Kattuvevu Navu ಕಟ್ಟುವೆವು ನಾವು

Kattuvevu Navu
Kattuvevu Navu

this is Bangalore City university 1st B.com Kannada Poem -Kattuvevu Navu – ಕಟ್ಟುವೆವು ನಾವು. ಭಾರತವು ಬ್ರಿಟಿಷರ ಕಪಿಮುಷ್ಠಿಯಿಂದ 1947ರಲ್ಲಿ ಬಿಡಿಸಿಕೊಂಡಾಗ ಮುಂದೇನು? ಮುಂದೆ ಹೇಗೆ? ಎಂಬ ಪ್ರಶ್ನೆಗಳು ಇದ್ದವು. ಅದನ್ನು ಸರಿಪಡಿಸಿಕೊಳ್ಳಲು ಪ್ರಜಾಪ್ರಭುತ್ವ ಸರ್ಕಾರ ಮಾದರಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ ಎಂದು ಇದನ್ನು ಆಯ್ಕೆ ಮಾಡಿಕೊಂಡೆವು. ಹಾಗೆಯೇ ದೇಶದಲ್ಲಿ ಒಂದೇ ಭಾಷೆ ಆಡುವ ಜನರು ಜೊತೆಗೆ ಬಹು ಭಾಷೆಗಳನ್ನಾಡುವ ಜನರು ಇದ್ದಾರೆ.

ಹಾಗೆಯೇ ದೇಶದೊಳಗೆ ಬಡತನ, ಅನಕ್ಷರತೆ, ನಿರುದ್ಯೋಗ, ರೋಗಗಳು, ವಲಸೆ, ಆಹಾರದ ಅಭಾವ ಎಂಬ ಮುಂತಾದ ಸಮಸ್ಯೆಗಳಿದ್ದು ಅದರ ನಡುವೆ ನಮ್ಮ ಸರ್ಕಾರಗಳ ರಚನೆ ಹೇಗೆ, ಆಡಳಿತ ಹೇಗೆ, 562 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತ ಎಂದು ಕರೆದು ಎಲ್ಲರ ಆಶೋತ್ತರಗಳನ್ನು ಈಡೇರಿಸುವುದೇಗೆ, ಇದರೊಂದಿಗೆ ಇಂತಹ ಸಮಸ್ಯೆಗಳನ್ನೆಲ್ಲಾ ಇಟ್ಟುಕೊಂಡು ಸಧೃಡ ದೇಶ ಕಟ್ಟುವುದೇಗೆ ಎಂದು ಯೋಚಿಸುವಾಗ ನಮ್ಮ ಕವಿಗಳು ದೇಶಪ್ರೇಮ, ನಾಡ ಪ್ರೇಮದ  ಆತ್ಯಂತಿಕ ಭಾವನೆಗಳನ್ನೊಳಗೊಂಡ ಪದ್ಯಗಳನ್ನು ಕಟ್ಟುವ ಮೂಲಕ ಯುವಕರಲ್ಲಿ ಸಧೃಡ ದೇಶ ಕಟ್ಟುವ ಭಾವನೆಗಳನ್ನು ಕೆರಳಿಸಿದವು. ಅಂತಹ ಭಾವನೆಯನ್ನು ‘ಕಟ್ಟುವೆವು ನಾವು’ ಎಂಬ ಪದ್ಯವು ಮಾಡಿತು.

ನಾವು ನಾಡನ್ನು ಹೇಗೆ ಕಟ್ಟಬೇಕು, ಕಟ್ಟಲು ಯುವಕರು ಅತಿ ಮುಖ್ಯವಾಗಿ ಬೇಕು ಎಂದು ಹೇಳುವಾಗ

Kattuvevu Navu – ಕಟ್ಟುವೆವು ನಾವು – ಸಾರಾಂಶ

ದೇಶದೊಳಗೆ ಯುವಕರು ಆ ದೇಶದ ಸಂಪತ್ತಾಗಿರುತ್ತಾರೆ. ಅಂತಹ ಸಂಪತ್ತನ್ನು ಬಳಸಿಕೊಂಡು ಹೊಸ ನಾಡನ್ನು ಕಟ್ಟಬೇಕು. ಏಕೆಂದರೆ ಯುವಕರ ಬಿಸಿರಕ್ತ ಆರಿಹೋಗುವ ಮುನ್ನ, ಉತ್ಸಾಹದಿಂದ ಕೂಡಿರುವ ಯೌವ್ವನವನ್ನು ಕಳೆದುಕೊಳ್ಳುವ ಮೊದಲೇ ಸಾಹಸದಿಂದ ಕೂಡಿ ಅವರ ಅಂತಸತ್ವ ಬತ್ತಿಹೋಗುವ ಮೊದಲೇ ಅವರನ್ನು ಬಳಸಿಕೊಂಡು ಹೊಸದಾಗಿರುವ, ರಸದಿಂದ ಕೂಡಿರುವ ನಾಡನ್ನು ಕಟ್ಟಬೇಕಿದೆ.

