History of Karnataka-ಶಾತವಾಹನರು – ಕರ್ನಾಟಕ ಇತಿಹಾಸ- Shatavahanas – All of you Read for UPSC – KAS Exams

ಶಾತವಾಹನರು - Shatavahans
ಶಾತವಾಹನರು – Shatavahans

History of Karnataka – ಕರ್ನಾಟಕ ಇತಿಹಾಸ -ಶಾತವಾಹನರು

* ಮೌರ್ಯರ ಉತ್ತರಾಧಿಕಾರಿಗಳಾಗಿ ಶುಂಗ, ಕಣ್ವ, ಶಾತವಾಹನರು ಬರುತ್ತಾರೆ.

* ಶಾತವಾಹನರು ದಕ್ಷಿಣದಲ್ಲಿ ಮೌರ್ಯರ ಸಾಮಂತರಾಗಿದ್ದರು. ಅವರ ಸಂತತಿ ನಾಶವಾದ ಮೇಲೆ ಇವರು ಏಳ್ಗೆಗೆ ಬಂದರು.

* ಇವರ ಕಾಲಮಾನ ಕ್ರಿಸ್ತಪೂರ್ವ 230 ರಿಂದ ಕ್ರಿಸ್ತಶಕ  220.

* ಕರ್ನಾಟಕವನ್ನು ಆಳಿದ ಪ್ರಥಮ ರಾಜ ಮನೆತನವಾಗಿದೆ. 

See this video: https://youtu.be/iEwMCA-K974?si=fMA8RUOyTOQ0CagX

ಶಾತವಾಹನರ ಇತಿಹಾಸ ತಿಳಿಯಲು ಇರುವ ಆಧಾರಗಳು

1. ಶಾಸನಾಧಾರಗಳು –  ನಾಸಿಕ್, ಕಾರ್ಲೆ, ನಾನಾಗಟ್, ಹಾಥಿಗುಂಫಾ, ಗಿರ್ನಾರ್ ಶಾಸನಗಳು ಶಾತವಾಹನರ ಇತಿಹಾಸ ತಿಳಿಯಲು ಸಹಾಯಕವಾಗಿವೆ‌. 

2. ಸಾಹಿತ್ಯದ ಆಧಾರಗಳು

*ಗುಣಾಡ್ಯನ ಬೃಹತ್ಕಥಾ

*ಹಾಲನ ಗಾಥಾಸಪ್ತಶತಿ

* Periplus of erithrian sea

* ಲೀಲವಾಯಿ ಕೃತಿ.

3. ಪುರಾಣಗಳು – ಮತ್ಸ್ಯ, ವಿಷ್ಣು, ಭಾಗವತ. 

ಸಂಶೋಧಕರುಗಳು

* ಪ್ರೊಫೆಸರ್ ರಾಪ್ಸರ್, Dr. ಸ್ಮಿತ್, ಭಂಡಾರ್ಕರ್ ಇವರುಗಳು ಶಾತವಾಹನರು ಆಂಧ್ರದವರೆಂದು ಹೇಳಿದ್ದಾರೆ.

* ವಿ.ಎಸ್. ಸುಕ್ತಂಕರ್, ಕೆ.ಪಿ ಜಯಸ್ವಾಲ್, ಎಚ್.ಸಿ. ರಾಯ್ ಚೌಧರಿ ಶಾತವಾಹನರು ಪಶ್ಚಿಮ ಭಾರತದವರು ಅದರಲ್ಲೂ ಕರ್ನಾಟಕದವರು ಎಂದಿದ್ದಾರೆ.

* ಹಿರೇ ಹಡಗಲಿ ಶಾಸನದ ಪ್ರಕಾರ ಇವರು ಕನ್ನಡಿಗರು ಎಂದು ಹೇಳಿದೆ. 

ಶಾತವಾಹನರ ಪರಿಚಯ

* ಶಾತವಾಹನರ ರಾಜಧಾನಿ ಪ್ರತಿಷ್ಠಾನ ಅಥವಾ ಪೈಠಾಣ್.

