾನೂರು ಸುಬ್ಬಮ್ಮಹೆಗ್ಗಡತಿ” ಮತ್ತು ‘ಮಲೆಗಳಲ್ಲಿ ಮದುಮಗಳು’ ಶ್ರೇಷ್ಠ ಕಾದಂಬರಿಗಳು. ಸಣ್ಣಕತೆ, ನಾಟಕ, ಸಾಹಿತ್ಯ ವಿಮರ್ಶೆ, ಆತ್ಮಚರಿತ್ರೆ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಪ್ರಸಿದ್ದರಾದ ಇವರು ವಿಶ್ವ ಕವಿಯಾಗಿದ್ದಾರೆ.

Saviraru Nadigalu poem Videohttps://youtu.be/7d62cpMSq2c?si=t09cTWWc4vv9v8Au

ಸಿಂಹಗಡದ ಸುತ್ತಲೂ ಕೃಷ್ಣ ಪಕ್ಷದ ಕತ್ತಲು ಕಗ್ಗತ್ತಲು ಎಲ್ಲೆಡೆಯೂ ಬೇರೂರಿತ್ತು ಅದರೊಂದಿಗೆ ತಣ್ಣನೆಯ ಗಾಳಿಯು ಬೀಸುತ್ತಿತ್ತು ಅದು ಕಪ್ಪನ್ನು ಹೆಪ್ಪುಗಟ್ಟಿಸುವಷ್ಟು ಚಳಿಯನ್ನು ಹೊಂದಿರುವ ಗಾಳಿಯಾಗಿ ಬೀಸುತ್ತಿತ್ತು. ಅದರಿಂದ ಅಲ್ಲಿದ್ದ ಜನರೆಲ್ಲ ಭೂಮಿಯೇ ಮಲಗಿರುವಂತೆ ಮಲಗಿದ್ದರು. ನಕ್ಷತ್ರಗಳು ಕೂಡ ಸದ್ದು ಮಾಡದೆ ನಿಶ್ಚಲವಾಗಿದ್ದು ಆಗಬಂದ ಸೈನಿಕರು ಯಾವೊಂದು ಸದ್ದು ಮಾಡದೆ ಕೋಟೆಯ ಸುತ್ತಲಿದ್ದ ಅರಣ್ಯದಲ್ಲಿ ಸದ್ದಾಗುತ್ತಿದ್ದರು ಇವರು ಸಾವಿರದಿನ್ನೂರು ಜನರೆಂದು ಕೋಟೆಯ ಹತ್ತಲು ಮುಂದಾದರೂ ತೀರಾ ಕಡಿದಾದ ಮೆಟ್ಟಲುಗಳಿದ್ದು ಅದನ್ನು ಹತ್ತಿ ಹೋಗಬೇಕು ಸ್ವಲ್ಪ ಯಾಮಾರಿದರು ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿ ಕಡಿದಾಗಿರತಕ್ಕಂತಹ ರೀತಿಯಲ್ಲಿ ಕೋಟೆ ಇತ್ತು. 

ಕೋಟೆಯಲ್ಲಿದ್ದ ಉದಯ ಬಾನು ಎಂಬ ರಾಜ ಅವನಿಗೆ ಔರಂಗಜೇಬನಿಗೆ ಇವನೇ ಪ್ರತಿನಿಧಿಯಾಗಿದ್ದವನು.  ಇವೆಲ್ಲವನ್ನೂ ಒಳಗೊಂಡ ಕೋಟೆ ಸಿಂಹಘಡದಲ್ಲಿತ್ತು. ಇಲ್ಲಿಗೆ ಶಿವಾಜಿಯ ಸೈನ್ಯದ ಸೈನಿಕರು ಆ ಕುರುಚಲು ಕಾಡಿನ ತಗ್ಗು ದಿಣ್ಣೆಗಳನ್ನು ಹತ್ತಿ ಇಳಿದು ಬಂದರು. 