See this: https://youtu.be/XL2O5iy9Fiw?si=1qgs583qDR2bnKVI

ಹೊಸ ನಾಡನ್ನು ಕಟ್ಟಬೇಕಾದರೆ ನಮ್ಮಲ್ಲಿರುವ ಕನಸುಗಳೇ ಸಾಕಾರಗೊಳ್ಳಬೇಕು. ಅಂತಹ ಕನಸುಗಳನ್ನು ಈಡೇರಿಸಿಕೊಳ್ಳುವ ಬಯಕೆ ನಮ್ಮಲ್ಲಿರಬೇಕು, ಅಂತಹ ಕನಸುಗಳನ್ನು ಈಡೇರಿಸಿಕೊಳ್ಳಲು ಮುಂದಾಗುವವರಿಗೆ ನಾಡು ಕಟ್ಟುವ ಗುರಿಯೂ ಇರಬೇಕು.ಅದನ್ನು ತಪ್ಪದೇ ಗುರಿಯನ್ನು ಸಾಕಾರ ಮಾಡಿಕೊಳ್ಳಲು ಹೊರಡುವ ದಾರಿಯನ್ನು ಬಿಟ್ಟ ಬೇರೆ ದಾರಿಗೆ ಹೋಗಬಾರದು ಎಂದು ಕರೆ ನೀಡುತ್ತಾರೆ. ಹಾಗಾದರೆ ಕನಸು ಕಂಡವರೆಲ್ಲ ಗುರಿ ಸಾಕಾರದ ಕಡೆಗೆ ಸಾಗುತ್ತಾರೆಯೇ? ಇಲ್ಲ, ಏಕೆ.ದರೆ ನಮ್ಮ ಗುರಿಗೆ ಅನೇಕ ಸವಾಲುಗಳಿರುತ್ತವೆ. ಅದರಲ್ಲಿ ಸಾಮಾಜಿಕ ಸಮಸ್ಯೆಯಾದ ಜಾತಿ ಅಸಮಾನತೆ ಎಂಬುದು ಕಂದಕವಾಗಿ ನಮ್ಮ ಮುಂದೆ ಬೇಧಿಸಲಾಗದ ಕೋಟೆಯಂತೆ ನಿಂತಿದೆ. ಹಾಗೆಯೇ ಹಿಂದಿನಿಂದ ಬಂದಿರುವ ಸಂಪ್ರದಾಯಗಳಿಂದ ಕೂಡಿರುವ ರಾಕ್ಷಸರುಗಳು ಮುಂದೆ ಬರುತಿವೆ ಅವನ್ನು ತೊಡೆತಟ್ಟಿ ಸಂಗ್ರಾಮಕ್ಕೆ ಕರೆದು ಸೇರಿಸುವ ಮೂಲಕ ನಾಡು ಕಟ್ಟಲು ಮುಂದಾಗಬೇಕು.