* ಇವರ ರಾಜ್ಯ ಪಶ್ಚಿಮದ ಕೊಂಕಣ ಕರಾವಳಿಯಿಂದ ಪೂರ್ವದಲ್ಲಿ ಕೃಷ್ಣ ಮುಖಜಭೂಮಿಯವರೆಗೆ ದಕ್ಷಿಣದಲ್ಲಿ ಚಂದ್ರವಳ್ಳಿಯ ತನಕ ವಿಸ್ತರಿಸಿತ್ತು.

ಶಾತವಾಹನರ ರಾಜಕೀಯ ಇತಿಹಾಸ

Read Introduction of Karnataka:https://rvwritting.com/kas-2024-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%87%e0%b2%a4%e0%b2%bf%e0%b2%b9%e0%b2%be%e0%b2%b8%e0%b2%a6-%e0%b2%b8%e0%b2%82%e0%b2%95%e0%b3%8d%e0%b2%b7%e0%b2%bf/

೧. ಸೀಮುಖ

* ಶಾತವಾಹನ ಸಂತತಿಯ ಸ್ಥಾಪಕ.

* ಕಣ್ವ ವಂಶದ ಸುಶರ್ಮನನ್ನು ಸೋಲಿಸಿ ದಕ್ಷಿಣದಲ್ಲಿ ಆಳ್ವಿಕೆಗೆ ಬಂದನು.

*  ಆಂಧ್ರ ಜಾತೀಯನೆಂದು ಆಂಧ್ರ ಭೃತ್ಯಯರೆಂದು ಇವರನ್ನ ಕರೆಯಲಾಗಿದೆ.

೨.  ಕೃಷ್ಣ 

*ಸೀಮುಕನ ತಮ್ಮ 

* ನಾಸಿಕ್ ನಲ್ಲಿ ಭೌತ ಗುಹಾಲಯ ನಿರ್ಮಿಸಿದ್ದ.

೩. ಎರಡನೇ ಶಾತಕರ್ಣಿ

* ಇವನ ಸಾಮ್ರಾಜ್ಯ ವಿಂದ್ಯ ಪರ್ವತದಿಂದ ಕೊಂಕಣದವರೆಗೆ ವಿಸ್ತರಿಸಿತ್ತು.

*  ರಥಿಕರು ಮತ್ತು ಭೋಜಕರನ್ನು, ಮಾಳವರನ್ನು ಸೋಲಿಸಿ ರಾಜ ವಿಸ್ತರಿಸಿಕೊಂಡ.

*  ಇವುಗಳ ವಿಜಯದ ನೆನಪಿಗಾಗಿ ಅಶ್ವಮೇಧ ಯಾಗವನ್ನು ಮಾಡಿದ.

*  ನಂತರ ದಕ್ಷಿಣ ಪಥ ಸಾರ್ವಭೌಮ ಎಂಬ ಬಿರುದನ್ನು ಪಡೆದನು. 

* ಇವನ ಹೆಂಡತಿ ನಾಗನಿಕ ನಾನಾಘಾಟ್ ಶಾಸನವನ್ನು ಕೊರಸಿದ್ದಾಳೆ. 

* ರಾಜಸೂಯ ಯಾಗವನ್ನು ಕೂಡ ಮಾಡಿದ್ದಾನೆ.

4. ಹಾಲ ರಾಜ

* ಪ್ರಾಕೃತ ಭಾಷೆಯಲ್ಲಿ “ಗಾಥಾಸಪ್ರಶತಿ” ಕೃತಿಯನ್ನು ರಚಿಸಿದ್ದಾನೆ.

* ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದ‌.

5. ಗೌತಮೀ ಪುತ್ರ ಶಾತಕರ್ಣಿ

* ಶಾತವಾಹನರ ಪ್ರಸಿದ್ಧ ದೊರೆ

* ನಹಪಾಣ ಮತ್ತು ಕ್ಷತ್ರಪರನ್ನು ಸೋಲಿಸಿದ.

* ನಹಪಾಣರನ್ನು ಸೋಲಿಸಿದ್ದರಿಂದ ಅವರ ನಾಣ್ಯಗಳ ಮೇಲೆ ತನ್ನ ರಾಜ್ಯ ಚಿಹ್ನೆ ಮುದ್ರಿಸಿ ಆಚರಣೆಗೆ ತಂದನು.