Navellaru onde jati – also read :https://rvwritting.com/navellaru-onde-jaathi/

ತಾನಾಜಿಯು ಸೇನಾಧಿಪತಿಯಾಗಿ ಸೂರ್ಯಾಜಿಯು ಉಪಸೇನಾಧಿಪತಿಯಾಗಿಯೂ ಅವನ ಅಧೀನದಲ್ಲಿ ದಟ್ಟರಾತ್ರಿಯಲ್ಲಿ 500 ಸೈನಿಕರು ಮಾವಳಿ ಆಳುಗಳು, ವೀರರು ಈ ದುರ್ಗಮ ಕೋಟೆ ಜಯಿಸಲು ಮೌನವಾಗಿ ಮಧ್ಯರಾತ್ರಿ ಬಂದರು. ಬರುವಾಗ ಯಾರಲ್ಲೂ ಪಿಸು ಮಾತಿಲ್ಲ ಅವರು ಹಾಕಿರುವ ಆಭರಣಗಳ ಸದ್ದೂ ಇಲ್ಲದೆ ಐನೂರು ಆಳುಗಳು ಶಿವಾಜಿಯ ಬಲಗೈನಂದಿದ್ದ ತಾನಾಜಿಯನ್ನು ಹಿಂಬಾಲಿಸುತ್ತಾ ನಡೆಯುವಾಗ ಯಾರು ಎದೆಗುಂದದೆ, ಯಾರು ಆಲಸಿಯಾಗದೆ, ಅದರಲ್ಲೂ ತಾನಾಜಿ ಯಾವುದೇ ಭಯವಿಲ್ಲದೆ ಮುಂದೆ ನಡೆದನು. ಸಿಂಹಗಡದ ಕೋಟೆಯ ಹತ್ತಿರ ಬಂಡೆ ಬಂಡೆಗಳನ್ನು ಹತ್ತಿ ಕೋಟೆಯ ಬುಡ ಸೇರಿದರು. ಎಷ್ಟೇ ಚಳಿಯನ್ನು ಬಂಡೆಗಳು ಹೊದ್ದಿದ್ದರು ಅದನ್ನು ಮೀರಿ ತಮ್ಮ ಜಾಗಕ್ಕೆ ಬಂದು ಸೇರಿದರು. 

ನೂಲಿನಿಂದ ಮಾಡಿದ ಏಣಿಯನ್ನು ಹಿಡಿದು ತಾನಾಜಿಯು ಕಡಿದಾಗಿದ್ದ ಕೋಟೆಯ ಆವರಣವನ್ನು ಧೈರ್ಯದಿಂದ ಮೇಲೆ ಮೇಲೆ ಹತ್ತುತ್ತ ಕೆಳಗಿದ್ದ ಸೈನಿಕರಿಗೆ ಕಣ್ಮರೆಯಾದನು. ಆದರೆ ಅವರ ಮನದಲ್ಲಿ ಮೂಡಿದನು ಅವನ ಸಾಹಸವನ್ನು ನೆನೆದು ಮಾವಳಿಗಳು ಹಿಗ್ಗಿದರು. ಅಲ್ಲಿದ್ದ ಸೈನಿಕರಿಗೆ ನಾವು ಯಾವಾಗ ಕೋಟೆ ಹತ್ತುತ್ತೇವೆ ಯಾವಾಗ ಕೋಟೆಯನ್ನು  ಮುತ್ತುತ್ತೇವೆ, ಯಾವಾಗ ಶಿವಾಜಿಗೆ ಈ ವಿಷಯವನ್ನು ತಿಳಿಸುತ್ತೇವೆ  ಕೆಚ್ಚಿನಿಂದ ಇದ್ದರು. ಅರಣ್ಯದಿಂದ ಬಂದಿದ್ದ ಶೂರರು ತಮ್ಮ ಮನದಲ್ಲೇ ಕೋಪದಿಂದ ತನುವಿನ ಮೂಲಕ ಕುದ್ದಿದರು ತಾನಾಜಿಯ ಶೂರತ್ವವನ್ನು ನೆನೆದರು. ಶಿವಾಜಿಯ ಕಾಣಿಕೆಯನ್ನು ನೆನ್ನೆ ಹೋದರೊಂದಿಗೆ ತಮ್ಮ ಕೀರ್ತಿಯನ್ನು ನೆನೆಯುತ್ತಾ ಜಯವನ್ನು ಆರಾಧಿಸುತ್ತ ನಿಂತು ನೋಡುವಾಗ ತಾನಾಜಿ ತನ್ನ ಕೈಕಾಲುವಿನ ಸಹಾಯದಿಂದ ಮೇಲೇರಿ ಕೋಟೆಯ ಮೇಲೆ ಬಂದು ನಿಂತು ಸುತ್ತಾ ಸುಮ್ಮನೆ ನೋಡುತ್ತಾ ನಿಂತನು( ಇದು ನಮ್ಮ ಕೋಟೆ ಇದನ್ನು ಮೊಘಲರು ವಶಪಡಿಸಿಕೊಂಡಿದ್ದಾರೆ).