ಇವೆಲ್ಲವೂ ನಮ್ಮ ಮುಂದೆ ಬಂದು ನಿಂತರೇ, ನಾವು ಯುವಕರು, ವೀರ ತರುಣರು ಇವೆಲ್ಲವನ್ನು ಕುಟ್ಟಿ ಪುಡಿ ಮಾಎಇ, ಕೋಟೆಗಳನ್ನು ನಿರ್ನಾಮ ಮಾಡಿ ಅಂದರೆ ಅಸಮಾನತೆ, ಸಂಪ್ರದಾಯಗಳನ್ನು ನಾಶಮಾಡಿ ಮುಂದೆ ಹೋಗುತ್ತೇವೆ. ಇಂತಹ ಕೆಲಸಕ್ಕೆ ಹೋಗುವಾಗ ಏನಾದರೂ ಅಡೆತಡೆಗಳು ಎದುರಾದರೆ ಅದಕ್ಕೆ ಸಾಯಲು ಹಿಂಜರಿಯುವುದಿಲ್ಲ. ನೋವು ಉಂಡರು ಯಾವುದಕ್ಕೆ ಹೆದರದೆ ಮುಂದೆ ಸಾಗುವ ವೀರರು ನಾವು ಸೋಲನ್ನು ಸ್ವೀಕರಿಸಿಲ್ಲ. ಎಂತಹ ಸಾಗರದಂತ ಅಡೆತಡೆಗಳು ಬಂದರು, ನಿರಾಶೆಯಿದ್ದರೂ ಅವೆಲ್ಲವನ್ನು ದೂರಮಾಡಿ, ನಾಶಮಾಡಿ ಪೂರ್ತಿಯಾಗಿ ಹೊಸ ನಾಡನ್ನು ಕಟ್ಟಬೇಕಾದರೆ ಒಗ್ಗಟ್ಟಾಗಬೇಕಿದೆ. ಒಗ್ಗಟ್ಟಾದರೂ, ಸಧೃಡ ದೇಶ ಕಟ್ಟಲು ಮುಂದಾಗುವ ಯುವಕರಿಗೆ ಹೊಟ್ಟೆಗೆ ಬೇಕಾದ ಅನ್ನವು/ಹಸಿವು ಸರಿಯಾಗಿ ದೊರೆಯದಿರುವಾಗ ಅದಕ್ಕೆ ಜಗಳ, ಯುದ್ಧ ಮಾಡುವ ಸ್ಥಿತಿಯಲ್ಲರುವಾಗ ದೇಶ, ಸಂಸ್ಕ್ರತಿಯ ಬಗೆಗೆ ಯೋಚನೆ ಮಾಡಲು ಅವಕಾಶ ನೀಡದೇ ಇರುವುದಿಲ್ಲ.

Also Read this one: https://rvwritting.com/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b5%e0%b3%8d%e0%b2%af%e0%b2%be%e0%b2%95%e0%b2%b0%e0%b2%a3-kannada-vyakarana/

ಹಾಗಾಗಿ ಇರುವ ಸಂಪತ್ತನ್ನು ಎಲ್ಲರಿಗೂ ಸಮಾನಾಗಿ ನೀಡುವ ಮೂಲಕ ಎಲ್ಲರಲ್ಲೂ ಸಹಬಾಳ್ವೆಯನ್ನು ಮೂಡಿಸುವ ಹೊಸ ನಾಡು ಬರಲು ಸಾಧ್ಯವಿದೆ‌. ಅವಾಗ ನಮ್ಮ ಎದುರಿಗೆ ಬಂದ ಸೋಲುಗಳಾಗಲಿ, ನೋವುಗಳಾಗಲಿ ಬಂದಾಗ ಸ್ವಲ್ಪ ತಡೆದರೆ ನಮ್ಮ ಹೊಸ ನಾಡನ್ನು ಕಟ್ಟಬಹುದು. ಇದಕ್ಕಾಗಿ ನಮ್ಮ ಪ್ರಯತ್ನವಿದ್ದಾಗ ಎಂತಹ ನೋವೇ ಬಂದರೂ ಸಹಿಸಿದಾಗ ನಮ್ಮ ಹೊಸ ನಾಡು ಬರುತ್ತದೆ. ಹೀಗೆ ಬರಬೇಕಾದರೆ ಯುವಕರ ಉತ್ಸಾಹ ಹಾಗೆ ಇರಬೇಕು. ಅಂತಹ ಉತ್ಸಾಹ ಕಡಿಮೆ ಮಾಡುವವರು ಬಂದರೆ ಅಂತಹ ಕೆಟ್ಟ ಜನರೇ ಬನ್ನಿ, ನೀವು ಬಂದರೆ ನಿಮ್ಮ ವಿರುದ್ಧ ಯುದ್ಧ ಮಾಡುವ ರಣವೀಳೆಯವನು ನೀಡುತ್ತೇವೆ. ನಿಮ್ಮ ನಾಶದ ಮೇಲೆ ನಮಗೆ ಬೇಕಾದ ಸುಖದ, ಸಮಾನವಾದ ನಾಡನ್ನು ಕಟ್ಟುತ್ತೇವೆ‌.

See this also. Part – 2 of Kattuvevu Navu –https://youtu.be/vzWFOLIbT6Q?si=jwGcknKdr-wZ4fqj

3 thoughts on “Kattuvevu Navu ಕಟ್ಟುವೆವು ನಾವು”

  1. Pingback: Part - 9 ಕನ್ನಡ ವ್ಯಾಕರಣ #Kannada Vyakarana - ಅಲಂಕಾರಗಳು - rvwritting

  2. Pingback: Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU - Summary - rvwritting

Leave a Comment

Your email address will not be published. Required fields are marked *

Scroll to Top