* ಈತನ ತಾಯಿ ಗೌತಮೀ ಬಾಲಶ್ರೀ ಇವನ ದಿಗ್ವಿಜಯಗಳ ಬಗೆಗೆ ನಾಸಿಕ್ ಶಾಸನವನ್ನು ಕೆತ್ತಿಸಿದನು.

* ಕೊಂಕಣ, ಸೌರಾಣ್ಟ್ರ, ಮಾಳ್ವ, ಬಿರಾರ್, ಕೃಷ್ಣಾ ಕಣಿವೆಗಳ ಪ್ರದೇಶದಲ್ಲಿನ ಬಹುಭಾಗವನ್ನು ಇವನು ಆಕ್ರಮಿಸಿಕೊಂಡಿದ್ದ.

* ಇವನಿದ್ದ ಬಿರುದು – “ತ್ರೈಸಮುದ್ರ ತೋಯ ಪಿತವಾಹನ”.

6. ಎರಡನೆಯ ಪುಲಮಾಯಿ

* ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ್ದನು.

* ಉಜ್ಜೈನಿಯ ದೊರೆ ರುದ್ರದಾಮನ್ ಮಗಳನ್ನು ಮದುವೆಯಾದನು, ನಂತರ ಇವನನ್ನು ಎರಡು ಬಾರಿ ರುದ್ರದಾಮನ್ ಸೋಲಿಸಿದ. 

ಶಾತವಾಹನರ ಆಡಳಿತ

* ರಾಜನೇ ರಾಜ್ಯದ ಪ್ರಮುಖನಾಗಿದ್ದ.

* ಆಡಳಿತದ ಅನುಕೂಲಕ್ಕಾಗಿ

ರಾಜ್ಯ – ರಾಜ

ಪ್ರಾಂತ – ರಾಜಕುಮಾರ

ಅಹಾರ – ಅಮಾತ್ಯ

ಗ್ರಾಮ – ಗ್ರಾಮಿಕ

* ರಾಣಿಯರು ಆಡಳಿತದಲ್ಲಿ ಭಾಗವಹಿಸುತ್ತಿದ್ದರು. 

ಉದಾ- ನಾಯನಿಕ ಮತ್ತು ಗೌತಮೀ ಬಾಲಶ್ರೀ.

* ಕೆಲವೊಂದು ಪ್ರದೇಶಗಳನ್ನು ಆಡಳಿತ ವಿಭಾಗಕ್ಕೆ ಬಿಟ್ಟು ಮಹಾರಥಿ ಮತ್ತು ಮಹಾಭೋಜ ಎಂಬ ಮಾಂಡಲಿಕರಿಗೂ ನೀಡಿದ್ದರು.

ಮಹಾರಥಿ – ಪಶ್ಚಿಮ ಘಟ್ಟ ಪ್ರದೇಶಗಳನ್ನು ನೋಡಿಕೊಳ್ಳುತ್ತಿದ್ದರು.

ಮಹಾಭೋಜ – ಉತ್ತರ ಕೊಂಕಣ ಪ್ರದೇಶಗಳನ್ನು ನೋಡಿಕೊಳ್ಳುತ್ತಿದ್ದ.

ಶಾತವಾಹನರ ಕಾಲದ ಸಮಾಜ 

೧. ಧರ್ಮ

* ವೈದಿಕ ಧರ್ಮದ ಅನುಯಾಯಿಗಳಾಗಿದ್ದರು.

* ವರ್ಣಾಶ್ರಮ ಧರ್ಮದ ಪಾಲನೆ ಚಾಲ್ತಿಯಲ್ಲಿತ್ತು.

* ವರ್ಣಾಶ್ರಮದ ಜೊತೆ ಅನೇಕ ಕಸುಬುಗಳನ್ನು ಆಧರಿಸಿದ ಜಾತಿಗಳು ಇದ್ದವು.