ಚಂದ್ರನ ಬೆಳಕು ಅವನ ಮೇಲೆ ಬೀಳುವ ಮೂಲಕ ಜಯ ಸಾಧಿಸುತ್ತೇವೆ ಎಂಬ ನಂಬಿಕೆ ಮೂಡಿ ಮೇಲೆ ಬಂದನು. ಹಾಗೆಯೇ ಚಂದ್ರನ ಬೆಳಕು ಕೋಟೆಯ ಮೇಲೆಲ್ಲಾ ಬಿದ್ದು ಹಾಗೆ ತಾನಾಜಿಯು ಸೇನೆಯಯ ಆ ಕೊರೆಯುವ ಚಳಿಯಲ್ಲಿ ಶಾಂತವಾಗಿ ನಿದ್ರಿಸುತ್ತಿದ್ದ ಕೋಟೆಯನ್ನು ಮುತ್ತಿದೆ ಎಂಬಂತಾಯಿತು. 

ತಾನಾಜಿ ಕೋಟೆ ಮೇಲೆ ಹೋಗಿ ನಿಂತು ಇಲ್ಲಿ ಯಾರು ಇಲ್ಲ ಎಂಬ ಸನ್ನೆಯನ್ನು ಮಾಡಿ ಹಗ್ಗವನ್ನು ಕೆಳಗೆ ಬಿಟ್ಟನು. ಆಗ ಕೆಳಗಿದ್ದ ಮಾವಳಿಗಳು ಅವನನ್ನು ನೋಡಿ ಭೂಮಿ ಆಕಾಶ ಒಂದಾಗುವಂತೆ ದೇವರೇ ಆಗಿದ್ದಾನೆ ಎಂಬಂತೆ ಅವನಿಗೆ ಕೈ ಮುಗಿದು ಬಾಗಿದರು. ವೀರಪೂಜೆ ಮಾಡಿ ಸ್ವಲ್ಪವೂ ತಡ ಮಾಡದೆ 300 ಆಳುಗಳು ನೂಲೇಣಿಯನ್ನು ಹತ್ತುವ ಕಡೆ ಸಾಗಿದರು. ಸೂರ್ಯಾಜಿಯ ಜೊತೆ ಇನ್ನೂರು ಆಳುಗಳು ಅಪಾಯ ಉಂಟಾದರೆ ನಾವು ಹೋಗುವ ಎಂದು ಅಲ್ಲೇ ನಿಂತರು. ಸೈನಿಕರು ಮೇಲೆ ಹತ್ತುವಾಗ ಶಬ್ದವು ಹೆಚ್ಚಾಯಿತು ಆಗ ಪಹರೆಯವರಿಗೆ ಶಬ್ದವು ತಿಳಿದು ತಾನಾಜಿಯ ಮೇಲೆ ಬರಲು ಅವನು ಅವನನ್ನು ಕೊಂದು ಮಲಗಿಸಿದನು. ಅವನು ಕೆಳಗೆ ಬಿದ್ದಾಗ ಅವನ ಕಟಾರಿಯು ಕೆಳಗೆ ಬಿದ್ದು ಸದ್ದಾಗುವುದರೊಂದಿಗೆ ಪಹರಿಗಳೆಲ್ಲರೂ ಒಬ್ಬೊಬ್ಬರಾಗಿ ಹೇಳುತಿರಲು ಆಗ ಮರಾಠ ಸೈನಿಕರಿಗೆ ತುತ್ತಾಗುತ್ತ ಹೋದರು.

ಮೇಲೇರಿ ದುರ್ಗವನ್ನು ಅತ್ತಿ ಕೋಟೆಯನ್ನು ಮುಟ್ಟಿದರು ಆಗ ನಿದ್ದೆಯಲ್ಲಿದ್ದ ಕ್ಷತ್ರಿಯರು ಮಾವಳಿಗಳು ಹತ್ತುವ ಸದ್ದು ಕೇಳಿ, ಮಲಗಿದ್ದವರೆಲ್ಲರೂ ಬೇಗ ಬೇಗನೆ ಎದ್ದು ಶಸ್ತ್ರಾಸ್ತ್ರಗಳನ್ನು ತಡುಕಿ, ತೆಗೆದುಕೊಂಡು ಸದ್ದು ಬರುವ ಕಡೆ ನಡೆದರು ಸದ್ದು ಎಲ್ಲಿಂದ ಬರುತ್ತದೆ ಎಂದು ಕೇಳಿ ಆ ಕಡೆಗೆ ಬರಲು ಮುಂದಾದಾಗ ಇನ್ನು ಶಬ್ದವು ಹೆಚ್ಚಾಗಿ ಸಿಂಹಗಡದಲ್ಲಿ ಕಳವಳ ಉಂಟಾಯಿತು. ಕತ್ತಲಲ್ಲಿ ಕೋಲಾಹಲ ಉಂಟಾಗಿ ಇಲ್ಲಿ ಮಿತ್ರರಾರು ಶತ್ರುಗಳಾರು ಯಾರನ್ನು ಯಾರು ಕೊಲ್ಲುತ್ತಿದ್ದೇವೆ ಎಂದು ತಿಳಿಯದಾದಾಗ ಅಲ್ಲಿದ್ದ ಪಹರಿಗಳು ಬೆಂಕಿಯ ಪಂಜನ್ನು ಹತ್ತಿಸಿದಾಗ ಕೋಲಾಹಲ ಇನ್ನೂ ಜಾಸ್ತಿಯಾಯ್ತು. ಇದರಿಂದ ಮಾವಳಿಗಳು ತಮ್ಮ ಕೈಲಿದ್ದ ಖಡ್ಗಗಳ ಮೂಲಕ ಅವರು ಎದುರಿಗಿದ್ದವರನ್ನು ಹಿರಿದು ಮುಂದೆ ಸಾಗುತ್ತಿದ್ದರು. ಜಯ ನಮ್ಮದೇ ಎಂದು ಖಡ್ಗ ಜಳಪಿಸಿ ಮುಂದೆ ಮುಂದೆ ಮುನ್ನುಗ್ಗಿದರು. ತಾನಾಜಿಯ ಯುದ್ಧ ಮಾಡುವ ರೀತಿಯಿಂದ ಅಲ್ಲಿದ್ದ ರಜಪೂತರು ಇವನ ಮುಂದೆ ನಿಲ್ಲದೆ ಹಿಂದೆ ಸರಿದರು. ಕತ್ತಲಿನಲ್ಲಿ  ಯುದ್ಧದ ಭೀಕರತೆಯು ಹೆಚ್ಚಿ ತಾನಾಜಿಯು ಎಲ್ಲರ ಮುಂದೆ ನಿಂತು ಅವರನ್ನು ಹುರಿದುಂಬಿಸಲು ಮುಂದಾದನು. 