* ಬೌದ್ಧ ಧರ್ಮ ಚಾಲ್ತಿಯಲ್ಲಿತ್ತು. ಜೊತೆಗೆ ಪ್ರಾಚೀನ ಗುಹೆಗಳನ್ನೆಲ್ಲಾ ಬೌದ್ದ ಗುಹೆಗಳಾಗಿ ಪರಿವರ್ತಿಸಿದರು.

ಅವು

* ಚೈತ್ಯಾಗಾರ ಗುಹಾಲಯ

* ಲೇನಾ ಅಥವಾ ವಿಹಾರ ಗುಹಾಲಯ

* ಬೌದ್ಧ ಧಾರ್ಮಿಕ ಕೇಂದ್ರಗಳು – ನಾಸಿಕ್, ಜುನ್ನಾರ್, ಅಮರಾವತಿ, ನಾಗಾರ್ಜುನಕೊಂಡ,  ಕಾರ್ಲೆ, ಕನ್ಹೇರಿ ಮುಂತಾದವು.

ಶಾತವಾಹನರ ಸಾಮಾಜಿಕತೆ

* ಇಲ್ಲಿ ನಡೆಸುತ್ತಿದ್ದ ಅನೇಕ ಕಸುಬುಗಳ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ‌. 

ಕೋಲಿಕ(ನೇಕಾರ), ಗಾಂಧಿಕ(ಸುಗಂಧಕಾರ),

ಕಮಾರ(ಕಮ್ಮಾರ), ಸೆಲವಧ(ಕಲ್ಲು ಒಡೆಯುವವ).

* ಅವಿಭಕ್ತ ಕುಟುಂಬ ವ್ಯವಸ್ಥೆ ಇದ್ದಿತು.

* ಮಹಿಳೆಯರ ಸ್ಥಾನಮಾನ ಉನ್ನತವಾಗಿತ್ತು. ಮಹಿಳೆಯರು ಮಾಡಿದ ದಾನಗಳ ಮೂಲಕ ತಿಳಿಯಬಹುದಾಗಿದೆ. 

* ಪುರುಷರು ಬಿರುದುಗಳನ್ನು ಪಡೆಯುವಂತೆ ಸ್ತ್ರೀಯರು ಪಡೆದಿದ್ದರು – ಮಹಾರಥಿ, ಮಹಾಭೋಜ, ಮುಂತಾದವು.

* ಸ್ತ್ರೀ – ಪುರುಷರಿಬ್ಬರು ಆಭರಣ ಪ್ರಿಯರಾಗಿದ್ದರು.

ಶಾತವಾಹನರ ಆರ್ಥಿಕ ಪರಿಸ್ಥಿತಿ

* ಕೃಷಿಯು ಮುಖ್ಯವಾದ ಜೀವನಾಧಾರವಾಗಿತ್ತು.

* ಭೂಕಂದಾಯ ರಾಜ್ಯಾದಾಯದ ಪ್ರಮುಖ ಮೂಲವಾಗಿತ್ತು.

* ಕಬ್ಬಿಣದ ಬಳಕೆ ಹೆಚ್ಚಿತ್ತು.

* ಉಪ್ಪಿನ ಉತ್ಪಾದನೆ ಸರ್ಕಾರದ ಏಕಸ್ವಾಮ್ಯಕ್ಕೊಳಪಟ್ಟಿತ್ತು.

* ಮುಖ್ಯ ಪಟ್ಟಣಗಳು – ಪೈಠಾಣ, ತಗರೆ, ಬನವಾಸಿ, ಅಮರಾವತಿ, ನಾಸಿಕ್, ಕರಹಾಟ, ಮುದುಗಲ್,ಚಂದ್ರವಳ್ಳಿ ಮುಂತಾದವು.

* ಪ್ರಮುಖ ಬಂದರುಗಳು – ಕಲ್ಯಾಣ, ಸೋಪಾರ, ಬರಿಗಜ(ಬ್ರೋಚ್), ಚಾಲ್ ಮುಂತಾದವು. 