ಹೋರಾಡಿ ಸೈನಿಕರೇ ನನ್ನ ನೆಚ್ಚಿನ ಸೈನಿಕರೇ ನಿಮ್ಮಲ್ಲಿ ಕೆಚ್ಚಿದೆ ಕಿಚ್ಚಿದೆ ಇದರ ಮೂಲಕ ರಾಜ್ಯಲಕ್ಷ್ಮಿಯನ್ನು ಹಿಡಿಯೋಣ ಇಲ್ಲಿ ನಾವು ಸತ್ತರೆ ನಮಗೆ ಸ್ವರ್ಗವು ಲಭ್ಯವಾಗುತ್ತದೆ. ಸತ್ತರೆ ಹೋರಾಡಿದ ಕೀರ್ತಿ ನಮಗೆ ದೊರಕುತ್ತದೆ ಎಂದು ಹೇಳಿ ತಾಂಡವಮೂರ್ತಿ, ಭವಾನಿ ದೇವಿಯ, ನೆನೆದು ಕತ್ತಿಯನ್ನು ಜಳಪಿಸುತ ಮುಂದುವರಿದನು. ಯುದ್ಧವು ಹೆಚ್ಚಾಗಿ ರಕ್ತವು ಚೆಲ್ಲಿತು ಅದರ ಮೇಲೆಯೇ ಯುದ್ಧವು ಮುಂದುವರೆಯಿತು. 

ಕೆಳಗೆ ನಿಂತಿದ್ದ ಸೈನಿಕರೆಲ್ಲರೂ ಮೇಲಿನ ಯುದ್ಧದಿಂದ ಕೋಲಾಹಲಕ್ಕೆ ಒಳಗಾಗಿ ಸೂರ್ಯಾಜೀಯ ಮನವು  ಕುಂದಿ ಮೇಲೆರುವವನು. ತಾನಾಜಿ ಅಣ್ಣನಲ್ಲವೇ ಎಂದು ತಿಳಿದು ಅವನಿಗೆ ನೆರವಾಗಬೇಕು ಎಂದು  ಮನದಲ್ಲಿ ಕುಂದಿದನು. ಆಗ ಸೈನಿಕರಿಗೆ ನೂಲೇಣಿಯನ್ನು ಹತ್ತಿ ಕಾಳಗಕ್ಕೆ ನಡೆಯಿರಿ ಎಂದು ಹೇಳಿದಾಗ ಸೈನಿಕರು ಹತ್ತಿ ಹೋಗುವಾಗ ಜಯಕಾರವನ್ನು ಕೂಗುತ್ತಾ ಧಾವಿಸಿ ರಣರಂಗವನ್ನು ನೋಡಿದರು.

ಯುದ್ಧ ನಡೆಯುವಾಗ ಎಲ್ಲೆಲ್ಲೂ ತಾನಾಜಿಯೇ ಆಗಿದ್ದ ಅಲ್ಲಿ ಜಿಮ್ಮುವ ಬಾಣ, ಡಾಲು, ಎಲ್ಲವೂ ಅವನೇ ಆಗಿದ್ದಾನೆ. ಹೀಗೆ ಯುದ್ಧ ಮಾಡುತ್ತಾ ಬಂದಾಗ ಅವನ ಎದುರಿಗೆ ಉದಯ ಬಾನು ಬಂದನು. ಇವರಿಬ್ಬರೂ ಪರಾಕ್ರಮಿಗಳಾಗಿದ್ದರು, ಇಬ್ಬರು ಎದುರುಬದುರಾದರು ಒಬ್ಬೊಬ್ಬರು ದೃಷ್ಟಿಯುಧ್ದ ಮಾಡುತ್ತ ರಕ್ತದ ಕೆಸರಿನಲ್ಲಿ ನಿಂತರು .ಇಬ್ಬರು ಒಬ್ಬರನ್ನೊಬ್ಬರು ತಿವಿದರು.  ಗುರಾಣಿಯ ಅಡ್ಡ ಹಿಡಿದರು ಬಂಡೆಗಳು ಒಂದಕ್ಕೊಂದು ಬಡಿಯುವಂತೆ ಇಬ್ಬರು ಒಬ್ಬರ ಮೇಲೊಬ್ಬರು ಬಿದ್ದರೂ ಎದ್ದರೂ ತಿವಿದರು, ಇಬ್ಬರಿಂದ ರಕ್ತವೂ ಚೆಲ್ಲಿತು ಇದರಲ್ಲಿ ಬಿದ್ದವರಾರು, ಗೆದ್ದವರಾರು ಎಂದು ತಿಳಿಯದೆ ಕತ್ತಿಯನ್ನು ಗುರಾಣಿಯನ್ನು ಅಡ್ಡ ಹಿಡಿಯುತ್ತಾ ಯುದ್ಧದಲ್ಲಿ ಮುಂದಾದರು. ಇವರಿಬ್ಬರೂ ಹೋರಾಡುತ್ತಾ ಸಿಡಿಲು, ಆನೆ, ಸಿಂಹಗಳು ಸೆಣಸುವಂತೆ ಕಾದಾಡುತ್ತಾ ಅವರಿಬ್ಬರಲ್ಲೇ ಯುದ್ಧ ನಡೆಯುತ್ತಾ ಜಯ ಎಂಬುದು ಅವರಿಬ್ಬರಲ್ಲೇ ಇದೆ. ಆಗ ಉದಯ ಭಾನುವಿನ ಪೆಟ್ಟಿಗೆ ತಾನಾಜಿಯ ಕೈಲಿದ್ದ ಗುರಾಣಿಯು ಪುಡಿಪುಡಿಯಾಗಿ ತಾನಾಜಿಯ ಕೈ ಮುರಿಯಿತು. ಆಗಲು ತಾನಾಜಿಯು ವೀರಾವೇಷದಿಂದ ಹೋರಾಡುತ್ತಿರುವಾಗ ಇಬ್ಬರಲ್ಲೂ ರಕ್ತ ಹರಿಯಿತು. ಅವನು ಇವನಿಗೆ ಇವನು ಅವನಿಗೆ ತಿವಿದು ಅವರಿಬ್ಬರೂ ಭೂಮಿಯೆಡೆಗೆ ಬಿದ್ದರು. ರಕ್ತವು ಹರಿಯಿತು ಅವರಿಬ್ಬರು ಸಿಂಹಗಡ ಕೋಟೆಯಲ್ಲಿ ಪ್ರಾಣವನ್ನು ಬಿಟ್ಟರು. 

ತಾನಾಜಿಯ ಸಾವಿನಿಂದ ಹೆದರಿದ ಮಾವಳಿಗಳು ಹಿಂದೆ ಸರಿಯಲು ಮುಂದಾದಾಗ ಸೂರ್ಯಾಜಿ ಅವರನ್ನು ಹುರಿದುಂಬಿಸಲು ಮುಂದಾಗುತ್ತಾನೆ ಆಗ ‘ವೀರರು ಸ್ವರ್ಗ ಸೇರಲು,  ಜೀಜಾಮಾತೆಯ ಪ್ರೀತಿಯ ಕೈತುತ್ತು, ಶಿವಾಜಿರಾಯನ ಮೇಲಿದ್ದ ಭಕ್ತಿಯಲ್ಲಿ, ಕೋಟಿ ಗೆಲ್ಲಬೇಕೆಂದು ಬಂದ ತಾನಾಜಿಯ ಫೋಣ್ಕೆ ಎಲ್ಲಿ ಹೋಯಿತು. ಮಾವಳಿಗಳ ಪೌರುಷ, ವೀರಸತಿಯ ಗಂಡಸರೆಂಬ ಗಂಡಸು ಎಲ್ಲಿ ಎಲ್ಲಿಗೆ ಹೋಗಿದೆ. ಎಲ್ಲಿಗೆ ಓಡುವಿರಿ ನಿಲ್ಲಿ ಇಲ್ಲೇ ಮಡಿದರೆ ನಮಗೆ ವೀರ ಸ್ವರ್ಗವೆಂಬುದು ದೊರೆಯುತ್ತದೆ. ಹಾಗೆ ಸೇನಾನಿಗಳ ತಂದೆಯಾದ ಸೇನಾಪತಿಯ ದೇಹ ಬಿಟ್ಟು ಅವನ ದೇಹವನ್ನು ಶತ್ರುಗಳೆಂಬ ನಾಯಿಗೆ ಬೀದಿ ಪಾಲು ಮಾಡಿ ಕೊಡುವಿರಾ,   ಸ್ವಾಮಿಯನ್ನು ಹಗಲಿ ಹೋಗುವ ಭಯವನ್ನು ಸುಡು ಅಂತಹ ಬಾಳು ನಮಗೆ ಬೇಕಾಗಿಲ್ಲ ಅದನ್ನು ಸುಡಿ, ಇಲ್ಲಿ ಯುದ್ಧದಲ್ಲಿ ಹೋರಾಡಿ ಉಳಿಯಿರಿ ಇಲ್ಲವೇ ಅಳಿಯಿರಿ.