ಶಾತವಾಹನರ ಕಾಲದ ವ್ಯಾಪಾರಿ ಸಂಘಗಳು

* ಇಲ್ಲಿನ ವ್ಯಾಪಾರಿ ಸಮುದಾಯ ಉಚ್ಛ್ರಾಯ ಸ್ಥಿತಿಗೇರಿ ತಮ್ಮಲ್ಲೇ ಸಂಘಟಿತರಾಗಿ ವೃತ್ತಿಯ ಮೂಲಕ ವ್ಯಾಪಾರಿ ಸಂಘಗಳನ್ನು ನಿರ್ಮಿಸಿಕೊಂಡರು.

* ಉದಾಹರಣೆಗೆ ಕುಲಕಾರಿಗಳು( ಕುಂಬಾರರು) ಧನ್ನಿಕರು ಅಥವಾ ಧಾನ್ಯಗಳ ಮಾರಾಟಗಾರರು, ಒಡವೆ ತಯಾರಕರು, ಮುಂತಾದವರು ತಮ್ಮಲ್ಲಿ ಸಂಘಗಳನ್ನು ನಿರ್ಮಿಸಿಕೊಂಡಿದ್ದರು.

* ಕಾನೂನು ಸಂಹಿತೆ ವರ್ತಿಸುತ್ತಿದ್ದವು.

* ಬ್ಯಾಂಕ್ ಗಳಂತೆ ವಹಿವಾಟು ನಡೆಸುತ್ತಿದ್ದವು.

* ಸಾಮಾಜಿಕ ಉಪಕಾರಗಳನ್ನು ಮಾಡುತ್ತಿದ್ದವು.

* ವ್ಯಾಪಾರಿ ಸಂಘ ಅಥವಾ ಶ್ರೇಣಿ ನೋಡಿಕೊಳ್ಳಲು ಪ್ರತಿ ಊರಲ್ಲಿ ನಿಗಮ ಸಭಾ ವ್ಯವಸ್ಥೆ ಇತ್ತು.

* ಠೇವಣಿಗಳನ್ನು ಪಡೆದು ನಿಗದಿತ ಬಡ್ಡಿ ಕೊಡುವ ವ್ಯವಸ್ಥೆಯೂ ರೂಢಿಯಲ್ಲಿತ್ತು.

* ವಿದೇಶಿ ವ್ಯಾಪಾರಕ್ಕೂ ಸಂಘಗಳು ಬಂಡವಾಳ ಒದಗಿಸುತ್ತಿದ್ದವು.

ಶಾತವಾಹನರ ಕಾಲದ ನಾಣ್ಯಗಳು

* ಗದ್ಯಾಣ, ಪಣ

* ಸುವರ್ಣ, ದೀನಾರ – ಚಿನ್ನದ ನಾಣ್ಯಗಳು.

* ಕುಷಣ – ಬೆಳ್ಳಿ ನಾಣ್ಯಗಳು ಚಾಲನೆಯಲ್ಲಿದ್ದವು.

ಶಾತವಾಹನರ ಕಾಲದ ವ್ಯಾಪಾರಿ ಕೇಂದ್ರಗಳು

* ವಿದೇಶಿ ವ್ಯಾಪಾರ ಕೇಂದ್ರಗಳು –  ಬನವಾಸಿ, ಭಟ್ಕಳ, ಪ್ರತಿಷ್ಠಾನ, ಜುನ್ನಾರ್, ನಾಸಿಕ್, ವೈಜಯಂತಿ.

* ರೋಮನ್ ವ್ಯಾಪಾರದ ಕೇಂದ್ರ – ಅರಿಕಮೇಡು.

ಶಾತವಾಹನರ ಸಾಹಿತ್ಯ ಮತ್ತು ಕಲೆ

೧. ಭಾಷೆ

* ಪ್ರಾಕೃತ ಅಧಿಕೃತ ಭಾಷೆಯಾಗಿತ್ತು.

* ಬ್ರಾಹ್ಮಿ ಲಿಪಿ ಬಳಕೆಯಲ್ಲಿತ್ತು.

* ಕನ್ನಡವು ಬಳಕೆಯಲ್ಲಿತ್ತು.

೨. ಸಾಹಿತ್ಯ

* ಪ್ರಾಕೃತ ಭಾಷೆ ಪ್ರಚಲಿತದಲ್ಲಿತ್ತು.