ಕೀರ್ತಿ ಬರುವಾಗ ಅಪಕೀರ್ತಿ ಬರುವಂತೆ ಏಕೆ ಮಾಡುತ್ತೀರಿ ಎಂದು ಸೂರ್ಯಾಜಿಯೂ ಖಂಡಿಸಿ ಹೇಳಿದಾಗ ಅವನ ಮಾತನ್ನು ಕೇಳಿ ಮಾವಳಿಗಳು ಹರಹರ ಮಹಾದೇವ್ ಎಂದು ಮುನ್ನುಗ್ಗಿದರು.  ಗಿರಿಕಾನನಗಳು ಕೂಡ ಯುದ್ಧವನ್ನು ಮೆರೆದವು. ಎಲ್ಲರೂ ಸೇರಿ ಇದರಲ್ಲಿ ಹರ ಹರ ಮಹಾದೇವ್ ಎಂದು ಕೂಡಿ ಯುದ್ಧವನ್ನು ಮುಂದುವರಿಸಿದರು.   ಮಾವಳಿಗಳು ವೀರಾವೇಶದಿಂದ ಬೆದರುವಂತೆ ಯುದ್ಧಮಾಡಲು ಮುಂದಾದಾಗ  ರಜಪೂತರ ಬಲ ಕ್ಷೀಣಿಸಿ ಅವರ ಖಡ್ಗ ಕೆಳಗೆ ಬಿದ್ದು ಇವರ ವೀರಾವೇಶವನ್ನು ನೋಡಿ ಬೆಚ್ಚಿ ವೈರಿಗಳು ಓಡಿ ಹೋದರು. ಇಲ್ಲಿ ಸೂರ್ಯಾಜೀಯ ಅಲ್ಲಿದ್ದ ಸ್ಮಾರಕಗಳಿಗೆ ಬೆಂಕಿ ಹಚ್ಚಿ ಎಂದಾಗ ಸೈನಿಕರು ಹಚ್ಚಿದರು ಅಲ್ಲಿಂದ ಮೇಲೆದ್ದ ಬೆಂಕಿಯ ಜ್ವಾಲೆ ಆಕಾಶದಿ ಎತ್ತರಕ್ಕೆ ಚಾಚಿದ್ದರಿಂದ ಶಿವಾಜಿಯು ರಾಯಗಡದಲ್ಲಿದ್ದು ಇದು ತಾನಾಜಿಯ ಜಯದ ಸೂಚನೆ ಎಂದು ತಿಳಿದು ರಾತ್ರಿ  ಕಳೆದು ಬೆಳಗಾದಾಗ ದೂತರು ಬಂದು ಸೇನಾಪತಿ ತಾನಾಜಿಯ ಸಾವಿನ ಸುದ್ದಿಯನ್ನು ಹೇಳಿದಾಗ, ಎಂದು ಅಳದ ಶಿವಾಜಿಯು ಅಳುತ್ತ ಸಿಂಹ ದುರ್ಗವು ಕೈ ಸೇರಿತು ಆದರೆ ಸಿಂಹ ಮಾಯವಾಯಿತು ನನ್ನ ಸಿಂಹ ಎಂದು ತಾನಾಜಿಯನ್ನು ನೆನೆದು ಹೇಳಿದನು

Leave a Comment

Your email address will not be published. Required fields are marked *

Scroll to Top