* ಕುಂದಕುಂದಾಚಾರ್ಯರು ಪ್ರಾಕೃತದ ವಿದ್ವಾಂಸರಾಗಿದ್ದರು –  ಅವರ ರಚನೆಗಳು: ಪ್ರಾಬ್ರತಸಾರ, ರಾಯನಸಾರ, ಸಮಯಸಾರ, ಪ್ರವಚನ ಸಾರ.

* ಹಾಲ ರಾಜ – ಗಾತಾಸಪ್ತಶತಿ * ಗುಣಾಡ್ಯ – ಪೈಶಾಚಿ ಭಾಷೆಯಲ್ಲಿ ಬೃಹತ್ಕಥೆಯ ರಚನೆ 

* ಶರ್ವವರ್ಮ – ಕಾತಂತ್ರ ವ್ಯಾಕರಣ.

೩. ಶಾತವಾಹನರ ಕಾಲದ ಕಲೆ

ಕಲೆ ಮತ್ತು ವಾಸ್ತು ಶಿಲ್ಪದ ಮೇಲೆ ಮಹತ್ತರವಾದ ಸಾಧನೆಯನ್ನು ಶಾತವಾಹನರು ಮಾಡಿದ್ದಾರೆ. ಇವರ ಕಾಲದ ವಾಸ್ತುಶಿಲ್ಪಗಳು ಹೆಚ್ಚು ಮಹಾರಾಷ್ಟ್ರ ಭಾಗದಲ್ಲಿ ಕಂಡುಬರುತ್ತವೆ.

* ಕಲ್ಲಿನಲ್ಲಿ ಕೊರದ ಗುಹಾಲಯಗಳನ್ನು ಎರಡು ರೀತಿಯಲ್ಲಿ ಕಾಣಬಹುದು

1. ಚೈತ್ಯ – ಪ್ರಾರ್ಥನಾ ಭವನ

2. ವಿಹಾರ ಅಥವಾ ಲೇನ – ಇದನ್ನು ಸಂಘಾರಾಮ ಎಂತಲೂ ಕರೆಯಲಾಗುತ್ತದೆ. ಬೌದ್ಧ ಬಿಕ್ಕುಗಳ ವಸತಿಗೃಹಗಳಾಗಿವೆ.

೧. ಚೈತ್ಯ 

* ಕಾರ್ಲೆ ಚೈತ್ಯ ದೊಡ್ಡದು ಮತ್ತು ಸುಂದರವಾಗಿದೆ. 

*ಕಾರ್ಲೆ ಚೈತ್ಯವು 3 ಮಹಾದ್ವಾರ ಹೊಂದಿದ್ದು .ಚೈತ್ಯ ಗರ್ಭಗೃಹ, ಪ್ರದಕ್ಷಿಣ ಮತ್ತು ಮಂಟಪ ಹೊಂದಿದೆ. 

*ಕನ್ಹೇರಿ ಚೈತ್ಯ

* ಪ್ರಮುಖ ಚೈತ್ಯಗಳು – ಜುನ್ನಾರ್,  ಪನ್ನಾಳ, ಕೊಂಡಾಣೆ, ನಾಸಿಕ್ ಗಳಲ್ಲೂ ಇವರ ಕಾಲದ ಚೈತ್ಯಗಳನ್ನು ಕಾಣಬಹುದು.

೨. ವಿಹಾರ ಅಥವಾ ಲೇನ

* ಇವನ್ನು ಕೂಡ ಬಂಡೆಕೊರೆದು ಮಾಡಿದ ರಚನೆಗಳಾಗಿವೆ. 

* ಇದು ಅನೇಕ ಕೊಠಡಿಗಳು ಹೊಂದಿರುವ ದೊಡ್ಡ ಹಜಾರವಾಗಿದ್ದು,  ಅದರ ಪಕ್ಕದಲ್ಲಿ ಚಿಕ್ಕ ಚಿಕ್ಕ ಕೊಠಡಿಗಳು, ಇದರಲ್ಲಿ ಬಿಕ್ಕುಗಳು ವಾಸ ಮಾಡುತ್ತಿದ್ದರು.

* ಪ್ರಮುಖವಾದ ವಿಚಾರಗಳು ನಾಸಿಕ್,  ಕನ್ನೆರಿ, ಕಾರ್ಲೆಯಲ್ಲಿ ಕಂಡುಬರುತ್ತವೆ.

೪. ಶಾತವಾಹನರ ಕಾಲದ ಸ್ತೂಪಗಳು

ಸ್ತೂಪ ಎಂದರೆ ಬುದ್ಧನ ಅಥವಾ ಬೌದ್ಧ ಬಿಕ್ಷುವಿನ ಅವಶೇಷಗಳ ಮೇಲೆ ಕಟ್ಟಿದ ಸ್ಮಾರಕ. ಇದು ಅರ್ಧಚಂದ್ರಾಕರದ ಗುಮ್ಮಟದ ರೀತಿಯಲ್ಲಿರುತ್ತದೆ.

ಇವರ ಪ್ರಮುಖವಾದ ಸ್ತೂಪಗಳೆಂದರೆ

1. ಅಮರಾವತಿ ಸ್ತೂಪ

ಇಲ್ಲಿನ ಶಿಲ್ಪಗಳು ಬುದ್ಧನ ಜೀವಿತದ ಬಗ್ಗೆ ಜಾತಕ ಕಥೆಗಳನ್ನು ಕುರಿತಾದ ಬಗ್ಗೆ ಇದೆ.

*  ಅಮರಾವತಿ ಬುದ್ಧನನ್ನು ಬೋಧಕ ಬಿಕ್ಷು ಎಂಬ ಮಾತನ್ನಾಡಿಸಿದೆ.

2. ನಾಗಾರ್ಜುನ ಕೊಂಡ ಸ್ತೂಪ- 

*  ಇದು ಕೂಡ ಬುದ್ಧನ ಜೀವನ ಸಂಗತಿಗಳನ್ನು ತಿಳಿಸಿದೆ.

*  ಇಲ್ಲಿ ಬುದ್ಧನನ್ನು ಸರ್ಪರೂಢನಂತೆ ಕೆತ್ತಲಾಗಿದೆ.

* ಹಾಗೆಯೇ ಗಾಂಧಾರ ಮಥುರಾ ಶೈಲಿಗಳಂತೆ ಅಮರಾವತಿ ಶೈಲಿಯನ್ನು ಇವರು ಹುಟ್ಟು ಹಾಕಿದರು.

* ಪ್ರಮುಖ ಸ್ತೂಪಗಳು – ಗೋಳಿ, ಜಗ್ಗಯ್ಯಪೇಟ ಬಿಟ್ಟಿಪ್ರೋಲು, ಘಂಟಸಾಲ, ಅಮರಾವತಿಗಳಲ್ಲಿ ಕಾಣಬಹುದು.

ಶಾತವಾಹನರ ಕಾಲದ ಚಿತ್ರಕಲೆ

* ಅಜಂತಾ ಚಿತ್ರಕಲೆಯ ಪ್ರಾರಂಭ.

* ಇಲ್ಲಿ 9ನೇ ಗುಹೆ ಬಾರಹತ್ ಸಾಂಚಿಯ ಸಮಕಾಲಿನದು. ನಂತರ ಶಿಲೆಗಳನ್ನು ಬಣ್ಣದಲ್ಲಿಯೂ ಚಿತ್ರಿಸಿರುವುದನ್ನು ಇಲ್ಲಿ ತಿಳಿಯಬಹುದಾಗಿದೆ.

* 9 ಮತ್ತು 10ನೆಯ ಶತಮಾನದ ಕಾಲದ ಗುಹೆಗಳು ವರ್ಣ ಚಿತ್ರಗಳನ್ನು ಒಳಗೊಂಡಿದೆ.

1 thought on “History of Karnataka-ಶಾತವಾಹನರು – ಕರ್ನಾಟಕ ಇತಿಹಾಸ- Shatavahanas – All of you Read for UPSC – KAS Exams”

  1. Pingback: Kadambaru - ಕದಂಬರು - ಕರ್ನಾಟಕ ಇತಿಹಾಸ- rvwritting

Leave a Comment

Your email address will not be published. Required fields are marked *

Scroll to Top